ಅಯಾನು
ಅಯಾನು ವಿದ್ಯುನ್ಮ್ಮ್ಮಾನ ವಿದ್ಯುದಾವೇಶ ಕಣವಾಗಿದುದ್ದು ಇದು ಇಲೆಕ್ತ್ರಾನ್ ಗಳಿಸಿದ ಋಣಾತ್ಮಕ ಅಥವಾ ಧನತ್ಮಕವಾ / From Wikipedia, the free encyclopedia
ಅಯಾನು[1] ಪರಮಾಣುವಿನ (ಆ್ಯಟಮ್) ಕೇಂದ್ರದಲ್ಲಿ ಪ್ರೊಟಾನ್ಗಳೂ ನ್ಯೂಟ್ರಾನ್ಗಳೂ (ಪ್ರೊಟಾನ್-ಎಲೆಕ್ಟ್ರಾನನ್ನು ಕಳಚಿದಮೇಲೆ ಉಳಿಯುವ ಹೈಡ್ರೊಜನ್ ಪರಮಾಣು, ಅಂದರೆ ಹೈಡ್ರೊಜನ್ ಪರಮಾಣುವಿನ ನ್ಯೂಕ್ಲಿಯಸ್, ಇದು ಧನವಿದ್ಯುತ್ಕಣ ; ನ್ಯೂಟ್ರಾನ್-ವಿದ್ಯುದ್ರಹಿತ ಕಣ ; ಎಲೆಕ್ಟ್ರಾನ್-ಋಣ ವಿದ್ಯುತ್ಕಣ; ನ್ಯೂಕ್ಲಿಯಸ್-ಬೀಜ) ಇರುವ ಬೀಜವಿದೆ. ಇದರ ಸುತ್ತ ಎಲೆಕ್ಟ್ರಾನ್ಗಳು ವಿವಿಧ ಕಕ್ಷೆಗಳಲ್ಲಿ ಪರಿಭ್ರಮಿಸುತ್ತಿವೆ. ಸಾಮಾನ್ಯವಾಗಿ ಬೀಜದಲ್ಲಿರುವ ಪ್ರೊಟಾನ್ ಮತ್ತು ಎಲೆಕ್ಟ್ರಾನ್ಗಳ ಸಂಖ್ಯೆ ಸಮಾನ. ಆದ್ದರಿಂದ ಪರಮಾಣುವಿನ ನಿವ್ವಳ ವಿದ್ಯುದಂಶ ಸೊನ್ನೆ. ತಟಸ್ಥ ಪರಮಾಣು ಎಂದು ಇದರ ಹೆಸರು. ಪರಮಾಣುಗಳು ತಮ್ಮ ಹೊರವಲಯದಲ್ಲಿ ಪರಿಭ್ರಮಿಸುತ್ತಿರುವ ಎಲೆಕ್ಟ್ರಾನ್ಗಳ ಪರಸ್ಪರ ಕ್ರಿಯೆಯಿಂದಾಗಿ ಒಂದಕ್ಕೊಂದು ಬಂಧಿತವಾಗಿ ಅಣುಗಳಾಗುತ್ತವೆ. ಅಣುಗಳ ವಿದ್ಯುದಂಶವೂ ಸೊನ್ನೆಯೇ. ಇಂಥ ತಟಸ್ಥ ಪರಮಾಣುಗಳು ಅಥವಾ ಅಣುಗಳು ಯಾವುದೇ ವಿಧದಿಂದ ವಿದ್ಯುದಂಶ ಪಡೆಯುವಂತೆ ಮಾಡಿದರೆ ಅಯಾನುಗಳು ಎನಿಸಿಕೊಳ್ಳುತ್ತವೆ.