ಇಸ್ರೇಲ್
From Wikipedia, the free encyclopedia
ಇಸ್ರೇಲ್ (יִשְׂרָאֵל, ಯಿಸ್ರೆಇಲ್), ಅಧಿಕೃತವಾಗಿ ಇಸ್ರೇಲ್ ರಾಜ್ಯ (מְדִינַת יִשְׂרָאֵל, ಮೆದೀನತ್ ಯಿಸ್ರೇಎಲ್; دَوْلَةْ إِسْرَائِيل, ದವ್ಲತ್ ಇಸ್ರೇಇಲ್), ಮೆಡಿಟೆರೇನಿಯ ಸಮುದ್ರದ ಆಗ್ನೇಯಕ್ಕೆ ಇರುವ ಪಶ್ಚಿಮ ಏಷ್ಯಾದ ಒಂದು ದೇಶ. ಉತ್ತರಕ್ಕೆ ಲೆಬನನ್, ಪೂರ್ವಕ್ಕೆ ಸಿರಿಯ ಮತ್ತು ಜಾರ್ಡನ್, ನೈರುತ್ಯಕ್ಕೆ ಸಂಯುಕ್ತ ಅರಬ್ ಗಣರಾಜ್ಯ ಈಜಿಪ್ಟ್ ದೇಶಗಳೊಂದಿಗೆ ಗಡಿಯನ್ನು ಇಸ್ರೇಲ್ ಹೊಂದಿದೆ. ಪ್ಯಾಲೆಸ್ತೈನ್ ರಾಷ್ಟ್ರೀಯ ಪ್ರಾಧಿಕಾರ ಆಡಳಿತ ನಡೆಸುವ ಪಶ್ಚಿಮ ದಂಡೆ ಮತ್ತು ಗಾಜಾ ಪಟ್ಟಿ ಕೂಡ ಪಕ್ಕದಲ್ಲಿ ಇವೆ. ಇದು ಪ್ರಪಂಚದ ಏಕೈಕ ಯಹೂದಿ ರಾಷ್ಟ್ರ. ಇಸ್ರೇಲ್ ಬೈಬಲಿನ ಕಾಲದಲ್ಲಿ ಯೆಹೂದಿ ಜನಸಮುದಾಯದ ಹೆಸರಾಗಿದ್ದು ಮುಂದೆ ಹೀಬ್ರೂ ರಾಜ್ಯಕ್ಕೂ ಇದೇ ಅಂಕಿತವಾಯಿತು. ಈ ಗಣರಾಜ್ಯವು 1948ರ ಮೇ 15ರಂದು ಅಸ್ತಿತ್ವಕ್ಕೆ ಬಂತು. . 1948ರ ವರೆಗೆ ಬ್ರಿಟಿಷ್ ರಕ್ಷಿತ ಪ್ರದೇಶವಾಗಿದ್ದ ಪ್ಯಾಲಿಸ್ಟೈನಿನ ಬಹುಭಾಗವೀಗ ಇಸ್ರೇಲಿನ ಭೂಭಾಗ. ವಿಸ್ತೀರ್ಣ 7,999 ಚ. ಮೈ. 1961ರ ಜನಗಣತಿಯ ಪ್ರಕಾರ ಪ್ರಜಾಸಂಖ್ಯೆ 21,79,491 ; ಇವರಲ್ಲಿ 19,32,357 ಜನ ಯೆಹೂದ್ಯರು ; 1,70,830 ಮಂದಿ ಮುಸ್ಲಿಮರು ; 50,543 ಕ್ರೈಸ್ತರು ; 24,282 ಮಂದಿ ಡ್ರೂಸ್ ಜನರು. ರಾಜಧಾನಿ ಜೆರೂಸಲೆಂ.
| |||||
---|---|---|---|---|---|
Anthem: Hatikvah The Hope | |||||
Capital | ಜೆರೂಸಲೆಮ್ | ||||
Largest city | ರಾಜಧಾನಿ | ||||
Official languages | ಹೀಬ್ರೂ, ಅರಬಿಕ್ | ||||
Demonym(s) | Israeli | ||||
Government | ಸಂಸದೀಯ ಪ್ರಜಾತಂತ್ರ[1] | ||||
• ರಾಷ್ಟ್ರಪತಿ | ಶಿಮೊನ್ ಪೆರೆಸ್ | ||||
• ಪ್ರಧಾನ ಮಂತ್ರಿ | ಬೆನ್ಯಮಿನ್ ನೆತನ್ಯಾಹು | ||||
• ಹಂಗಾಮಿ ಪ್ರಧಾನಮಂತ್ರಿ | ತ್ಜೀಪಿ ಲಿವ್ನಿ | ||||
ಸ್ವಾತಂತ್ರ್ಯ | |||||
• ಘೋಷಣೆ | ಮೇ ೧೪, ೧೯೪೮ | ||||
• Water (%) | ~2% | ||||
Population | |||||
• ೨೦೦೭ estimate | 8,134,100[2] (96th) | ||||
• ೧೯೯೫ census | 5,548,523 | ||||
GDP (PPP) | ೨೦೦೬ estimate | ||||
• Total | $170.3 billion[3] (53rd) | ||||
• Per capita | $26,800[4] (37th) | ||||
Gini (೨೦೦೫) | 38.6[1] Error: Invalid Gini value | ||||
HDI (೨೦೦೬) | 0.927 very high · 23rd | ||||
Currency | ಹೊಸ ಇಸ್ರೇಲಿ ಶೆಖೆಲ್ (₪) (NIS) | ||||
Time zone | UTC+2 (Israel Standard Time) | ||||
• Summer (DST) | UTC+3 | ||||
Calling code | 972 | ||||
Internet TLD | .il | ||||
|