From Wikipedia, the free encyclopedia
ಕ್ಯಾರೀಫೂರ್ ಎಸ್.ಎ. (Euronext: CA) (French pronunciation: [kaʁfuʁ]) ಫ್ರೆಂಚ್ ಅಂತರರಾಷ್ಟ್ರೀಯ ವ್ಯಾಪಾರ ಮಹಾಮಳಿಗೆ ಸಮೂಹ. ಇದರ ಪ್ರಧಾನ ಕಾರ್ಯಸ್ಥಳವು ಫ್ರಾನ್ಸ್ [2] ದೇಶದ ಲೆವಲೊಯಿ-ಪೆರೆಟ್ನಲ್ಲಿದೆ. ಗಾತ್ರದ ವಿಚಾರದಲ್ಲಿ ಕ್ಯಾರೀಫೂರ್ ವಿಶ್ವದ ಅತಿದೊಡ್ಡ ವ್ಯಾಪಾರ ಮಹಾಮಳಿಗೆಯಾಗಿದೆ. ಆದಾಯದ ವಿಚಾರದಲ್ಲಿ ಇದು ವಿಶ್ವದಲ್ಲಿ ಎರಡನೆಯ ಅತಿದೊಡ ವ್ಯಾಪಾರ ಉದ್ದಿಮೆಯಾಗಿದೆ. ವಾಲ್-ಮಾರ್ಟ್ ಮತ್ತು ಟೆಸ್ಕೊ ನಂತರ, ಕ್ಯಾರೀಫೂರ್ ಮೂರನೆಯ ಅತಿ ಹೆಚ್ಚು ಲಾಭ ಗಳಿಸುವ ಮಹಾಮಳಿಗೆಯಾಗಿದೆ. ಕ್ಯಾರೀಫೂರ್ ತನ್ನ ವ್ಯಾಪಾರ ಮಹಾಮಳಿಗೆಗಳನ್ನು ಮುಖ್ಯವಾಗಿ ಯುರೋಪ್, ಅರ್ಜೆಂಟೀನಾ, ಬ್ರೆಜಿಲ್, ಚೀನಾ, ಕೊಲೊಂಬಿಯಾ ಹಾಗೂ ಡೊಮಿನಿಕನ್ ಗಣರಾಜ್ಯಗಳಲ್ಲಿ ನಡೆಸುತ್ತದೆ. ಅಲ್ಲದೆ, ಅದರ ಕೆಲವು ಮಳಿಗೆಗಳು ಉತ್ತರ ಆಫ್ರಿಕಾ ಮತ್ತು ಏಷ್ಯಾದ ಕೆಲವು ಭಾಗಗಳಲ್ಲಿಯೂ ಇವೆ. ಫ್ರೆಂಚ್ ಭಾಷೆಯಲ್ಲಿ ಕ್ಯಾರೀಪೂರ್ ಎಂದರೆ 'ಅಡ್ಡದಾರಿಗಳು' ಎಂದರ್ಥ.
ಚಿತ್ರ:Groupe Carrefour.svg | |
ಸಂಸ್ಥೆಯ ಪ್ರಕಾರ | Société Anonyme (Euronext: CA) |
---|---|
ಸ್ಥಾಪನೆ | 1957 |
ಮುಖ್ಯ ಕಾರ್ಯಾಲಯ | Levallois-Perret, ಫ್ರಾನ್ಸ್ |
ಪ್ರಮುಖ ವ್ಯಕ್ತಿ(ಗಳು) | Lars Olofsson (CEO), Amaury de Sèze (Chairman) |
ಉದ್ಯಮ | Retail |
ಸೇವೆಗಳು | Discount, grocery and convenience stores, cash and carry, hypermarkets |
ಆದಾಯ | €85.96 billion (2009)[1] |
ಆದಾಯ(ಕರ/ತೆರಿಗೆಗೆ ಮುನ್ನ) | €1.705 billion (2009)[1] |
ನಿವ್ವಳ ಆದಾಯ | €385 million (2009)[1] |
ಉದ್ಯೋಗಿಗಳು | over 495,000 (2009)[1] |
ಉಪಸಂಸ್ಥೆಗಳು | See below |
ಜಾಲತಾಣ | www.carrefour.com |
ಮೊಟ್ಟಮೊದಲ ಕ್ಯಾರೀಫೂರ್ ಅಂಗಡಿಯು 1957ರ ಜೂನ್ 3ರಂದು ಹೊರವಲಯದ ಆನೆಸಿಯಲ್ಲಿ ಅಡ್ಡದಾರಿಗಳ (ಫ್ರೆಂಚ್ ಭಾಷೆಯಲ್ಲಿ [carrefour] Error: {{Lang}}: text has italic markup (help)) ಹತ್ತಿರ ಸ್ಥಾಪಿತವಾಯಿತು. ಮಾರ್ಸೆಲ್ ಫೂರ್ನಿಯರ್, ಡೆನಿಸ್ ಡೆಫೊರೆ ಮತ್ತು ಜ್ಯಾಕ್ಸ್ ಡೆಫೊರೆ ಈ ಸಂಕೀರ್ಣವನ್ನು ಸ್ಥಾಪಿಸಿದರು. ಮೊಟ್ಟಮೊದಲು ಅಂಗಡಿಯಾಗಿದ್ದ ಇದು ಕ್ರಮೇಣ ಸರಪಳಿಯಾಗಿ ಬೆಳೆಯಿತು. ಫ್ರೆಂಚ್ ಮಾರುಕಟ್ಟೆಯಲ್ಲಿ ಅದರ ಪ್ರಮುಖ ಪ್ರತಿಸ್ಪರ್ಧಿಗಳಲ್ಲಿ ಒಂದಾದ ಪ್ರೊಮೊಡೆಸ್ (ಇದು ಕಾಂಟಿನೆಂಟ್ ಎಂದೂ ಪರಿಚಿತವಾಗಿದೆ) ಒಂದಿಗೆ ಕ್ಯಾರೀಫೂರ್ 1999ರಲ್ಲಿ ವಿಲೀನವಾಯಿತು.
ಮಾರ್ಸೆಲ್ ಫೂರ್ನಿಯರ್, ಡೆನಿಸ್ ಡಿಫೊರೆ ಮತ್ತು ಜ್ಯಾಕ್ಸ್ ಡೆಫೊರೆ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಹಲವು ವಿಚಾರಗೋಷ್ಠಿಗಳಲ್ಲಿ ಹಾಜರಾಗಿದ್ದರು. ಆಧುನಿಕ ವಿತರಣಾ ಕ್ಷೇತ್ರದ ಪಿತಾಮಹ ಎನ್ನಲಾದ ಬರ್ನಾರ್ಡೊ ಟ್ರುಜಿಲೊ ಈ ವಿಚಾರಗೋಷ್ಠಿಗಳಲ್ಲಿ ಪ್ರಧಾನ ಪಾತ್ರ ವಹಿಸಿದ್ದರು. ಇತರೆ ಪ್ರಸಿದ್ಧ ಫ್ರೆಂಚ್ ಕಾರ್ಯನಿರ್ವಾಹಕರಾದ ಎಡ್ವರ್ಡ್ ಲೆಕ್ಲರ್ಕ್ (ಇ. ಲೆಕ್ಲರ್ಕ್), ಗೆರಾರ್ಡ್ ಮುಲಿಯೆಜ್ (ಆಚಾನ್), ಪಾಲ್ ಡುಬ್ರುಲ್ (ಅಕೋರ್) ಹಾಗೂ ಗೆರಾರ್ಡ್ ಪೆಲಿಸನ್ (ಅಕೋರ್) ಮೇಲೆ ಬರ್ನಾರ್ಡೊ ಟ್ರುಜಿಲೊ ಪ್ರಭಾವ ಬೀರಿದ್ದರು. 'No parking, no business'(ನೋ ಪಾರ್ಕಿಂಗ್,ನೋ ಬಿಸಿನೆಸ್) ಎಂಬುದು ಅವರ ಧ್ಯೇಯವಾಕ್ಯವಾಗಿತ್ತು.
ಕ್ಯಾರೀಫೂರ್ ಗ್ರೂಪ್ ಮೊಟ್ಟಮೊದಲ ಬಾರಿಗೆ 'ಒಂದೇ ಸೂರಿನಡಿ ವ್ಯಾಪಾರ ಮಹಾಮಳಿಗೆ'[dubious ], 'ದೊಡ್ಡ ಪ್ರಮಾಣದ ಮಹಾಮಾರುಕಟ್ಟೆ' ಮತ್ತು 'ವಿವಿಧ ಸರಕುಗಳ ಅಂಗಡಿ'ಯ ಪರಿಕಲ್ಪನೆಯನ್ನು ಪರಿಚಯಿಸಿತು. ಫ್ರಾನ್ಸ್ ದೇಶದ ರಾಜಧಾನಿ ಪ್ಯಾರಿಸ್ ಬಳಿ ಸೇಂಟ್-ಜೆನಿವಿಯೆವ್-ಡೆ-ಬೊಯಿಯಲ್ಲಿ ತನ್ನ ಮೊಟ್ಟಮೊದಲ ವ್ಯಾಪಾರ ಮಹಾಮಳಿಗೆಯನ್ನು 1963ರ ಜೂನ್ 15ರಂದು ಆರಂಭಿಸಿತು.[3] thumb|250px|ಕ್ಯಾರೀಫೂರ್ನ ವಹಿವಾಟಿನ ಲಾಂಛನ
1976ರ ಏಪ್ರಿಲ್ ತಿಂಗಳಲ್ಲಿ, ಕ್ಯಾರೀಫೂರ್ Produits libres (ಪ್ರಾಡ್ಯುಟ್ಸ್ ಲಿಬ್ರ್) (ಅರ್ಥ: ಉಚಿತ ಉತ್ಪನ್ನಗಳು) ಎಂಬ ತಮ್ಮದೇ ಖಾಸಗಿ ಮುದ್ರೆಯಡಿ ಉತ್ಪನ್ನಗಳನ್ನು ಪರಿಚಯಿಸಿತು ('ಉಚಿತ ಉತ್ಪನ್ನಗಳು' -- ಲಿಬ್ರ್ ಎಂದರೆ ಸ್ವಾತಂತ್ರ್ಯ ದ ದೃಷ್ಟಿಯಿಂದ 'ಉಚಿತ' ಎಂದರ್ಥ. ಇದು gratis (ಗ್ರ್ಯಾಟಿಸ್) ಎಂಬುದಕ್ಕೆ ತದ್ವಿರುದ್ಧವಾಗಿದೆ). ಪ್ರಾಡ್ಯೂಟ್ ಲಿಬ್ರ್ ಹೆಸರಿನಡಿ ಖಾದ್ಯ ತೈಲಗಳು, ಕ್ರ್ಯಾಕರ್ ಮತ್ತು ಕುಕೀ ಬಿಸ್ಕಟ್ಗಳು, ಹಾಲು ಹಾಗೂ ಪ್ಯಾಸ್ಟಾ ಸೇರಿದಂತೆ ಐವತ್ತು ಖಾದ್ಯಪದಾರ್ಥಗಳು ವ್ಯಾಪಾರಮುದ್ರೆಯಿಲ್ಲದ ಬಿಳಿ ಬಣ್ಣದ ಪೊಟ್ಟಣಗಳಲ್ಲಿ ಅಗ್ಗ ಬೆಲೆಯಲ್ಲಿ ಮಾರಾಟವಾಗುತ್ತಿದ್ದವು.
2009ರ ಸೆಪ್ಟೆಂಬರ್ ತಿಂಗಳಲ್ಲಿ ಕ್ಯಾರೀಫೂರ್ ತನ್ನ ಲಾಂಛನವನ್ನು ನವೀಕರಿಸಿತು.[4]
ದೇಶ | ಮೊದಲ ಅಂಗಡಿ | ವ್ಯಾಪಾರ ಮಹಾಮಳಿಗೆಗಳು | ದೊಡ್ಡ ಅಂಗಡಿಗಳು | ಹಾರ್ಡ್ ಡಿಸ್ಕೌಂಟರ್ಸ್ |
---|---|---|---|---|
ಚೀನಾ | 1995 | 156 | - | - |
ಇಂಡೋನೇಷಿಯಾ | 1998 | 66 | 14 | - |
ಬಹರೇನ್ | 2008 | 1 | - | - |
ಜಪಾನ್ | 2000 | 7 | - | - |
ಜೋರ್ಡಾನ್ | 2007 | 1 | - | - |
ಕುವೈತ್ | 2007 | 2 | - | - |
ಮಲೆಷ್ಯಾ | 1994 | 22 | 5 | - |
ಒಮನ್ | 2000 | 2 | - | - |
ಪಾಕಿಸ್ತಾನ | 2009 | 1 | - | - |
ಇರಾನ್ | 2009 | 1 | - | - |
ಕತರ್ | 2000 | 3 | - | - |
ಸೌದಿ ಅರೇಬಿಯಾ | 2004 | 11 | - | - |
ಸಿಂಗಪುರ | 1997 | 2 | - | - |
ಸಿರಿಯಾ | 2009 | 1 | - | - |
ತೈವಾನ್ | 1989 | 64 | - | - |
ಥೈಲೆಂಡ್ | 1996 | 39 | - | - |
ಸಂಯುಕ್ತ ಅರಬ್ ಎಮಿರೇಟ್ಸ್ Archived 2010-10-08 ವೇಬ್ಯಾಕ್ ಮೆಷಿನ್ ನಲ್ಲಿ. | 1995 | 11 | 2 | - |
|- |}
2009ರಲ್ಲಿ ಕ್ಯಾರೀಫೂರ್ ಅಲ್ಜೀರಿಯಾದಲ್ಲಿದ್ದ ತನ್ನ ಮಳಿಗೆಯನ್ನು ಮುಚ್ಚಿ, ಮೊರಾಕೊದಲ್ಲಿ ತೆರೆಯಿತು.
ದೇಶ | ಮೊದಲ ಅಂಗಡಿ | ವ್ಯಾಪಾರ ಮಹಾಮಳಿಗೆಗಳು | ದೊಡ್ಡ ಅಂಗಡಿಗಳು | ಹಾರ್ಡ್ ಡಿಸ್ಕೌಂಟರ್ಸ್ | ಕನ್ವೀನಿಯನ್ಸ್ ಸ್ಟೋರ್ಸ್ | ಕ್ಯಾಷ್ & ಕ್ಯಾರಿ |
---|---|---|---|---|---|---|
ಅಜರ್ಬೈಜಾನ್ | 2010 | 03 | 03 | - | - | - |
ಬೆಲ್ಜಿಯಂ | 2000 | 56 | 280 | - | 257 | - |
ಬಲ್ಗೇರಿಯ | 2009 | 4 | - | - | - | - |
ಸೈಪ್ರಸ್ | 2006 | 7 | 6 | - | - | - |
ಫ್ರಾನ್ಸ್ | 1960 | 218 | 1,021 | 897 | 3,245 | 134 |
ಗ್ರೀಸ್ | 1991 | 28 | 210 | 397 | 216 | - |
ಇಟಲಿ | 1993 | 59 | 485 | - | 1,015 | 20 |
ಮೊನಾಕೊ | - | - | 1 | - | - | - |
ಪೋಲೆಂಡ್ | 1997 | 72 | 277 | - | 5 | - |
ಪೊರ್ಚುಗಲ್ | 1991 | - | - | 365 | - | - |
ರೊಮಾನಿಯ | 2001 | 22 | 23 | - | - | - |
ಸ್ಪೇನ್ | 1973 | 161 | 87 | 2,912 | 3 | - |
ಸ್ಲೊವಾಕಿಯ | 1998 | 4 | - | - | - | - |
ತುರ್ಕಿ | 1993 | 19 | 99 | 519 | - | - |
ಯುನೈಟೆಡ್ ಕಿಂಗ್ಡಮ್/ಐರ್ಲೆಂಡ್ | - | - | - | - | - | - |
2009ರ ಅಕ್ಟೋಬರ್ 15ರಂದು, ಕ್ಯಾರೀಫೂರ್ ರಷ್ಯಾದಲ್ಲಿರುವ ತನ್ನ ಉದ್ದಿಮೆಯನ್ನು ಮಾರಿಬಿಡುವ ಇಂಗಿತವನ್ನು ವ್ಯಕ್ತಪಡಿಸಿತು, ಇದಕ್ಕೆ 'ಸುವ್ಯವಸ್ಥಿತ ಬೆಳವಣಿಗೆಯ ಮತ್ತು ಇತರೆ ಉದ್ದಿಮೆಗಳನ್ನು ತನ್ನ ಸ್ವಾಮ್ಯಕ್ಕೆ ತೆಗೆದುಕೊಳ್ಳುವ ಅವಕಾಶಗಳ ಕೊರತೆ' ಎಂಬ ಕಾರಣಗಳನ್ನು ಮುಂದಿಟ್ಟಿತು.[5]
ದೇಶ | ಮೊದಲ ಅಂಗಡಿ | ವ್ಯಾಪಾರ ಮಹಾಮಳಿಗೆಗಳು | ದೊಡ್ಡ ಅಂಗಡಿಗಳು | ಹಾರ್ಡ್ ಡಿಸ್ಕೌಂಟರ್ಸ್ | ಕನ್ವೀನಿಯನ್ಸ್ ಸ್ಟೋರ್ಸ್ | ಕ್ಯಾಷ್ & ಕ್ಯಾರಿ |
---|---|---|---|---|---|---|
ಅರ್ಜೆಂಟೀನಾ | 1982 | 59 | 103 | 395 | - | - |
ಬ್ರೆಜಿಲ್ | 1975 | 150 | 38 | 300 | 5 | 34 |
ಕೊಲಂಬಿಯಾ | 1998 | 74 | - | - | - | - |
ಡೊಮಿನಿಕನ್ ಗಣರಾಜ್ಯ | 2000 | 5 | 10 | - | 20 | 85 |
ಕ್ಯಾರೀಫೂರ್, ಅಟಕಡಾವೊ, ಹೈಪರ್ಸ್ಟಾರ್.
ಕ್ಯಾರೀಫೂರ್ ಬೇರೋ, ಕ್ಯಾರೀಫೂರ್ ಎಕ್ಸ್ಪ್ರೆಸ್, ಕ್ಯಾರೀಫೂರ್ ಮಾರ್ಕೆಟ್ (ಮುಂಚೆ 2008ರಲ್ಲಿ ಚಾಂಪಿಯನ್), ಚಾಂಪಿಯನ್ ಮ್ಯಾಪಿನೊಮೊವಾ, ಗ್ಲೊಬಿ, ಜಿಬಿ, ಜಿಎಸ್, ಕ್ಯಾರೀಫೂರ್ ಮಿನಿ, ಜಿಮಾ.
ಡಿಯಾ, ಎಡ್, ಮಿನಿಪ್ರೆಕೊ.
ಕ್ಯಾರೀಫೂರ್ ಸಿಟಿ, 5 ಮಿನಿಟ್ಸ್, 8 ಎ ಹ್ಯೂಯಿಟ್, ಮಾರ್ಚ್ ಪ್ಲಸ್, ಪ್ರಾಕ್ಸಿ (ಸೂಪರ್ಮಾರ್ಕೆಟ್), ಷರ್ಪಾ, ಡಿಪರ್ಡಿ, ಸ್ಮೈಲ್ ಮಾರ್ಕೆಟ್, ಒಕೆ!, ಎಕ್ಸ್ಪ್ರೆಸ್, ಷೊಪಿ (ಸುಪರ್ಮಾರ್ಕೆಟ್).
ಕ್ಯಾರೀಫೂರ್ ಕಾಂಟ್ಯಾಕ್ಟ್, ಪ್ರೊಮೊಕ್ಯಾಷ್, ಡಾಕ್ಸ್ ಮಾರ್ಕೆಟ್, ಗ್ರಾಸ್ ಐಪರ್.
ಇಂದು ಮುಚ್ಚಿದ ಇಂಡೊನೇಷ್ಯಾದ ರಾಜಧಾನಿ ಜಕಾರ್ತಾದಲ್ಲಿರುವ ಕ್ಯಾರೀಪೂರ್ ರಾತು ಪ್ಲಾಜಾದಲ್ಲಿ 2007ರ ಮೇ 1ರಂದು CO2(ಇಂಗಾಲದ ಡಯಾಕ್ಸೈಡ್) ನಿಂದ ವಿಷಪೂರಿತರಾಗಿ ಅವರನ್ನು ಸೆಂಟ್ರಲ್ ಪರ್ಟಾಮಿನಾ ಆಸ್ಪತ್ರೆಗೆ (ರುಮಾ ಸಕಿತ್ ಪುಸತ್ ಪರ್ಟಾಮಿನಾ ) ಸೇರಿಸಲಾಯಿತು. ವ್ಯಾಪಾರ ಮಹಾಮಳಿಗೆಯು ಬೃಹತ್ ಅಂಗಡಿಗಳ ನೆಲದಡಿ-ಅಂತಸ್ತಿನಲ್ಲಿತ್ತು. ಇದರಿಂದಾಗಿ ಸಾಕಷ್ಟು ಗಾಳಿಬೆಳಕಿನ ಕೊರತೆಯಿತ್ತು.[7]
2007ರ ಜೂನ್ 26ರಂದು, ಫ್ರೆಂಚ್ ನ್ಯಾಯಾಲಯದಲ್ಲಿ ಕ್ಯಾರೀಫೂರ್ ಸುಳ್ಳು ಜಾಹೀರಾತಿನ ಆರೋಪದ ಮೇಲೆ ದಂಡನೆಗೆ ಗುರಿಯಾಯಿತು. ಮಾರಾಟ ಮಾಡುವ ಜಾಹೀರಾತಿನ ಉತ್ಪನ್ನಗಳ ಪ್ರಮಾಣವನ್ನು ಕ್ಯಾರೀಫೂರ್ ಯಾವಾಗಲೂ ಅಗತ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿ ದಾಸ್ತಾನು ಮಾಡುತ್ತಿತ್ತು ಎಂದು ಮೊಕದ್ದಮೆಯಲ್ಲಿ ಆಪಾದಿಸಲಾಗಿತ್ತು. ಜೊತೆಗೆ, ಉತ್ಪನ್ನಗಳನ್ನು ತಮ್ಮ ಅಧಿಕೃತ ದರಗಳಿಗಿಂತಲೂ ಕಡಿಮೆ ವೆಚ್ಚದಲ್ಲಿ ಮಾರುತ್ತಿದ್ದಲ್ಲದೆ, ಸಗಟು ವ್ಯಾಪಾರಿಗಳಿಂದ ಲಂಚ ಪಡೆದ ಆರೋಪಕ್ಕೆ ಗುರಿಯಾಯಿತು. €2 ದಶಲಕ್ಷದಷ್ಟು ದಂಡ ಪಾವತಿಸಿ, ತನ್ನ ಎಲ್ಲಾ ಫ್ರೆಂಚ್ ಅಂಗಡಿಗಳಲ್ಲಿ ಈ ಸುಳ್ಳು ಜಾಹೀರಾತಿನ ಬಗ್ಗೆ ಬಹಿರಂಗ ಮಾಡಿ ನೋಟೀಸ್ ಪ್ರದರ್ಶಿಸತಕ್ಕದ್ದು ಎಂದು ನ್ಯಾಯಾಲಯವು ತೀರ್ಪು ನೀಡಿತು.[8]
ಇಂಡೊನೇಷಿಯಾದ ರಾಜಧಾನಿ ಜಕಾರ್ತಾದ ಕ್ಯಾರೀಫೂರ್ ಮಾಂಗಾ ದುವಾ ಸ್ಕ್ವೇರ್ನಲ್ಲಿ ಐದು ಮೀಟರ್ ಎತ್ತರದ ಲೋಹದ ಪತ್ತಿಗೆಯು ಮೂರು ವರ್ಷದ ಬಾಲಕನೊಬ್ಬನ ಮೇಲೆ ಬಿದ್ದಿತು. ಆಂತರಿಕ ರಕ್ತ ಸೋರುವಿಕೆಯಾದ ಕಾರಣ, ಆ ಬಾಲಕನು ಸ್ಥಳದಲ್ಲೆ ಮೃತನಾದನು.[9] ನಂತರ, ಈ ವಿಚಾರ ಇತ್ಯರ್ಥಗೊಳಿಸಬೇಕಾದ ಕ್ಯಾರೀಫೂರ್ ಅಧಿಕಾರಿಗಳು ತಮ್ಮನ್ನು ಭೇಟಿಯಾಗಲು ನಿರಾಕರಿಸಿದರು ಎಂದು ಮೃತನ ಕುಟುಂಬವು ಆರೋಪಿಸಿತು.[10] ಆದರೂ, ಕ್ಯಾರೀಫೂರ್ ಸಾಂಸ್ಥಿಕ ವ್ಯವಹಾರಗಳ ಅಧಿಕಾರಿ ಈ ಆರೋಪಗಳನ್ನು ಸಾರಾಸಗಟಾಗಿ ತಳ್ಳಿಹಾಕಿದರು.[11]
ಅಪಾಯಕಾರಿ ದುಡಿಮೆ ಪರಿಸರದ ಪದ್ಧತಿಗಳನ್ನು ಅನುಸರಿಸಿದೆ ಎಂಬ ಟೀಕೆಗಳಿಗೂ ಕ್ಯಾರೀಫೂರ್ ಗುರಿಯಾಗಿದೆ..[12]
ಕ್ಯಾರೀಫೂರ್ 2,500ಕ್ಕೂ ಹೆಚ್ಚು ಉಲ್ಲಂಘನೆಗಳನ್ನು ಎಸಗಿದ್ದಕ್ಕೆ 2009ರ ಮೇ 7ರಂದು, ಫ್ರೆಂಚ್ ಸರ್ಕಾರವು ಅದರ ವಿರುದ್ಧ ಸುಮಾರು €220,000 ದಂಡ ವಿಧಿಸಲು ನ್ಯಾಯಮಂಡಳಿಯೊಂದಕ್ಕೆ ಸೂಚನೆ ನೀಡಿತು. ಮಾಂಸ ಉತ್ಪನ್ನಗಳು ಸರಿಯಾದ ಮಾಹಿತಿ ಹೊಂದಿರಲಿಲ್ಲ (ಕೆಲವು ಮಳಿಗೆಗಳಲ್ಲಿ ತಪಶೀಲು ವಿವರಗಳಲ್ಲಿ 25%ಕ್ಕಿಂತಲೂ ಹೆಚ್ಚು ಕೊರತೆ), ಕೆಲವು ಉತ್ಪನ್ನಗಳಿಗೆ ಅಂಟಿಸಲಾದ ಲೇಬಲ್ ಪಟ್ಟಿಗಳಲ್ಲಿ ತಪ್ಪು ಮಾಹಿತಿಯಿತ್ತು - ಉದಾಹರಣೆಗೆ, ಲೇಬಲ್ ಪಟ್ಟಿಗಳನ್ನು ಸ್ವೀಕರಿಸಿದ ನಂತರ ಈ ಮಾಂಸ ಉತ್ಪನ್ನಗಳ ತೂಕವು 15%ರಷ್ಟು ಕುಗ್ಗಿದ್ದು ಕಂಡುಬಂದಿತ್ತು. ಕೆಲವು ಕ್ಯಾರಿಫೂರ್ ಮಳಿಗೆಗಳಲ್ಲಿ ಅವಧಿಯ ದಿನಾಂಕ ಮೀರಿಹೋಗಿದ್ದ ವಸ್ತುಗಳು ಮಾರಾಟವಾಗುತ್ತಿದ್ದವು. ಇವುಗಳ ಪೈಕಿ ಒಂದು ನಿದರ್ಶನದಲ್ಲಿ, ಶಿಶುಗಳಿಗಾಗಿ ತಯಾರಿಸಿ ಮಾರಾಟವಾದ ಆಹಾರ ಪದಾರ್ಥಗಳ ತಾಜಾತನದ ಅವಧಿ ಮುಗಿದು ಆರು ತಿಂಗಳುಗಳು ಸಂದುಹೋಗಿದ್ದವು. ಶೈತ್ಯ ವಾತಾವರಣದಲ್ಲಿ ಶೇಖರಿಸಲಾದ ಸುಮಾರು 1,625 ಉತ್ಪನ್ನಗಳ ತಪಾಸಣೆ ಮಾಡಿದಾಗ, ಅವುಗಳನ್ನು ಗೋದಾಮುಗಳಲ್ಲಿ ಸಹಜವಾಯು ಉಷ್ಣಾಂಶಗಳಲ್ಲಿ ಶೇಖರಿಸಿದ್ದು ಕಂಡುಬಂದಿತ್ತು.[13]
2008ರ ಏಪ್ರಿಲ್ ತಿಂಗಳಲ್ಲಿ 2008 ಒಲಿಂಪಿಕ್ ಪಂಜಿನ ಸರಣಿ ಓಟಕ್ಕೆ ಟಿಬೆಟ್ ಸ್ವಾತಂತ್ರ್ಯ ಪರ ವಾದಿಗಳು ಲಂಡನ್ ಹಾಗೂ ಪ್ಯಾರಿಸ್ನಲ್ಲಿ ಅಡ್ಡಿಪಡಿಸಿದರು. ಕೆಲವು ಪ್ರತಿಭಟನಾಕಾರರು ಪಂಜನ್ನು ಕಸಿದುಕೊಳ್ಳಲು ಯತ್ನಿಸಿದರು. ಚೀನೀ ಕಾರ್ಯಕರ್ತರು ಕ್ಯಾರೀಫೂರ್ನ ಫ್ರೆಂಚ್ ಮೂಲಗಳಿದ್ದದ್ದನ್ನು ಅರಿತು, ಅದರ ಬಹಿಷ್ಕರಣೆಯನ್ನು ಉತ್ತೇಜಿಸಿದರು.[14] ಕ್ಯಾರೀಫೂರ್ನ ಪ್ರಮುಖ ಷೇರುದಾರರಾದ ಮೊಯೆಟ್ ಹೆನೆಸಿ - ಲೂಯಿಸ್ ವುಯಿಟನ್ ದಲೈ ಲಾಮಾಗೆ ಧನ ಸಹಾಯ ಮಾಡಿದ್ದರೆಂಬ ನಿರಾಧಾರ ವದಂತಿಗಳಿಂದಾಗಿ ಕ್ಯಾರೀಫೂರ್ ಬಹಿಷ್ಕರಣೆಯ ಬೆಂಕಿಗೆ ತುಪ್ಪ ಸುರಿದಂತಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಕ್ಯಾರೀಫೂರ್ ಚೀನಾ, ಬೀಜಿಂಗ್ ಒಲಿಂಪಿಕ್ ಕ್ರೀಡೆಗಳಿಗೆ ತನ್ನ ಸಂಪೂರ್ಣ ಬೆಂಬಲವಿದೆ, ಚೀನೀ ಜನತೆ ಭಾವನೆಗಳಿಗೆ ನೋವುಂಟು ಮಾಡುವ ಯಾವುದೇ ಕೃತ್ಯ ಮಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿತು.[15] ಚೀನಾದಲ್ಲಿರುವ ಹಲವಾರು ಕ್ಯಾರೀಫೂರ್ ಅಂಗಡಿಗಳ ಒಳಗೆ ಹಾಗೂ ಸುತ್ತ ಮುತ್ತಲೂ ಪ್ರತಿಭಟನೆಗಳು ನಡೆದವು. ಚೀನಾದಲ್ಲಿ ಸಾರ್ವತ್ರಿಕ ರಜಾದಿನವಾದ ಕಾರ್ಮಿಕರ ದಿನದಂದು ಕ್ಯಾರೀಫೂರ್ನ್ನು ಬಹಿಷ್ಕರಿಸಲು ಕ್ಯಾರೀಫೂರ್-ವಿರೋಧಿ ವಾದಿಗಳು ಕರೆ ನೀಡಿದ್ದರು.
ಬಹಿಷ್ಕಾರದ ಪರಿಣಾಮವಾಗಿ, ಅಂತರಜಾಲ ಮಾಹಿತಿ-ಶೋಧ ತಾಣಗಳಾದ Baidu.com.cn ಮತ್ತು sina.com ಕ್ಯಾರೀಫೂರ್ನ ಚೀನಾ ಅಂತರಜಾಲತಾಣಕ್ಕೆ ಕೆಲಕಾಲ ಪ್ರವೇಶಾನುಮತಿ ನಿರಾಕರಿಸಿತು. ಬಳಕೆದಾರರು 家乐福 (ಚೀನೀ ಭಾಷೆಯಲ್ಲಿ 'ಕ್ಯಾರೀಫೂರ್') ಎಂದು ನಮೂದಿಸಿ ಹುಡುಕಿದಲ್ಲಿ, ದೋಷ ಪುಟ ಪ್ರದರ್ಶಿತವಾಗುತ್ತಿತ್ತು. 'ಶೋಧದ ಫಲಿತಾಂಶದಲ್ಲಿ ನ್ಯಾಯಸಮ್ಮತವಲ್ಲದ ಅಂಶಗಳುಂಟು. ಆದ್ದರಿಂದ ನಾವು ಈ ಫಲಿತಾಂಶವನ್ನು ತೋರಿಸಲು ನಿರಾಕರಿಸುತ್ತೇವೆ' ಎಂದು ಚೀನೀ ಭಾಷೆಯಲ್ಲಿ ಸಂದೇಶ ಪ್ರದರ್ಶಿತವಾಗುತ್ತಿತ್ತು.[16]
ಷ್ರಾಪ್ಷೈರ್ನ ಟೆಲ್ಫರ್ಡ್ ಷಾಪಿಂಗ್ ಸೆಂಟರ್; ಉತ್ತರ ಯಾರ್ಕ್ಷೈರ್ ಬರೊಬ್ರಿಡ್ಜ್; ಹಾಗೂ ಬ್ರಿಸ್ಟಲ್ನ ಸ್ವಿಂಡನ್ ಮತ್ತು ಕ್ರಿಬ್ಸ್ ಕಾಸ್ವೇ ಸ್ಥಳಗಳಲ್ಲಿ ಮಳಿಗೆಗಳು ಸ್ಥಾಪಿತವಾದವು. ಎಲ್ಲಾ ಮಳಿಗೆಗಳನ್ನು ಡೀ ಕಾರ್ಪೊರೇಷನ್ ಉದ್ದಿಮೆಯು ಕೊಂಡಿತು. ಕೆಲ ಸಮಯ ಕ್ಯಾರೀಫೂರ್ ಲಾಂಛನದಡಿಯೇ ವಹಿವಾಟು ನಡೆಸಿದ ನಂತರ ಗೇಟ್ವೇ ಸುಪರ್ಸ್ಟೋರ್ಸ್ ಆಗಿ ಮಾರ್ಪಾಡಾಯಿತು. ಈಗ ಯುನೈಟೆಡ್ ಕಿಂಗ್ಡಮ್ನಲ್ಲಿರುವ ಹಲವು ಹಳೆಯ ಕ್ಯಾರೀಫೂರ್ ಅಂಗಡಿಗಳು ಅಸ್ಡಾದ ಶಾಖೆಗಳಾಗಿವೆ. ಇವುಗಳಲ್ಲಿ ಗಮನಾರ್ಹವಾಗಿ, ಮೆರ್ರಿ ಹಿಲ್ ಅಂಗಡಿಯು ಹಿಂದಿನ ಎರಡು ವರ್ಷಗಳ ಕಾಲ ಗೇಟ್ವೇ ಶಾಖೆಯಾಗಿದ್ದದ್ದು, 1990ರಲ್ಲಿ ಅಸ್ಡಾ ಎಂದಾಯಿತು.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.