ಜೋಯ್ಡಾ
From Wikipedia, the free encyclopedia
ಜೋಯ್ಡಾ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಒಂದು ತಾಲೂಕು ಕೇಂದ್ರ ಮತ್ತು ಅದರ ಆಡಳಿತ ಕೇಂದ್ರ. ಇದು ಕಗ್ಗಾಡಿನ ಪ್ರದೇಶ. ಕಾಳಿ ನದಿಗೆ ಸೂಪಾ ಸಮೀಪದಲ್ಲಿ ಸೂಪಾ ಅಣೆಕಟ್ಟನ್ನು ಕಟ್ಟಿದ ನಂತರ, ಸೂಪ ಎಂಬ ತಾಲೂಕು ಕೇಂದ್ರವು ಮುಳುಗಿಹೋಯಿತು. ಆ ಕಾರಣ ೧೯೮೧ ರಲ್ಲಿ ತಾಲೂಕು ಕೇಂದ್ರವನ್ನು ಜೋಯಿಡಾ ಎಂಬ ಹಳ್ಳಿಗೆ ಬದಲಾಯಿಸಲಾಯಿತು. ಆದ್ದರಿಂದ, ಈ ಊರನ್ನು ಕೆಲವೊಮ್ಮೆ ಸೂಪಾ ಎಂದೂ ಕರೆಯುವುದುಂಟು. ಇದು ದಾಂಡೇಲಿಯಿಂದ ಸುಮಾರು ೨೨ ಕಿ.ಮಿ ದೂರದಲ್ಲಿದೆ. ಇದು ತಾಲೂಕು ಕೇಂದ್ರವಾದರೂ ಇನ್ನೂ ಹಿಂದುಳಿದ ಪ್ರದೇಶವಾಗಿದೆ.ಕರ್ನಾಟಕದ ಅತಿ ಹಿಂದುಳಿದ ತಾಲೂಕುಕೇಂದ್ರವೆಂದರೆ ಜೊಯಿಡಾವೇ ಇರಬಹುದು. ಕನ್ನಡ ಮತ್ತು ಕೊಂಕಣಿ ಇಲ್ಲಿನ ಪ್ರಮುಖ ಭಾಷೆಗಳು. ಸುತ್ತಲೂ ಕಾಡು, ಅಲ್ಲಲ್ಲಿ ಹಳ್ಳಿಗಳು, ಬುಡಕಟ್ಟು ಜನಾಂಗಗಳು, ಕಾಡುತ್ಪನ್ನ ನಂಬಿ ಬದುಕುವ ಇತರ ಜನರು ಈ ತಾಲೂಕಿನ ವೈಶಿಷ್ಟ್ಯ.
ಜೋಯ್ಡಾ
ಜೋಯ್ಡಾ | |
---|---|
town |
ಜೋಯಿಡಾ ಒಂದು ಮುಖ್ಯ ಪಟ್ಟಣವೂ ಆಗಿದೆ. ಕಾರವಾರಕ್ಕೆ ಈಶಾನ್ಯದಲ್ಲಿ ಕಾಳಿ ನದಿಯ ದಕ್ಷಿಣ ದಂಡೆಯ ಮೇಲಿದೆ. ಈ ಪಟ್ಟಣದ ವಾಯವ್ಯಕ್ಕೆ ಕ್ಯಾಸಲ್ರಾಕ್ ರೈಲ್ವೆ ನಿಲ್ದಾಣವೂ ಪೂರ್ವಕ್ಕೆ ದಾಂಡೇಲಿ ರೈಲುನಿಲ್ದಾಣವೂ ಇವೆ.