![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/7/70/Shashi_Tharoor_2015.jpg/640px-Shashi_Tharoor_2015.jpg&w=640&q=50)
ಶಶಿ ತರೂರ್
From Wikipedia, the free encyclopedia
ಡಾ.ಶಶಿ ತರೂರ್ ಮಲಯಾಳಂ:ശശി തരൂ൪,ಹಿಂದಿ:शशि तरूर (ಜನನ ೯ ಮಾರ್ಚ್ ೧೯೫೬ ) ಕೇರಳದ ತ್ರಿವೇಂದ್ರಮ್ ಕ್ಷೇತ್ರದಿಂದ ಆರಿಸಿ ಬಂದ ಭಾರತದ ಸಂಸತ್ತಿನ ಸದಸ್ಯರಾಗಿದ್ದಾರೆ ಮತ್ತು ಈಗ ಭಾರತದ ವಿದೇಶಾಂಗ ಖಾತೆಯ ರಾಜ್ಯ ಸಚಿವರಾಗಿದ್ದಾರೆ.
Shashi Tharoor | |
---|---|
![]() | |
Minister of State for External Affairs of India | |
ಹಾಲಿ | |
ಅಧಿಕಾರ ಸ್ವೀಕಾರ 28 May 2009 | |
ಪೂರ್ವಾಧಿಕಾರಿ | Anand Sharma |
MP | |
ಹಾಲಿ | |
ಅಧಿಕಾರ ಸ್ವೀಕಾರ 16 May 2009 Serving with Preneet Kaur | |
ಪೂರ್ವಾಧಿಕಾರಿ | Pannyan Raveendran |
ವೈಯಕ್ತಿಕ ಮಾಹಿತಿ | |
ಜನನ | (1956-03-09) ೯ ಮಾರ್ಚ್ ೧೯೫೬ (ವಯಸ್ಸು ೬೮)![]() |
ರಾಷ್ಟ್ರೀಯತೆ | ![]() |
ರಾಜಕೀಯ ಪಕ್ಷ | Indian National Congress |
ಸಂಗಾತಿ(ಗಳು) | Tilottama Mukherji (div.) Christa Giles (m. ೨೦೦೭) |
ಮಕ್ಕಳು | Ishaan, Kanishk |
ವಾಸಸ್ಥಾನ | ನವ ದೆಹಲಿ/Trivandrum |
ವೃತ್ತಿ | Writer, Diplomat, Politician, Union Minister |
ಜಾಲತಾಣ | tharoor.in |
ಇದಕ್ಕೂ ಮುನ್ನ, ೨೦೦೨ರಿಂದ ೨೦೦೭ರವರೆಗೆ,ಯುನೈಟೆಡ್ ನೇಷನ್ಸ್ ನ ಪ್ರಧಾನ ಕಾರ್ಯದರ್ಶಿಯಾಗಿ ಕೋಫಿ ಅಣ್ಣನ್ ಕಾರ್ಯನಿರ್ವಹಿಸುತ್ತಿದ್ದ ಅವಧಿಯಲ್ಲಿ, ಯುನೈಟೆಡ್ ನೇಷನ್ಸ್ ನ ಸಂಪರ್ಕ ಮತ್ತು ಸಾರ್ವಜನಿಕ ಮಾಹಿತಿ ವಿಭಾಗದ ಅಧೀನ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯವಹಿಸಿದರು. ೨೦೦೬ರಲ್ಲಿ ಯುನೈಟೆಡ್ ನೇಷನ್ಸ್ ನ ಪ್ರಧಾನ ಕಾರ್ಯದರ್ಶಿಯ ಕಚೇರಿಗೆ ಅವರು ಭಾರತದ ಅಧಿಕೃತ ಅಭ್ಯರ್ಥಿಯಾಗಿ ಸೂಚಿತರಾಗಿ,ಆ ಹುದ್ದೆಗೆ ಆಯ್ಕೆಯಾಗಲು ಮುಂಚೂಣಿಯಲ್ಲಿದ್ದ ಏಳು ಅಭ್ಯರ್ಥಿಗಳಲ್ಲಿ ಎರಡನೆಯ ಸ್ಥಾನವನ್ನು ಪಡೆದರು. ಅವರು ಉತ್ತಮ ಲೇಖಕರೂ, ಅಂಕಣಕಾರರೂ, ಪತ್ರಕರ್ತರೂ, ಮಾನವ-ಹಕ್ಕುಗಳನ್ನು ಪ್ರತಿಪಾದಿಸುವವರೂ ಹಾಗೂ ಪರೋಪಕಾರಿಗುಣ ಉಳ್ಳವರೂ ಆಗಿದ್ದಾರೆ.
ಅಷ್ಟೇ ಅಲ್ಲದೆ ಅವರು ಫ್ಲೆಚರ್ ಸ್ಕೂಲ್ ಆಫ್ ಲಾ ಎಂಡ್ ಡಿಪ್ಲೊಮಸಿಯ ಮೇಲ್ವಿಚಾರಕ ಮಂಡಳಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ,ಆಸ್ಪೆನ್ ಇನ್ ಸ್ಟಿಟ್ಯೂಟ್ ನ ಟ್ರಸ್ಟೀಗಳ (ನಿಕ್ಷೇಪಧಾರಿಗಳ) ಮಂಡಳಿಯ ಪದಾಧಿಕಾರಿಯಾಗಿದ್ದಾರೆ, ಹಾಗೂ ಇಂಡೋ ಅಮೆರಿಕನ್ ಆರ್ಟ್ಸ್ ಕೌನ್ಸಿಲ್, ದ ಅಮೆರಿಕನ್ ಇಂಡಿಯಾ ಪೌಂಡೇಷನ್,ದ ವರ್ಲ್ಡ್ ಪಾಲಿಸಿ ಜರ್ನಲ್, ದ ವರ್ಚ್ಯೂ ಫೌಂಡೇಷನ್ ಮತ್ತು ಮಾನವ ಹಕ್ಕುಗಳ ಸಂಸ್ಥೆಯಾದ ಬ್ರೇಕ್ ಥ್ರೂ ಗಳ ಸಲಹಾ ಮಂಡಳಿಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ೨೦೦೮ -೨೦೧೧ರ ಅವಧಿಗೆ ಜಿನೇವಾದ ಇಂಟರ್ ನ್ಯಾಷನಲ್ ಕಮಿಟಿ ಆಫ್ ದ ರೆಡ್ ಕ್ರಾಸ್ ನ ಅಂತಾರಾಷ್ಟ್ರೀಯ ಸಲಹೆಗಾರರಾಗಿರುವ ಇವರು, ನ್ಯೂಯಾರ್ಕ್ ಇನ್ ಸ್ಟಿಟ್ಯೂಟ್ ಆಫ್ ಹ್ಯುಮಾನಿಟೀಸ್ ನ ಫೆಲೋ ಆಗಿಯೂ, ದುಬೈ ಮಾಡ್ರನ್ ಶಾಲೆಯ ಆಧಾರಸ್ಥಂಭವಾಗಿಯೂ ಕಾರ್ಯ ವಹಿಸುತ್ತಿದ್ದಾರೆ.