ಸಂಧ್ಯಾ ಪೈ
From Wikipedia, the free encyclopedia
Remove ads
ಶ್ರೀಮತಿ ಸಂಧ್ಯಾ ಪೈ [೧]ಕನ್ನಡದ ಪತ್ರಿಕೋದ್ಯಮಿ ಹಾಗೂ ಲೇಖಕಿ. ಕರ್ನಾಟಕದ ಜನಪ್ರಿಯ ವಾರಪತ್ರಿಕೆ ತರಂಗ ಸೇರಿದಂತೆ ಮಣಿಪಾಲ್ ಮೀಡಿಯಾ ನೆಟ್ವರ್ಕ್ನ ನಾಲ್ಕು ಮ್ಯಾಗಜೀನ್ ಗಳಿಗೆ ಸಂಪಾದಕಿಯಾಗಿ ಹೆಸರು ಮಾಡಿದವರು. ಹಲವು ಪುಸ್ತಕಗಳನ್ನು ಬರೆದಿದ್ದಾರೆ.

ಸಂಪಾದಕಿಯಾಗಿ
ಈಗ ಅವರು ೪ ಪತ್ರಿಕೆಗಳನ್ನು ನಡೆಸಿಕೊಂಡು ಹೋಗುತ್ತಿದ್ದಾರೆ.
- 'ತರಂಗ', ಕನ್ನಡದ ವಾರಪತ್ರಿಕೆಗಳಲ್ಲಿ ಅತಿ ಹೆಚ್ಛಿನ ಪ್ರಸಾರ ಹೊಂದಿದೆ.
- 'ತುಷಾರ', ಮಾಸಪತ್ರಿಕೆ.
- 'ರೂಪತಾರ', ಕನ್ನಡ ಚಲನಚಿತ್ರಗಳ ಬಗ್ಗೆ ಮಾಹಿತಿ ನೀಡುವ ತಿಂಗಳ ಪತ್ರಿಕೆ
- 'ತುಂತುರು', ಮಕ್ಕಳ ಪಾಕ್ಷಿಕ.
ಕಿರುತೆರೆ ಧಾರವಾಹಿಯ ಸಾಹಿತಿಯಾಗಿ
- ಶ್ರೀಮತಿ. ಪೈ ಬರೆದು ನಿರ್ದೇಶಿಸಿದ ಸುಮಾರು ೨೫೨ ಎಪಿಸೋಡ್ ಗಳ 'ಚಂದ್ರಮ' ಈ-ಟಿವಿಯಲ್ಲಿ ಬಿತ್ತರಗೊಂಡಿತು.
- ಮತ್ತೊಂದು ಧಾರಾವಾಹಿ 'ಗುಪ್ತಗಾಮಿನಿ' ೮ ಪ್ರಶಸ್ತಿಗಳನ್ನು ತನ್ನ ತೆಕ್ಕೆಯಲ್ಲಿ ಪಡೆದಿದೆ.
ಇತರ ಆಸಕ್ತಿಗಳು
'ಎಂಬ್ರಾಯ್ಡರಿ', 'ಭಾರತೀಯ ಅಡುಗೆ-ಕಲೆಗಳಲ್ಲಿ ಅತಿ ಆಸಕ್ತರು'. ವೈಚಾರಿಕತೆಯ ಮನೋಭಾವ, ವೈಜ್ಞಾನಿಕ ದೃಷ್ಟಿಕೋನ, ಹಾಗೂ ಹೊಸವಿಚಾರಗಳನ್ನು ಒರೆಹಚ್ಚಿ ತರಂಗ ಪತ್ರಿಕೆಯಲ್ಲಿ 'ಪ್ರಿಯ ಓದುಗ', ಎನ್ನುವ ಶೀರ್ಷಿಕೆಯಲ್ಲಿ ಹಲವಾರು ಲೇಖನಗಳನ್ನು ಬರೆದಿದ್ದಾರೆ. ವೇದಾಂತದಿಂದ 'ಉಪನಿಷದ್','ಭಗವದ್ಗೀತ','ಯೋಗ','ತಂತ್ರ', 'ಜೆನ್' ಬಗ್ಗೆ ಎಲ್ಲಾ ಪ್ರಕಾರದ ಲೇಖನಗಳನ್ನೂ ಪ್ರಕಟಿಸಿದ್ದಾರೆ. ಒಳ್ಳೆಯ ಸಾಮಾಜಿಕ ಕಾರ್ಯಕರ್ತೆಯೆಂದು ಪರಿಚಿತರಾಗಿದ್ದಾರೆ. ಮಹಿಳೆಯರ ಹಿತರಕ್ಷಣೆ ಬಗ್ಗೆ ಕಾಳಜಿಯಿಂದ ಮಣಿಪಾಲ್ ಮಹಿಳಾ ಸಮಾಜ ಅಧ್ಯಕ್ಷೆಯಾಗಿ ಸೇವೆಸಲ್ಲಿಸುತ್ತಿದ್ದಾರೆ.
ಗೌರವ ಡಾಕ್ಟರೇಟ್ ಪದವಿ
ಗುಲ್ಬರ್ಗಾನಗರದಲ್ಲಿ ೩, ಮಾರ್ಚ್, ಭಾನುವಾರ ನಡೆದ ಸನ್.೨೦೧೩ ರ ಸಾಲಿನ, ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ನಾಲ್ಕನೇ ಘಟಿಕೋತ್ಸವದ ಪದವಿ ಪ್ರದಾನ ಸಮಾರಂಭದಲ್ಲಿ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಲಾಯಿತು.[೨] ಕುಲಪತಿ ಡಾ.ಮೀನಾ ಚಂದಾವರಕರ್ ಈ ಗೌರವ ಪ್ರದಾನ ಮಾಡಿದರು.
ಕೃತಿಗಳು
ಪ್ರಶಸ್ತಿ ಪುರಸ್ಕಾರಗಳು
- ಪತ್ರಿಕೋದ್ಯಮದಲ್ಲಿ ಅತಿ ಹೆಚ್ಚಿನ ಸಾಧನೆಗಾಗಿ 'ಅತ್ತಿಮಬ್ಬೆ ಪ್ರಶಸ್ತಿ'
- ಸನ್.೨೦೦೩ ರ ವರ್ಷದ ವ್ಯಕ್ತಿ ಅತಿ ಹೆಚ್ಚಿನ ಕಾರ್ಯಕ್ಷೇತ್ರದಲ್ಲಿ ಕೊಡುಗೆ.
- ಸನ್.೨೦೦೫ ರಲ್ಲಿ, ಶ್ರವಣಬೆಳಗೊಳದ ಭಟ್ಟಾರಿಕ ಚಾರುಕೀರ್ತಿ ಸ್ವಾಮೀಜಿಯವರ ಹಸ್ತದಿಂದ 'ಸಾಧನ ಪ್ರಶಸ್ತಿ'
- ಸನ್.೨೦೦೬ ರಲ್ಲಿ ಪತ್ರಿಕೋದ್ಯಮದಲ್ಲಿ ಅತ್ಯುತ್ತಮ ಸೇವೆಸಲ್ಲಿಸಿದ
- ಸನ್.೨೦೦೭ ರಲ್ಲಿ,ಹೊಸನಗರದ ಶ್ರೀ ರಾಮಚಂದ್ರ ಮಠ್ ವತಿಯಿಂದ, 'ಶ್ರೀ ಮಾತಾಪ್ರಶಸ್ತಿ'
- ಸನ್. ೨೦೧೩ ರಲ್ಲಿ ಪತ್ರಿಕೋದ್ಯಮದಲ್ಲಿನ ಸೇವೆಯನ್ನು ಗಮನಿಸಿ, 'ಗೌರವ ಡಾಕ್ಟರೇಟ್ ಪದವಿ'.
- ಸನ್.೨೦೧೫ ರಲ್ಲಿ ಮುಂಬಯಿನಗರದ 'ಚೆಂಬೂರು ಕರ್ನಾಟಕ ಸಂಘದ ರಾಷ್ಟ್ರೀಯ ಕನ್ನಡ ರತ್ನ ಪ್ರಶಸ್ತಿ' ಪ್ರದಾನ.[೩]
- 'ಆರ್ಯಭಟ್ಟ ಸಾಂಸ್ಕೃತಿಕ ಸಂಸ್ಥೆ'ಯ ವತಿಯಿಂದ ಪ್ರಶಸ್ತಿ.
Remove ads
ಉಲ್ಲೇಖಗಳು
Wikiwand - on
Seamless Wikipedia browsing. On steroids.
Remove ads