ಲೋಕಸಭೆ

From Wikipedia, the free encyclopedia

ಲೋಕಸಭೆ
Remove ads
Quick facts ಲೋಕಸಭೆ ಜನರ ಸದನ, Type ...
Remove ads

ಲೋಕಸಭೆ ಸಂಕ್ಷಿಪ್ತ ವಿವರ

  • ಲೋಕಸಭೆ ಭಾರತದ ಸಂಸತ್ತಿನ ಎರಡು ಸಭೆಗಳಲ್ಲಿ ಒಂದು (ರಾಜ್ಯಸಭೆ ಇನ್ನೊಂದು). ಲೋಕಸಭೆಯ ಸದಸ್ಯರು ಜನರಿಂದಲೇ ನೇರ ಚುನಾವಣೆಗಳಿಂದ ಚುನಾಯಿತರಾದ ವ್ಯಕ್ತಿಗಳು. ಭಾರತೀಯ ಸಂವಿಧಾನದಂತೆ ಲೋಕಸಭೆ ಗರಿಷ್ಠವಾಗಿ 552 ಸದಸ್ಯರನ್ನು ಹೊಂದಿರಬಲ್ಲುದು. ಭಾರತದ ವಿವಿಧ ರಾಜ್ಯಗಳಿಂದ ಗರಿಷ್ಠ 530 ಸದಸ್ಯರು ಚುನಾಯಿತರಾಗುತ್ತಾರೆ. 20 ಸದಸ್ಯರು ಕೇಂದ್ರಾಡಳಿತ ಪ್ರದೇಶಗಳಿಂದ ಚುನಾಯಿತರಾದರೆ, ಇನ್ನಿಬ್ಬರು ಸದಸ್ಯರನ್ನು ಆಂಗ್ಲೋ-ಇಂಡಿಯನ್ ವರ್ಗವನ್ನು ಪ್ರತಿನಿಧಿಸಲು ನೇಮಿಸುವ ಅಧಿಕಾರ ಭಾರತದ ಅಧ್ಯಕ್ಷರಿಗೆ ಉಂಟು. ಲೋಕಸಭೆಯ ಸದಸ್ಯರಾಗಲು ಕನಿಷ್ಠ 25 ವರ್ಷ ವಯಸ್ಸಾಗಿರಬೇಕು.
  • ಲೋಕಸಭೆಯ ಸಾಮಾನ್ಯ ಅವಧಿ ಐದು ವರ್ಷಗಳು. ಐದು ವರ್ಷಗಳ ನಂತರ ಮತ್ತೊಮ್ಮೆ ಚುನಾವಣೆಗಳು ನಡೆಯುತ್ತವೆ. ತುರ್ತು ಪರಿಸ್ಥಿತಿಯಿದ್ದಲ್ಲಿ ಚುನಾವಣೆಗಳನ್ನು ಮುಂದೂಡಬಹುದು. ಹಾಗೆಯೇ ಅವಧಿ ಮುಗಿಯುವ ಮುನ್ನ ಸರ್ಕಾರ ಬಹುಮತ ಕಳೆದುಕೊಂಡಲ್ಲಿ ಮತ್ತೊಮ್ಮೆ ಚುನಾವಣೆಗಳು ನಡೆಯಬೇಕಾಗಬಹುದು. ಪ್ರಸ್ಥುತ ಕಾರ್ಯ ನಿರ್ವಹಿಸುತ್ತಿರುವ 16 ನೆಯ ಲೋಕಸಭೆ ಮೇ, 2014 ರಲ್ಲಿ ಸೇರಿತು.
  • ಪ್ರತಿ ರಾಜ್ಯದಿಂದ ಇರುವ ಲೋಕಸಭಾ ಸದಸ್ಯರ ಸಂಖ್ಯೆ ಆ ರಾಜ್ಯದ ಜನಸಂಖ್ಯೆಯನ್ನು ಅವಲಂಬಿಸಿರುತ್ತದೆ. ಈಗಿನ ಹಂಚಿಕೆ ಹೀಗಿದೆ (545 ಸದಸ್ಯರು: 543 ಚುನಾಯಿತ + 2 ನೇಮಿತ):
Remove ads

ಭಾರತದ ರಾಜ್ಯವಾರು ಲೋಕಸಭಾ ಕ್ಷೇತ್ರಗಳು

  • 2014 (Indian general election)ರ ಚುನಾವಣೆ ಫಲಿತಾಂಶ ಕೆಳಗೆ ಕೊಟ್ಟಿದೆ
  • ಆಂಧ್ರದ 42 ಲೋಕಸಭಾ ಕ್ಷೇತ್ರಗಳ ಪೈಕಿ 17 ಕ್ಷೇತ್ರಗಳು ತೆಲಂಗಾಣ ವ್ಯಾಪ್ತಿಯಲ್ಲಿವೆ. ಉಳಿದ ೨೫ ಸ್ಥಾನಗಳು ಹೊಸ ಆಂಧ್ರ ಪ್ರದೇಶದಲ್ಲಿವೆ.
ರಾಜ್ಯಗಳು:
Remove ads

ಕೆಲಸ

ಲೋಕಸಭೆಯ ಸದಸ್ಯರು ಒಬ್ಬರನ್ನು "ಸಭಾಧ್ಯಕ್ಷ(ಸ್ಪೀಕರ್) ಅಥವಾ ಸಭಾಪತಿ" ಆಗಿ ಚುನಾಯಿಸುತ್ತಾರೆ. ಲೋಕಸಭೆಯ ಕಾರ್ಯ ಸರಾಗವಾಗಿ ಸಾಗುವಂತೆ ನೋಡಿಕೊಳ್ಳುವುದು ಸಭಾಧ್ಯಕ್ಷ(ಸ್ಪೀಕರ್) ರ ಮುಖ್ಯ ಕೆಲಸ. ಸಭಾಧ್ಯಕ್ಷ(ಸ್ಪೀಕರ್) ಅವರ ಅನುಪಸ್ಥಿತಿಯಲ್ಲಿ ಅವರ ಕೆಲಸವನ್ನು ಉಪಸಭಾಧ್ಯಕ್ಷ(ಡೆಪ್ಯುಟಿ ಸ್ಪೀಕರ್)ರು ನಿರ್ವಹಿಸುತ್ತಾರೆ. ಇವರಲ್ಲದೇ ಇವರಿಬ್ಬರ ಅನುಪಸ್ಥಿತಿಯಲ್ಲಿ ಸದನದ ಕಾರ್ಯಕಲಾಪಗಳನ್ನು ನಿರ್ವಹಿಸಲು ೧೦ ಹಿರಿಯ ಸದಸ್ಯರನ್ನು ಸಭಾಧ್ಯಕ್ಷರು ನೇಮಕ ಮಾಡುತ್ತಾರೆ. ಮೀರಾ ಕುಮಾರ್ ರವರು ಲೋಕ ಸಭೆಯ ಮೊದಲ ಮಹಿಳಾ ಸಭಾದ್ಯಕ್ಷರು.

ಸಾಮಾನ್ಯ ದಿನಗಳಲ್ಲಿ ಲೋಕಸಭೆ ಬೆಳಿಗ್ಗೆ ೧೧ ರಿಂದ ಮಧ್ಯಾಹ್ನ ಒಂದರವರೆಗೆ, ಮತ್ತೆ ಮಧ್ಯಾಹ್ನ ಎರಡರಿಂದ ಸಂಜೆ ಆರರ ವರೆಗೆ ಸೇರುತ್ತದೆ. ಮೊದಲ ಒಂದು ಘಂಟೆ ಪ್ರಶ್ನೋತ್ತರಗಳಿಗೆ ಮೀಸಲಾಗಿಡಲಾಗಿರುತ್ತದೆ.

ಭಾರತ ಸರ್ಕಾರದ ಶಾಸಕಾಂಗದ ಇನ್ನೊಂದು ಸಭೆ ರಾಜ್ಯಸಭೆ. ಯಾವುದೇ ಮಸೂದೆಗೆ ಲೋಕಸಭೆ ಒಪ್ಪಿಗೆ ಇತ್ತ ನಂತರ ಅದು ರಾಜ್ಯಸಭೆಗೆ ಹೋಗುತ್ತದೆ. ರಾಜ್ಯಸಭೆಯೂ ಒಪ್ಪಿದ ನಂತರ ಈ ಮಸೂದೆ ಕಾಯಿದೆಯಾಗುತ್ತದೆ. ಹಣಕಾಸಿಗೆ ಸಂಬಂಧಪಟ್ಟ ಮಸೂದೆಗಳ ವಿಷಯದಲ್ಲಿ ಮಾತ್ರ ರಾಜ್ಯಸಭೆಯ ಮಂಜೂರಾತಿ ಅಗತ್ಯವಿಲ್ಲ.

ಈವರೆಗಿನ ಲೋಕಸಭಾ ಚುನಾವಣಾ ವಿವರಗಳು

ಲೋಕಸಭೆಯ ಸದಸ್ಯರನ್ನು ನಿರ್ದಿಷ್ಟ ಚುನಾವಣೆಯಲ್ಲಿ ಎಲ್ಲಾ ವಯಸ್ಕ ಮತದಾರರು ಚುನಾಯಿಸುತ್ತಾರೆ. ಲೋಕಸಭೆ ವಿಸರ್ಜನೆ ಆಗುವವರೆಗೆ (ಸಾಮಾನ್ಯವಾಗಿ ಐದು ವರ್ಷಗಳ ಅವಧಿ) ಈ ಚುನಾಯಿತ ಪ್ರತಿನಿಧಿಗಳು ಅಧಿಕಾರದಲ್ಲಿ ಇರುತ್ತಾರೆ. ನವದೆಹಲಿಯ ಸಂಸತ್ ಭವನದಲ್ಲಿ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಆಯ್ಕೆಗೊಂಡ ಸದಸ್ಯರು ಸಮಾಲೋಚನೆ ನಡೆಸಿ ಕಾನೂನುಗಳನ್ನು ರೂಪಿಸುತ್ತಾರೆ.[]

ಲೋಕಸಭಾ ಚುನಾವಣಾ ಫಲಿತಾಂಶಗಳ ನಕ್ಷೆಗಳು
Thumb
ಮೊದಲನೇ ಲೋಕಸಭೆ (1951-52ರ ಲೋಕಸಭಾ ಚುನಾವಣೆ)
Thumb
ಎರಡನೇ ಲೋಕಸಭೆ (1957ರ ಲೋಕಸಭಾ ಚುನಾವಣೆ)
Thumb
ಮೂರನೇ ಲೋಕಸಭೆ (1962ರ ಲೋಕಸಭಾ ಚುನಾವಣೆ)
Thumb
ನಾಲ್ಕನೇ ಲೋಕಸಭೆ (1967ರ ಲೋಕಸಭಾ ಚುನಾವಣೆ)
Thumb
ಐದನೇ ಲೋಕಸಭೆ (1971ರ ಲೋಕಸಭಾ ಚುನಾವಣೆ)
Thumb
ಆರನೇ ಲೋಕಸಭೆ (1977ರ ಲೋಕಸಭಾ ಚುನಾವಣೆ)
Thumb
ಏಳನೇ ಲೋಕಸಭೆ (1980ರ ಲೋಕಸಭಾ ಚುನಾವಣೆ)
Thumb
ಎಂಟನೇ ಲೋಕಸಭೆ (1984ರ ಲೋಕಸಭಾ ಚುನಾವಣೆ)
Thumb
ಒಂಭತ್ತನೇ ಲೋಕಸಭೆ (1989ರ ಲೋಕಸಭಾ ಚುನಾವಣೆ)
Thumb
ಹತ್ತನೇ ಲೋಕಸಭೆ (1991ರ ಲೋಕಸಭಾ ಚುನಾವಣೆ)
Thumb
ಹನ್ನೊಂದನೇ ಲೋಕಸಭೆ (1996ರ ಲೋಕಸಭಾ ಚುನಾವಣೆ)
Thumb
ಹನ್ನೆರಡನೇ ಲೋಕಸಭೆ (1998ರ ಲೋಕಸಭಾ ಚುನಾವಣೆ)
Thumb
ಹದಿಮೂರನೇ ಲೋಕಸಭೆ (1999ರ ಲೋಕಸಭಾ ಚುನಾವಣೆ)
Thumb
ಹದಿನಾಲ್ಕನೇ ಲೋಕಸಭೆ (2004ರ ಲೋಕಸಭಾ ಚುನಾವಣೆ)
Thumb
ಹದಿನೈದನೇ ಲೋಕಸಭೆ (2009ರ ಲೋಕಸಭಾ ಚುನಾವಣೆ)
Thumb
ಹದಿನಾರನೇ ಲೋಕಸಭೆ (2014ರ ಲೋಕಸಭಾ ಚುನಾವಣೆ)
Thumb
ಹದಿನೇಳನೇ ಲೋಕಸಭೆ (2019ರ ಲೋಕಸಭಾ ಚುನಾವಣೆ)

ಲೋಕಸಭಾ ಚುನಾವಣಾ ಇತಿಹಾಸ

ಬಣ್ಣಗಳ ಸೂಚಿ

      ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇಟ್ರ ಕಳ಼ಗಂ       ಭಾರತೀಯ ಜನಸಂಘ       ಭಾರತೀಯ ಜನತಾ ಪಕ್ಷ       ಭಾರತೀಯ ಕಮ್ಯುನಿಸ್ಟ್ ಪಕ್ಷ       ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)       ದ್ರಾವಿಡ ಮುನ್ನೇಟ್ರ ಕಳ಼ಗಂ       ಭಾರತೀಯ ರಾಷ್ಟ್ರೀಯ ಕಾಂಗ್ರೆಸ್       ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಇಂದಿರಾ)       ಜನತಾ ಪಕ್ಷ       ಜನತಾ ಪಕ್ಷ (ಜಾತ್ಯತೀತ)
(ಜಾತ್ಯಾತೀತ ಜನತಾದಳ ಅಲ್ಲ)
      ಪ್ರಜಾ ಸೋಷಿಯಲಿಸ್ಟ್ ಪಕ್ಷ       ಸಮಾಜವಾದಿ ಪಕ್ಷ       ಸೋಷಿಯಲಿಸ್ಟ್ ಪಕ್ಷ       ಸ್ವತಂತ್ರ ಪಾರ್ಟಿ       ತೆಲುಗುದೇಶಂ ಪಕ್ಷ

More information ಮೊದಲ ಸ್ಥಾನ ಪಡೆದ ಪಕ್ಷ, ಎರಡನೇ ಸ್ಥಾನ ಪಡೆದ ಪಕ್ಷ ...

* : 12 seats in Assam and 1 in Meghalaya did not vote.[]

Remove ads

ಭಾರತದ ೧೬ ನೆಯ ಲೋಕಸಭೆ ವಿವರ

Thumb
ಭಾರತದ 16 ನೆಯ ಲೋಕಸಭೆ, 2014
ಮೇ 16, 2014ರಂದು 16ನೇ ಲೋಕಸಭಾ ಚುನಾವಣೆಗಳ ಫಲಿತಾಂಶಗಳನ್ನು ಪ್ರಕಟಿಸಲಾಯಿತು
  • 2014 ರ ಭಾರತದ ಸಾರ್ವತ್ರಿಕ ಚುನಾವಣೆ 2014 ರ ಏಪ್ರಿಲ್ ಮತ್ತು ಮೇ ಯಲ್ಲಿ ನಡೆದು ಮೇ 16, 2014ರಂದು ಎಣಿಕೆಯಾಗಿ,ಭಾರತೀಯ ಜನತಾ ಪಕ್ಷವು ಬಹಮತ ಪಡೆದಿದ್ದು, ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಶ್ರೀ ನರೇಂದ್ರ ಮೋದಿ ಆ ಹುದ್ದೆಯನ್ನು ತ್ಯಜಿಸಿ ದೆಹಲಿಯಲ್ಲಿ ಮೇ 26, 2014,ರಂದು ಮೊದಲೇ ನಿರ್ಧರಿಸಿದಂತೆ ಭಾರತದ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ೪೫ ಜನ ಮಂತ್ರಿಗಳು ಅವರ ಜೊತೆ ಪ್ರಮಾಣ ವಚನ ಸ್ವೀಕರಿಸಿದರು.
  • 2019 ಮಾರ್ಚ್ ಮೊದಲ ವಾರದಲ್ಲಿ ಚುನಾವಣಾ ಆಯೋಗವು ಲೋಕಸಭೆ ಚುನಾವಣೆಗಳ ದಿನಾಂಕಗಳನ್ನು ಘೋಷಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ. ಪ್ರಸ್ತುತ ಲೋಕಸಭೆಯ ಅವಧಿ 3 ಜೂನ್ 2019 ರಂದು ಕೊನೆಗೊಳ್ಳುತ್ತದೆ.[೧೦]


2014 -2019 (ಮಾರ್ಚಿ) ಅಂತಿಮ ಬಲಾಬಲ

ಎನ್‍ಡಿಎ
  •   ಬಿಜೆಪಿ (266)
    •   ಶಿವಸೇನೆ | ಎಸ್ಎಸ್(18)
    •   ಲೋಕ ಜನಶಕ್ತಿ ಪಾರ್ಟಿ | ಎಲ್‍ಜೆಪಿ (6)
    •   ಶಿರೋಮಣಿ ಅಕಾಲಿ ದಳ | ಎಸ್ಎಡಿ (4)
    •   ಅಪ್ನಾ ದಲ್ | ಎಡಿ (2)
    •   ಜನತಾ ದಳ (ಯುನೈಟೆಡ್) | ಜೆಡಿ (ಯು) (2)
    •   ಆಲ್ ಇಂಡಿಯಾ ಎನ್.ಆರ್. ಕಾಂಗ್ರೆಸ್ | ಎಐಆರ್ಆರ್ಸಿ] (1)
    •   ರಾಷ್ಟ್ರೀಯತಾವಾದಿ ಪ್ರಜಾಪ್ರಭುತ್ವ ಪ್ರಗತಿಪರ ಪಕ್ಷ | ಎನ್ಡಿಪಿಪಿ]](1)
    •   ಪಟ್ಟಲಿ ಮಕಲ್ ಕಚಿ | ಪಿಎಮ್ಕೆ] (1)
    •   ಸಿಕ್ಕಿಂ ಡೆಮೊಕ್ರಟಿಕ್ ಫ್ರಂಟ್ | ಎಸ್ಡಿಎಫ್] (1)
    •   ಲೋಕಸಭೆಯಲ್ಲಿ ಆಂಗ್ಲೋ-ಭಾರತೀಯ ಮೀಸಲು ಸ್ಥಾನಗಳು | ಎನ್ಒಎಮ್,-| ಬಿಜೆಪಿ] (2)
    •   ಲೋಕಸಭೆಯ ಸ್ಪೀಕರ್ | ಸ್ಪೀಕರ್] ಬಿಜೆಪಿ (1)
ವಿರೋಧ ಪಕ್ಷ(214)
ಯುಪಿಎUPA(64)
  •   ಐಎನ್‍ಸಿ(44)
    •   ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ | ಎನ್ಸಿಪಿ] (6)
    •   ರಾಷ್ಟ್ರೀಯ ಜನತಾ ದಳ | ಆರ್ಜೆಡಿ] (4)
    •   ರಾಷ್ಟ್ರೀಯ ಲೋಕಸಮಾ ಪಕ್ಷದ | ಆ ಎಲ್‍ಎಸ್ಎಸ್‍ಪಿ](3)
    •   ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ | ಐಯುಎಂಎಲ್] (2)
    •   ಜನತಾ ದಳ (ಸೆಕ್ಯುಲರ್) | ಜೆಡಿ (ಎಸ್)] (2)
    •   ರಾಷ್ಟ್ರೀಯ ಲೋಕ ದಳ | ಆರ್‍ ಎಲ್‍ ಡಿ] (1)
    •   ಕ್ರಾಂತಿಕಾರಿ ಸಮಾಜವಾದಿ ಪಕ್ಷ (ಭಾರತ) | ಆರ್‍ಎಸ್‍ಪಿ] (1)
    •   ಸ್ವಾಭಿಮಾನಿ ಪಕ್ಷ | SWP] (1)
ಇತರ ಪಕ್ಷಗಳು (150)
  •  ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ | ಎಐಎಡಿಎಂಕೆ] (37)
    •   ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್ | ಎಐಟಿಸಿ](34)
    •   ಬಿಜು ಜನತಾ ದಳ | ಬಿಜೆಡಿ](19)
    •   ತೆಲುಗು ದೇಶಂ ಪಕ್ಷ | ಟಿಡಿಪಿ]](15)
    •   ತೆಲಂಗಾಣ ರಾಷ್ಟ್ರ ಸಮಿತಿ | ಟಿಆರ್ಎಸ್](10)
    •   ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ) | ಸಿಪಿಐ (ಎಂ)] (9)
    •   ಸಮಾಜವಾದಿ ಪಕ್ಷ | ಎಸ್ಪಿ](7)
    •   ಆಮ್ ಆದ್ಮಿ ಪಾರ್ಟಿ | ಎಎಪಿ] (4)
    •   ವೈಎಸ್ಆರ್ ಕಾಂಗ್ರೆಸ್ ಪಕ್ಷ | ವೈಎಸ್ಆರ್ಸಿಪಿ (4)
    •   ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ | ಎಐಯುಡಿಎಫ್]] (3)
    •   ಭಾರತೀಯ ರಾಷ್ಟ್ರೀಯ ಲೋಕ ದಳ | ಐಎನ್ಎಲ್ಡಿ] (2)
    •   ಜಾರ್ಖಂಡ್ ಮುಕ್ತಿ ಮೋರ್ಚಾ | ಜೆಎಂಎಂ] (2)
    •  ಆಲ್ ಇಂಡಿಯಾ ಮಜ್ಲಿಸ್-ಎ-ಇಥೆಹಾದುಲ್ ಮುಸಲ್ಮಿನ್ | AIMIM] (1)
    •   ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ | ಸಿಪಿಐ] (1)
    •   ಜಮ್ಮು ಮತ್ತು ಕಾಶ್ಮೀರ ರಾಷ್ಟ್ರೀಯ ಕಾನ್ಫರೆನ್ಸ್ | ಜೆಕೆಎನ್ಸಿ] (1)
    •   ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ | ಜೆಕೆಪಿಡಿಪಿ. (1)
ಇತರೆ (3)
  •   ಪಕ್ಷೇತರ (3)
ಖಾಲಿ (23)
  •  :ಖಾಲಿ: (23)
Remove ads

ಈವರೆಗಿನ ಲೋಕಸಭೆಗಳು ಮತ್ತು ಲೋಕಸಭಾ ಚುನಾವಣೆಗಳ ಪಟ್ಟಿ

More information ಲೋಕಸಭೆಯ ಸಂಖ್ಯೆ, ಚುನಾವಣೆಯ ವಿವರ ...
Remove ads

ನೋಡಿ

ಲೋಕಸಭೆಯಲ್ಲಿ ಮಹಿಳಾ ಪ್ರಾತಿನಿಧ್ಯ

ಚುನಾವಣೆ ೨೦೧೯ ಸಮೀಕ್ಷೆ

ಪರಿವಿಡಿ

ಬಾಹ್ಯ ಸಂಪರ್ಕಗಳು

ಉಲ್ಲೇಖಗಳು

  • Jump up ^ "Bioprofile of Meira Kumar". Fifteenth Lok Sabha Member's Bioprofile. Retrieved 19 August 2011.
  • Jump up ^ "Bioprofile of Kariya Munda". Fifteenth Lok Sabha Member's Bioprofile. Retrieved 19 August 2011.
  • Jump up ^ "Bioprofile of Pranab Mukherjee". Fifteenth Lok Sabha Member's Bioprofile. Retrieved 19 August 2011.
  • Jump up ^ "Bioprofile of Sushma Swaraj". Fifteenth Lok Sabha Member's Bioprofile. Retrieved 19 August 2011.
  • Jump up ^ "Lok Sabha". parliamentofindia.nic.in. Retrieved 19 August 2011.
  • ^ Jump up to: a b Parliament of India: Lok Sabha
Remove ads

ಉಲ್ಲೇಖಗಳು

Loading related searches...

Wikiwand - on

Seamless Wikipedia browsing. On steroids.

Remove ads