ಸ್ತ್ರೀ
ಸ್ತ್ರೀ ವಯಸ್ಕ ಮಾನವ / From Wikipedia, the free encyclopedia
ಸ್ತ್ರೀ ಅಥವಾ ಮಹಿಳೆ ಪದವು ಸಂಸ್ಕೃತದ್ದು, ಕನ್ನಡದಲ್ಲಿ ಈ ಪದಕ್ಕೆ 'ಹೆಣ್ಣು' ಎಂಬ ಅರ್ಥವಿದೆ. ಇದು ನಾಗರಿಕ ಗೌರವದ ಮತ್ತು ಪುರುಷ ಪದದ ಸಮಾನ ಪದವಾಗಿದ್ದು ವಯಸ್ಕ ಹೆಣ್ಣನ್ನು ಸೂಚಿಸಲು ಉಪಯೋಗಿಸಲಾಗುತ್ತದೆ. ಆದಿಯಿಂದಲೂ ಸೃಷ್ಟಿಯ ಮೂಲ ಸ್ತ್ರೀ[1]ಯಾಗಿದ್ದಾಳೆ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಸ್ತ್ರೀಗೆ ಅವಳದೇ ಆದ ಗೌರವ, ಸ್ಥಾನಮಾನಗಳಿರುವುದನ್ನು ಗುರುತಿಸಬಹುದಾಗಿದೆ. ಸ್ತ್ರೀ[2] ಅವಿನಾಶಿ, ಸಂಜೀವಿನಿ. ಹೆಣ್ಣು ವಿಶಿಷ್ಟ ಶಕ್ತಿಗಳ ಸಂಗಮ. ಮಮತೆ, ಕರುಣೆ, ವಾತ್ಸಲ್ಯ, ಅಕ್ಕರೆ ಮತ್ತು ಭೂಮಿತೂಕದ ತಾಳ್ಮೆಯುಳ್ಳ ಸ್ತ್ರೀ ಒಂದು ಪ್ರಬಲ ಶಕ್ತಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಮಹಿಳೆಯ[3][4] ಜಾಯಮಾನ ಪುರುಷನ ಜಾಯಮಾನಕ್ಕಿಂತ ಭಿನ್ನವಾದದ್ದು. ಮಹಿಳೆಯನ್ನು ಹಿಂದಿನಿಂದಲೂ ಅಬಲೆಯೆಂದೇ ಕಡೆಗಣಿಸಲಾಗುತ್ತಿತ್ತು. ಮಾನವರಲ್ಲಿ ಗಂಡು ಅಥವಾ ಹೆಣ್ಣು ಎಂಬ, ನಿಸರ್ಗಬದ್ಧವಾಗಿ ಅಂಗಾಂಗ ವಿನ್ಯಾಸದಲ್ಲಿ ಭಿನ್ನತೆಯ ದೇಹಧಾರಣೆಯಾಗುತ್ತದೆ. ಹೆಣ್ಣು ಮತ್ತು ಗಂಡು ಎಂಬ ಜೈವಿಕ ಲಕ್ಷಣಗಳು ವ್ಯಕ್ತಿಯ ಹುಟ್ಟಿನಿಂದಲೇ ನಿರ್ಧರವಾಗುತ್ತದೆ. ಬಾಹ್ಯ ಶರೀರdjdvjegsvhhsc
ರಚನೆ ಹಾಗೂ ಸಂತಾನೋತ್ಪತಿಯ ಕ್ರಿಯೆಗಳಲ್ಲಿ ಹೆಣ್ಣು ಹಾಗು ಗಂಡು ವಿಶೇಷವಾದ ಗುಣಗಳನ್ನು ಹೊಂದಿದ್ದಾರೆ.
ಈ ಲೇಖನ ಅಥವಾ ವಿಭಾಗವನ್ನು ಮಾರ್ಗದರ್ಶಿ ವಿನ್ಯಾಸ ಮತ್ತು ಕೈಪಿಡಿಯ ಶೈಲಿ ಪುಟಗಳಲ್ಲಿ ಸೂಚಿಸಿರುವಂತೆ ವಿಕೀಕರಣ (format) ಮಾಡಬೇಕಿದೆ. ವಿಕೀಕರಣದ ನಂತರ ಈ ಟೆಂಪ್ಲೇಟನ್ನು ತೆಗೆದುಹಾಕಿ. |
ಈ ಲೇಖನವನ್ನು ವಿಕಿಪೀಡಿಯದ ಗುಣಮಟ್ಟ ಮಾನದಂಡಗಳಿಗೆ ಸರಿಹೊಂದುವಂತೆ ಚೊಕ್ಕಗೊಳಿಸಬೇಕಿದೆ. ಇದರಲ್ಲಿನ ನಿರ್ದಿಷ್ಟ ದೋಷ ಇಂತಿದೆ: ಪ್ರಬಂಧ ಮಾದರಿ ಲೇಖನ. |