ಭಾರತ
ದಕ್ಷಿಣ ಏಷ್ಯಾದಲ್ಲಿರುವ ಒಂದು ದೇಶ / From Wikipedia, the free encyclopedia
ಭಾರತ, ಅಧಿಕೃತವಾಗಿ ಭಾರತ ಗಣರಾಜ್ಯ, ಅಥವಾ ಇಂಡಿಯಾ (India), ಎಂದು ಕರೆಯಲ್ಪಡುವ ದಕ್ಷಿಣ ಏಷ್ಯಾದ ಅತಿ ದೊಡ್ಡ ದೇಶ. ಭಾರತೀಯ ಉಪಖಂಡದ ಪ್ರಮುಖ ದೇಶವಾಗಿದ್ದು, ಪ್ರಪಂಚದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ಹಾಗೂ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವವಿರುವ ರಾಷ್ಟ್ರವಾಗಿದೆ. ಭಾರತವು ೧೩೦ ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು (೨೦೧೮ ಅಂದಾಜು) ಒಟ್ಟು ೮೦೦ ವಿಭಿನ್ನ ಭಾಷೆಗಳನ್ನು ಉಪಯೋಗಿಸುವ ಜನರನ್ನು ಹೊಂದಿದೆ. ಆಗ್ನೇಯದಲ್ಲಿ ಬಂಗಾಳ ಕೊಲ್ಲಿ,ದಕ್ಷಿಣದಲ್ಲಿ ಹಿಂದೂ ಮಹಾ ಸಾಗರ, ನೈಋತ್ಯದಲ್ಲಿ ಅರಬ್ಬಿ ಸಮುದ್ರಗಳಿಂದ ಸುತ್ತುವರಿದಿದ್ದು, ಪಶ್ಚಿಮದಲ್ಲಿ ಪಾಕಿಸ್ತಾನ, ಈಶಾನ್ಯದಲ್ಲಿ ಚೀನಾ,ನೇಪಾಳ ಹಾಗೂ ಭೂತಾನ, ಪೂರ್ವದಲ್ಲಿ ಮಯನ್ಮಾರ್ ಹಾಗೂ ಬಾಂಗ್ಲಾದೇಶ ಗಳೊಂದಿಗೆ ಗಡಿಯನ್ನು ಹಂಚಿಕೊಂಡಿದೆ ಶ್ರೀಲಂಕಾ, ಮಾಲ್ಡೀವ್ಸ್ ನಂತಹ ದ್ವೀಪ ರಾಷ್ಟ್ರಗಳಿಗೆ ಹತ್ತಿರವಾಗಿದೆ. ಕೊಳ್ಳುವ ಶಕ್ತಿಯ ಮೇರೆಗೆ, ಪ್ರಪಂಚದ ನಾಲ್ಕನೇ ಅತಿ ದೊಡ್ಡ ಆರ್ಥಿಕ ವ್ಯವಸ್ಥೆಯನ್ನು ಹೊಂದಿದೆ.
ಭಾರತ ಗಣರಾಜ್ಯ Bhārata Gaņarājya (ಪ್ರಾದೇಶಿಕ ಭಾಷೆಗಳಲ್ಲಿ ಭಾರತದ ಹೆಸರು) | |
---|---|
Motto: "ಸತ್ಯಮೇವ ಜಯತೆ" (ಸಂಸ್ಕೃತ) "ಸತ್ಯವೇ ಜಯಿಸುತ್ತದೆ [1] | |
Anthem: ಜನ ಗಣ ಮನ[2][3][4] "ನೀನು ಎಲ್ಲ ಜನರ ಮನಸ್ಸಿನ ಆಡಳಿತಗಾರ"[5][3] | |
ರಾಷ್ಟ್ರಗಾನ[6] ವಂದೇ ಮಾತರಂ (ಸಂಸ್ಕೃತ) ತಾಯಿಯೇ, ನಾನು ನಿನಗೆ ನಮಸ್ಕರಿಸುತ್ತೇನೆ[7] | |
Capital | ನವದೆಹಲಿ 28°36′50″N 77°12′30″E |
Largest city | ಮುಂಬೈ |
Official languages | ▪ಕೇಂದ್ರ ಸರ್ಕಾರದ ಅಧಿಕೃತ ಭಾಷೆ: ಹಿಂದಿ ಮತ್ತು ಆಂಗ್ಲ ಭಾಷೆ |
Recognised national languages | ಯಾವುದು ಇಲ್ಲ |
ಇತರೆ ಅಧಿಕೃತ ಮತ್ತು ರಾಜ್ಯಮಟ್ಟದ ಭಾಷೆಗಳು | ಸಂವಿಧಾನದ ಎಂಟನೆಯ ಅನುಸೂಚಿಯ ಅಡಿಯಲ್ಲಿ ಮಾನ್ಯತೆ ಪಡೆದ ಭಾಷೆಗಳು
ಅಸ್ಸಾಮಿ• ಬೆಂಗಾಲಿ• ಬೋಡೊ• ಡೋಗ್ರಿ• ಗುಜರಾತಿ• ಹಿಂದಿ• ಕನ್ನಡ• ಕಾಶ್ಮೀರಿ• ಕೋಕ್ ಬರೋಕ್• ಕೊಂಕಣಿ• ಮೈಥಿಲಿ• ಮಲಯಾಳಂ• ಮಣಿಪುರಿ• ಮರಾಠಿ• ಮಿಝೋ• ನೇಪಾಳಿ• ಒರಿಯಾ• ಪಂಜಾಬಿ •ಸಂಸ್ಕೃತ• ಸಂತಾಲಿ• ಸಿಂಧಿ• ತಮಿಳು• ತೆಲುಗು• ಉರ್ದು• ▪447 ಸ್ಥಳೀಯ ಭಾಷೆಗಳು |
Religion (೨೦೧೧) |
|
Membership | ವಿಶ್ವಸಂಸ್ಥೆ, ವಿಶ್ವ ವ್ಯಾಪಾರ ಸಂಸ್ಥೆ, ಬ್ರಿಕ್ಸ್ ಸಂಘಟನೆ, ಸಾರ್ಕ್ ಸಂಸ್ಥೆ, Shanghai Cooperation Organisation, G4 nations, Group of Five, G8+5, ಜಿ೨೦, ಕಾಮನ್ವೆಲ್ತ್ ರಾಷ್ಟ್ರಗಳು |
Government | ಸಂಯುಕ್ತ ಗಣತಂತ್ರ ಸಂಸದೀಯ ಪ್ರಜಾತಂತ್ರ[8] |
ದ್ರೌಪದಿ ಮುರ್ಮು | |
ಜಗದೀಪ್ ಧಂಖರ್ | |
ನರೇಂದ್ರ ಮೋದಿ | |
ಎನ್.ವಿ.ರಮಣ | |
Legislature | ಸಂಸತ್ತು |
• Upper house | ರಾಜ್ಯಸಭೆ |
• Lower house | ಲೋಕಸಭೆ |
ಸ್ವಾತಂತ್ರ್ಯ ಯುನೈಟೆಡ್ ಕಿಂಗ್ಡಂನಿಂದ | |
• ಘೋಷಿತ | ೧೫ ಆಗಸ್ಟ್ ೧೯೪೭ |
• ಗಣರಾಜ್ಯ | ೨೬ ಜನವರಿ ೧೯೫೦ |
Area | |
• Total | 1,269,346 sq mi (3,287,590 km2) (7th) |
• Water (%) | 9.6 |
Population | |
• 2022 estimate | 1,375,586,000[9] (2nd) |
• 2011 census | 1,210,854,977[10][11] (2nd) |
• Density | [convert: invalid number] (30th) |
GDP (PPP) | 2022 estimate |
• Total | $11.665 trillion[12] (3rd) |
• Per capita | $8,293[12] (127th) |
GDP (nominal) | 2022 estimate |
• Total | $3.469 trillion[12] (5th) |
• Per capita | $2,466[12] (139th) |
Gini (2011) | 35.7[13][14] medium |
HDI (2021) | 0.633[15] medium · 132nd |
Currency | ಭಾರತದ ರೂಪಾಯಿ (₹) (ಐಎನ್ಆರ್) |
Time zone | UTC+೫:೩೦ (ಐಎಸ್ಟಿ) |
• Summer (DST) | UTC+೫:೩೦ (ಆಚರಣೆಯಲ್ಲಿ ಇಲ್ಲ) |
Driving side | ಎಡಗಡೆ |
Calling code | +೯೧ |
Internet TLD | .in |
Non-numbered Footnotes:
|
ಭಾರತ ದೇಶವು ಪ್ರಾಚೀನ ಸಿಂಧೂತಟದ ನಾಗರೀಕತೆಯ ತವರು ಮನೆಯಾಗಿದೆ. ಅನೇಕ ಐತಿಹಾಸಿಕ ವಾಣಿಜ್ಯ ಮಾರ್ಗಗಳು ಹಾಗೂ ಪ್ರಾಚೀನ ಸಾಮ್ರಾಜ್ಯಗಳು ಭಾರತ ದೇಶದಲ್ಲಿ ಉಗಮಿಸಿವೆ. ಪ್ರಪಂಚದ ನಾಲ್ಕು ಪ್ರಮುಖ ಧರ್ಮಗಳಾದ ಹಿಂದೂ, ಬೌದ್ಧ, ಜೈನ ಮತ್ತು ಸಿಖ್ ಗಳು ಭಾರತದಲ್ಲಿ ಆರಂಭವಾಗಿವೆ. ಝೊರಾಷ್ಟ್ರಿಯನಿಜ಼ಂ, ಕ್ರಿಶ್ಚಿಯನ್ ಧರ್ಮ ಮತ್ತು ಇಸ್ಲಾಂ ಧರ್ಮ ಕ್ರಿ.ಶ ೭ನೇ ಶತಮಾನದಲ್ಲಿ ಆಗಮಿಸಿ ಈ ಪ್ರದೇಶದ ಸಂಸ್ಕೃತಿಯನ್ನು ವೈವಿಧ್ಯಮಯವಾಗಿಸಿವೆ. ೧೬ನೇ ಶತಮಾನದಲ್ಲಿ ಭಾರತ ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿಯಿಂದ ಆಕ್ರಮಣಗೊಂಡು ಇಂಗ್ಲೆಂಡಿನ ಆಡಳಿತಕ್ಕೊಳಪಟ್ಟಿತು. ೧೯ನೇ ಶತಮಾನದ ಮಧ್ಯದಲ್ಲಿ ಭಾರತ ಅನೇಕ ಸ್ವಾತಂತ್ರ್ಯ ಹೋರಾಟದ ಫಲವಾಗಿ ಬ್ರಿಟೀಷರಿಂದ ಸ್ವತಂತ್ರವಾಯಿತು.