ದೇರಳಕಟ್ಟೆ
ಭಾರತ ದೇಶದ ಗ್ರಾಮಗಳು From Wikipedia, the free encyclopedia
ಭಾರತ ದೇಶದ ಗ್ರಾಮಗಳು From Wikipedia, the free encyclopedia
ದೇರಳಕಟ್ಟೆ, ಭಾರತದ, ಕರ್ನಾಟಕ ರಾಜ್ಯದ, ದಕ್ಷಿಣ ಕನ್ನಡ ಜಿಲ್ಲೆಯ, ಮಂಗಳೂರು ಹೊರವಲಯದಲ್ಲಿರುವ ಒಂದು ಚಿಕ್ಕ ಹಳ್ಳಿ. ಈ ಹಳ್ಳಿಯು ಒಂದು ಸಣ್ಣ ಜನಸಂಖ್ಯೆಯೊಂದಿಗೆ ಕೂಡಿದ ಒಂದು ಗುಡ್ಡವಾಗಿತ್ತು. ಈ ಹಳ್ಳಿಯು ಮಂಗಳೂರಿನ ಹೃದಯ ಭಾಗದಿಂದ ಮಂಗಳೂರು ವಿಶ್ವವಿದ್ಯಾನಿಲಯ, ಕೊಣಾಜೆಗೆ ಹೊಗುವ ದಾರಿಯಲ್ಲಿ ಇದೆ. ನಿಟ್ಟೆ ಎಜುಕೇಶನ್ ಟ್ರಸ್ಟ್ ಮತ್ತು ಯೆನೆಪೋಯಾ ಸಮೂಹದಂತ ಹಲವಾರು ಶೈಕ್ಷಣಿಕ ಸಂಸ್ಥೆಗಳ ಸಹಾಯದಿಂದ ಈ ಗ್ರಾಮ ನಿಧಾನವಾಗಿ ಒಂದು ಪಟ್ಟಣಕ್ಕೆ ರೂಪಾಂತರಗೊಂಡಿದೆ. ಈ ಹಳ್ಳಿಯು ಈಗ ಮಂಗಳೂರಿನ ಒಂದು ಶಿಕ್ಷಣ ಕೇಂದ್ರವಾಗಿದೆ.
ನಿಟ್ಟೆ ವಿಶ್ವವಿದ್ಯಾನಿಲಯವು ದೇರಳಕಟ್ಟೆಯಲ್ಲಿರುವ ಒಂದು ಪರಿಗಣಿತ ವಿಶ್ವವಿದ್ಯಾನಿಲಯವಾಗಿದೆ. ಈ ಸಂಸ್ಥೆಯು ನಿಟ್ಟೆ ವಿಶ್ವವಿದ್ಯಾನಿಲಯ ಟ್ರಸ್ಟಿನ ಅಡಿಯಲ್ಲಿ ಸ್ಥಾಪಿಸಲಾಗಿದೆ. ನಿಟ್ಟೆ ವಿಶ್ವವಿದ್ಯಾನಿಲಯ ಟ್ರಸ್ಟನ್ನು, ನಿಟ್ಟೆ ಎಜುಕೇಶನ್ ಟ್ರಸ್ಟ್ ಪ್ರಾಯೋಜಿಸಿದೆ. ಈ ಟ್ರಸ್ಟ್ 31 ಸಂಸ್ಥೆಗಳನ್ನು ನಿಟ್ಟೆಯ 3 ಕ್ಯಾಂಪಸ್ ಹಾಗು ಮಂಗಳೂರು ಮತ್ತು ಬೆಂಗಳೂರಿನಲ್ಲಿ ಸ್ಥಾಪಿಸಲಾಗಿದೆ.
ದೇರಳಕಟ್ಟೆ ನಿಟ್ಟೆ ವಿಶ್ವವಿದ್ಯಾನಿಲಯದ ಸಂಸ್ಥೆಗಳು
ಯೆನಪೊಯಾ ವಿಶ್ವವಿದ್ಯಾನಿಲಯವು ಯು.ಜಿ.ಸಿ ಕಾಯಿದೆ, 1956 ರ ಸೆಕ್ಷನ್ 3 ರಡಿಯಲ್ಲಿ ವಿಶ್ವವಿದ್ಯಾಲಯವೆಂದು ಘೋಷಿಸಲ್ಪಟ್ಟಿದೆ . ಈ ವಿಶ್ವವಿದ್ಯಾನಿಲಯಕ್ಕೆ NAAC ನಿಂದ 'A' ಶೇಣಿಯ ಮಾನ್ಯತೆ ಪಡೆದಿದೆ. ಈ ವಿಶ್ವವಿದ್ಯಾನಿಲಯವು ೨೦೦೮ ರಲ್ಲಿ ಸ್ಥಾಪಿಸಲಾಯಿತು.[1]
ದೇರಳಕಟ್ಟೆ ಯುನಪೊಯಾ ವಿಶ್ವವಿದ್ಯಾನಿಲಯದ ಸಂಸ್ಥೆಗಳು
ಫಾದರ್ ಮುಲ್ಲರ್ ಹೋಮಿಯೋಪತಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಫಾದರ್ ಮುಲ್ಲರ್ ಚಾರಿಟಬಲ್ ಸಂಸ್ಥೆಯ ಒಂದು ಸಂಸ್ಥೆಯಾಗಿದೆ.[2] ಈ ಕಾಲೇಜಿಗೆ NAAC ನಿಂದ 'A' ಶೇಣಿಯ ಮಾನ್ಯತೆ ಪಡೆದಿದೆ.
ಕಣಚೂರು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಕಣಚೂರು ಇಸ್ಲಾಮಿಕ್ ಶಿಕ್ಷಣದ ಒಂದು ಸಂಸ್ಥೆಯಾಗಿದೆ.[3]
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.