ಪೇಶಾವರ್
From Wikipedia, the free encyclopedia
ಪೇಶಾವರ (ಹಿಂದೆ ವಾಯುವ್ಯ ಸರಹದ್ದಿನ ಪ್ರಾಂತ್ಯ ಎಂದು ಕರೆಯಲಾಗುತ್ತಿತ್ತು) ಪಾಕಿಸ್ತಾನದ ಫೆಡರಲ್ ಆಡಳಿತದ ಬುಡಕಟ್ಟು ಪ್ರದೇಶಗಳ ಆಡಳಿತ ಮತ್ತು ಆರ್ಥಿಕ ಕೇಂದ್ರವಾಗಿದೆ. ಪೇಶಾವರ ಪಾಕ್-ಅಫ್ಘಾನ್ ಗಡಿಯ ಹತ್ತಿರದ ಖೈಬರ್ ಪಾಸ್ನ ಪೂರ್ವ ಅಂತ್ಯದ ದೊಡ್ಡ ಕಣಿವೆಯಲ್ಲಿ ನೆಲೆಗೊಂಡಿದೆ. "ಗಡಿಯಲ್ಲಿನ ನಗರ" ಎಂದು ಕರೆಯಲ್ಪಡುವವ ಪೇಶಾವರ, ಮಧ್ಯ ಏಷ್ಯಾ ಮತ್ತು ದಕ್ಷಿಣ ಏಷ್ಯಾದ ಕಾವಲುದಾರಿಯಲ್ಲಿದ್ದು ಅತ್ಯಂತ ಸಾಂಸ್ಕೃತಿಕ ರೋಮಾಂಚಕ ಮತ್ತು ಉತ್ಸಾಹಭರಿತ ನಗರಗಳಲ್ಲೊಂದಾಗಿದೆ. ಪೇಶಾವರ ಕಾಬೂಲ್ ನದಿಯ ವಿವಿಧ ಕಾಲುವೆಗಳಿಂದ ಮತ್ತು ಅದರ ಉಪನದಿ ಬಾರಾ ನದಿಯಿಂದ ನೀರಾವರಿಯನ್ನು ಪಡಿದುಕೊಳ್ಳುತ್ತದೆ.