ವಿಶ್ವವಿದ್ಯಾನಿಲಯ

From Wikipedia, the free encyclopedia

ವಿಶ್ವವಿದ್ಯಾನಿಲಯ
Remove ads

ವಿಶ್ವವಿದ್ಯಾನಿಲಯವು ವಿವಿಧ ಶೈಕ್ಷಣಿಕ ಕ್ಷೇತ್ರಗಳಲ್ಲಿ ಶೈಕ್ಷಣಿಕ ಪದವಿಗಳನ್ನು ನೀಡುವ ಉನ್ನತ ಶಿಕ್ಷಣ ಮತ್ತು ಸಂಶೋಧನೆಯ ಸ್ಥಳ. ವಿಶ್ವವಿದ್ಯಾನಿಲಯಗಳು ಸಾಮಾನ್ಯವಾಗಿ ಪದವಿಪೂರ್ವ ಶಿಕ್ಷಣ ಮತ್ತು ಸ್ನಾತಕೋತ್ತರ ಶಿಕ್ಷಣವನ್ನು ಒದಗಿಸುತ್ತವೆ.

Thumb
ಆಕ್ಸ್‌ಫ಼ರ್ಡ್ ವಿಶ್ವವಿದ್ಯಾನಿಲಯದಲ್ಲಿ ಘಟಿಕೋತ್ಸವ ದಿನದಂದಿನ ಪದವಿ ಸಮಾರಂಭ.

ಆಧುನಿಕ ವಿಶ್ವವಿದ್ಯಾನಿಲಯ ವ್ಯವಸ್ಥೆಯು ತನ್ನ ಮೂಲಗಳನ್ನು ಐರೋಪ್ಯ ಮಧ್ಯಯುಗದ ವಿಶ್ವವಿದ್ಯಾನಿಲಯದಲ್ಲಿ ಹೊಂದಿದೆ. ಇದನ್ನು ಇಟಲಿಯಲ್ಲಿ ಸೃಷ್ಟಿಸಲಾಯಿತು ಮತ್ತು ಇದು ನಂತರದ ಮಧ್ಯಯುಗದ ಅವಧಿಯಲ್ಲಿ ಪಾದ್ರಿಗಳಿಗಾಗಿ ಇದ್ದ ಕ್ಯಾಥೀಡ್ರಲ್ ಶಾಲೆಗಳಿಂದ ವಿಕಸನಗೊಂಡಿತು.[]

Remove ads

ಹಿಂದಿನ ಉದಾಹರಣೆಗಳು

ಬ್ರಿಟಾನಿಕಾ ವಿಶ್ವಕೋಶದ ಪ್ರಕಾರ, ಅತ್ಯಂತ ಮುಂಚಿನ ವಿಶ್ವವಿದ್ಯಾನಿಲಯಗಳನ್ನು ಏಷ್ಯಾ ಮತ್ತು ಆಫ಼್ರಿಕಾದಲ್ಲಿ ಸ್ಥಾಪಿಸಲಾಯಿತು, ಮತ್ತು ಮೊದಲ ಐರೋಪ್ಯ ಮಧ್ಯಕಾಲೀನ ವಿಶ್ವವಿದ್ಯಾನಿಲಯಗಳಿಗಿಂತ ಹಿಂದಿನದವಾಗಿದ್ದವು. ಮೊರೊಕ್ಕೊದಲ್ಲಿ ಫ಼ಾತಿಮಾ ಅಲ್-ಫ಼ಿಹ್ರಿ ೮೫೯ರಲ್ಲಿ ಸ್ಥಾಪಿಸಿದ ಅಲ್ ಕೆರಾವೀನ್ ವಿಶ್ವವಿದ್ಯಾನಿಲಯವು ಅತ್ಯಂತ ಹಳೆಯ ಪದವಿ ಪ್ರದಾನ ಮಾಡುವ ವಿಶ್ವವಿದ್ಯಾನಿಲಯವೆಂದು ಪರಿಗಣಿತವಾಗಿದೆ.[][]

ಉಲ್ಲೇಖಗಳು

Loading related searches...

Wikiwand - on

Seamless Wikipedia browsing. On steroids.

Remove ads