ಭಯ

From Wikipedia, the free encyclopedia

ಭಯ
Remove ads

ಭಯ ಕೆಲವು ಬಗೆಯ ಸಾವಯವಗಳಲ್ಲಿ ಗ್ರಹಿಸಿದ ಅಪಾಯ ಅಥವಾ ಬೆದರಿಕೆಯಿಂದ ಪ್ರೇರಿತವಾದ ಒಂದು ಅನಿಸಿಕೆ, ಮತ್ತು ಇದು ಚಯಾಪಚಯ ಹಾಗೂ ಅಂಗ ಕ್ರಿಯೆಗಳ ಬದಲಾವಣೆಗೆ ಮತ್ತು ಅಂತಿಮವಾಗಿ ಗ್ರಹಿಸಿದ ಆಘಾತಕಾರಿ ಘಟನೆಗಳಿಂದ ಪಲಾಯನ, ಅಡಗುವುದು, ಅಥವಾ ಮೈ ತಣ್ಣಗಾಗುವಿಕೆಯಂತಹ ವರ್ತನೆಯಲ್ಲಿನ ಬದಲಾವಣೆಗೆ ಕಾರಣವಾಗುತ್ತದೆ. ಮಾನವರಲ್ಲಿ ಭಯವು ವರ್ತಮಾನದಲ್ಲಿ ಆಗುವ ಒಂದು ನಿರ್ದಿಷ್ಟ ಉದ್ದೀಪನಕ್ಕೆ ಪ್ರತಿಕ್ರಿಯೆಯಾಗಿ, ಅಥವಾ ಶರೀರಕ್ಕೆ ಅಥವಾ ಪ್ರಾಣಕ್ಕೆ ಗಂಡಾಂತರವೆಂದು ಗ್ರಹಿಸಲಾದ ಭವಿಷ್ಯದ ಬೆದರಿಕೆಯ ನಿರೀಕ್ಷೆಯಲ್ಲಿ ಉಂಟಾಗಬಹುದು.

Thumb

ಮಾನವರಲ್ಲಿ ಮತ್ತು ಪ್ರಾಣಿಗಳಲ್ಲಿ, ಭಯವು ಅರಿವು ಮತ್ತು ಕಲಿಕೆಯ ಪ್ರಕ್ರಿಯೆಯಿಂದ ನಿಯಂತ್ರಿತಗೊಳ್ಳುತ್ತದೆ. ಹೀಗೆ ಭಯವು ವಿವೇಕಯುಕ್ತ ಅಥವಾ ಸಮರ್ಪಕ ಮತ್ತು ವಿಚಾರಹೀನ ಅಥವಾ ಅಸಮರ್ಪಕವೋ ಎಂದು ತೀರ್ಮಾನವಾಗುತ್ತದೆ. ಅಸಮರ್ಪಕ ಭಯವನ್ನು ಕಡುಹೆದರಿಕೆ ಎಂದು ಕರೆಯಲಾಗುತ್ತದೆ.

ಮೂಲಭೂತ ಅಥವಾ ಸ್ವಭಾವಸಿದ್ಧ ಭಾವನೆಗಳ ಕೇವಲ ಒಂದು ಸಣ್ಣ ಸಮೂಹವಿದೆ ಮತ್ತು ಇದರಲ್ಲಿ ಭಯವೂ ಒಂದು ಭಾವನೆ ಎಂದು ಮನಶ್ಶಾಸ್ತ್ರಜ್ಞರು ಸೂಚಿಸಿದ್ದಾರೆ. ಭಯ ಅತಂಕದ ಭಾವನೆಗೆ ನಿಕಟವಾಗಿ ಸಂಬಂಧಿಸಿದೆ, ಆದರೆ ಅದರಿಂದ ಪ್ರತ್ಯೇಕಿಸಲ್ಪಡಬೇಕು, ಏಕೆಂದರೆ ಆತಂಕ ನಿಯಂತ್ರಿಸಲಾಗದ ಅಥವಾ ತಪ್ಪಿಸಿಕೊಳ್ಳಲಾಗದ ಎಂದು ಗ್ರಹಿಸಲಾದ ಬೆದರಿಕೆಗಳ ಪರಿಣಾಮವಾಗಿ ಉಂಟಾಗುತ್ತದೆ.[]

Remove ads

ಉಲ್ಲೇಖಗಳು

Loading related searches...

Wikiwand - on

Seamless Wikipedia browsing. On steroids.

Remove ads