ಕಾರ್ಪೊರೇಟ್ ಕಾನೂನು
From Wikipedia, the free encyclopedia
ಕಾರ್ಪೊರೇಟ್ ತಂತ್ರಗಾರಿಕೆ ಒಂದು ( "ಕಂಪನಿ"ಅಥವಾ "ಸಂಸ್ಥೆ"ಗಳ ಕಾನೂನು) ಆಧುನಿಕ ಜಗತ್ತಿನಲ್ಲಿರುವ ಅತ್ಯಂತ ಪ್ರಧಾನ ರೀತಿಯ ವ್ಯವಹಾರ ಉದ್ಯಮಗಳ ಕಾನೂನಾಗಿದೆ. ಕಾರ್ಪೊರೇಟ್ ಕಾನೂನು ಎಂಬುದು ಷೇರುದಾರರು, ನಿರ್ದೇಶಕರು, ನೌಕರರು, ಸಾಲದಾತರು, ಹಾಗು ಗ್ರಾಹಕರುಸಮೂದಾಯ ದಂತಹ ಇತರ ಮಧ್ಯಸ್ಥಗಾರರು ಮತ್ತು ಪರಿಸರ , ವ್ಯವಹಾರ ಸಂಸ್ಥೆಯ ಆಂತರಿಕ ನಿಯಮಗಳಡಿಯಲ್ಲಿ ಹೇಗೆ ಪರಸ್ಪರ ಕಾರ್ಯನಿರ್ವಹಿಸುತ್ತಾರೆ ಎನ್ನುವುದರ ಅಧ್ಯಯನವಾಗಿದೆ. ಕಾರ್ಪೊರೇಟ್ ಕಾನೂನು ಎಂಬುದು ದೊಡ್ಡ ಕಂಪನಿಗಳ ಕಾನೂನಿನ ಭಾಗವಾಗಿದೆ(ಅಥವಾ ವ್ಯಾಪಾರ ಸಂಸ್ಥೆಗಳ ಕಾನೂನಾಗಿದೆ). ಇತರ ರೀತಿಯ ವ್ಯಾಪಾರ ಸಂಸ್ಥೆಗಳು ಪಾಲುದಾರಿಕೆಗಳನ್ನು (ಬಹುಪಾಲು ಕಾನೂನು ಸಂಸ್ಥೆ ಗಳಂತೆ), ಅಥವಾ ದತ್ತಿಸಂಸ್ಥೆ (ಪಿಂಚಣಿ ನಿಧಿಯ ರೀತಿ) ಅಥವಾ ಖಾತರಿಯ ಮೇಲೆ ಸೀಮಿತ ಕಂಪನಿಗಳು (ಕೆಲವು ವಿಶ್ವವಿದ್ಯಾನಿಲಯಗಳು ಅಥವಾ ದತ್ತಿಸಂಸ್ಥೆಗಳ ರೀತಿ) ಒಳಗೊಳ್ಳಬಹುದು. ಕಾರ್ಪೊರೇಟ್ ಕಾನೂನು ದೊಡ್ಡ ವ್ಯವಹಾರಗಳಿಗೆ ಸಂಬಂಧಿಸಿದ್ದಾಗಿದೆ, ಇದು ಪ್ರತ್ಯೇಕವಾದ ಕಾನೂನು ಬದ್ಧ ಅಸ್ತಿತ್ವವಾಗಿದ್ದು, ಅದರ ಸದಸ್ಯರು ಅಥವಾ ಷೇರುದಾರರಿಗೆ ಸೀಮಿತ ಹೊಣೆಯ ಪರಿಕಲ್ಪನೆ ಅಥವಾ ಅಪರಿಮಿತ ಹೊಣೆಯ ಪರಿಕಲ್ಪನೆಯನ್ನು ಹೊಂದಿದೆ. ನಿರ್ದೇಶಕರ ಮಂಡಳಿಯ ಕಾರ್ಯವನ್ನು ಅವಲಂಬಿಸಿ ಇವರು ಅವರ ಸ್ಟಾಕ್ಗಳನ್ನು ಕೊಂಡುಕೊಳ್ಳುತ್ತಾರೆ ಮತ್ತು ಮಾರಾಟಮಾಡುತ್ತಾರೆ. ಇದು ಸಂಘಟಿತ ಸಂಸ್ಥೆ ಅಥವಾ ಸಂಯುಕ್ತ ಸಂಸ್ಥೆ ಅಥವಾ ಸಾರ್ವಭೌಮ ರಾಷ್ಟ್ರದ ಅಥವಾ ಅದರ ಆಳಿತಾತ್ಮಕ ವಿಭಾಗಗಳ ಕಂಪನಿ ಕಾನೂನಿನಡಿಯಲ್ಲಿ ಸಂಘಟಿತವಾದ ಅಥವಾ ನೊಂದಾಯಿಸಲಾದ ವ್ಯವಹಾರ ಸಂಸ್ಥೆಗಳೊಡನೆ ವ್ಯವಹರಿಸುತ್ತದೆ. ಆಧುನಿಕ ಸಂಸ್ಥೆಯನ್ನು ವ್ಯಾಖ್ಯಾನಿಬಹುದಾದ ನಾಲ್ಕು ಪ್ರಮುಖ ಗುಣಲಕ್ಷಣಗಳು ಈ ಕೆಳಕಂಡಂತಿವೆ:[1]
- ಸಂಸ್ಥೆಯ ಪ್ರತ್ಯೇಕವಾದ ಕಾನೂನು ಬದ್ಧ ವ್ಯಕ್ತಿತ್ವ(ಮೊಕದ್ದಮೆ ಹೂಡುವ ಹಕ್ಕಿರುತ್ತದೆ ಹಾಗು ಅದರದೇ ಹೆಸರಿನಲ್ಲಿ ಮೊಕದ್ದಮೆ ಹೂಡಬಲ್ಲದು, ಉದಾಹರಣೆಗೆ ಕಾನೂನು, ಕಂಪನಿಯನ್ನು ಮನುಷ್ಯನಂತೆ ನಡೆಸಿಕೊಳ್ಳುತ್ತದೆ)
- ಷೇರುದಾರನ ಸೀಮಿತ ಬಾಧ್ಯತೆ (ಇದರಿಂದಾಗಿ ಕಂಪನಿಯು ದಿವಾಳಿಯಾದಾಗ, ಅವರು ತಮ್ಮ ಹೆಸರಿನಲ್ಲಿರುವ ಷೇರುಗಳಿಗೆ ಮಾತ್ರ ಹಣ ಪಡೆಯುತ್ತಾರೆ.)
- ಷೇರುಗಳ ವಿನಿಮಯ (ಸಾಮಾನ್ಯವಾಗಿ ಪಟ್ಟಿಮಾಡಲಾದ ಷೇರು ವಿನಿಮಯ ಕೇಂದ್ರದಲ್ಲಿ, ಉದಾಹರಣೆಗೆ ಲಂಡನ್ ಷೇರು ವಿನಿಮಯ, ನ್ಯೂಯಾರ್ಕ್ ಷೇರು ವಿನಿಮಯ ಅಥವಾ ಪ್ಯಾರಿಸ್ ನಲ್ಲಿ ಯುರೊನೆಕ್ಸ್ಟ್)
- ನಿಯೋಜಿತ ನಿರ್ವಹಣೆ, ಇತರ ಮಾತಿನಲ್ಲಿ ಹೇಳಬೇಕೆಂದರೆ, ಕಂಪನಿಯ ನಿಯಂತ್ರಣವು ನಿರ್ದೇಶಕರ ಮಂಡಳಿಯ ಹಿಡಿತದಲ್ಲಿರುತ್ತದೆ.
ಅಭಿವೃದ್ಧಿ ಹೊಂದಿದ ಬಹುಪಾಲು ರಾಷ್ಟ್ರಗಳಲ್ಲಿ, ಇಂಗ್ಲೀಷ್ ಭಾಷೆಯನ್ನು ಮಾತನಾಡುವ ಪ್ರಪಂಚವನ್ನು ಹೊರತುಪಡಿಸಿ, ಕಂಪನಿಯ ಕಾರ್ಯವಿಧಾನವನ್ನು "ಸಹ ನಿರ್ಧಾರ" ಮಾಡಲು ಕಂಪನಿಯ ಮಂಡಳಿಗಳನ್ನು , ಷೇರುದಾರರ ಮತ್ತು ನೌಕರರ ಪ್ರತಿನಿಧಿಗಳಾಗಿ ನೇಮಿಸಲಾಗುತ್ತದೆ. ಕಾರ್ಪೊರೇಟ್ ಕಾನೂನನ್ನು ಹೆಚ್ಚಾಗಿ ಕಾರ್ಪೊರೇಟ್ ಆಡಳಿತ (ಇದು ಸಂಸ್ಥೆಯೊಳಗಿನ ಅನೇಕ ಅಧಿಕಾರ ವ್ಯವಹಾರಗಳಿಗೆ ಸಂಬಂಧಿಸಿದೆ) ಹಾಗು ಕಾರ್ಪೊರೇಟ್ ಹಣಕಾಸಿನ ಆಡಳಿತ (ಇದು ಬಂಡವಾಳವನ್ನು ಹೇಗೆ ಬಳಸಿಕೊಳ್ಳಬೇಕೆಂಬ ನಿಯಮಗಳಿಗೆ ಸಂಬಂಧಿಸಿದೆ) ವೆಂದು ವಿಂಗಡಿಸಲಾಗುತ್ತದೆ.