ಯಕೃತ್ತಿನ ಉರಿಯೂತ
From Wikipedia, the free encyclopedia
ಯಕೃತ್ತಿನ ಉರಿಯೂತ ಎಂಬುದು ಸಾಧಾರಣವಾಗಿ ವಿಶಿಷ್ಟ ಬಗೆಯ ವೈರಸ್ಸುಗಳ ಸೋಂಕಿನಿಂದ ಉಂಟಾಗುವ ಯಕೃತ್ತಿನ ಉದ್ರಿಕ್ತಸ್ಥಿತಿ ಹಾಗೂ ಊತ (ವೈರಲ್ ಹೆಪಟೈಟಿಸ್).[1][2] ಸಾಮಾನ್ಯವಾಗಿ ಕೊಳಚೆ ಪ್ರದೇಶಗಳಲ್ಲಿ ವ್ಯಾಪಕವಾಗಿ ಕಂಡಬರುವುದು. ಆದರೂ ಈ ರೋಗ ಮಧ್ಯಮ ಹಾಗೂ ಧನಿಕ ಜನ ನೆಮ್ಮದಿಯಿಂದ ವಾಸಿಸುವ ಚೊಕ್ಕಟವಾದ ಬಡಾವಣೆಗಳಲ್ಲೂ ಕಂಡುಬರುತ್ತದೆ. ರೋಗ ಎರಡು ಬಗೆಯ ವೈರಸ್ಸುಗಳಿಂದ (A ಮತ್ತು B) ಉಂಟಾಗುತ್ತದೆ.