ಷೆಂಗೆನ್ ವೀಸಾ
From Wikipedia, the free encyclopedia
ಷೆಂಗೆನ್ ಪ್ರದೇಶ ವು, ೧೯೮೫ರಲ್ಲಿ ಷೆಂಗೆನ್, ಲಕ್ಸೆಂಬರ್ಗ್ ಪಟ್ಟಣದಲ್ಲಿ ಸಹಿ ಹಾಕಲಾದ ಷೆಂಗೆನ್ ಒಪ್ಪಂದವನ್ನು ಜಾರಿಗೆ ತಂದ ಇಪ್ಪತ್ತೈದು ಯುರೋಪಿಯನ್ ರಾಷ್ಟ್ರಗಳ ಭೂಪ್ರದೇಶಗಳನ್ನು ಒಳಗೊಂಡಿದೆ. ಷೆಂಗೆನ್ ಪ್ರದೇಶವು, ಅಂತಾರಾಷ್ಟ್ರೀಯ ಪ್ರಯಾಣದಲ್ಲಿ ಏಕೈಕ ರಾಜ್ಯದ ರೀತಿಯಲ್ಲಿ ಹೆಚ್ಚಾಗಿ ಕಾರ್ಯನಿರ್ವಹಿಸುವುದರ ಜೊತೆಗೆ ಪ್ರದೇಶದ ಒಳಗಡೆ ಹಾಗು ಹೊರಗಡೆ ಪ್ರಯಾಣಿಸುವವರಿಗೆ ಗಡಿ ನಿಯಂತ್ರಣವನ್ನು ಜಾರಿಗೆ ತರುತ್ತದೆ. ಆದರೆ ಇದು ಯಾವುದೇ ಆಂತರಿಕ ಗಡಿ ನಿಯಂತ್ರಣಗಳನ್ನು ಹೊಂದಿರುವುದಿಲ್ಲ.
Description | Free travel area |
---|---|
Established | ೧೯೯೫ |
Members | |
Policy of | European Union |
Area | ೪,೩೧೨,೦೯೯ km೨ |
ಷೆಂಗೆನ್ ನಿಯಮಗಳನ್ನು, ೧೯೯೯ರ ಆಮ್ಸ್ಟರ್ಡಾಮ್ ಒಪ್ಪಂದದ ಮೂಲಕ ಐರೋಪ್ಯ ಒಕ್ಕೂಟ(EU) ಕಾನೂನಿನೊಳಗೆ ಸೇರ್ಪಡೆಗೊಳಿಸಿತು. ಆದಾಗ್ಯೂ ಪ್ರದೇಶವು, ಅಧಿಕೃತವಾಗಿ ಮೂರು EU ಸದಸ್ಯ ರಾಷ್ಟ್ರಗಳಲ್ಲದ ರಾಷ್ಟ್ರಗಳನ್ನು ಹೊಂದಿದೆ, ಐಸ್ಲ್ಯಾಂಡ್, ನಾರ್ವೆ, ಸ್ವಿಟ್ಜರ್ಲ್ಯಾಂಡ್, ಹಾಗು ಡಿ ಫ್ಯಾಕ್ಟೊ(ವಾಸ್ತವವಾಗಿ ಅಸ್ತಿತ್ವದಲ್ಲಿರುವ) ಮೂರು ಯುರೋಪಿಯನ್ ಸಣ್ಣ ರಾಜ್ಯಗಳನ್ನು ಒಳಗೊಂಡಿದೆ, ಮೊನಾಕೋ, ಸ್ಯಾನ್ ಮರಿನೋ, ಹಾಗು ವ್ಯಾಟಿಕನ್ ನಗರ. EUನ ಎರಡು ಸದಸ್ಯ ರಾಷ್ಟ್ರಗಳಾದ ಐರ್ಲೆಂಡ್ ಹಾಗು ಯುನೈಟೆಡ್ ಕಿಂಗ್ಡಮ್ ನ್ನು ಹೊರತು ಪಡಿಸಿ ಇತರ ಎಲ್ಲ ರಾಷ್ಟ್ರಗಳು ಷೆಂಗೆನ್ ನಿಯಮಗಳನ್ನು ಜಾರಿಗೆ ತರುವ ಅಗತ್ಯವಿದೆ. ಒಪ್ಪಂದವನ್ನು ಜಾರಿಗೆ ತಂದಿರುವ ಬಲ್ಗೇರಿಯಾ, ಸೈಪ್ರಸ್, ಹಾಗು ರೊಮೇನಿಯಾ ರಾಷ್ಟ್ರಗಳು ಇದಕ್ಕೆ ಹೊರತಾಗಿವೆ. ಪ್ರಸಕ್ತ ಪ್ರದೇಶವು, ೪೦೦ ದಶಲಕ್ಷದಷ್ಟು ಜನಸಂಖ್ಯೆಯನ್ನು ಹಾಗು 4,312,099 square kilometres (1,664,911 sq mi)*ರಷ್ಟು ಭೂಪ್ರದೇಶವನ್ನು ಹೊಂದಿದೆ.
ಷೆಂಗೆನ್ ನಿಯಮಗಳನ್ನು ಜಾರಿಗೆ ತರುವುದೆಂದರೆ, ಇತರ ಷೆಂಗೆನ್ ಸದಸ್ಯ ರಾಷ್ಟಗಳೊಂದಿಗೆ ಗಡಿ ನಿಯಂತ್ರಣಗಳನ್ನು ತೆಗೆದುಹಾಕುವುದು ಹಾಗು ಏಕಕಾಲಿಕವಾಗಿ ಸದಸ್ಯತ್ವವನ್ನು ಪಡೆಯದ ಇತರ ರಾಜ್ಯಗಳೊಂದಿಗೆ ಗಡಿ ನಿಯಂತ್ರಣಗಳನ್ನು ಬಲಪಡಿಸುವುದು. ನಿಯಮಗಳಲ್ಲಿ, ವ್ಯಕ್ತಿಗಳ ತಾತ್ಕಾಲಿಕ ಪ್ರವೇಶಕ್ಕೆ ಸಾಮಾನ್ಯವಾದ ನಿಯಮ(ಇದರಲ್ಲಿ ಷೆಂಗೆನ್ ವೀಸಾ ಸೇರಿದೆ), ಬಾಹ್ಯ ಗಡಿ ನಿಯಂತ್ರಣಗಳ ಸಮನ್ವಯ, ಹಾಗು ಗಡಿಯಾಚೆ ಪೊಲೀಸ್ ಮತ್ತು ನ್ಯಾಯಾಂಗದ ಸಹಕಾರ ಸೇರಿವೆ.
ವಿಮಾನ ನಿಲ್ದಾಣಗಳಲ್ಲಿ, ಹೊಟೇಲುಗಳಲ್ಲಿ, ಅಥವಾ ಪೊಲೀಸರು ನಡೆಸುವ ಗುರುತಿನ ತಪಾಸಣೆಗಳಿಗೆ ಬೇಕಾಗುವ ಪಾಸ್ ಪೋರ್ಟ್ ಅಥವಾ EUನ ಅಂಗೀಕಾರ ಪಡೆದ ರಾಷ್ಟ್ರೀಯ ಗುರುತಿನ ಚೀಟಿಯು, ರಾಷ್ಟ್ರದ ನಿಯಮಗಳನ್ನು ಅವಲಂಬಿಸಿರುತ್ತದೆ ಹಾಗು ರಾಷ್ಟ್ರದಿಂದ ರಾಷ್ಟ್ರಕ್ಕೆ ಬದಲಾಗುತ್ತದೆ. ಸಾಂದರ್ಭಿಕವಾಗಿ, ಷೆಂಗೆನ್ ರಾಷ್ಟ್ರಗಳ ನಡುವೆ ಕ್ರಮಬದ್ಧವಾದ ಗಡಿ ನಿಯಂತ್ರಣಗಳನ್ನು ಬಳಸಲಾಗುತ್ತದೆ.