ಮಲೆಗಳಲ್ಲಿ ಮದುಮಗಳು
ಮಲೆಗಳಲ್ಲಿ ಮದುಮಗಳು ಸಾಂಸ್ಕೃತಿಕ ಮುಖಾಮುಖಿ From Wikipedia, the free encyclopedia
Remove ads
ರಾಷ್ಟ್ರಕವಿ ಕುವೆಂಪುರವರ ಕಾದಂಬರಿ. ೧೯೬೭ರಲ್ಲಿ ಮೊದಲು ಪ್ರಕಟಗೊಂಡಿತು.

ಕಾದಂಬರಿಯಲ್ಲಿ ಬರುವ ಪಾತ್ರವರ್ಗ, ಸ್ಥಳಗಳು, ಜಾತಿ/ಪಂಗಡಗಳ ವಿವರಣೆ:
1. ಸಿಂಭಾವಿ - ಭರಮೈ ಹೆಗ್ಗಡೆ & ಹೆಂಡತಿ ಜಟ್ಟಮ್ಮ, ಭರಮೈ ಹೆಗ್ಗಡೆಯ ತಂಗಿ ಲಕ್ಕಮ್ಮ, ಜೀತದಾಳುಗಳು ಗುತ್ತಿ (ಗುತ್ತಿಯ ನಾಯಿ ಹುಲಿಯ), ಮಂಜ. [೧]
2. ಸೀತೂರು – ತಿಮ್ಮನಾಯ್ಕ
3. ಲಕ್ಕುಂದ - ಸೇಸನಾಯ್ಕ (ತಿಮ್ಮನಾಯ್ಕನ ಭಾವ), ಜೀತದಾಳುಗಳು ರಂಗ ಮತ್ತು ಪುಟ್ಟ
4. ಮೇಗರವಳ್ಳಿ - ಸುಬ್ಬಣ್ಣ ಹೆಗ್ಗಡೆ, ಮಗ ತಿಮ್ಮಪ್ಪ ಹೆಗ್ಗಡೆ, ಮಗಳು ಮಂಜಮ್ಮ, ತಮ್ಮನ ಮಗ ಶಂಕರ ಹೆಗ್ಗಡೆ, ಜೀತದಾಳುಗಳು ಮಂಜ, ಸಿದ್ದಿ, ತಿಮ್ಮ, ಗಿಡ್ಡಿ, ಕುಲವಡಿ ಸಣ್ಣ, ಭೈರ
5. ಕಲ್ಲೂರು - ಮಂಜಯ್ಯ ಜೋಯಿಸರು
6. ಹೂವಳ್ಳಿ - ವೆಂಕಣ್ಣ, ಮಗಳು ಚಿನ್ನಮ್ಮ
7. ಕೋಣುರು - ರಂಗಪ್ಪ ಗೌಡ, ಹೆಂಡತಿ ಕಾಗಿನಹಳ್ಳಿ ದಾನಮ್ಮ, ತಮ್ಮ ಮುಕುಂದಯ್ಯ, ಅನಂತಯ್ಯ ಐಗಳು ಜೀತದಾಳುಗಳು ಚೀಂಕ್ರ & ದೇಯಿ, ಪಿಜಣ & ಅಕಣಿ, ಐತ & ಪಿಂಚಲು, ಮೊದಂಕಿಲ & ಬಾಗಿ
8. ಬಾವಿಕೊಪ್ಪ - ನಾಗಯ್ಯ & ಹೆಂಡತಿ ನಾಗಕ್ಕ, ನಾಗತ್ತೆ (ನಾಗಯ್ಯನ ತಾಯಿ )
9. ಬೆಟ್ಟಳ್ಳಿ - ಸಣ್ಣ ಗೌಡ, ದೇವಯ್ಯ & ದೇವಮ್ಮ, ಅಂತಕ್ಕ & ಕಾವೇರಿ ಜೀತದಾಳುಗಳು ದೊಡ್ಡ ಬೀರ & ಸೇಸಿ (ತಿಮ್ಮಿ, ಸಣ್ಣ ಬೀರ, ಪುಟ್ಟ ಬೀರರ ತಂದೆ ತಾಯಿ ), ಬಚ್ಚ (ಸೇಸಿಯ ಅಣ್ಣನ ಮಗ ಗುತ್ತಿ )
10. ತೀರ್ಥಹಳ್ಳಿ - ಪಾದ್ರಿ ಜೀವರತ್ನಯ್ಯ
ಕಥಾಹಂದರ :- ಈ ಕಾದಂಬರಿ ಸಿಂಭಾವಿ ಗುತ್ತಿಯಿಂದ ಶುರುವಾಗುತ್ತದೆ ಬೆಟ್ಟಳ್ಳಿಯಲ್ಲಿರುವ ತನ್ನ ಅತ್ತೆಯ ಮಗಳು ತಿಮ್ಮಿಯನ್ನು ಪ್ರೀತಿಸುತ್ತಿದ್ದ ಗುತ್ತಿ, ತಿಮ್ಮಿಯ ತಂದೆ ಅವಳನ್ನು ಅದೇ ಊರಿನ ಬಚ್ಚನಿಗೆ ಮದುವೆ ಮಾಡಿ ಕೊಡಲು ಮುಂದಾದಾಗ, ಅವಳನ್ನು ಓಡಿಸಿಕೊಂಡು ಬರುವ ಯೋಜನೆ ಹಾಕಿಕೊಂಡು ಪಯಣ ಬೆಳೆಸುತ್ತಾನೆ . ಜೊತೆಯಲ್ಲಿ ಅವನ ನಾಯಿ ಹುಲಿಯ ಕೂಡ. ಸಿಂಭಾವಿಯಿಂದ ಹೊರಟು ಸೀತೂರು, ಮೇಗರವಳ್ಳಿ, ಹೂವಳ್ಳಿಯನ್ನು ದಾಟಿ ಬೆಟ್ಟಳ್ಳಿ ತಲುಪಬೇಕಾಗಿರುವುದರಿಂದ ಗುತ್ತಿಯದು ಸುದೀರ್ಘ ಪಯಣದ ಜೊತೆ ಸಾಗುತ್ತದೆ ಕಾದಂಬರಿ. ಅವನು ಸೇರಿದ ಪ್ರತಿ ಊರಿನ ವಿವರಣೆಯಿದೆ, ಒಂದೊಂದು ಪಾತ್ರಕ್ಕೂ ಒಂದೊಂದು ಕತೆಯಿದೆ.. ಅತ್ಯದ್ಭುತ ಸಂಗತಿ ಎಂದರೆ ಈ ಎಲ್ಲ ಪಾತ್ರಗಳನ್ನು ಒಂದಕ್ಕೊಂದು ಜೋಡಿಸಿರುವ ಪರಿ. ಪ್ರತಿಯೊಂದು ಪಾತ್ರಕ್ಕೂ ಸಂಬಂಧವಿದೆ. ಹಾಗೆ 19 ನೆ ಶತಮಾನದಲ್ಲಿ ನಡೆಯುತ್ತಿದ್ದ ಜಾತಿ ಮತಾಂತರಗಳನ್ನು ಕಥೆ ಒಳಗೊಂಡಿದೆ. ಕ್ರೈಸ್ಟ್ ಮತದ ಪ್ರಚಾರ ಮಾಡುವ ಪಾದ್ರಿ ಜೀವರತ್ನಯ್ಯ, ಕ್ರೈಸ್ಟ್ ಮತಕ್ಕೆ ಸೇರಬೇಕೆಂದು ಹಂಬಲಿಸುವ ದೇವಯ್ಯ ಹೀಗೆ ಮನುಷ್ಯರ ಮತ್ತು ಮನಸಿನ ನಡುವಿನ ಜಾತಿಯ ಬಗೆಗಿನ ತಿಕ್ಕಾಟಗಳನ್ನು ತೋರಿಸಿದ್ದಾರೆ . Crop ಗೆ 'ಕಿರಾಪು', "bicycle ಗೆ ಬಿಸುಕಲ್ಲು ಎಂದೆಲ್ಲ ಉಚ್ಚರಿಸುತ್ತಿದ್ದ ಕಾಲವದು. ಇಷ್ಟೆಲ್ಲಾ ಪಾತ್ರಗಳಲ್ಲಿ ಅತಿ ಮುಖ್ಯವಾದುವು ಎಂದರೆ ಗುತ್ತಿ, ಚಿನ್ನಮ್ಮ & ಮುಕುಂದಯ್ಯ, ಐತ & ಪಿಂಚಲು. ಕೊಣುರಿನ ಮುಕುಂದಯ್ಯನಿಗೆ ತನ್ನ ಅಕ್ಕನ ಮಗಳು ಚಿನ್ನಮ್ಮನ ಜೊತೆ ಬಾಲ್ಯದಿಂದಲೂ ಗೆಳೆತನ . ಅದೇ ಗೆಳೆತನ ಪ್ರೀತಿಯಾಗಿ ಬದಲಾಗಿರುತ್ತದೆ ದೊಡ್ಡವರಾದ ಮೇಲೆ. ಆದರೆ ಹೂವಳ್ಳಿ ವೆಂಕಣ್ಣ ತನ್ನ ಮಗಳನ್ನು ತಿಮ್ಮಪ್ಪ ಹೆಗ್ಗಡೆಗೆ ಕೊಡುವ ಸಂಚು ಮಾಡಿದಾಗ ಇವರೆಲ್ಲರೂ ಸೇರಿಕೊಂಡು ಚಿನ್ನಮ್ಮನನ್ನು ಓಡಿಸಿಕೊಂಡು ಬರುವ ಯೋಜನೆ ಹಾಕಿಕೊಳ್ಳುತ್ತಾರೆ. ಹೀಗೆ ಕತೆಯ ಉದ್ದಗಲಕ್ಕೂ ಗುತ್ತಿ & ತಿಮ್ಮಿ, ಚಿನ್ನಮ್ಮ & ಮುಕುಂದಯ್ಯ ಇವರ ಪರಿ ಪಾಟಲುಗಳು, ಯೋಜನೆಗಳು, ಸ್ಥಾನಮಾನಗಳನ್ನು ಮೀರಿ ಒಬ್ಬರಿಗೊಬ್ಬರು ಸಹಾಯ ಮಾಡುವ ಮನಸುಗಳ ಚಿತ್ರಣವಿದೆ.
![]() |
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
Remove ads
Wikiwand - on
Seamless Wikipedia browsing. On steroids.
Remove ads