ಸ್ವಾತಂತ್ರ್ಯ
From Wikipedia, the free encyclopedia
Remove ads
ಸ್ವಾತಂತ್ರ್ಯ ಪದವನ್ನು ಇಲ್ಲಿ ಎರಡು ರೀತಿಯಲ್ಲಿ ಊಪಯೋಗಿಸಬಹುದು. ಒಂದು ವಸ್ತುವಿಗೆ ಮತ್ತೊಂದು ವ್ಯಕ್ತಿಗೆ. ಯಾವುದೇ ಒಂದು ವಸ್ತುವು ಯಾವುದೇ ನಿರ್ಭಂದಕ್ಕೆ ಒಳಪಡದೆ ಯಾವುದೇ ದಿಕ್ಕಿನಲ್ಲಿ ಚಲಿಸಲು ಸಾಧ್ಯವಾದರೆ ಅದನ್ನು ನಾವು ಸ್ವಾತಂತ್ರ್ಯ ವಸ್ತುವೆನ್ನಬಹುದು. ಅದೇ ವಸ್ತುವಿಗೆ ಯಾವುದೇ ನಿರ್ಭಂದವಿದ್ದರೆ ಅದು ಸ್ವಾತಂತ್ರ್ಯ ಕಳೆದುಕೊಂಡಿತೆಂದು ಅರ್ಥ. ಇದೇ ರೀತಿ ಯಾವುದೇ ವ್ಯಕ್ತಿಯ ಮೇಲೆ ಕೆಲ ನಿರ್ಭಂದಗಳನ್ನು ಹೇರಿದಾಗ ಅವನು ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಾನೆ.

ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬರುವ ಮುಂಚೆ ಪ್ರಜೆಗಳೆಲ್ಲರೂ ಆಂಗ್ಲರು ಹೇರಿದ್ದ ನಿರ್ಭಂದಗಳಿಗೆ ಒಳಪಟ್ಟಿದ್ದೆವು.ಸ್ವಾತಂತ್ರ್ಯ ಎಂದರೆ ಯಾವುದೇ ದೇಶದ ಪ್ರಜೆಗಳು ತಮ್ಮಿಂದಲೇ ಚುನಾಯಿಸಲ್ಪಟ್ಟ/ಆರಿಸಲ್ಪಟ್ಟ ಸರಕಾರದಿಂದ ಆಳಲ್ಪಡುತ್ತಾರೆ. ಅವರು ಬೇರೆ ಯಾವುದೇ ದೇಶದವರು ಮಾಡಿದ ಕಾನೂನು ಕಟ್ಟಲೆಗಳನ್ನು ಪಾಲಿಸಬೇಕಾಗಿಲ್ಲ. ಸ್ವಾತಂತ್ರ್ಯ ಯಾವುದೇ ಒಂದು ದೇಶ ಅಥವಾ ರಾಜ್ಯದ ವಸ್ತುಸ್ಥಿತಿ. ಸ್ವತಂತ್ರ ರಾಜ್ಯವೊಂದರಲ್ಲಿ ವಾಸಿಸುತ್ತಿರುವವರು ಅಥವಾ ಪ್ರಜೆಗಳು ಸ್ವರಾಜ್ಯದಲ್ಲಿ ಭಾಗಿಯಾಗಿರುತ್ತಾರೆ ಹಾಗೂ ಸಾಧಾರಣವಾಗಿ ಒಟ್ಟಾರೆ ಭೂಪ್ರದೇಶದ ಮೇಲೆ ಸರಕಾರದ ಮೂಲಕ ಸಾರ್ವಭೌಮತ್ವ ಹೊಂದಿರುತ್ತಾರೆ.
![]() |
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
Remove ads
Wikiwand - on
Seamless Wikipedia browsing. On steroids.
Remove ads