ಕುವೆಂಪು

ರಸ ಋಷಿ, ಭಾರತೀಯ ಕವಿ, ನಾಟಕಕಾರ, ಚಿಂತಕ (೧೯೦೪-೧೯೯೪) From Wikiquote, the free quote compendium

Remove ads

ಪರಿಚಯ

ಇಪ್ಪತ್ತನೆಯ ಶತಮಾನ ಕಂಡ ದೈತ್ಯ ಪ್ರತಿಭೆ. ವರಕವಿ ಬೇಂದ್ರೆಯವರಿಂದ 'ಯುಗದ ಕವಿ ಜಗದ ಕವಿ' ಎನಿಸಿಕೊಂಡವರು. ವಿಶ್ವಮಾನವ ಸಂದೇಶ ನೀಡಿದವರು. ಕನ್ನಡದ ಎರಡನೆಯ 'ರಾಷ್ಟ್ರಕವಿ. ಜ್ಞಾನಪೀಠ ಪ್ರಶಸ್ತಿಯನ್ನೂ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನೂ ಮೊದಲ ಬಾರಿಗೆ ಕನ್ನಡಕ್ಕೆ ತಂದುಕೊಟ್ಟವರು. ಕರ್ನಾಟಕ ಸರ್ಕಾರ ಕೊಡಮಾಡುವ ಕರ್ನಾಟಕ ರತ್ನ ಪ್ರಶಸ್ತಿ ಹಾಗೂ ಪಂಪ ಪ್ರಶಸ್ತಿಗಳನ್ನು ಮೊದಲ ಬಾರಿಗೆ ಪಡೆದವರು. ಕುವೆಂಪು, ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ (ಡಿಸೆಂಬರ್ ೨೯, ೧೯೦೪[] - ನವೆಂಬರ್ ೧೧, ೧೯೯೪), ಕನ್ನಡದ ಅಗ್ರಮಾನ್ಯ ಕವಿ, ಕಾದಂಬರಿಕಾರ, ನಾಟಕಕಾರ, ವಿಮರ್ಶಕ ಮತ್ತು ಚಿಂತಕರಾಗಿದ್ದರು.

Remove ads

ನುಡಿಗಳು

  • ಓ ನನ್ನ ಚೇತನ, ಆಗು ನೀ ಅನಿಕೇತನ.
  • ಕಲೆಗಾಗಿ ಕಲೆ ಎಂಬ ಮಾತು ಕಲಾಪೂರ್ಣವಾದರೂ ಪೂರ್ಣವಲ್ಲ
  • ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ
  • ನೂರು ದೇವರನು ನುಕಾಚೆ ದೂರ, ಭಾರತಾಂಬೆಯೇ ದೇವಿ ಪೂಜಿಸುವ ಬಾರ
  • ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು
  • ರಾಮಾವತಾರಕಿಂ ಮಿಗಿಲೈಸೆ ರಾಮಾಯಣವತಾರಂ
  • ಕನ್ನಡವೇ ಸತ್ಯ, ಕನ್ನಡವೇ ನಿತ್ಯ
  • ಭಾಷೆ ಲೋಕೋಪಯೋಗಿಯೂ ಹೌದು, ಭಾವೊಪಯೋಗಿಯೂ ಹೌದು
  • ಜ್ಯೋತಿಯಿರ್ಪೆಡೆಯಲ್ಲಿ ಭಗವದ್ವಿಭೂತಿಯಂ ದರ್ಶಿಸುತೆ
  • ಪ್ರಿಥಿವಿಯ ಪ್ರಥಮ ಪ್ರಭಾತದಲಿ ಇತಿಹಾಸ ದೃಷ್ಟಿಗಸ್ಪಷ್ಟ ಪ್ರಾಚಿ ದಿಗಂತದಲಿ ನವಜಾತ ಶಿಶುವಾಗಿ ನಲಿದೆಯೌ ನೇನೆಲೌ ಸಂಸ್ಕೃತದ ವಾಗ್ದೇವಿ ನಿನ್ನನನುಳಿದೆಲ್ಲಿಯದು ಕನ್ನಡದ ಬದುಕು?
  • ಆನಂದಮಯ ಈಜಾಗ ಹೃದಯ ಏತಕೆ ಭಯ ಮಾಣೋ, ಸೂರ್ಯೋದಯ ಚಂದ್ರೋದಯ ದೇವರ ದಯಾ ಕಾಣೋ
  • ಮನುಜ ಮತ ವಿಶ್ವಪಥ
  • ಆದರ್ಶಗಳು ಪ್ರತಿದಿನ ಪಠಣ ಮಾಡಬೇಕಾದ ಗೊಡ್ಡು ಮಂತ್ರಗಳಲ್ಲ. ಅವು ನಮ್ಮ ಜೀವನದ ಉಸಿರು. - ೦೫:೦೦, ೭ ಫೆಬ್ರುವರಿ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಒಳ್ಳೆಯ ಬರಹಗಾರ ತನ್ನ ವಿರುದ್ಧ ತಾನೇ ಯೋಚಿಸಬಲ್ಲವ. ಕೆಟ್ಟ ಬರಹಗಾರ ತನ್ನನ್ನು ಬಿಟ್ಟರೆ ಇಲ್ಲ ಅಂತ ತಿಳಿದುಕೊಂಡಿರುತ್ತಾನೆ. - ೦೬:೩೨, ೭ ಏಪ್ರಿಲ್ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ವಿದ್ಯಾರ್ಥಿಗಳು ಭತ್ತದ ಚೀಲಗಳಾಗಬಾರದು, ಭತ್ತದ ಗದ್ದೆಗಳಾಗಬೇಕು. - ೦೯:೧೫, ೧೪ ಏಪ್ರಿಲ್ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ನಂಬಿ ಅನುಭವಿಸುವುದಕ್ಕಿಂತ, ಅನುಭವಿಸಿ ನಂಬುವುದೇ ಶಾಶ್ವತ ಮತ್ತು ಸತ್ಯ. - ೦೪:೫೧, ೧೪ ಜುಲೈ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಹಿಂದೆ ಸರಿವುದೆ ಸಾವು! ಆತ್ಮಹತ್ಯೆ! - ೦೫:೪೪, ೧೨ ಡಿಸೆಂಬರ್ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಉತ್ಸಾಹವೆಂಬುದು ಕಲ್ಲಿದ್ದಲ ಒಳಗಿನ ಕಾವಾಗಬೇಕೆ ಹೊರತು, ಹುಲ್ಲಿಗೆ ಹತ್ತಿದ ಬೆಂಕಿಯಾಗಬಾರದು. - ೧೫:೩೪, ೧೭ ಜನವರಿ ೨೦೧೬ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಮನುಷ್ಯನ ಅಂತಃಕರಣದಲ್ಲಿ ಸಾತ್ವಿಕತೆಯ ಜ್ಯೋತಿಯನ್ನು ಜಾಗೃತಗೊಳಿಸುವುದು ಕರುಣೆ. - ೧೨:೧೨, ೨೪ ಮೇ ೨೦೧೬ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಉತ್ತಮವಾದುದು ಶ್ರಮವಿಲ್ಲದೆ ಲಭಿಸದು , ಇಚ್ಹೆಯಿಲ್ಲದಿದ್ದರಂತೂ ಅದು ಸಾಧ್ಯವೇ ಅಲ್ಲ .
  • ಸತ್ಯಕ್ಕೆ ಹೆದರುವವನು ಅಥವಾ ನಾಚುವವನು ನಿಜವಾದ ಜಿಜ್ಞಾಸುವಾಗಲಾರನು.
  • ವಿದ್ಯಾರ್ಥಿ ಭತ್ತ ಬೆಳೆಯುವ ಗದ್ದೆಗಳಾಗಬೇಕು, ಬರಿಯ ಚೀಲಗಳಾಗಬಾರದು.
  • ಇವತ್ತಿನ ಹಾರೈಕೆ, ನಾಳಿನ ಪೂರೈಕೆ, ಇಂದಿನ ಕನಸು, ನಾಳೆಯ ನನಸು.
  • ಬಹುಜನರು ಹೇಳಿದುದೇ ಬಹಳ ಸತ್ಯವಾಗುವುದಿಲ್ಲ. - ೦೬:೩೭, ೨೫ ನವೆಂಬರ್ ೨೦೧೬ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಸತ್ಯಕ್ಕೆ ಹೆದರುವವನು ನಿಜವಾದ ಜಿಜ್ಞಾಸುವಾಗಲಾರ. - ೦೯:೨೪, ೨೮ ಡಿಸೆಂಬರ್ ೨೦೧೬ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಬುದ್ಧಿ–ಭಾವಗಳ ವಿದ್ಯುದಾಲಿಂಗನವೇ ಪ್ರತಿಭೆ. - ೦೭:೪೯, ೨೮ ಆಗಸ್ಟ್ ೨೦೧೭ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಉತ್ತಮವಾದುದು ಶ್ರಮವಿಲ್ಲದೆ ಲಭಿಸದು. ಇಚ್ಛೆಯಿಲ್ಲದಿದ್ದರಂತೂ ಅದು ಸಾಧ್ಯವೇ ಅಲ್ಲ. ೦೧:೧೧, ೩೦ ಏಪ್ರಿಲ್ ೨೦೧೮ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಕನ್ನಡದ ವಿಷಯದಲ್ಲಿ ನಾನು ಬುಲ್‍ಡೋಜ಼ರ್ ನಂತೆ ನುಗ್ಗುತ್ತೇನೆ. ದಾರಿ ಬಿಟ್ಟಿರೋ ಬದುಕುಳಿಯುತ್ತೀರಿ -ವಿಚಾರಕ್ರಾಂತಿಗೆ ಆಹ್ವಾನ*
  • ಸರ್ವೋದಯವಾಗಲಿ ಸರ್ವರಲಿ
  • ಕನ್ನಡವೆನೆ ಕುಣಿದಾಡುದೆನ್ನೆದೆ; ಕನ್ನಡವೆನೆ ಕಿವಿ ನಿಮಿರುವುದು
  • ಕನ್ನಡಕ್ಕಾಗಿ ಕೈಯೆತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ. ಕನ್ನಡಕ್ಕಾಗಿ ಕೊರಳೆತ್ತು ಅಲ್ಲಿ ಪಾಂಚಜನ್ಯ ಮೊಳಗುತ್ತದೆ.
  • ಕನ್ನಡಕೆ ಹೋರಾಡು ಕನ್ನಡದ ಕಂದಾ, ಕನ್ನಡವ ಕಾಪಾಡು ನನ್ನ ಆನಂದಾ.
  • ಆಯಾ ಪ್ರಾಂತ್ಯಗಳಲ್ಲಿ ಆಯಾ ದೇಶಭಾಷೆಗಳಿಗೆ ಪ್ರಥಮ ಸ್ಥಾನ ಸಲ್ಲಬೇಕು. ಅಲ್ಲಿಯ ಶಿಕ್ಷಣ ಎಲ್ಲಾ ಮಟ್ಟಗಳಲ್ಲಿಯೂ ದೇಶಭಾಷೆಯಲ್ಲೇ ಸಾಗಬೇಕು.
  • ಕನ್ನಡಕ್ಕೆ ಪ್ರಪಂಚದಲ್ಲಿ ಎಲ್ಲಾದರೂ ಮಾನ್ಯಸ್ಥಾನ ದೊರೆಯಬೇಕಾದರೆ ಅದು ಇಲ್ಲಿ ಕರ್ನಾಟಕದಲ್ಲೇ. ಇನ್ನೆಲ್ಲಿಯೂ ಅಲ್ಲ.
  • ಮತ ಮನುಜ ಮತವಾಗಬೇಕು.
  • ಪಥ ವಿಶ್ವಪಥವಾಗಬೇಕು.
  • ಕರ್ನಾಟಕ, ಹಳೆಯದೆ ಅದು

ಹೊಸ ತಾಯಿಯ ಹೆಸರು
ತುಂಬುವುದಿದೆ ಜನಹೃದಯದ
ಭಾವೈಕ್ಯದ ಉಸಿರು.

Remove ads

ಉಲ್ಲೇಖ

ಭಾಹ್ಯ ಸಂಪರ್ಕ

ವಿಕಿಪೀಡಿಯದಲ್ಲಿ ಇದರ ಬಗ್ಗೆ ಒಂದು ಲೇಖನವಿದೆ:
ವಿಕಿಸೋರ್ಸ್ ಸಂಬಂಧಿಸಿದ ಒಂದು ಪುಟ ಇದೆ:
Loading related searches...

Wikiwand - on

Seamless Wikipedia browsing. On steroids.

Remove ads