ಥಾರ್ ಮರುಭೂಮಿ
ಥಾರ್ ಭಾರತದ ಅತಿದೊಡ್ಡ ಮರುಭೂಮಿಗಳಲ್ಲಿ ಒಂದಾಗಿದೆ / From Wikipedia, the free encyclopedia
ಭಾರತದ ಮಹಾ ಮರುಭೂಮಿ ಎಂದು ಕರೆಯಲ್ಪಡುವ ಥಾರ್ ಮರುಭೂಮಿ, ಪಶ್ಚಿಮ ಭಾರತದ ರಾಜಸ್ಥಾನ, ಹರಿಯಾಣ, ಪಂಜಾಬ್ ಮತ್ತು ಗುಜರಾತ್ ರಾಜ್ಯಗಳಲ್ಲಿ ಹರಡಿದೆ. ಪಾಕಿಸ್ತಾನಕ್ಕೂ ಸ್ವಲ್ಪ ಚಾಚಿರುವ ಈ ಮರುಭೂಮಿಯನ್ನು ಅಲ್ಲಿ "ಚೋಲಿಸ್ತಾನ್ ಮರುಭೂಮಿ" ಎಂದು ಕರೆಯುತ್ತಾರೆ.
Quick Facts Kintras, State ...
ಥಾರ್ | |
ದಿ ಗ್ರೇಟ್ ಇಂಡಿಯನ್ ಡೆಸರ್ಟ್ | |
Desert | |
[[Image:| 256px|none||]] | |
Kintras | ಭಾರತ, ಪಾಕಿಸ್ತಾನ |
---|---|
State | ಭಾರತ: ರಾಜಸ್ಥಾನ ಹರ್ಯಾಣ ಪಂಚಾಬ್ ಗುಜರಾತ್ ಪಾಕಿಸ್ತಾನ: ಸಿಂಧ್ ಪಂಜಾಬ್ |
Biome | Desert |
Close
ಈಶಾನ್ಯಕ್ಕೆ ಸಟ್ಲೆಜ್ ನದಿ, ಪೂರ್ವಕ್ಕೆ ಅರಾವಳಿ ಶ್ರೇಣಿ ದಕ್ಷಿಣಕ್ಕೆ ಗುಜರಾತಿನ ಕಚ್ ಜೌಗುಪ್ರದೇಶ ಹಾಗು ಪಶ್ಚಿಮಕ್ಕೆ ಸಿಂಧೂ ನದಿಗಳಿಂದ ಈ ಮರುಭೂಮಿಯ ಸುತ್ತುವರಿಯಲ್ಪಟ್ಟಿದೆ. ಮರುಭೂಮಿಯ ಒಟ್ಟು ವಿಸ್ತೀರ್ಣ ಸುಮಾರು ೪,೪೬,೦೦೦ ಚ. ಕಿಮೀ. ಸುಮಾರು ೮೦೫ ಕಿಮೀ ಉದ್ದ ಮತ್ತು ಸುಮಾರು ೪೮೫ ಕಿಮೀ ಅಗಲವಿದೆ. ೧೦% ಮರಳು ದಿಣ್ಣೆಗಳಿಂದ ಕೂಡಿದ ಇದರ ೯೦% ಭಾಗ ಕಲ್ಲು ಮಣ್ಣಿನ ಶಾಶ್ವತ ದಿಣ್ಣೆಗಳು, ಬಂಡೆಗಳು ಮತ್ತು ಉಪ್ಪಿನ ಬೈಲುಗಳಿಂದ ಕೂಡಿದೆ. ಅಲ್ಲಲ್ಲಿ ಮುಳ್ಳಿನ ಕುರುಚಲು ಗಿಡಗಳು ಮತ್ತು ಹುಲ್ಲುಗಾವಲುಗಳಿದ್ದರೂ ಇದು ಭಾಗಶಃ ಒಣ ಭೂಮಿಯಾಗಿದೆ.