From Wikipedia, the free encyclopedia
ಜೈವಿಕ ಆಹಾರಗಳ ಉತ್ಪಾದನೆಯಲ್ಲಿ ಸಂಶ್ಲೇಷಿತ ವಸ್ತುಗಳ ಬಳಕೆ ಸೀಮಿತಗೊಳಿಸಲಾಗುತ್ತದೆ ಅಥವಾ ಅದರ ಬಳಕೆ ನಿಷೇಧಿಸಲಾಗುತ್ತದೆ. ಮಾನವನ ಬದುಕಿನ ಬಹುಭಾಗದ ಇತಿಹಾಸದಲ್ಲಿ, ಕೃಷಿಯು ಜೈವಿಕ ಎಂದು ವಿವರಿಸಬಹುದು; 20ನೇ ಶತಮಾನದ ಸುಮಾರಿಗೆ ಒಂದು ಹೊಸ ಸಂಶ್ಲೇಷಕ ರಾಸಾಯನಿಕಗಳನ್ನು ಆಹಾರದ ಪೂರೈಕೆಗೆ ದೊಡ್ಡ ಪ್ರಮಾಣದಲ್ಲಿ ಸೇರಿಸಲಾಯಿತು. ಈ ರೀತಿ ತೀರ ಇತ್ತೀಚಿನ ಉತ್ಪಾದನಾ ಶೈಲಿಯನ್ನು "ಸಾಂಪ್ರದಾಯಿಕ" ಎಂದು ಉಲ್ಲೇಖಿಸಲಾಗಿದೆ. ಜೈವಿಕ ಉತ್ಪಾದನೆಯಲ್ಲಿ, ಸಾಂಪ್ರದಾಯಿಕ ಅಜೈವಿಕ ಕ್ರಿಮಿನಾಶಕಗಳು, ಕೀಟನಾಶಕಗಳು ಹಾಗು ಸಸ್ಯನಾಶಕಗಳ ಬಳಕೆಯನ್ನು ಬಹುಮಟ್ಟಿಗೆ ನಿರ್ಬಂಧಿಸಿರುವುದರ ಜೊತೆಗೆ ಅದನ್ನು ಕಡೆಯ ಸಾಧನವಾಗಿ ಉಳಿಸಲಾಗಿದೆ. ಆದಾಗ್ಯೂ, ಈ ಜನಪ್ರಿಯ ಅಭಿಪ್ರಾಯಕ್ಕೆ ವಿರುದ್ಧವಾಗಿ, ಕೆಲವು ಅಜೈವಿಕ ರಸಗೊಬ್ಬರಗಳನ್ನು ಇಂದಿಗೂ ಬಳಕೆ ಮಾಡಲಾಗುತ್ತದೆ[ಸೂಕ್ತ ಉಲ್ಲೇಖನ ಬೇಕು]. ಜಾನುವಾರುಗಳು ಭಾಗಿಯಾಗಿದ್ದರೆ, ಅವುಗಳನ್ನು, ಪ್ರತಿಜೀವಕಗಳನ್ನು ನಿಯತಕ್ರಮದಲ್ಲಿ ಬಳಕೆ ಮಾಡದೆ ಹಾಗು ಬೆಳವಣಿಗೆಯ ಹಾರ್ಮೋನ್ ಗಳನ್ನು ಬಳಸದೆ ಪಾಲನೆ ಮಾಡಬೇಕು, ಇದಲ್ಲದೆ ಸಾಮಾನ್ಯವಾಗಿ ಒಂದು ಆರೋಗ್ಯಕರ ಆಹಾರವನ್ನು ನೀಡಬೇಕು.[ಸೂಕ್ತ ಉಲ್ಲೇಖನ ಬೇಕು] ಹಲವು ರಾಷ್ಟ್ರಗಳಲ್ಲಿ, ಜೈವಿಕ ಉತ್ಪನ್ನವು ಕುಲಾಂತರಿ ತಳಿಗೆ ರೂಪಾಂತರ ಆಗದಿರಬಹುದು. ನ್ಯಾನೋಟೆಕ್ನಾಲಜಿಯನ್ನು ಆಹಾರ ಮತ್ತು ಕೃಷಿಯಲ್ಲಿ ಅನ್ವಯಿಸುವುದು ಮುಂದಿನ ತಂತ್ರಜ್ಞಾನವಾದ್ದರಿಂದ ಪ್ರಮಾಣೀಕೃತಗೊಂಡ ಜೈವಿಕ ಆಹಾರದಿಂದ ಹೊರಗಿಡಬೇಕೆಂದು ಸಲಹೆ ನೀಡಲಾಗಿದೆ.[1] ದಿ ಸಾಯಿಲ್ ಅಸೋಸಿಯೇಶನ್ (UK) ಒಂದು ನ್ಯಾನೋ-ಬಹಿಷ್ಕಾರವನ್ನು ಜಾರಿಗೆ ತಂದ ಮೊದಲ ಜೈವಿಕ ಪ್ರಮಾಣಕರ್ತ.[2]
This article has been nominated to be checked for its neutrality. (July 2009) |
ಜೈವಿಕ ಆಹಾರದ ಉತ್ಪಾದನೆ ಖಾಸಗಿ ತೋಟಗಾರಿಕೆ ಗಿಂತ ವಿಭಿನ್ನವಾಗಿ ಒಂದು ಅತಿಹೆಚ್ಚಿನ ಪ್ರಮಾಣದ ನಿಯಂತ್ರಣಕ್ಕೊಳಪಟ್ಟ ಕ್ಷೇತ್ರ. ಪ್ರಸಕ್ತ, ಯುರೋಪಿಯನ್ ಒಕ್ಕೂಟ, ಯುನೈಟೆಡ್ ಸ್ಟೇಟ್ಸ್, ಕೆನಡಾ, ಜಪಾನ್ ಹಾಗು ಇತರ ಹಲವು ರಾಷ್ಟ್ರಗಳಲ್ಲಿ, ತಮ್ಮ ಗಡಿಯೊಳಗೆ ಆಹಾರವನ್ನು "ಜೈವಿಕ"ವೆಂದು ಮಾರಾಟಮಾಡಲು ಉತ್ಪಾದಕರುವಿಶೇಷ ಪ್ರಮಾಣೀಕರಣ ಪಡೆಯಬೇಕಾದ ಅಗತ್ಯವಿದೆ.
ಹಲವು ಪ್ರಮಾಣೀಕರಣಗಳು ಕೆಲವು ರಾಸಾಯನಿಕಗಳು ಹಾಗು ಕ್ರಿಮಿನಾಶಕಗಳ ಬಳಕೆಗೆ ಅನುಮತಿ ನೀಡುತ್ತವೆ[ಸೂಕ್ತ ಉಲ್ಲೇಖನ ಬೇಕು], ಹೀಗಾಗಿ ಗ್ರಾಹಕರು ತಮ್ಮ ತಮ್ಮ ಪ್ರದೇಶಗಳಲ್ಲಿ "ಜೈವಿಕ"ವೆಂದು ಅರ್ಹತೆ ಪಡೆದ ವಸ್ತುಗಳ ಮಾನದಂಡದ ಬಗ್ಗೆ ಅರಿವನ್ನು ಹೊಂದಿರಬೇಕು.
ಐತಿಹಾಸಿಕವಾಗಿ, ಜೈವಿಕ ಕೃಷಿ ಗೆ ಸಂಬಂಧಿಸಿದಂತೆ, ಅದು ಕುಟುಂಬಗಳು ನಡೆಸುವ ಒಂದು ಸಣ್ಣ ಚಟುವಟಿಕೆಯಾಗಿತ್ತು. ಈ ಕಾರಣಕ್ಕೆ ಜೈವಿಕ ಆಹಾರವು ಒಂದೊಮ್ಮೆ ಸಣ್ಣ ಮಳಿಗೆಗಳಲ್ಲಿ ಅಥವಾ ರೈತರ ಮಾರುಕಟ್ಟೆ ಗಳಲ್ಲಿ ಮಾತ್ರ ದೊರಕುತ್ತಿತ್ತು.[ಸೂಕ್ತ ಉಲ್ಲೇಖನ ಬೇಕು]
ಆದಾಗ್ಯೂ, 1990ರ ಪ್ರಾರಂಭದಿಂದೀಚೆಗೆ, ಜೈವಿಕ ಆಹಾರದ ಉತ್ಪಾದನೆಯು ವಾರ್ಷಿಕವಾಗಿ ಸುಮಾರು 20%ನಷ್ಟು ಬೆಳವಣಿಗೆಯ ಪ್ರಮಾಣವನ್ನು ಹೊಂದಿದೆ. ಇದು ಅಭಿವೃದ್ಧಿಹೊಂದಿದ ಹಾಗು ಅಭಿವೃದ್ಧಿಶೀಲ ರಾಷ್ಟ್ರಗಳೆರಡರಲ್ಲೂ ಉಳಿದೆಲ್ಲಾ ಆಹಾರ ಉದ್ಯಮಗಳಿಗಿಂತ ಬಹಳ ಮುಂದಿದೆ. ಏಪ್ರಿಲ್ 2008ರ ತನಕ, ವಿಶ್ವವ್ಯಾಪಿಯಾಗಿ ಜೈವಿಕ ಆಹಾರದ ಮಾರಾಟವು 1–2%ನಷ್ಟಿದೆ ಎಂದು ಗಣಿಸಲಾಗಿದೆ.[ಸೂಕ್ತ ಉಲ್ಲೇಖನ ಬೇಕು]
ಕಳೆದ 1939ರಲ್ಲಿ, ಲಾರ್ಡ್ ನಾರ್ತ್ಬೌರ್ನ್ ತಮ್ಮ ಪುಸ್ತಕ ಲುಕ್ ಟು ದಿ ಲ್ಯಾಂಡ್ (1940)ನಲ್ಲಿ ಆರ್ಗ್ಯಾನಿಕ್ ಫಾರ್ಮಿಂಗ್ ಎಂಬ ಪದವನ್ನು ಸೃಷ್ಟಿಸಿದ್ದಾರೆ. ಇದು "ಜೈವಿಕತೆಯ ಪ್ರಕಾರವಾದ ಕೃಷಿ" ಎಂಬ ಅವರ ಪರಿಕಲ್ಪನೆಯನ್ನು ಆಧರಿಸಿದೆ. ಇದನ್ನು ಅವರು ಕೃಷಿಯ ಸಮಗ್ರತೆ ಹಾಗು ಪರಿಸರ-ಸಮತೋಲನದ ಮಾರ್ಗವೆಂದು ವಿವರಿಸುತ್ತಾರೆ- ಇದು ಅವರು ಹೆಸರಿಸಿದ ಕೆಮಿಕಲ್ ಫಾರ್ಮಿಂಗ್ ಗೆ ವಿರುದ್ಧವಾಗಿದೆ. ಇದು "ಆಮದು ಮಾಡಿಕೊಂಡ ಫಲವತ್ತತೆಯ ತಳಿಯ" ಮೇಲೆ ಅವಲಂಬಿತವಾಗಿದೆ ಹಾಗು ಇದು "ಸ್ವಯಂಪೂರ್ಣವಲ್ಲ ಅಥವಾ ಸಂಪೂರ್ಣ ಜೈವಿಕತೆ ಹೊಂದಿರುವುದಿಲ್ಲ."[3] ಇದು ವೈಜ್ಞಾನಿಕವಾಗಿ ಬಳಕೆಯಾಗುವ "ಆರ್ಗ್ಯಾನಿಕ್" ಪದಕ್ಕಿಂತ ಭಿನ್ನವಾಗಿದೆ. ವೈಜ್ಞಾನಿಕ ಪದವು ಕಾರ್ಬನ್ ನನ್ನು ಹೊಂದಿರುವ ಅಣುಗಳ ಗುಂಪನ್ನು ಸೂಚಿಸಲು, ವಿಶೇಷವಾಗಿ ರಸಾಯನ ವಿಜ್ಞಾನದಲ್ಲಿ ಬಳಕೆಯಾಗುತ್ತದೆ.
ಸಂಸ್ಕರಣಗೊಂಡ ಜೈವಿಕ ಆಹಾರವು ಸಾಮಾನ್ಯವಾಗಿ ಕೇವಲ ಜೈವಿಕ ಅಂಶಗಳನ್ನು ಹೊಂದಿರುತ್ತವೆ. ಅಜೈವಿಕ ಅಂಶಗಳನ್ನು ಒಳಗೊಂಡಿದ್ದಲ್ಲಿ, ಕಡೇಪಕ್ಷ ಒಟ್ಟಾರೆಯಾಗಿ ಆಹಾರದ ಸ್ವಲ್ಪ ಪ್ರಮಾಣದಲ್ಲಿ ಸಸ್ಯ ಹಾಗು ಪ್ರಾಣಿಯ ಅಂಶಗಳು ಜೈವಿಕವಾಗಿರಬೇಕಾಗುತ್ತದೆ (95%ನಷ್ಟು ಯುನೈಟೆಡ್ ಸ್ಟೇಟ್ಸ್[4], ಕೆನಡಾ, ಹಾಗು ಆಸ್ಟ್ರೇಲಿಯಾದಲ್ಲಿ). ಇದಲ್ಲದೆ ಅಜೈವಿಕವಾಗಿ ಉತ್ಪಾದನೆಗೊಂಡ ಯಾವುದೇ ಅಂಶಗಳು ಹಲವಾರು ಕೃಷಿ ಅವಶ್ಯಕತೆಗಳಿಗೆ ಒಳಗಾಗಿರುತ್ತವೆ. ಜೈವಿಕವೆಂದು ವಿವರಿಸಲ್ಪಡುವ ಆಹಾರಗಳು ಕೃತಕ ಆಹಾರ ಸಂಯೋಜನೀಯಗಳಿಂದ ಮುಕ್ತವಾಗಿರಬೇಕು, ಜೊತೆಗೆ ಇವುಗಳನ್ನು ಕೆಲವೇ ಕೆಲವು ಕೃತಕ ವಿಧಾನಗಳಿಂದ, ವಸ್ತುಗಳು ಹಾಗು ಸ್ಥಿತಿಗಳಿಂದ ಸಂಸ್ಕರಿಸಲಾಗುತ್ತದೆ, ಉದಾಹರಣೆಗೆ ರಾಸಾಯನಿಕ ಪಕ್ವಗೊಳಿಸುವಿಕೆ, ಆಹಾರಗಳನ್ನು ವಿಕಿರಣಗಳ ಪ್ರಭಾವಕ್ಕೆ ಗುರಿಪಡಿಸುವುದು, ಹಾಗು ಕುಲಾಂತರಿ ತಳಿ ಅಂಶಗಳು. ಕ್ರಿಮಿನಾಶಕಗಳು ಎಲ್ಲಿಯವರೆಗೆ ಸಂಶ್ಲೇಷಕವಾಗಿರುವುದಿಲ್ಲವೋ ಅಲ್ಲಿಯವರೆಗೆ ಅದರ ಬಳಕೆಗೆ ಅನುಮತಿಯಿದೆ.
ಮುಂಚೆಲ್ಲ ಗ್ರಾಹಕರು, ರಾಸಾಯನಿಕ ಪ್ರಕ್ರಿಯೆಗೆ ಒಳಪಡದ, ತಾಜಾ ಅಥವಾ ಕನಿಷ್ಠ ಸಂಸ್ಕರಣೆಯನ್ನು ಮಾಡಲ್ಪಟ್ಟ ಆಹಾರದ ಬಗ್ಗೆ ಆಸಕ್ತಿ ವಹಿಸಿದ್ದರು. ಅವರು ಬಹುಮಟ್ಟಿಗೆ ನೇರವಾಗಿ ಬೆಳೆಗಾರರಿಂದ ಖರೀದಿಸಬೇಕಿತ್ತು: "ನಿಮ್ಮ ರೈತನ ಬಗ್ಗೆ ಅರಿಯಿರಿ, ನಿಮ್ಮ ಆಹಾರದ ಬಗ್ಗೆ ಅರಿಯಿರಿ" ಎಂಬುದು ಧ್ಯೇಯ ಮಂತ್ರವಾಗಿತ್ತು. "ಜೈವಿಕ" ವೆಂದು ರಚಿಸಲಾದ ವೈಯಕ್ತಿಕ ಅರ್ಥನಿರೂಪಣೆಗಳನ್ನು ನೇರವಾದ ಅನುಭವದ ಮೂಲಕ ಅಭಿವೃದ್ಧಿ ಪಡಿಸಲಾಗಿತ್ತು: ರೈತರೊಂದಿಗೆ ಮಾತುಕತೆ, ಕೃಷಿಯ ಸ್ಥಿತಿಯ ಬಗ್ಗೆ ವೀಕ್ಷಣೆ, ಹಾಗು ಕೃಷಿ ಚಟುವಟಿಕೆಗಳ ಮೂಲಕ. ಸಣ್ಣದಾದ ಜಮೀನುಗಳಲ್ಲಿ ಜೈವಿಕ ಕೃಷಿಯ ವಿಧಾನಗಳನ್ನು ಬಳಸಿ, ಪ್ರಮಾಣೀಕೃತ ಅಥವಾ ಪ್ರಮಾಣೀಕೃತರಹಿತ ತರಕಾರಿಗಳನ್ನು ಬೆಳೆಯಲಾಗುತ್ತಿತ್ತು (ಜೊತೆ ಜಾನುವಾರುಗಳ ಪಾಲನೆ), ಹಾಗು ಅದರ ಖರೀದಿಗೆ ಗ್ರಾಹಕನೊಬ್ಬನ ಮೇಲೆ ನಿಗಾವಹಿಸಲಾಗುತ್ತಿತ್ತು. ಜೈವಿಕ ಆಹಾರಗಳ ಬೇಡಿಕೆ ಹೆಚ್ಚಾಗಲು ಪ್ರಾರಂಭವಾಗುತ್ತಿದ್ದಂತೆ, ಸೂಪರ್ಮಾರ್ಕೆಟ್ಗಳು ಮುಂತಾದ ಸಮೂಹ ಮಾರುಕಟ್ಟೆಗಳ ಮೂಲಕ ಭಾರೀ ಪ್ರಮಾಣದ ಮಾರಾಟ ನಡೆಯಿತು ಹಾಗೂ ನೇರ ರೈತ ಸಂಪರ್ಕಕ್ಕೆ ಬದಲಿಯಾಗಿ ಬಂತು. ಇಂದು ಜೈವಿಕ ಕೃಷಿಯ ಗಾತ್ರಕ್ಕೆ ಸೀಮಿತತೆಯಿಲ್ಲ. ಜೊತೆಗೆ ಹಲವು ದೊಡ್ಡ ಸಂಸ್ಥೆಯ ಕೃಷಿಜಮೀನುಗಳು ಪ್ರಸಕ್ತ ಒಂದು ಜೈವಿಕ ವಿಭಾಗವನ್ನು ಹೊಂದಿರುತ್ತವೆ. ಆದಾಗ್ಯೂ, ಸೂಪರ್ಮಾರ್ಕೆಟ್ ಗ್ರಾಹಕರಿಗೆ, ಆಹಾರದ ಉತ್ಪಾದನೆಯ ಬಗ್ಗೆ ಸುಲಭವಾಗಿ ಗಮನಿಸಲು ಸಾಧ್ಯವಿಲ್ಲ, ಜೊತೆಗೆ ಉತ್ಪಾದನಾ ಗುರುತು-ಪಟ್ಟಿ, ಉದಾಹರಣೆಗೆ "ಪ್ರಮಾಣೀಕೃತ ಜೈವಿಕ" ಎಂಬಂತಹ ಪಟ್ಟಿಯ ಮೇಲೆ ಭರವಸೆ ಇಡುತ್ತಾರೆ. ಸರಕಾರದ ನಿಬಂಧನೆಗಳು ಹಾಗು ಥರ್ಡ್ ಪಾರ್ಟಿ(ತೃತೀಯ)ತಪಾಸಕರ ಭರವಸೆಯ ಮೇಲೆ ನಂಬಿಕೆ ಇರಿಸಲಾಗುತ್ತದೆ. ಸಂಸ್ಕರಣಗೊಂಡ ಉತ್ಪನ್ನವು "ಜೈವಿಕ" ವಾಗಿದೆ ಎಂಬುದನ್ನು ಗ್ರಾಹಕರು ತಿಳಿದುಕೊಳ್ಳಬೇಕಾದರೆ "ಪ್ರಮಾಣೀಕೃತ ಜೈವಿಕ" ಎಂಬ ಗುರುತು-ಪಟ್ಟಿಯಿಂದ ಮಾತ್ರ ಸಾಧ್ಯ.
USDA ಜೈವಿಕ ರೈತರನ್ನು ಪರಿಶೀಲನೆ ಮಾಡುವುದಿಲ್ಲ.[5] 30 ತೃತೀಯ ತಪಾಸಕರಲ್ಲಿ 15 ಜನರನ್ನು ಸೂಕ್ಷ್ಮ ಪರೀಕ್ಷೆಯ ನಂತರ ಪರೀಕ್ಷಣಾವಧಿಯ ಅಡಿಯಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ. ಏಪ್ರಿಲ್ 20, 2010ರಲ್ಲಿ ಕೃಷಿ ಇಲಾಖೆಯು, ಜೈವಿಕವಾಗಿ ಬೆಳೆಯಲ್ಪಟ್ಟ ಉತ್ಪನ್ನಗಳಲ್ಲಿನ ಕ್ರಿಮಿನಾಶಕಗಳ ಅಂಶ ಪತ್ತೆ ಹಚ್ಚುವ ಸಲುವಾಗಿ ಅದೇ ಸ್ಥಳದಲ್ಲಿ ಪರೀಕ್ಷೆ ನಡೆಸಲು ನಿಯಮವನ್ನು ಜಾರಿಗೆ ತರುವುದಾಗಿ ಹೇಳಿತು. ಇದು ಜೈವಿಕ ಆಹಾರ ಕ್ಷೇತ್ರದಲ್ಲಿ ಫೆಡರಲ್ ಅಜಾಗರೂಕತೆಯಿಂದ ಉಂಟಾದ ಪ್ರಮುಖ ಅಂತರಗಳನ್ನು ಒಬ್ಬ ಲೆಕ್ಕತಪಾಸಕ ತೋರಿಸಿಕೊಟ್ಟ ಪರಿಣಾಮವಾಗಿತ್ತು.[6]
ಜೈವಿಕವೆಂದು ಪ್ರಮಾಣ ಗೊಳ್ಳಬೇಕಾದರೆ, ಉತ್ಪನ್ನಗಳ ಬೆಳೆ ಹಾಗೂ ತಯಾರಿಕೆಯನ್ನು ರಾಷ್ಟ್ರಗಳಲ್ಲಿ ರೂಪಿಸಲಾಗಿರುವ ಮಾನದಂಡಕ್ಕೆ ನಿಯಮಾನುಸಾರವಾಗಿ ಮಾಡಬೇಕು:
ಕೆನಡಾ: ಕೆನಡಾ ಗಜೆಟ್, ಗವರ್ನಮೆಂಟ್ ಆಫ್ ಕೆನಡಾ Archived 2012-07-26 ವೇಬ್ಯಾಕ್ ಮೆಷಿನ್ ನಲ್ಲಿ.
ಹಲವಾರು ಸಮೀಕ್ಷೆಗಳು ಹಾಗು ಅಧ್ಯಯನಗಳು ಸಾಂಪ್ರದಾಯಿಕ ಹಾಗು ಜೈವಿಕ ವಿಧಾನದ ಕೃಷಿ ಪದ್ಧತಿಗಳನ್ನು ಪರೀಕ್ಷಿಸಿ ಹೋಲಿಕೆ ಮಾಡುವ ಪ್ರಯತ್ನ ನಡೆಸಿವೆ. ಈ ಸಮೀಕ್ಷೆಗಳಿಂದ ಹೊರಬಿದ್ದ ಸಾಮಾನ್ಯವಾದ ಬಹುಮತಾಭಿಪ್ರಾಯವೆಂದರೆ[7][8] ಜೈವಿಕ ಕೃಷಿಯು ಈ ಕೆಳಕಂಡ ಕಾರಣಗಳಿಗೆ ಕಡಿಮೆ ಹಾನಿಯನ್ನು ಉಂಟುಮಾಡುತ್ತದೆ:
ಜೈವಿಕ ಭೂಮಿಯು ಸಂಶ್ಲೇಷಕ ಕ್ರಿಮಿನಾಶಕಗಳನ್ನು ಬಳಸಿಕೊಳ್ಳುವುದಿಲ್ಲ ಅಥವಾ ಪರಿಸರಕ್ಕೆ ಬಿಡುಗಡೆ ಮಾಡುವುದಿಲ್ಲ- ಕ್ರಿಮಿನಾಶಕಗಳಲ್ಲಿ ಕೆಲವೊಂದು ಮಣ್ಣಿಗೆ, ನೀರಿಗೆ ಹಾಗು ಸ್ಥಳೀಯ ಭೂಚರಗಳಿಗೆ ಹಾಗು ಜಲಚರಗಳಿಗೆ ತೊಂದರೆ ಉಂಟುಮಾಡುವ ಸಾಧ್ಯತೆಯನ್ನು ಹೊಂದಿರುತ್ತವೆ.
ವೈವಿಧ್ಯದ ಪರಿಸರ ವ್ಯವಸ್ಥೆಯನ್ನು ಸಂರಕ್ಷಿಸುವಲ್ಲಿ ಜೈವಿಕ ಕೃಷಿಯು ಸಾಂಪ್ರದಾಯಿಕ ಕೃಷಿಗಿಂತ ಉತ್ತಮವಾಗಿದೆ ಅದೆಂದರೆ , ಸಸ್ಯ ಹಾಗು ಕ್ರಿಮಿಕೀಟಗಳ ಸಂಖ್ಯೆಗಳು ಹಾಗು ಪ್ರಾಣಿಗಳ ಸಂಖ್ಯೆಗಳು.
ಆದಾಗ್ಯೂ, ಜೈವಿಕ ಕೃಷಿಯ ವಿಧಾನಗಳನ್ನು ಟೀಕಿಸುವ ವಿಮರ್ಶಕರು, ಸಾಂಪ್ರದಾಯಿಕ ಕೃಷಿಯಲ್ಲಿ ಬಳಸಿಕೊಳ್ಳಲಾಗುವ ಭೂಮಿಗಿಂತ ಅದೇ ಪ್ರಮಾಣದ ಬೆಳೆಯನ್ನು ತೆಗೆಯಲು ಜೈವಿಕ ಕೃಷಿಗೆ ಹೆಚ್ಚಿನ ಭೂಮಿಯ ಅಗತ್ಯವಿದೆಯೆಂದು ಭಾವಿಸುತ್ತಾರೆ (ಕೆಳಗಿನ 'ಇಳುವರಿ' ವಿಭಾಗವನ್ನು ನೋಡಿ). ಇದು ನಿಜವಾದ ಪರಿಸ್ಥಿತಿಯಾದರೆ, ಜೈವಿಕ ಕೃಷಿಯು ಮಳೆಯಾಧಾರಿತ ಕಾಡುಗಳನ್ನು ನಾಶಮಾಡುವ ಸಾಮರ್ಥ್ಯವನ್ನು ಹೊಂದಿರುತ್ತದೆ ಹಾಗು ಹಲವು ಪರಿಸರ ವ್ಯವಸ್ಥೆಗಳನ್ನು ನಾಶ ಮಾಡಿಬಿಡುತ್ತದೆಂದು ಅವರು ವಾದಿಸುತ್ತಾರೆ.[9][10]
ಕಳೆದ 2003ರಲ್ಲಿ UKಯ ಡಿಪಾರ್ಟ್ಮೆಂಟ್ ಫಾರ್ ಇನ್ವೈರ್ನಮೆಂಟಲ್ ಫುಡ್ ಅಂಡ್ ರೂರಲ್ ಅಫೇರ್ಸ್ ನಡೆಸಿದ ತನಿಖೆಯಲ್ಲಿ, ಇತರ ವರದಿಗಳಂತೆ, ಜೈವಿಕ ಕೃಷಿಯು "ಸಕಾರಾತ್ಮಕವಾಗಿ ಪರಿಸರಕ್ಕೆ ಪ್ರಯೋಜನಗಳನ್ನು ಉಂಟುಮಾಡಬಹುದು", ಆದರೆ "ಪ್ರದೇಶಕ್ಕೆ ಬದಲಾಗಿ ಏಕಮಾನದ ಉತ್ಪಾದನೆಯ ಆಧಾರದ ಮೇಲೆ" ಹೋಲಿಕೆಗಳನ್ನು ಮಾಡಿದಾಗ,ಈ ಕೆಲವು ಪ್ರಯೋಜನಗಳು ಕಡಿಮೆಯಾಗುತ್ತದೆ ಅಥವಾ ನಾಶವಾಗುತ್ತದೆ ಎಂದು ಪತ್ತೆ ಮಾಡಿದೆ.[11]
50%ನಷ್ಟು ಕಡಿಮೆ ರಸಗೊಬ್ಬರ ಹಾಗು 97%ನಷ್ಟು ಕಡಿಮೆ ಕ್ರಿಮಿನಾಶಕಗಳನ್ನು ಬಳಸುವ ಜೈವಿಕ ಕೃಷಿ ಭೂಮಿಗಳು 20%ನಷ್ಟು ಕಡಿಮೆ ಇಳುವರಿಯನ್ನು ನೀಡಿತೆಂದು ಒಂದು ಅಧ್ಯಯನದಲ್ಲಿ ತಿಳಿದುಬಂತು.[12] ಇಳುವರಿಗಳನ್ನು ಹೋಲಿಕೆ ಮಾಡುವ ಅಧ್ಯಯನಗಳು ಮಿಶ್ರ ಫಲಿತಾಂಶಗಳನ್ನು ನೀಡಿವೆ.[13] ಜೈವಿಕವಾಗಿ ನಿರ್ವಹಣೆಯಾದ ಮಣ್ಣು ಉತ್ತಮ ಗುಣಮಟ್ಟವನ್ನು ಹೊಂದಿರುವುದರ[14] ಜೊತೆಗೆ ಅತ್ಯಧಿಕ ನೀರಿನ ಧಾರಣಶಕ್ತಿಯನ್ನು ಹೊಂದಿರುತ್ತದೆಂದು ಬೆಂಬಲಿಗರು ಸಮರ್ಥಿಸುತ್ತಾರೆ. ಇದು ಬರಗಾಲದ ಅವಧಿಯಲ್ಲಿ ಜೈವಿಕ ಕೃಷಿ ಭೂಮಿಗಳಿಂದ ಹೆಚ್ಚಿನ ಇಳುವರಿಗಳನ್ನು ತೆಗೆಯಲು ಸಹಾಯಕವಾಗಿದೆ.
ಡ್ಯಾನಿಶ್ ಎನ್ವೈರನ್ಮೆಂಟಲ್ ಪ್ರೊಟೆಕ್ಷನ್ ಏಜೆನ್ಸಿಯ ಒಂದು ಅಧ್ಯಯನವು, ಪ್ರತಿಯೊಂದು ಪ್ರದೇಶದಲ್ಲಿ ನಡೆಸಿದ ಸಮೀಕ್ಷೆಯಂತೆ, ಆಲೂಗೆಡ್ಡೆ, ಸಿಹಿ ಬೀಟ್ ಗೆಡ್ಡೆ ಹಾಗು ಸೀಡ್ ಗ್ರಾಸ್ ಉತ್ಪಾದಿಸುವ ಜೈವಿಕ ಭೂಮಿಯು, ಸಾಂಪ್ರದಾಯಿಕ ಕೃಷಿ ಉತ್ಪಾದನೆಯ ಅರ್ಧದಷ್ಟು ಕಡಿಮೆ ಇಳುವರಿಯನ್ನು ನೀಡುತ್ತದೆಂದು ವರದಿ ಮಾಡಿದೆ.[15] ಈ ರೀತಿಯಾದ ಉದಾಹರಣೆಗಳು, ಹಾಗು ಕಡಿಮೆ-ಫಲವನ್ನು ನೀಡುವ ಪಶುಗಳ ಗೊಬ್ಬರದ ಮೇಲೆ ಅವಲಂಬಿತವಾಗಿರುವ ಜೈವಿಕ ಆಹಾರವು, ಜೈವಿಕ ಕೃಷಿಯು ಪರಿಸರಕ್ಕೆ ಸಂಬಂಧಿಸಿದಂತೆ ಅಭದ್ರವಾಗಿದೆ ಹಾಗು ವಿಶ್ವದ ಜನಸಂಖ್ಯೆಗೆ ಆಹಾರ ಪೂರೈಕೆ ಮಾಡುವಲ್ಲಿ ಅಸಮರ್ಥವಾಗಿದೆ ಎಂದು ವಿಜ್ಞಾನಿಗಳ ಟೀಕೆಗೆ ಒಳಗಾಗಿದೆ.[9] ಟೀಕಾಕಾರರಲ್ಲಿ, "ಹಸಿರು ಕ್ರಾಂತಿ"ಯ ಪಿತಾಮಹ, ಹಾಗು ನೋಬಲ್ ಶಾಂತಿ ಪ್ರಶಸ್ತಿ ಪುರಸ್ಕೃತ ನಾರ್ಮನ್ ಬೋರ್ಲುಗ್ ಸಹ ಒಬ್ಬರು.ಬೆಳೆಭೂಮಿಯನ್ನು ವಿಸ್ತರಿಸಿದ ನಂತರ,ಆ ಪ್ರಕ್ರಿಯೆಯಲ್ಲಿ ಪರಿಸರವ್ಯವಸ್ಥೆ ನಾಶವಾದರೂ ಜೈವಿಕ ಕೃಷಿ ಪದ್ಧತಿಯು ಹೆಚ್ಚೆಂದರೆ 4 ಶತಕೋಟಿ ಜನರಿಗೆ ಆಹಾರದ ಪೂರೈಕೆ ಮಾಡಬಹುದೆಂದು ಪ್ರತಿಪಾದಿಸುತ್ತಾರೆ.[10] ದಿ ಆಮ್ನಿವೋರ್ಸ್ ಡೈಲೆಮ ದ ಕರ್ತೃ ಮೈಕ್ಹಲ್ ಪೋಲ್ಲನ್, ಇದಕ್ಕೆ ಪ್ರತಿಕ್ರಿಯಿಸುತ್ತಾ, ವಿಶ್ವದ ಕೃಷಿ ಸರಾಸರಿ ಇಳುವರಿಯು ಒಟ್ಟಾರೆಯಾಗಿ ಆಧುನಿಕ ಸುಸ್ಥಿರ ಕೃಷಿ ಇಳುವರಿಗಿಂತ ಕಡಿಮೆಯಿದೆಯೆಂದು ಸೂಚಿಸುತ್ತಾರೆ. ವಿಶ್ವದ ಸರಾಸರಿ ಇಳುವರಿಯನ್ನು ಆಧುನಿಕ ಜೈವಿಕ ಮಟ್ಟಗಳಿಗೆ ತಂದರೆ ಅದು ವಿಶ್ವದ ಆಹಾರ ಪೂರೈಕೆಯನ್ನು 50%ನಷ್ಟು ಹೆಚ್ಚಿಸಬಹುದು[16].
ಒಟ್ಟಾರೆಯಾಗಿ ಎರಡು ಕೃಷಿ ವಿಧಾನಗಳ ಸಾಮರ್ಥ್ಯವನ್ನು ಅಂದಾಜು ಮಾಡಲು 293 ವಿಭಿನ್ನ ಹೋಲಿಕೆಗಳ ಸಂಶೋಧನೆಯನ್ನು ಒಂದೇ ಅಧ್ಯಯನವಾಗಿ ಸಂಗ್ರಹ ಮಾಡಿದ ಕಳೆದ 2007ರ ಒಂದು ಅಧ್ಯಯನವು[17] ಈ ರೀತಿಯಾದ ನಿರ್ಣಯಕ್ಕೆ ಬಂದಿತು
...ಜೈವಿಕ ವಿಧಾನಗಳು ಜಾಗತಿಕ ಪ್ರತಿ ವ್ಯಕ್ತಿಯನ್ನು ಆಧರಿಸಿ ಪ್ರಸಕ್ತ ಜನಸಂಖ್ಯೆಯನ್ನು ಪೋಷಿಸುವ ಸಲುವಾಗಿ ಹೆಚ್ಚಿನ ಆಹಾರ ಉತ್ಪಾದನೆಯನ್ನು ಮಾಡಲು ಸಾಧ್ಯವಿದೆ, ಜೊತೆಗೆ ಕೃಷಿ ಭೂಮಿ ಮೂಲವನ್ನು ಹೆಚ್ಚಿಸದೇ ಇನ್ನೂ ಹೆಚ್ಚಿನ ಜನಸಂಖ್ಯೆಯನ್ನು ಪೋಷಿಸುವ ಸಾಮರ್ಥ್ಯವನ್ನು ಹೊಂದಿದೆ. (ಸಂಗ್ರಹದಿಂದ)
ಮುಂದುವರಿದ ರಾಷ್ಟ್ರಗಳಲ್ಲಿ ಸಾಂಪ್ರದಾಯಿಕ ಕೃಷಿಯಿಂದ ಉತ್ಪಾದಿಸುವ ಇಳುವರಿಯ 92%ನಷ್ಟು ಇಳುವರಿಯನ್ನು ಜೈವಿಕ ವಿಧಾನವು ಉತ್ಪಾದಿಸುತ್ತದೆಂದು, ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಸಾಂಪ್ರದಾಯಿಕ ಕೃಷಿಗಿಂತ 80%ನಷ್ಟು ಅಧಿಕ ಇಳುವರಿಯನ್ನು ಜೈವಿಕ ವಿಧಾನದಿಂದ ಪಡೆಯಬಹುದಾಗಿದೆ ಎಂಬುದನ್ನು ಸಂಶೋಧಕರು ಗುರುತಿಸಿದ್ದಾರೆ. ಏಕೆಂದರೆ ಕೆಲವು ಬಡ ರಾಷ್ಟ್ರಗಳಲ್ಲಿ ಸಂಶ್ಲೇಷಕ ಕೃಷಿ ಸಾಮಗ್ರಿಗಳಿಗಿಂತ ಜೈವಿಕ ಕೃಷಿಗೆ ಬೇಕಾದ ಸಾಮಗ್ರಿಗಳು ಸುಲಭವಾಗಿ ದೊರಕುತ್ತವೆ. ಮತ್ತೊಂದು ರೀತಿಯಲ್ಲಿ, ಕೃಷಿ ಸಮುದಾಯಗಳು ಮಣ್ಣನ್ನು ಮತ್ತೆ ಭರ್ತಿ ಮಾಡಲು ಸಾಕಷ್ಟು ಗೊಬ್ಬರದ ಕೊರತೆಯಿಂದ ಜೈವಿಕ ಕೃಷಿಗೆ ಮೊರೆ ಹೋಗುತ್ತವೆ, ಹಾಗು ಮಣ್ಣಿನ ಗುಣಮಟ್ಟವು ಶೀಘ್ರವಾಗಿ ತಗ್ಗುತ್ತದೆ[18].
ಸೇಬಿನ ಉತ್ಪಾದನಾ ವ್ಯವಸ್ಥೆಯ ಸುಸ್ಥಿರತೆ ಅಧ್ಯಯನದಲ್ಲಿ, ಜೈವಿಕ ಕೃಷಿ ವಿಧಾನದ ಜೊತೆ ಸಾಂಪ್ರದಾಯಿಕ ಕೃಷಿ ವ್ಯವಸ್ಥೆಯನ್ನು ಹೋಲಿಸಿದಾಗ, ಜೈವಿಕ ವಿಧಾನವು ಹೆಚ್ಚಿನ ಶಕ್ತಿ ದಕ್ಷತೆ ಯನ್ನು ಹೊಂದಿದೆಯೆಂದು ಒಂದು ಅಧ್ಯಯನವು ಎತ್ತಿ ಹಿಡಿಯಿತು.[19] ಆದಾಗ್ಯೂ, ಜೈವಿಕ ಕೃಷಿಯ ಕಳೆ ನಿಯಂತ್ರಣಕ್ಕೆ ದೊಡ್ಡ ಮಟ್ಟದ ಕೃಷಿಗೆ ಸಿದ್ಧವಾದ ಭೂಮಿಯ ಬಳಕೆಯಿಂದ ಇದು ಚರ್ಚೆಗೆ ಗ್ರಾಸವಾಗಿದೆ. ಇದಲ್ಲದೆ, ಪೋಷಕತೆ ಹೊಂದಿರುವ ಸಾಂದ್ರ ರಸಗೊಬ್ಬರಗಳ ಕಡಿಮೆ ಅಳವಡಿಕೆಯಿಂದ ಇಂಧನದ ಹೆಚ್ಚಿನ ಬಳಕೆಯು,ಅಧಿಕ ಇಂಧನ ಅನುಭೋಗದ ದರಗಳಲ್ಲಿ ಫಲಿತಾಂಶ ನೀಡುತ್ತದೆ. ಒಂದು ಸಾಮಾನ್ಯ ವಿಶ್ಲೇಷಣೆಯೆಂದರೆ, ಜೈವಿಕ ಉತ್ಪಾದನಾ ವಿಧಾನಗಳು ಸಾಮಾನ್ಯವಾಗಿ ಶಕ್ತಿ ದಕ್ಷತೆ ಹೊಂದಿರುತ್ತವೆ ಏಕೆಂದರೆ ಇವುಗಳು ರಾಸಾಯನಿಕವಾಗಿ ಸಂಶ್ಲೇಷಿತಗೊಂಡ ನೈಟ್ರೋಜನ್(ಸಾರಜನಕ)ನನ್ನು ಬಳಕೆ ಮಾಡುವುದಿಲ್ಲ. ಆದರೆ ಅವುಗಳು ಸಾಧಾರಣವಾಗಿ ಹೆಚ್ಚು ಪೆಟ್ರೋಲಿಯಂ ನ್ನು ಬಳಸಿಕೊಳ್ಳುತ್ತವೆ ಏಕೆಂದರೆ ಕಳೆಯನ್ನು ನಿಯಂತ್ರಿಸಲು ಇತರ ಆಯ್ಕೆಗಳ ಕೊರತೆ ಹಾಗೂ ಹೆಚ್ಚು ಸಾಂದ್ರೀಕೃತವಾದ ಮಣ್ಣಿನ ನಿರ್ವಹಣೆಯ ವಿಧಾನಗಳು ಸೇರಿವೆ.[ಸೂಕ್ತ ಉಲ್ಲೇಖನ ಬೇಕು]
ಶಕ್ತಿ ದಕ್ಷತೆಯನ್ನು ನಿರ್ಧರಿಸುವುದು ತುಂಬಾ ಕಠಿಣ; ಮೇಲೆ ನೀಡಲಾದ ನಿದರ್ಶನವನ್ನು ಲೇಖಕರು 1976ರಲ್ಲಿ ಬರೆದ ಒಂದು ಪುಸ್ತಕದಿಂದ ಉಲ್ಲೇಖಿಸುತ್ತಾರೆ. ಜೈವಿಕ ಕೃಷಿಗೆ ಸಂಬಂಧಿಸಿದಂತೆ ದಕ್ಷತೆ ಹಾಗು ಶಕ್ತಿಯ ಬಳಕೆಯ ವಾಸ್ತವ ಮೌಲ್ಯವನ್ನು ಇನ್ನೂ ನಿರ್ಧರಿಸಬೇಕಿದೆ.
ಕ್ರಿಮಿನಾಶಕಗಳ ಬಳಕೆಯಿಂದ ರೈತಕಾರ್ಮಿಕರ ಆರೋಗ್ಯದ ಮೇಲಿನ ಪರಿಣಾಮಗಳು ಹಾಗು ಅಡ್ಡ ಪರಿಣಾಮಗಳನ್ನು ವಿಸ್ತೃತವಾಗಿ ವಿವರಿಸುವ ಅಧ್ಯಯನಗಳಿವೆ.[20] ಕ್ರಿಮಿನಾಶಕಗಳನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿದರೂ ಸಹ, ಅವು ಗಾಳಿಯ ಮೂಲಕ ರೈತಕಾರ್ಮಿಕರ ದೇಹದೊಳಕ್ಕೆ ಸೇರುತ್ತವೆ. ಈ ಅಧ್ಯಯನಗಳ ಮೂಲಕ, ಆರ್ಗನೋಫಾಸ್ಫೇಟ್ ಕ್ರಿಮಿನಾಶಕಗಳು ತೀವ್ರತರವಾದ ಆರೋಗ್ಯದ ಸಮಸ್ಯೆಗಳಾದ ಹೊಟ್ಟೆ ನೋವು, ತಲೆ ತಿರುಗುವಿಕೆ, ತಲೆ ನೋವು, ಓಕರಿಕೆ, ವಾಂತಿ ಮುಂತಾದ ಸಮಸ್ಯೆಗಳ ಜೊತೆಗೆ ಚರ್ಮ ಹಾಗು ಕಣ್ಣಿಗೆ ಹಾನಿಯನ್ನು ಉಂಟುಮಾಡುತ್ತದೆ.[21] ಇದರ ಜೊತೆಗೆ, ಇತರ ಹಲವು ಅಧ್ಯಯನಗಳು, ಕ್ರಿಮಿನಾಶಕಗಳ ಒಡ್ಡುವಿಕೆಯಿಂದ ಹೆಚ್ಚು ತೀವ್ರತರವಾದ ಆರೋಗ್ಯದ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ಗುರುತಿಸಿವೆ. ಉದಾಹರಣೆಗೆ ಉಸಿರಾಟದ ಸಮಸ್ಯೆ, ಜ್ಞಾಪಕ ಶಕ್ತಿಯಲ್ಲಿ ಏರುಪೇರು, ಚರ್ಮದ ಸಮಸ್ಯೆಗಳು,[22][23] ಕ್ಯಾನ್ಸರ್,[24] ಖಿನ್ನತೆ, ನರಗಳ ದುರ್ಬಲತೆ,[25][26] ಗರ್ಭಪಾತಗಳು, ಹಾಗು ಹುಟ್ಟಿನ ತೊಂದರೆಗಳು ಕಾಣಿಸಿಕೊಳ್ಳುತ್ತವೆ.[27] ಸಮಾನಸ್ಕಂದರ ಸಂಶೋಧನಾ ಸಾರಾಂಶಗಳು ಕ್ರಿಮಿನಾಶಕಗಳ ಒಡ್ಡುವಿಕೆ ಮತ್ತು ಆರ್ಗನೋಪ್ಹಾಸ್ಫೆಟ್ಗೆ-ಒಡ್ಡಿಕೊಂಡ ಕಾರ್ಮಿಕರಲ್ಲಿ ನರಗಳ ಸಮಸ್ಯೆಗಳು ಹಾಗೂ ಕ್ಯಾನ್ಸರ್ ನಡುವೆ ಸಂಬಂಧವನ್ನು ಪರಿಶೀಲಿಸಿವೆ.[28][29]
ದಕ್ಷಿಣ ಅಮೆರಿಕದಿಂದ ಆಮದು ಮಾಡಿಕೊಳ್ಳಲಾದ ಹಣ್ಣುಗಳು ಹಾಗು ತರಕಾರಿಗಳಲ್ಲಿ ಹೆಚ್ಚಿನ ಪ್ರಮಾಣದ ಕ್ರಿಮಿನಾಶಕಗಳ ಪ್ರಮಾಣ ಇರುವ ಸಂಭವವಿದೆ,[30] ಯುನೈಟೆಡ್ ಸ್ಟೇಟ್ಸ್ ನಲ್ಲಿ ಸಹ ಕ್ರಿಮಿನಾಶಕಗಳ ಬಳಕೆಯನ್ನು ನಿಷೇಧಿಸಲಾಗಿದೆ.[31] ವಲಸೆ ಹೋಗುವ ಹಕ್ಕಿಗಳಾದ, ಸ್ವೈನ್ಸನ್ಸ್ ಗಿಡುಗಗಳು, ಚಳಿಗಾಲದಲ್ಲಿ ಅರ್ಜೆಂಟಿನದಲ್ಲಿ ನೆಲೆಯೂರುತ್ತವೆ. ಅಲ್ಲಿ ಸಾವಿರಾರು ಹಕ್ಕಿಗಳು ಮೊನೋಕ್ರೋಟೋಫೋಸ್ ಕ್ರಿಮಿನಾಶಕಗಳ ವಿಷದಿಂದ ಸತ್ತು ಹೋಗಿರುವುದು ಪತ್ತೆಯಾಯಿತು.[ಸೂಕ್ತ ಉಲ್ಲೇಖನ ಬೇಕು]
ಕಳೆದ 2002ರಲ್ಲಿ ಪ್ರಕಟಗೊಂಡ ಒಂದು ಅಧ್ಯಯನವು "ಜೈವಿಕವಾಗಿ ಬೆಳೆದ ಆಹಾರದಲ್ಲಿ, ಸಾಂಪ್ರದಾಯಿಕವಾಗಿ ಬೆಳೆದ ಆಹಾರದಲ್ಲಿರುವಂತೆ ಮೂರನೇ ಒಂದು ಭಾಗದಷ್ಟು ಕ್ರಿಮಿನಾಶಕಗಳ ಉಳಿಕೆ ಅಂಶ ಇರುತ್ತದೆಂದು ವರದಿ ಮಾಡಿತು."[32][33]
ಯುನೈಟೆಡ್ ಸ್ಟೇಟ್ಸ್ ನಲ್ಲಿ ಕ್ರಿಮಿನಾಶಕಗಳ ಉಳಿಕೆ ಬಗ್ಗೆ ಮೇಲ್ವಿಚಾರಣೆಯನ್ನು ಪೆಸ್ಟಿಸೈಡ್ ಡಾಟಾ ಪ್ರೊಗ್ರಾಮ್ ನಡೆಸುತ್ತದೆ (USDAನ ವಿಭಾಗವಾದ ಇದನ್ನು 1990ರಲ್ಲಿ ರೂಪಿಸಲಾಯಿತು. ಅಲ್ಲಿಂದೀಚೆಗೆ 400 ವಿವಿಧ ಮಾದರಿಯ ಕ್ರಿಮಿನಾಶಕಗಳಿಗಾಗಿ 60 ವಿವಿಧ ಮಾದರಿಗಳ ಆಹಾರದಲ್ಲಿ, ತಿನ್ನುವ ಹಂತದಲ್ಲಿದ್ದ ಆಹಾರದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸಲಾಯಿತು. ಅವರ ತೀರ ಇತ್ತೀಚಿನ ಫಲಿತಾಂಶಗಳು 2005ರಲ್ಲಿ ಪತ್ತೆಯಾಯಿತು:
“ | These data indicate that 29.5 percent of all samples tested contained no detectable pesticides [parent compound and metabolite(s) combined], 30 percent contained 1 pesticide, and slightly over 40 percent contained more than 1 pesticide. | ” |
—USDA, Pesticide Data Program[34] |
ಶೇಕಡಾ 25ರಷ್ಟು ಜೈವಿಕ ಆಹಾರವು ಸಂಶ್ಲೇಷಿತ ಕ್ರಿಮಿನಾಶಕ ಉಳಿಕೆಗಳನ್ನು ಹೊಂದಿರುವುದಾಗಿ ಹಲವಾರು ಅಧ್ಯಯನಗಳು ಈ ಸಂಶೋಧನೆಗೆ ದೃಢೀಕರಣ ನೀಡಿವೆ. ಇದಕ್ಕೆ ಹೋಲಿಸಿದರೆ ಸಾಂಪ್ರದಾಯಿಕ ಆಹಾರದಲ್ಲಿ ಶೇಖಡಾ 77ರಷ್ಟು ಕ್ರಿಮಿನಾಶಕಗಳ ಉಳಿಕೆಯು ಪತ್ತೆಯಾಗಿದೆ.[35][36][37][38][39][40][41][42][43][44]
ಕಳೆದ 1993ರಲ್ಲಿ ನ್ಯಾಷನಲ್ ರಿಸರ್ಚ್ ಕೌನ್ಸಿಲ್ ಪ್ರಕಟಿಸಿದ ಒಂದು ಅಧ್ಯಯನವು, ಪ್ರಮುಖವಾಗಿ ಆಹಾರಕ್ರಮದ ಮೂಲಕ ಹಸುಗೂಸುಗಳು ಹಾಗು ಮಕ್ಕಳು ಕ್ರಿಮಿನಾಶಕಗಳಿಗೆ ಒಡ್ಡಿಕೊಳ್ಳುತ್ತಾರೆಂದು ನಿರ್ಣಯಿಸಿತು.[45] ಕಳೆದ 2006ರ ಇತ್ತೀಚಿನ ಅಧ್ಯಯನವು, ಜೈವಿಕ ಆಹಾರಕ್ರಮಕ್ಕೆ ಬದಲಾಗುವುದಕ್ಕೆ ಮುಂಚೆ ಹಾಗು ನಂತರ ಆರ್ಗನೋಫೋಸ್ಫರಸ್ ಕ್ರಿಮಿನಾಶಕಕ್ಕೆ ಒಡ್ಡಿಕೊಂಡ 23 ಶಾಲಾ ಮಕ್ಕಳಲ್ಲಿ ಅದರ ಮಟ್ಟಗಳನ್ನು ಅಳೆಯಲಾಯಿತು. ಈ ಅಧ್ಯಯನವು, ಮಕ್ಕಳು ಜೈವಿಕ ಆಹಾರಕ್ರಮಕ್ಕೆ ತಮ್ಮನ್ನು ತಾವು ಬದಲಾಯಿಸಿಕೊಂಡ ನಂತರ ಆರ್ಗನೋಫೋಸ್ಫೋರಸ್ ಕ್ರಿಮಿನಾಶಕಗಳ ಒಡ್ಡುವಿಕೆ ಮಟ್ಟದಲ್ಲಿ ಗಮನಾರ್ಹವಾಗಿ ಹಾಗೂ ತಕ್ಷಣವೇ ಇಳಿಕೆಯಾಗಿರುವುದನ್ನು ಪತ್ತೆಮಾಡಿತು.[46] ಕೇವಲ ಮಕ್ಕಳನ್ನು ಗಮನದಲ್ಲಿರಿಸಿಕೊಂಡು ಆಹಾರದಲ್ಲಿ ಕ್ರಿಮಿನಾಶಕಗಳ ಉಳಿಕೆಯನ್ನು ಕಡಿಮೆಗೊಳಿಸುವ ಕಾನೂನನ್ನು ರೂಪಿಸಲಾಗಿದೆ. ಜೊತೆಗೆ ಮಕ್ಕಳ ಜೀವಿತಾವಧಿಯಲ್ಲಿ ಪ್ರತಿ ಕ್ರಿಮಿನಾಶಕದ ಸೇವನೆಯ ಬಗ್ಗೆ ಪರಿಗಣಿಸಲಾಗಿದೆ.[47]
ಕೆಲವು ಕ್ರಿಮಿನಾಶಕಗಳು ಆರೋಗ್ಯದ ಮೇಲೆ ಪ್ರಭಾವ ಬೀರುವ ಬಗ್ಗೆ ವಿವಾದಾಸ್ಪದ ಅಂಕಿಅಂಶಗಳಿವೆ. ಉದಾಹರಣೆಗೆ, ಸಸ್ಯನಾಶಕವಾದ ಅಟ್ರಾಜಿನ್, ಕೆಲವು ಪ್ರಯೋಗಗಳಲ್ಲಿ ಟೆರಟೋಜೆನ್ ಆಗಿ ತೋರಿಸಲಾಗಿದ್ದು,ಇದನ್ನು ಸಣ್ಣ ಪ್ರಮಾಣದಲ್ಲಿ ಗಂಡು ಕಪ್ಪೆಗಳಿಗೆ ಒಳಪಡಿಸಿದಾಗ ಅವುಗಳಲ್ಲಿ ನಪುಂಸಕತ್ವಕ್ಕೆ ಕಾರಣವಾಗುತ್ತದೆ. ಅಟ್ರಾಜಿನ್ನ ಪ್ರಭಾವಕ್ಕೊಳಪಟ್ಟ, ಗಂಡು ಕಪ್ಪೆಗಳಲ್ಲಿ ದೋಷಪೂರಿತ ಜನನಗ್ರಂಥಿಗಳು ಅಥವಾ ವೃಷಣಯುಕ್ತ ಜನನಗ್ರಂಥಿಗಳು ಸಂಕೀರ್ಣ ರಚನೆ ಕಳೆದುಕೊಳ್ಳದ ಮೊಟ್ಟೆಗಳನ್ನು ಒಳಗೊಂಡಿರುತ್ತವೆ.[48] ಆದಾಗ್ಯೂ ಹೆಚ್ಚಿನ ಪ್ರಮಾಣಗಳಲ್ಲಿ ನೀಡಿದಾಗ ಇದರ ಪರಿಣಾಮವು ಗಮನಾರ್ಹವಾಗಿ ಕಡಿಮೆಯಾಯಿತು. ಈ ಪರಿಸ್ಥಿತಿಯು ನಿರ್ನಾಳಗ್ರಂಥಿಗಳ ವ್ಯವಸ್ಥೆಗೆ ಪರಿಣಾಮಬೀರುವ ಇತರ ಟೆರಟೋಜೆನ್ಸ್ನಲ್ಲಿ ಸ್ಥಿರವಾಗಿದೆ, ಉದಾಹರಣೆಗೆ ಎಸ್ಟ್ರಾಡಿಯೋಲ್.
ಜೈವಿಕ ಕೃಷಿಯ ಮಾನದಂಡವು ಸಂಶ್ಲೇಷಕ ಕ್ರಿಮಿನಾಶಕಗಳ ಬಳಕೆಗೆ ಅವಕಾಶವನ್ನು ನೀಡುವುದಿಲ್ಲ, ಆದರೆ ಸಸ್ಯಗಳಿಂದ ಹುಟ್ಟಿಕೊಂಡ ಕೆಲ ನಿರ್ದಿಷ್ಟ ಕ್ರಿಮಿನಾಶಕಗಳ ಬಳಕೆಗೆ ಅನುಮತಿ ನೀಡುತ್ತದೆ. ಬಹುತೇಕ ಜೈವಿಕ ಮಾನದಂಡಗಳಲ್ಲಿ ನಿರ್ಬಂಧದ ಬಳಕೆಗೆ ಒಪ್ಪಿಕೊಂಡಿರುವ ಸಾಮಾನ್ಯ ಜೈವಿಕ ಕ್ರಿಮಿನಾಶಕಗಳಲ್ಲಿ, Bt, ಪೈರೆಥ್ರಂ, ಹಾಗು ರೊಟೆನೋನ್ ಗಳು ಸೇರಿವೆ. ರೊಟೆನೋನ್, ಮೀನು ಹಾಗು ಜಲಚರಗಳಿಗೆ ಹೆಚ್ಚು ವಿಷಕಾರಿಯಾಗಿದೆ. ಇಲಿಗಳಿಗೆ ಇದನ್ನು ಚುಚ್ಚಿದಾಗ ಪಾರ್ಕಿನ್ಸನ್ ಕಾಯಿಲೆ ಉಂಟಾಗುತ್ತದೆ, ಹಾಗು ಇತರ ಸಸ್ತನಿಗಳಿಗೆ ಬೇರೆ ರೀತಿಯ ವಿಷಕಾರಿಯೆಂದು ತೋರಿಸಲಾಗಿದೆ.[49]
ದಿ ಯುನೈಟೆಡ್ ಸ್ಟೇಟ್ಸ್ ಇನ್ವೈರನ್ಮೆಂಟಲ್ ಪ್ರೊಟೆಕ್ಷನ್ ಏಜೆನ್ಸಿ ಹಾಗು ರಾಜ್ಯದ ಇತರ ಏಜೆನ್ಸಿಗಳು ಕಾಲಾನುಕಾಲಕ್ಕೆ ಸಂದೇಹಾಸ್ಪದ ಕ್ರಿಮಿನಾಶಕಗಳಿಗೆ ನೀಡಿದ ಪರವಾನಗಿಯ ಬಗ್ಗೆ ಮರುಪರೀಕ್ಷೆ ನಡೆಸುತ್ತದೆ, ಆದರೆ ಪಟ್ಟಿಯಿಂದ ಸಂಪೂರ್ಣವಾಗಿ ತೆಗೆದುಹಾಕುವ ಪ್ರಕ್ರಿಯೆಯು ಬಹಳ ನಿಧಾನವಾಗಿದೆ. ನಿಧಾನಗತಿಯ ಈ ಪ್ರಕ್ರಿಯೆಯ ಒಂದು ಉದಾಹರಣೆಯೆಂದರೆ ಕ್ರಿಮಿನಾಶಕವಾದ ಡಿಕ್ಲೋರ್ವೋಸ್, ಅಥವಾ DDVPಯನ್ನು ಇತ್ತೀಚಿನವರೆಗೂ ಅಂದರೆ 2006ರವರೆಗೂ EPA ಅದರ ಮಾರಾಟವನ್ನು ಮುಂದುವರೆಸಲು ಉದ್ದೇಶಿಸಿತ್ತು. EPA, 1970ರಿಂದೀಚೆಗೆ ಹಲವಾರು ಸಂದರ್ಭಗಳಲ್ಲಿ ಈ ಕ್ರಿಮಿನಾಶಕದ ಬಳಕೆಯನ್ನು ಬಹುತೇಕ ನಿಷೇಧಿಸುವ ಹಂತ ತಲುಪಿತ್ತು. ಆದರೆ DDVP ಕೇವಲ ಕ್ಯಾನ್ಸರ್ಜನಕವಷ್ಟೇ ಅಲ್ಲ ಮಾನವನ ನರಮಂಡಲ- ವಿಶೇಷವಾಗಿ ಮಕ್ಕಳಿಗೆ ಅಪಾಯಕಾರಿಯಾಗಿದೆ ಎಂಬ ಗಮನಾರ್ಹವಾದ ಸಾಕ್ಷ್ಯಾಧಾರದ ಹೊರತಾಗಿಯೂ ಅದು ಹಾಗೆ ಮಾಡಲಿಲ್ಲ.[50] EPA "ಆತಂಕದ ಮಟ್ಟಗಳನ್ನು ಅಪಾಯದ ಮಟ್ಟಗಳು ಮೀರಿಲ್ಲ ಎಂದು ನಿರ್ಣಯಿಸಿದೆ"[51], ಒಂದು ಅಧ್ಯಯನದ ಪ್ರಕಾರ ಇಲಿಗಳನ್ನು ದೀರ್ಘಕಾಲ DDVPಗೆ ಒಳಪಡಿಸಿದಾಗ ಯಾವುದೇ ವಿಷಕಾರಿ ಪರಿಣಾಮಗಳು ಕಂಡುಬರಲಿಲ್ಲ.[52]
ಕಳೆದ 2009ರ ಏಪ್ರಿಲ್ನಲ್ಲಿ, ಯುರೋಪಿಯನ್ ಕಮಿಷನ್ ಹಣಕಾಸು ನೆರವು ನೀಡಿದ 5 ವರ್ಷದ ಸಮಗ್ರ ಅಧ್ಯಯನವಾದ ಕ್ವಾಲಿಟಿ ಲೋ ಇನ್ಪುಟ್ ಫುಡ್ (QLIF),[53] "ಜೈವಿಕ ಹಾಗು ಸಾಂಪ್ರದಾಯಿಕ ಕೃಷಿ ವ್ಯವಸ್ಥೆಗಳಲ್ಲಿ ಬೆಳೆಗಳ ಗುಣಮಟ್ಟ ಹಾಗು ಜಾನುವಾರುಗಳ ಉತ್ಪತ್ತಿಗಳು ಗಮನಾರ್ಹವಾಗಿ ವ್ಯತ್ಯಾಸವಾಗಿರುತ್ತದೆ." ಎಂದು ದೃಢಪಡಿಸಿದೆ.[54] ವಿಶೇಷವಾಗಿ, ಬೆಳೆ ಮತ್ತು ಜಾನುವಾರು ಪೌಷ್ಠಿಕತೆ ಗುಣಮಟ್ಟದ ಮೇಲೆ ಜೈವಿಕ ಮತ್ತು ಕಡಿಮೆ ಇಳುವರಿಯ ಕೃಷಿಪದ್ಧತಿಯ ಪರಿಣಾಮಗಳನ್ನು ಅಧ್ಯಯನ ಮಾಡುವ QLIF ಯೋಜನೆಯ ಫಲಿತಾಂಶಗಳು:ಜೈವಿಕ ಆಹಾರ ಉತ್ಪಾದನೆ ವಿಧಾನಗಳಿಂದ (a) ಪೌಷ್ಟಿಕಾಂಶ ತುಂಬಿದ ಸಂಯುಕ್ತಗಳ ಹೆಚ್ಚಿನ ಮಟ್ಟಗಳು (ಉದಾಹರಣೆಗೆ, ವಿಟಮಿನ್ಸ್/ಆಕ್ಸಿಡೀಕಾರಕ ನಿರೋಧಕಗಳು ಹಾಗು ಬಹು ಅಪರ್ಯಾಪ್ತ ಮೇದಸ್ಸಿನ ಆಮ್ಲಗಳಾದ ಒಮೆಗಾ-3 ಹಾಗು ಕಲ ಮುಂತಾದವು)(b)ಪೌಷ್ಟಿಕಾಂಶ ತುಂಬಿದ ಅನಪೇಕ್ಷಣೀಯ ಸಂಯುಕ್ತಗಳ ಕಡಿಮೆ ಮಟ್ಟಗಳು ಉದಾಹರಣೆಗೆ ಭಾರ ಲೋಹಗಳು, ಮೈಕೋಟಾಕ್ಸಿನ್ಸ್, ಕ್ರಿಮಿನಾಶಕಗಳ ಉಳಿಕೆಗಳು ಹಾಗು ಗ್ಲೈಕೋ-ಆಲ್ಕಾಲಾಯ್ಡ್ಸ್ ಬೆಳೆಗಳ ಒಂದು ಗುಂಪಿನಲ್ಲಿ ಹಾಗು/ಅಥವಾ ಹಾಲಿನಲ್ಲಿ; (c) ಹಂದಿಗಳಲ್ಲಿ ವಿಸರ್ಜಿಸುವ ಸಾಲ್ಮೊನೆಲ್ಲ ಅಮೇಧ್ಯ ಅಪಾಯವನ್ನು ಕಡಿಮೆ ಮಾಡುತ್ತದೆ."[55] QLIF ಅಧ್ಯಯನವು "ಜೈವಿಕ ಆಹಾರಕ್ರಮವು ಮಾನವ ಹಾಗು ಪ್ರಾಣಿಗಳ ಆರೋಗ್ಯದ ಮೇಲೆ ಬೀರುವ ಸಕಾರಾತ್ಮಕ ಆರೋಗ್ಯ ಪರಿಣಾಮಗಳ ಬಗ್ಗೆ ಸಾಕ್ಷ್ಯಗಳನ್ನು ಒದಗಿಸುವ ಮತ್ತಷ್ಟು ಹೆಚ್ಚಿನ ಹಾಗು ಅತಿ ವಿಸ್ತೃತ ಅಧ್ಯಯನಗಳ ಅಗತ್ಯವಿದೆಯೆಂಬ" ನಿರ್ಣಯದೊಂದಿಗೆ ಮುಗಿಸಿತು.[56] ಇದಕ್ಕೆ ಪರ್ಯಾಯವಾಗಿ, UKಯ ಫುಡ್ ಸ್ಟ್ಯಾಂಡರ್ಡ್ಸ್ ಏಜೆನ್ಸಿ ಯ ಪ್ರಕಾರ, "ಗ್ರಾಹಕರು ಜೈವಿಕ ಹಣ್ಣು, ತರಕಾರಿಗಳು ಹಾಗು ಮಾಂಸವನ್ನು ಖರೀದಿಸಲು ಆಯ್ಕೆ ಮಾಡಿಕೊಳ್ಳಬಹುದು ಏಕೆಂದರೆ ಅವು ಇತರ ಆಹಾರಕ್ಕಿಂತ ಹೆಚ್ಚಿನ ಪೌಷ್ಟಿಕತೆಯನ್ನು ಹೊಂದಿದೆ ಎಂದು ಭಾವಿಸುತ್ತಾರೆ.
ಆದಾಗ್ಯೂ, ಪ್ರಸಕ್ತ ವೈಜ್ಞಾನಿಕ ಸಂಗತಿಗಳ ತುಲನೆಯು ಈ ಅಭಿಪ್ರಾಯಕ್ಕೆ ಬೆಂಬಲವನ್ನು ನೀಡುವುದಿಲ್ಲ."[57] ಕಳೆದ 2009ರ FSA ನಿಯೋಜಿತ 12-ತಿಂಗಳ ವ್ಯವಸ್ಥಿತ ಪುನರ್ಪರಿಶೀಲನೆ ಹಾಗು ಲಂಡನ್ ಸ್ಕೂಲ್ ಆಫ್ ಹೈಜೀನ್ & ಟ್ರಾಪಿಕಲ್ ಮೆಡಿಸಿನ್ ನಲ್ಲಿ, 50 ವರ್ಷಗಳ ಸಾಕ್ಷ್ಯ ಸಂಗ್ರಹವನ್ನು ಆಧರಿಸಿ ನಡೆಸಿದ ಕಾರ್ಯಕ್ರಮದಲ್ಲಿ "ಜೈವಿಕ ಆಹಾರವು ಪೌಷ್ಟಿಕಾಂಶಕ್ಕೆ ಸಂಬಂಧಿಸಿದಂತೆ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ ಎನ್ನುವುದಕ್ಕೆ ಯಾವುದೇ ಒಂದು ಸರಿಯಾದ ಸಾಕ್ಷ್ಯಗಳಿಲ್ಲವೆಂದು" ತೀರ್ಮಾನಕ್ಕೆ ಬಂದಿತು.[58] ಇತರ ಅಧ್ಯಯನಗಳು ಸಹ, ಜೈವಿಕ ಆಹಾರವು ಹೆಚ್ಚಿನ ಪೌಷ್ಟಿಕಾಂಶದ ಮೌಲ್ಯಗಳನ್ನಾಗಲಿ, ಹೆಚ್ಚಿನ ಗ್ರಾಹಕ ಸುರಕ್ಷತೆಯಾಗಲಿ ಅಥವಾ ರುಚಿಯಲ್ಲಿ ಯಾವುದೇ ವಿಶಿಷ್ಟ ವ್ಯತ್ಯಾಸವನ್ನು ತರುತ್ತದೆಂಬುದರ ಬಗ್ಗೆ ಯಾವುದೇ ಸಾಕ್ಷ್ಯಗಳು ದೊರೆತಿಲ್ಲ ಎಂದು ಹೇಳುತ್ತವೆ.[59][60][61][62]
ರುಚಿಗೆ ಸಂಬಂಧಿಸಿದಂತೆ, ಕಳೆದ 2001ರ ಅಧ್ಯಯನವು, ಜೈವಿಕ ಸೇಬುಗಳು ಗುರುತಿಸಲಾಗದ ಸ್ವಾದ ಪರೀಕ್ಷೆಯಲ್ಲಿ ಸಿಹಿಯಾಗಿದ್ದು ಕಂಡುಬಂತು. ಸಾಂಪ್ರದಾಯಿಕವಾಗಿ ಬೆಳೆದ ಸೇಬುಗಳಿಗಿಂತ ಜೈವಿಕವಾಗಿ ಬೆಳೆದ ಸೇಬುಗಳ ದೃಢತೆಯು ಹೆಚ್ಚೆಂದು ಬೆಲೆ ಕಟ್ಟಲಾಯಿತು.[63] ಆಹಾರ ಸಂರಕ್ಷಕ ಗಳ ಸೀಮಿತ ಬಳಕೆಯಿಂದಾಗಿ ಜೈವಿಕ ಆಹಾರವು ಬೇಗನೆ ಕೆಟ್ಟು ಹೋಗಬಹುದು. ಇನ್ನೊಂದು ಭಾಗದಲ್ಲಿ, ಮಳಿಗೆಗಳಲ್ಲಿ ಇಂತಹ ಆಹಾರಗಳನ್ನು ವಿಸ್ತರಿತ ಸಮಯದವರೆಗೆ ಸಂಗ್ರಹಿಸಿಟ್ಟಿರುವ ಖಾತರಿಯಿಲ್ಲ. ಆಹಾರ ಸಂರಕ್ಷಕಗಳು ರಕ್ಷಿಸುವಲ್ಲಿ ವಿಫಲವಾಗುವ ಪೌಷ್ಟಿಕಾಂಶಗಳು ಬೇಗನೆ ಕೊಳೆಯುವ ಪ್ರಮಾಣ ಇದರಲ್ಲಿ ಹೆಚ್ಚಿರುತ್ತವೆ. ಜೈವಿಕ ಆಹಾರವು ನೈಸರ್ಗಿಕ ಬೈಯೋಟಾಕ್ಸಿನ್ ನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುವ ಸಾಮರ್ಥ್ಯ ಪಡೆದಿರುತ್ತವೆ, ಉದಾಹರಣೆಗೆ ಆಲೂಗೆಡ್ಡೆಯಲ್ಲಿರುವ ಸೋಲಾನಿನ್[64] USDAನ ಪ್ರಕಾರ, ಅಮೆರಿಕನ್ನರು, 2004ರಲ್ಲಿ ಸರಾಸರಿ, $1,347ನಷ್ಟು ಹಣವನ್ನು ದಿನಸಿಯನ್ನು ಕೊಂಡುಕೊಳ್ಳಲು ಖರ್ಚು ಮಾಡಿದರು; ಈ ರೀತಿಯಾಗಿ ಸಂಪೂರ್ಣವಾಗಿ ಜೈವಿಕ ಆಹಾರಕ್ಕೆ ಬದಲಾಯಿಸಿಕೊಂಡರೆ, ಅವರ ದಿನಸಿಗಳ ವೆಚ್ಚವು ವಾರ್ಷಿಕವಾಗಿ $538.80ರಷ್ಟು ಅಧಿಕವಾಗುತ್ತದೆ($44.90/ಮಾಸಿಕ) ಜೊತೆಗೆ ಅರ್ಧದಷ್ಟು ಜೈವಿಕ ಆಹಾರಕ್ಕೆ ಬದಲಾಯಿಸಿಕೊಂಡರೆ ಅವರ ವೆಚ್ಚವು $269.40 ($22.45/ಮಾಸಿಕ)ನಷ್ಟು ಅಧಿಕವಾಗುತ್ತದೆ. ಸಂಸ್ಕರಣಗೊಂಡ ಜೈವಿಕ ಆಹಾರಗಳ ಜೊತೆಗೆ ಸಾಂಪ್ರದಾಯಿಕ ಆಹಾರಗಳನ್ನು ಹೋಲಿಸಿದಾಗ ಬೆಲೆಯಲ್ಲಿ ವ್ಯತ್ಯಾಸಗೊಳ್ಳುತ್ತವೆ. ಕಳೆದ 2004ರಲ್ಲಿ ಚಾಯ್ಸ್ ಮ್ಯಾಗಜಿನ್ ಆಸ್ಟ್ರೇಲಿಯದಲ್ಲಿ ನಡೆಸಿದ ಒಂದು ಅಧ್ಯಯನದ ಪ್ರಕಾರ, ಮಹಾಮಳಿಗೆಗಳಲ್ಲಿ ದೊರಕುವ ಸಂಸ್ಕರಣಗೊಂಡ ಜೈವಿಕ ಆಹಾರವು 65%ನಷ್ಟು ಅಧಿಕ ದುಬಾರಿಯಾಗಿತ್ತು, ಆದರೆ ಇದು ಸ್ಥಿರವಾಗಿರಲಿಲ್ಲವೆಂಬುದನ್ನು ಗಮನಿಸಬೇಕು. ಬೆಲೆಗಳು ದುಬಾರಿಯಾಗಿಬಹುದು ಏಕೆಂದರೆ ಜೈವಿಕ ಉತ್ಪನ್ನಗಳು ಸಣ್ಣ ಪ್ರಮಾಣದಲ್ಲಿ ಉತ್ಪಾದನೆಗೊಳ್ಳುವುದರ ಜೊತೆಗೆ ಪ್ರತ್ಯೇಕವಾಗಿ ಗಿರಣಿಗೆ ಹಾಕುವ ಅಥವಾ ಸಂಸ್ಕರಣೆ ಮಾಡುವ ಅವಶ್ಯಕತೆಯನ್ನು ಹೊಂದಿರುತ್ತವೆ. ಇದಲ್ಲದೆ, ಸ್ಥಳೀಯ ಮಾರುಕಟ್ಟೆಗಳಲ್ಲಿ ಹೆಚ್ಚಿನ ಕೇಂದ್ರೀಕೃತ ಉತ್ಪಾದನೆಯಿಂದ ಹಡಗಿನ ವೆಚ್ಚಗಳು ಅಧಿಕವಾಗಿರುತ್ತದೆ. ಹೈನುಗಾರಿಕೆ ಹಾಗು ಮೊಟ್ಟೆಗಳಿಗೆ ಸಂಬಂಧಿಸಿದಂತೆ, ಪ್ರಾಣಿಗಳ ಅವಶ್ಯಕತೆಗಳು, ಉದಾಹರಣೆಗೆ ಪ್ರತಿ ಎಕರೆಗೆ ಪಾಲನೆ ಮಾಡಬಹುದಾದ ಪ್ರಾಣಿಗಳ ಸಂಖ್ಯೆ, ಅಥವಾ ಪ್ರಾಣಿಯ ತಳಿ ಹಾಗು ಅವುಗಳ ಮೇವು ಪರಿವರ್ತನೆ ಅನುಪಾತವು ವೆಚ್ಚದ ಮೇಲೆ ಪರಿಣಾಮವನ್ನು ಉಂಟುಮಾಡುತ್ತದೆ.
ಜೈವಿಕ ಕೃಷಿಯ ವಿಧಾನ ಬಯೋಡೈನಾಮಿಕ್ ಕೃಷಿ ಯು ಜೈವಿಕ ಆಹಾರ ಬೆಳವಣಿಗೆಗೆ ನಿಕಟವಾಗಿ ಸಂಬಂಧಿಸಿದೆ.
align="center"ಚಿತ್ರ:Australian organic seal.jpg ಆಸ್ಟ್ರೇಲಿಯಾ |
ವಿಶ್ವವ್ಯಾಪಿಯಾಗಿ ಒಟ್ಟಾರೆ ಆಹಾರ ಮಾರಾಟದಲ್ಲಿ ಜೈವಿಕ ಆಹಾರದ ಪಾತ್ರವು 1–2%ನಷ್ಟಿದ್ದು, ಜೈವಿಕ ಆಹಾರದ ಮಾರುಕಟ್ಟೆಯು, ಮುಂದುವರಿದ ಹಾಗು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಇತರ ಆಹಾರ ಉದ್ಯಮಕ್ಕಿಂತ ಶೀಘ್ರವಾಗಿ ಬೆಳವಣಿಗೆಯನ್ನು ಹೊಂದುತ್ತಿದೆ.
ಕಳೆದ 2002ರಲ್ಲಿ[65] USನಲ್ಲಿ $23 ಶತಕೋಟಿ ಯಷ್ಟಿದ್ದ ವಿಶ್ವದ ಜೈವಿಕ ಆಹಾರದ ವ್ಯಾಪಾರವು 2008ರಲ್ಲಿ $52 ಶತಕೋಟಿಗೆ ಜಿಗಿಯಿತು.[66]
ಅಮೆರಿಕಾದ ಆಹಾರ ಮಾರುಕಟ್ಟೆ ಕ್ಷೇತ್ರದಲ್ಲಿ ಜೈವಿಕ ಆಹಾರವು ಅತ್ಯಂತ ಶೀಘ್ರವಾಗಿ ಬೆಳವಣಿಗೆ ಹೊಂದುತ್ತಿದೆ[67].
ಯುರೋಪಿಯನ್ ಒಕ್ಕೂಟ (EU25)ಒಟ್ಟಾರೆ 3.9%ನಷ್ಟು ಬಳಕೆಯಾಗುವ ಕೃಷಿ ಭೂಮಿಯನ್ನು ಜೈವಿಕ ಆಹಾರ ಉತ್ಪಾದನೆಗೆ ಬಳಸಿಕೊಳ್ಳುತ್ತಿದೆ. ಅತ್ಯಧಿಕ ಪ್ರಮಾಣದ ಜೈವಿಕ ನೆಲವನ್ನು ಹೊಂದಿರುವ ರಾಷ್ಟ್ರಗಳೆಂದರೆ ಆಸ್ಟ್ರಿಯಾ(11%) ಹಾಗು ಇಟಲಿ(8.4), ನಂತರದ ಸ್ಥಾನವನ್ನು ಜೆಕ್ ರಿಪಬ್ಲಿಕ್ ಹಾಗು ಗ್ರೀಸ್ (ಎರಡೂ 7.2%) ರಾಷ್ಟ್ರಗಳು ಆಕ್ರಮಿಸಿಕೊಂಡಿವೆ. ಈ ಕೃಷಿಗಾಗಿ ಅತ್ಯಂತ ಕಡಿಮೆ ಭೂಮಿಯ ಅಂಕಿಅಂಶಗಳನ್ನು ಮಾಲ್ಟ (0.1%), ಪೋಲಂಡ್ (0.6%) ಹಾಗು ಐರ್ಲ್ಯಾಂಡ್(0.8%)ದೇಶಗಳು ಹೊಂದಿವೆ[75]
ಕಳೆದ 2007ರಲ್ಲಿ, 11.6%ರಷ್ಟು ರೈತರ ಎಲ್ಲ ಉತ್ಪಾದನೆಯು ಜೈವಿಕವಾಗಿದ್ದವು.[76] ಸರಕಾರವು 2010ರ ಹೊತ್ತಿಗೆ ಜೈವಿಕ ಉತ್ಪಾದನೆಯನ್ನು 20%ನಷ್ಟು ಹೆಚ್ಚಿಸುವ ಸಲುವಾಗಿ ಪ್ರೋತ್ಸಾಹ ಧನವನ್ನು ನಿಗದಿಪಡಿಸಿದೆ.[77]
ಜೈವಿಕ ಒಲಿಂಪಿಯಾಡ್ 2007ರಲ್ಲಿ ಹನ್ನೆರೆಡು ಸೂತ್ರಗಳನ್ನು ಆಧರಿಸಿ, ಜೈವಿಕತೆಯಲ್ಲಿ ಮುಂದುವರೆದ ರಾಷ್ಟ್ರಗಳಿಗೆ, ಸ್ವರ್ಣ, ರಜತ ಹಾಗು ಕಂಚಿನ ಪದಕಗಳನ್ನು ನೀಡಲಾಯಿತು.[87] . ಸ್ವರ್ಣ ಪದಕ ವಿಜೇತರು:
ದಿ ಫ್ಯೂಚರ್ ಆಫ್ ಫುಡ್ (ಕುಲಾಂತರಿ ತಳಿ ಆಹಾರದ ಜೊತೆಗೆ ಜೈವಿಕ ಆಹಾರದ ಬಗ್ಗೆ ಒಂದು ಭಾಗವನ್ನು ಒಳಗೊಂಡ ಒಂದು ಸಾಕ್ಷ್ಯಚಿತ್ರ)
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.