ಜೋಡೋ ಕಾವಾಲ್ಕಾಂಟೀ
From Wikipedia, the free encyclopedia
ಜೋಡೋ ಕಾವಾಲ್ಕಾಂಟೀ ( 1250 ಮತ್ತು 1259 ರ ಮಧ್ಯೆ – ಆಗಸ್ಟ್ 1300)[1]) ಇಟಲಿಯ ಕವಿ. ಅತ್ಯುತ್ತಮ ಭಾವಗೀತೆಗಳನ್ನು ರಚಿಸಿದ್ದಾನೆ. ಹಲವಾರು ಪ್ರೇಮಗೀತೆಗಳನ್ನು ಬರೆದು, ತನ್ನ ತೀಕ್ಷ್ಣ ಬುದ್ಧಿಶಕ್ತಿಯಿಂದ ಸಮಕಾಲೀನ ಕವಿಯಾದ ಡಾಂಟೆಯ ಮೇಲೆ ಪರಿಣಾಮಕಾರಿಯಾದ ವರ್ಚಸ್ಸು ಬೀರಿದ್ದಾನೆ[2]. ಮೊದಲು ಇವರಿಬ್ಬರಲ್ಲೂ ಗಾಢವಾದ ಸ್ನೇಹವಿದ್ದು ಕೊನೆಗೆ ಪರಸ್ವರ ದ್ವೇಷ ಬೆಳೆಯಿತನ್ನಲಾಗಿದೆ. ವರ್ಣೀಯ ಕಲಹದಲ್ಲಿ ಗಡೀಪಾರಾಗಿದ್ದ ಈತನನ್ನು ಸಾಯುವ ಮುನ್ನ ತೀವ್ರ ಕಾಯಿಲೆಯಿದ್ದಾಗ ವಾಪಸ್ಸು ಕರೆಸಿಕೊಳ್ಳಲಾಯಿತು. ಫ್ಲಾರೆನ್ಸಿನ ಮಲರಿಯದಲ್ಲಿ ಈತ ಮರಣಹೊಂದಿದ.