ಬುರ್ಜ್ ದುಬೈ
From Wikipedia, the free encyclopedia
ಬುರ್ಜ್ ಖಲೀಫಾ (ಅರೇಬಿಕ್: برج خليفة "ಖಲೀಫಾ ಟವರ್ (ಖಲೀಫಾ ಗೋಪುರ"),[7] - ಉದ್ಘಾಟನೆಗೆ ಮುಂಚೆ ಈ ಕಟ್ಟಡವನ್ನು ಬುರ್ಜ್ ದುಬೈ ಎಂದೂ ಕರೆಯಲಾಗುತ್ತಿತ್ತು. ಇದು ಸಂಯುಕ್ತ ಅರಬ್ ಎಮಿರೇಟ್ ದೇಶದ ಪ್ರಮುಖ ನಗರ ದುಬೈಯಲ್ಲಿರುವ ಒಂದು ಗಗನಚುಂಬಿ ಕಟ್ಟಡ. ಬುರ್ಜ್ ದುಬೈ ಇದುವರೆಗೂ ನಿರ್ಮಿಸಲಾದ ಅತ್ಯತ್ತರದ ಮಾನವ-ನಿರ್ಮಿತ ಕಟ್ಟಡವಾಗಿದೆ. 828 m (2,717 ft).[7]
Burj Khalifa | |
---|---|
برج خليفة | |
ಚಿತ್ರ:200px | |
ಹಳೆಯ ಹೆಸರುಗಳು | Burj Dubai |
ಸಾಮಾನ್ಯ ಮಾಹಿತಿ | |
ಸ್ಥಳ | Dubai, United Arab Emirates |
ತೆರೆಯುವ ದಿನಾಂಕ | 4 January 2010[1] |
ಬೆಲೆ | $1.5 billion[2] |
Height | |
ಚಾವಡಿ | 828 m (2,717 ft)[3] |
ಮೇಲಿನ ಮಹಡಿ | 621.3 m (2,038 ft)[3] |
Technical details | |
ಮಹಡಿ ಸಂಖ್ಯೆ | 160 habitable floors[4] plus 46 maintenance levels in the spire[5] and 2 parking levels in the basement |
ಮಹಡಿಯ ಜಾಗ | 309,473 m2 (3,331,100 sq ft)[3] |
Design and construction | |
ವಾಸ್ತುಶಿಲ್ಪಿ | Adrian Smith at SOM |
ಡೆವಲಪರ್ | Emaar Properties |
ಎಂಜಿನಿಯರ್ | Bill Baker at SOM[6] |
ಇದರ ನಿರ್ಮಾಣವು 2004ರ ಸೆಪ್ಟೆಂಬರ್ 21ರಂದು ಪ್ರಾರಂಭವಾಯಿತು. ಈ ಕಟ್ಟಡದ ಹೊರಭಾಗ ರಚನೆಯ ನಿರ್ಮಾಣವು 2009ರ ಅಕ್ಟೋಬರ್ 1ರಂದು ಸಂಪೂರ್ಣಗೊಂಡಿತು. ಈ ಕಟ್ಟಡವು ಸಾರ್ವಜನಿಕರಿಗಾಗಿ 2010ರ ಜನವರಿ 4ರಂದು [1][8] ಅಧಿಕೃತವಾಗಿ ಮುಕ್ತವಾಯಿತು. ದುಬೈ ನಗರದ ಪ್ರಮುಖ ವಾಣಿಜ್ಯ ಜಿಲ್ಲೆಯ ಸನಿಹ ಷೇಕ್ ಜಯೆದ್ ರಸ್ತೆಯಲ್ಲಿನ 'ಫರ್ಸ್ಟ್ ಇಂಟರ್ಚೇಂಚ್'ನಲ್ಲಿ, 'ಡೌನ್ಟೌನ್ ದುಬೈ' (ದುಬೈ ವಾಣಿಜ್ಯ ಪ್ರದೇಶ) ಎಂಬ ಹೊಸ ಪ್ರತಿಷ್ಠಿತ 2 km2 (490-acre) ಅಭಿವೃದ್ಧಿ ಯೋಜನೆಯ ಅಂಗವಾಗಿದೆ.
ಅಮೆರಿಕಾ ಸಂಯುಕ್ತ ಸಂಸ್ಥಾನದ ಶಿಕ್ಯಾಗೊ ನಗರದಲ್ಲಿರುವ ಸ್ಕಿಡ್ಮೋರ್, ಒವಿಂಗ್ಸ್ ಅಂಡ್ ಮೆರಿಲ್ ಕಟ್ಟಡ ವಿನ್ಯಾಸ ಸಂಸ್ಥೆಯು, ಈ ಕಟ್ಟಡದ ರಚನೆ ಮತ್ತು ವಿನ್ಯಾಸ ಕಾರ್ಯ ಕೈಗೊಂಡಿತ್ತು. ಈಗ ತಮ್ಮದೇ ಉದ್ದಿಮೆ ನಡೆಸುತ್ತಿರುವ ಅಡ್ರಿಯನ್ ಸ್ಮಿತ್ ಬುರ್ಜ್ ದುಬೈ ಕಟ್ಟಡದ ಪ್ರಮುಖ ಶಿಲ್ಪಿ ಮತ್ತು ಬಿಲ್ ಬೇಕರ್ ಪ್ರಮುಖ ರಚನಾ ಎಂಜಿನಿಯರ್ ಆಗಿದ್ದರು.[9][10] ದಕ್ಷಿಣ ಕೊರಿಯಾದ ಸ್ಯಾಮ್ಸಂಗ್ ಸಿ&ಟಿ ಈ ಕಟ್ಟಡ ನಿರ್ಮಾಣದ ಪ್ರಾಥಮಿಕ ಗುತ್ತಿಗೆದಾರ ಸಂಸ್ಥೆಯಾಗಿತ್ತು.[11]
ಈ ನಿರ್ಮಾಣ ಯೋಜನೆಯ ಒಟ್ಟಾರೆ ವೆಚ್ಚ ಸುಮಾರು (US$1.5 ಬಿಲಿಯನ್)1.5 ಶತಕೋಟಿ ಅಮೆರಿಕನ್ ಡಾಲರ್ಗಳು, ಹಾಗೂ ಇಡೀ ಡೌನ್ಟೌನ್ ದುಬೈ ಅಭಿವೃದ್ಧಿಗಾಗಿ(US$20) 20 ಶತಕೋಟಿ ವೆಚ್ಚ ಅಮೆರಿಕನ್ ಡಾಲರ್ಗಳಾಗಿತ್ತು.[12] ಈ ಯೋಜನೆಯ ಅಭಿವೃದ್ಧಿಕಾರ(ಹರಿಕಾರ) ಉದ್ದಿಮೆ ಎಮ್ಮಾರ್ ಪ್ರಾಪರ್ಟೀಸ್ನ ಮುಖ್ಯಸ್ಥ ಮೊಹಮ್ಮದ್ ಅಲಿ ಅಲಬ್ಬರ್ 2009ರ ಮಾರ್ಚ್ ತಿಂಗಳಲ್ಲಿ ನೀಡಿದ ಹೇಳಿಕೆಯ ಪ್ರಕಾರ, ಬುರ್ಜ್ ಖಲೀಫಾದಲ್ಲಿ ಕಾರ್ಯಾಲಯಗಳಿಗಾಗಿ ಬಾಡಿಗೆಗೆ ನೀಡುವ ಜಾಗೆಯ ಬೆಲೆಯು ಪ್ರತಿ ಚದರಡಿಗೆ (US$4,000)4,000 ಅಮೆರಿಕನ್ ಡಾಲರ್ ತಲುಪಿತ್ತು. (ಪ್ರತಿ m2ಗೆ (US$43,000 ಪ್ರತಿ m2)43,000 ಅಮೆರಿಕನ್ ಡಾಲರ್ಗಳಿಗಿಂತಲೂ ಹೆಚ್ಚು). ಜೊತೆಗೆ, ಬುರ್ಜ್ ಖಲೀಫಾದಲ್ಲೇ ಇರುವ ಅರ್ಮಾನಿ ರೆಸಿಡೆನ್ಸಸ್ ಪ್ರತಿ ಚದರಡಿಗೆ (US$3,500)3,500 ಅಮೆರಿಕನ್ ಡಾಲರ್ಗಳಿಗೆ ಮಾರಾಟ ಮಾಡಲಾಯಿತು. (ಪ್ರತಿ m2ಗೆ (ಒಟ್ಟು US$37,500 ಪ್ರತಿ m2)37,500 ಅಮೆರಿಕನ್ ಡಾಲರ್ಗಳಿಗಿಂತಲೂ ಹೆಚ್ಚು).[13]
ಯೋಜನೆ ಸಂಪೂರ್ಣಗೊಳ್ಳುವ ಹೊತ್ತಿಗೆ 2007-2010 ಅವಧಿಯ ಜಾಗತಿಕ ಆರ್ಥಿಕ ಸಂಕಷ್ಟವು ಆರಂಭಗೊಂಡಿತ್ತು. ಆ ಸಮಯದಲ್ಲಿ ಹಲವು ವಿಶಾಲ ಕಟ್ಟಡಗಳು ನಿರ್ಮಾಣವಾಗಿ, ಇವುಗಳಲ್ಲಿ ಹಲವು ಬಾಡಿಗೆದಾರರಿಲ್ಲದೇ ಖಾಲಿ ಬಿದ್ದಿದ್ದವು.[14] ಬಹಳಷ್ಟು ಮಹತ್ವಾಕಾಂಕ್ಷೆ ಹೊತ್ತಿದ್ದ ದುಬೈ ನಗರವು ಸಾಲದಂತಹ ಋಣದ ಸಂಕಷ್ಟದಲ್ಲಿ ಸಿಲುಕಿ, ಮುಳುಗುತ್ತಿದ್ದಾಗ, ತೈಲ-ಸಂಪತ್ತು ಹೊಂದಿದ್ದ ನೆರೆ-ನಗರ ಅಬುಧಾಬಿಯಿಂದ ಹಲವು ಶತಕೋಟಿ ಡಾಲರ್ ಮೌಲ್ಯದ ಧನಬೆಂಬಲ(ಸಹಾಯ) ಕೋರಲು ಸರ್ಕಾರ ಮುಂದಾಗಬೇಕಾಯಿತು. ಆನಂತರ, ಯುಎಇ ರಾಷ್ಟ್ರಾಧ್ಯಕ್ಷ ಖಲೀಫಾ ಬಿನ್ ಝಯದ್ ಅಲ್ ನಹ್ಯಾನ್ ಅತ್ಯಮೂಲ್ಯ ಬೆಂಬಲ ನೀಡಿದ್ದಕ್ಕಾಗಿ, ಅವರ ಗೌರವಾರ್ಥವಾಗಿ, ಉದ್ಘಾಟನಾ ಸಮಾರಂಭದಲ್ಲಿ ಈ ಕಟ್ಟಡವನ್ನು ಬುರ್ಜ್ ಖಲೀಫಾ ಎಂದು ಮರುನಾಮಕರಣ ಮಾಡಲಾಯಿತು.[15]
ದುಬೈ ನಗರದ ಆಸ್ತಿಪಾಸ್ತಿ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿದಿದ್ದ ಕಾರಣ, ಉದ್ಘಾಟನೆಯ ನಂತರದ ಹತ್ತು ತಿಂಗಳುಗಳ ಕಾಲ ಬುರ್ಜ್ ಖಲೀಫಾದಲ್ಲಿ ಬಾಡಿಗೆ ದರಗಳು ಸುಮಾರು ಶೇ.40ರಷ್ಟು ಕುಸಿದಿದ್ದವು. ಆ ಸಮಯದಲ್ಲಿಯೇ, ಕಟ್ಟಡಗಳಲ್ಲಿನ 900 (ವಾಸಗೃಹಗಳು)ವಠಾರಗಳಲ್ಲಿ ಇನ್ನೂ 825 ಖಾಲಿ ಉಳಿದಿದ್ದವು.[16][17]