![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/f/fa/Rotavirus_Reconstruction.jpg/640px-Rotavirus_Reconstruction.jpg&w=640&q=50)
ವೈರಾಣು
From Wikipedia, the free encyclopedia
ವೈರಾಣುವು (ಲ್ಯಾಟಿನ್ನಲ್ಲಿ ವೈರಸ್ ಎಂದರೆ ಟಾಕ್ಸಿನ್ - ಜೀವಾಣುವಿನಲ್ಲಿ ಉತ್ಪನ್ನವಾಗುವ ವಿಷ ಅಥವಾ ವಿಷ) ಬೇರೆಯೊಂದು ಜೀವಿಯ ಜೀವಕೋಶಗಳೊಳಗೆ ಮಾತ್ರ ಸಂತಾನೋತ್ಪತ್ತಿ ಮಾಡಬಲ್ಲ ಒಂದು ಚಿಕ್ಕದಾದ ಸೋಂಕು ಉಂಟುಮಾಡುವ ಸೂಕ್ಷ್ಮಜೀವಿ.[1] ವೈರಾಣುಗಳು ದ್ಯುತಿ ಸೂಕ್ಷ್ಮದರ್ಶಕದಿಂದ ಪ್ರತ್ಯಕ್ಷವಾಗಿ ಕಾಣದಷ್ಟು ಚಿಕ್ಕದಾಗಿರುತ್ತವೆ. ಎಲೆಕ್ಟ್ರಾನ್ ಸೂಕ್ಷ್ಮದರ್ಶಕಕ್ಕೆ ಮಾತ್ರ ಗೋಚರ. ವೈರಾಣುಗಳು ಪ್ರಾಣಿಗಳು ಮತ್ತು ಸಸ್ಯಗಳ ಜೊತೆಗೆ ಬ್ಯಾಕ್ಟೀರಿಯಾ ಮತ್ತು ಆರ್ಕೀಯಾದ ವರೆಗಿನ ಎಲ್ಲ ಬಗೆಯ ಜೀವಿಗಳಲ್ಲಿ ಸೋಂಕು ಉಂಟು ಮಾಡುತ್ತವೆ.[2][3] ಇವುಗಳ ಡಿ.ಎನ್.ಎ ಅಥವಾ ಆರ್.ಎನ್.ಎ ಎಳೆಗಳನ್ನು ಪ್ರೋಟೀನುಗಳು ಆವರಿಸಿಕೊಂಡಿರುವ ಕಣಗಳಾಗಿವೆ. ಇವುಗಳು ಜೀವಕೋಶಗಳು ಅಲ್ಲ ಎಂಬುದನ್ನು ರುಡಾಲ್ಫ್ ವರ್ಛೊ ಅವರು ಹೊರಡಿಸಿದ ಕೋಶ ಸಿದ್ಧಾಂತದ ಮೂಲಕ ವ್ಯಕ್ತವಾಗಿದೆ. ಆದರೂ ಇವುಗಳು ಜೀವಿಗಳ ಒಳಗಡೆ ಇದ್ದಾಗ ಜೀವ ತುಂಬಿದಂತೆ ಕಾಣುವುದು. ಇದರಿಂದಾಗಿ ವೈರಾಣುಗಳು ಜೀವಿಗಳ ಹಾಗು ನಿರ್ಜೀವ ಲೋಕದ ಮಧ್ಯೆ ಇರುವ ಒಂದು ಸೇತುವೆ ಆಗಿದೆ. ಇವುಗಳು ಹಲವಾರು ರೋಗಗಳನ್ನು ಹರಡುತ್ತವೆ. ಇದರಿಂದಾಗಿ ವಿಜ್ಞಾನಿಗಳು ಇವುಗಳ ಬಗ್ಗೆ ತಿಳಿದು, ಜೀವಿಗಳಲ್ಲಿ ರೋಗಗಳನ್ನು ಉಂಟುಮಾಡುವ ರೀತಿಯನ್ನು ಕುರಿತು ಹೆಚ್ಚು ಮಾಹಿತಿಯನ್ನು ಸಂಗ್ರಹಿಸಿರುವರು. ಜೊತೆಗೆ ಇವುಗಳನ್ನು ಮಾನವನ ಹಾಗು ಪರಿಸರದ ಉಪಯೋಗಕ್ಕಾಗಿಯೂ ಇಂದು ಬಳಸಲಾಗಿದೆ. ವೈರಾಣುಗಳು ಆಕೃತಿಯಲ್ಲಿಯೂ ಗಾತ್ರದಲ್ಲಿಯೂ ವ್ಯತ್ಯಾಸವನ್ನು ತೋರಿಸುವುವು. ಇವುಗಳ ವ್ಯಾಸ ೧೭ ರಿಂದ ೧೦೦೦ ನ್ಯಾನೋಮೀಟರುಗಳಾಗಿವೆ.
![Thumb image](http://upload.wikimedia.org/wikipedia/commons/thumb/f/fa/Rotavirus_Reconstruction.jpg/640px-Rotavirus_Reconstruction.jpg)