ಬೆಂಗಳೂರು ಎಫ್ ಸಿ
ಭಾರತದ ಬೆಂಗಳೂರು ಮೂಲದ ವೃತ್ತಿಪರ ಇಂಡಿಯನ್ ಅಸೋಸಿಯೇಷನ್ ಫುಟ್ಬಾಲ್ ಕ್ಲಬ್ / From Wikipedia, the free encyclopedia
ಬೆಂಗಳೂರು, ಕರ್ನಾಟಕದಲ್ಲಿ ಸ್ಥಾಪಿತವಾದ ಬೆಂಗಳೂರು ಎಫ್ ಸಿ ([ˈbeŋɡəɭuːɾu] ( listen)) ಭಾರತದ ಒಂದು ವೃತ್ತಿಪರ ಫುಟ್ಬಾಲ್ ಕ್ಲಬ್. ಈ ಕ್ಲಬ್ ಭಾರತದ ಸುಪರ್ ಲೀಗಿನಲ್ಲಿ ಸ್ಪರ್ಧಿಸುತ್ತದೆ.[4] ೨೦ ಜುಲೈ ೨೦೧೩ ರಲ್ಲಿ ಈ ಕ್ಲಬ್ ಸ್ಥಾಪಿಸಲಾಯಿತು ಹಾಗೂ ಅದೇ ವರ್ಷ ೨೨ ದಿನಾಂಕ, ಸೆಪ್ಟೆಂಬರ್ ತಿಂಗಳಲ್ಲಿ, ಅದರ ಮೊದಲನೇ ಸ್ಪರ್ಧಾತ್ಮಕ ಸೀಸನ್ ಐ-ಲೀಗಿನಲ್ಲಿ ಪ್ರಾರಂಭವಾಯಿತು. ಅದರ ರಚನೆಯಿಂದ ಇವತ್ತಿಗೂ ಎರಡು ಐ-ಲೀಗ್ ಪ್ರಶಸ್ತಿಗಳು ಗೆದ್ದಿದೆ. ಹಾಗೂ, ಎರಡು ಫೆಡರೆಷನ್ ಕಪ್, ಒಂದು ಭಾರತದ ಸುಪರ್ ಲೀಗ್ ಮತ್ತು ಒಂದು ಸುಪರ್ ಕಪ್ ಗೆದ್ದಿದೆ.
![]() | ಈ ಲೇಖನವು ಅಪೂರ್ಣವಾಗಿದೆ. |
ಬೆಂಗಳೂರು ಎಫ್ ಸಿ ಲೊಗೊ.svg | ||||
ಪೂರ್ಣ ಹೆಸರು | ಬೆಂಗಳೂರು ಫುಟ್ಬಾಲ್ ಕ್ಲಬ್ | |||
---|---|---|---|---|
ಉಪ ಹೆಸರು | ಬೆಂಗಳೂರು ಬ್ಲೂಸ | |||
ಲಘು ಹೆಸರು | ಬಿ ಎಫ್ ಸಿ | |||
ಸ್ಥಾಪನೆ | 20 ಜುಲೈ 2013; 3924 ದಿನ ಗಳ ಹಿಂದೆ (2013-೦೭-20)[1] | |||
ಮೈದಾನ | ಶ್ರೀ ಕಂಠೀರವ ಕ್ರೀಡಾಂಗಣ, ಬೆಂಗಳೂರು (ಸಾಮರ್ಥ್ಯ: ೨೪,೮೧೦[2]) | |||
ಮಾಲೀಕರು | ಜೆ ಎಸ್ ಡಬ್ಲ್ಯು | |||
ಅಧ್ಯಕ್ಷ | ಸಜ್ಜನ್ ಜಿಂದಾಲ್ | |||
ಮುಖ್ಯ ತರಬೇತುದಾರ | ಮಾರ್ಕೊ ಪೆಜಾಯ್ಯೊಲಿ | |||
ಭಾರತದ ಸುಪರ್ ಲೀಗ್ | ||||
೨೦೨೦–೨೧ | ೭ನೆ ಸ್ಥಾನ | |||
ಕ್ಲಬ್ ನ ಅಧಿಕೃತ ಪುಟ | ||||
| ||||
![]() |
ಬೆಂಗಳೂರು ಎಫ್ ಸಿಯಾ ಇಲಾಖೆಗಳು | ||
---|---|---|
![]() |
![]() |
![]() |
ಪುರುಷರ ತಂಡ | ಬಿ ತಂಡ | ಯುವಕ ತಂಡ[3] |
೨೦೧೮–೧೯ ಭಾರತದ ಸುಪರ್ ಲೀಗಿನಲ್ಲಿ ಅವ್ರು, ಎಫ್ ಸಿ ಗೊವಾವನ್ನು ಫೈನಲ್ ಪಂದ್ಯದಲ್ಲಿ ಸೋಲಿಸಿ ಮೊದಲನೇಯ ಐ ಎಸ್ ಎಲ್ ಪ್ರಶಸ್ತಿ ಗಳಿಸಿದರು. ಈ ಪಂದ್ಯದ ಪೂರ್ಣ ಸಮಯ ನಂತರ, ಬೆಂಗಳೂರು ೧–೦ ಸ್ಕೊರಿಂದ ಜಯ ಸಾಧಿಸಿದರು.[5][6]
ಈ ಕ್ಲಬ್ಬಿನ ಕಾರ್ಯ, ಮುಂಬೈಯಲ್ಲಿ ಸ್ಥಾಪಿಸಿದ ಜಿ ಎಸ್ ಡಬ್ಲ್ಯು ಕಂಪನಿ ಮತ್ತು ಅದರ ವ್ಯವಸ್ಥಾಪಕ ನಿರ್ದೇಶಕ ಸಜ್ಜನ್ ಜಿಂದಾಲ್ ನಿರ್ವಹಿಸುತ್ತಾರೆ.[1] ೨೦೧೪–೧೫ ಸಿಸನಿಂದ ಬೆಂಗಳೂರು ಎಫ್ ಸಿ ತಮ್ಮ ಮನೆಯ ಪಂದ್ಯಗಳು ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಆಡುತ್ತಿದ್ದಾರೆ. ಕೆವಲ ನಾಲ್ಕು ಸಿಸನ್ ಐ–ಲಿಗಿನಲ್ಲಿ ಆಡಿದ ನಂತರ, ಬೆಂಗಳೂರು ಎಫ್ ಸಿ ಒಂದು ಮಾದರಿಯಾಗಿದೆ ಕ್ಲಬ್ ಅಂತ ಭಾರತ ದೇಶದಲ್ಲಿ ಪರಿಗಣಿಸಲಾಗಿದೆ.[7] ತಂಡದ ಆಟಗಾರರಿಗೆ ಅಧೋನಿಕಾ ಫಿಟ್ನೆಸ್ ಉಪಕರಣಗಳ ಮೂಲಕ ಅಭಿವೃದ್ಧಿಪಡಿಸಿ ಬೆಂಗಳೂರು ಎಫ್ ಸಿ ಭಾರತದ ಕಾಲು ಚೆಂಡು ಆಟದ ದೃಶ್ಯದಲ್ಲಿ ಪ್ರಶಂಸೆ ಗಳಿಸಿದರು.[8] ವೃತ್ತಿಪರತೆ ಜೊತೆಗೆ ಬೆಂಗಳೂರು ಎಫ್ ಸಿ ತಮ್ಮ ಅಭಿಮಾನಿಗಳ ಕ್ಲಬ್ 'ವೆಸ್ಟ್ ಬ್ಲಾಕ್ ಬ್ಲೂಸ್' ಕಾರಣಕ್ಕೆ ಪ್ರಸಿದ್ಧವಾಗಿದೆ. ಈ ಅಭಿಮಾನಿಗಳ ಕ್ಲಬ್ ಭಾರತದ ಅತ್ಯಂತ ಸ್ವರ ಮತ್ತು ಭಾವೋದ್ರಿಕ್ತ ಅಭಿಮಾನಿ ಬಳಗಗಳಲ್ಲಿ ಒಂದಾಗಿದೆ.[7]
೨೨ ಸೆಪ್ಟೆಂಬರ್ ೨೦೧೩, ಐ-ಲೀಗಿನಲ್ಲಿ, ಬೆಂಗಳೂರು ಎಫ್ಸಿ ತನ್ನ ಉದ್ಘಾಟನಾ ಪಂದ್ಯವನ್ನು ಆಡಿತು, ಈ ಪಂದ್ಯ ಮೋಹನ್ ಬಗಾನ್ ವಿರುದ್ಧ ೧–೧ ರ ಸಮಬಲದಲ್ಲಿ ಕೊನೆಗೊಂಡಿತು. ಅವ್ರು ತನ್ನ ಚೊಚ್ಚಲ ಸೀಸನಲ್ಲಿ ಐ-ಲೀಗ್ ಅನ್ನು ಗೆದ್ದುಕೊಂಡಿತು ಮತ್ತು ಮತ್ತೆ ಎರಡು ಸೀಸನಗಳ ನಂತರ ೨೦೧೪-೧೫ ರಲ್ಲಿ ಮತೊಮ್ಮೆ ವಿಜಯಶಾಲಿಯಾದರೂ. ಎರಡು ಲೀಗ್ ಪ್ರಶಸ್ತಿಗಳ ಜೊತೆಗೆ, ಬೆಂಗಳೂರು ೨೦೧೫ ಮತ್ತು ೨೦೧೭ ರಲ್ಲಿ ಎರಡು ಫೆಡರೇಶನ್ ಕಪ್ಗಳನ್ನು ಸಹ ಗೆದ್ದಿದೆ. ೨೦೧೫ ಮತ್ತು ೨೦೧೮ ರ ನಡುವೆ ಕ್ಲಬ್ ಏಷ್ಯನ್ ಕ್ಲಬ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿತು, ಸತತ ನಾಲ್ಕು ವರ್ಷಗಳ ಕಾಲ ಎಎಫ್ಸಿ ಕಪ್ನಲ್ಲಿ ಸ್ಪರ್ಧಿಸಿತು. ೨೦೧೬ ರ ಎಎಫ್ಸಿ ಕಪ್ನಲ್ಲಿ ಬೆಂಗಳೂರು ಫೈನಲ್ಗೆ ತಲುಪಿ 1–0ರಿಂದ ಇರಾಕ್ನ ಅಲ್-ಕ್ವಾ ಅಲ್-ಜಾವಿಯಾ ವಿರುದ್ಧ ಸೋತರು.[9] ೨೮ ಸೆಪ್ಟೆಂಬರ್ ೨೦೧೯ ರಂದು, ಕ್ಲಬ್ ಸ್ಕಾಟಿಷ್ ಪ್ರೀಮಿಯರ್ ಲೀಗ್ ಕ್ಲಬ್ ರೇಂಜರ್ಸ್ ಎಫ್ಸಿಯೊಂದಿಗೆ ಪಾಲುದಾರಿಕೆಯನ್ನು ಮಾಡಿಕೊಂಡಿದೆ ಎಂದು ಘೋಷಿಸಲಾಯಿತು.[10]