ಥೈಲ್ಯಾಂಡ್
From Wikipedia, the free encyclopedia
Remove ads
ಥೈಲ್ಯಾಂಡ್, ಆಗ್ನೇಯ ಏಷ್ಯಾದಲ್ಲಿರುವ ಒಂದು ಪ್ರಮುಖ ದೇಶ. ಈ ದೇಶವು ಪೂರ್ವದಲ್ಲಿ ಲಾಓಸ್ ಹಾಗು ಕಂಬೋಡಿಯ, ದಕ್ಷಿಣದಲ್ಲಿ ಥೈಲ್ಯಾಂಡ್ ಕೊಲ್ಲಿ ಹಾಗು ಮಲೇಶಿಯ, ಪಶ್ಚಿಮದಲ್ಲಿ ಅಂಡಮಾನ್ ಸಮುದ್ರ ಹಾಗು ಮ್ಯಾನ್‌ಮಾರ್ ದೇಶಗಳಿಂದ ಸುತ್ತುವರಿದಿದೆ. ಹಿಂದೆ ಥೈಲ್ಯಾಂಡ ದೇಶವನ್ನು ಸಿಯಾಂ ಎಂದು ಕರೆಯುತ್ತಿದ್ದರು. ಮೇ ೧೧, ೧೯೪೯ರಲ್ಲಿ ಥೈಲ್ಯಾಂಡ್ ಎಂದು ನಾಮಕರಿಸಲಾಯಿತು. ಥಾಯ್ ಭಾಷೆಯಲ್ಲಿ ಥಾಯ್ ಎಂದರೆ ಸ್ವಾತಂತ್ರ್ಯ ಎಂದು ಅರ್ಥ.[೧]
Remove ads
ಇತಿಹಾಸ
- ಭಾರತ,ಕಾಂಬೋಡಿಯ ಹಾಗು ಚೀನಾ ದೇಶಗಳ ಸಂಸ್ಕೃತಿಯಿಂತ ಪ್ರಭಾವಿತವಾಗಿರುವ ಥೈಲ್ಯಾಂಡ್‌ನ ಇತಿಹಾಸವನ್ನು ೧೨೩೮ರಲ್ಲಿ ಸ್ಥಾಪಿತವಾದ ಸುಖೋಥೈ ರಾಜವಂಶದೊಡನೆ ಗುರುತಿಸಲಾಗುತ್ತದೆ. ಇದಾದ ನಂತರ ಅಯುತ್ಥಾಯ ರಾಜವಂಶದವರು ೧೪ನೇ ಶತಮಾನದಲ್ಲಿ ದೊಡ್ಡ ಸಾಮ್ರಾಜ್ಯ ಸ್ಥಾಪಿಸಿದರು.
- ೧೬ನೇ ಶತಮಾನದಲ್ಲಿ ಯೂರೊಪಿಯನ್ನರ ಸಂಪರ್ಕಕ್ಕೆ ಥೈಲ್ಯಾಂಡ್ ಬಂದಿತಾದರು, ಯಾವುದೇ ಯೂರೊಪಿಯನ್ ದೇಶವು ಇದನ್ನು ತನ್ನ ಅಧಿಕಾರ ವ್ಯಾಪ್ತಿಗೆ ತೆಗೆದುಕೊಳ್ಳಲಾಗಲಿಲ್ಲ. ೧೯೩೨ರಲ್ಲಿ ನಡೆದ ಚಳುವಳಿಯ ನಂತರ ದೇಶದಲ್ಲಿ ಸಾಂವಿಧಾನಿಕ ಚಕ್ರಾಧಿಪತ್ಯವನ್ನು ಸ್ಥಾಪಿಸಲಾಯಿತು. ಇದಾದ ನಂತರ ಅನೇಕ ಬಾರಿ ಸೇನಾ ವಿಪ್ಲವಗಳು(Military coup) ನಡೆದವು.[೩]
- ಪ್ರಧಾನಿ ತಕ್ಷಿನ್ ಶಿನವಾತ್ರ ಅವರ ಸರ್ಕಾರದ ವಿರುದ್ಧ ೧೯ ಸೆಪ್ಟೆಂಬರ್,೨೦೦೬ರಲ್ಲಿ ಮತ್ತೊಂದು ಸೇನಾ ವಿಪ್ಲವ ನಡೆಯಿತು. ಇದಾದ ನಂತರ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಯಿತು.
Remove ads
ಥಾಯ್ಲೆಂಡ್‌ಗೆ ಹೊಸರಾಜ
- ಥಾಯ್ಲೆಂಡ್‌ನ ಹೊಸ ರಾಜನಾಗಿ ಯುವರಾಜ ಮಹಾ ವಾಜಿರಲಾಂಗ್‌ಕೊರ್ನ್ ಅವರ ಹೆಸರನ್ನು ದಿ.2 Dec, 2016 ರಂದು ಘೋಷಿಸಲಾಗಿದೆ. ಈ ಮೂಲಕ ಥಾಯ್ಲೆಂಡ್ ರಾಜಪ್ರಭುತ್ವದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ಅತಿಹೆಚ್ಚು ಅವಧಿಗೆ ಸಿಂಹಾಸನ ಅಲಂಕರಿಸಿದ್ದ ಹೆಗ್ಗಳಿಕೆಗೆ ಪಾತ್ರರಾಗಿದ್ದ ಥಾಯ್ಲೆಂಡ್ ರಾಜ ಭೂಮಿಬೊಲ್ ಅದುಲ್ಯದೆಜ್ ಅವರು ಇತ್ತೀಚೆಗೆ ಮೃತಪಟ್ಟಿದ್ದರು.
- ವಾಜಿರಲಾಂಗ್‌ಕೊರ್ನ್ ಅವರು ಚಕ್ರಿ ವಂಶದ 10ನೇ ದೊರೆಯಾಗಿ ಅಧಿಕಾರ ವಹಿಸಿಕೊಳ್ಳುವಂತೆ ರಾಷ್ಟ್ರೀಯ ಶಾಸಕಾಂಗ ಸಭೆಯ ಮುಖ್ಯಸ್ಥ ಪ್ರಯೂತ್ ಚಾನ್ ಒ ಚಾತ್ ಅವರು ಆಹ್ವಾನ ನೀಡಿದರು. ಇದನ್ನು ವಾಜಿರಲಾಂಗ್‌ಕೊರ್ನ್ ಒಪ್ಪಿಕೊಂಡಿದ್ದಾರೆ.[೪]
Remove ads
ನೋಡಿ
ಹೊರಗಿನ ಸಂಪರ್ಕಗಳು
ಉಲ್ಲೇಖಗಳು
Wikiwand - on
Seamless Wikipedia browsing. On steroids.
Remove ads