ಅಲ್ಬೇನಿಯ
ಅಲ್ಬಾನಿಯವು ಅತಿದೊಡ್ಡ ಸಂಸತ್ತಿನ ಸಾಂವಿಧಾನಿಕ ಗಣರಾಜ್ಯವಾಗಿದೆ / From Wikipedia, the free encyclopedia
ಅಲ್ಬೇನಿಯ, ಅಧಿಕೃತವಾಗಿ ಅಲ್ಬೇನಿಯ ಗಣರಾಜ್ಯ (ಅಲ್ಬೇನಿಯದ ಭಾಷೆಯಲ್ಲಿ: Republika e Shqipërisë, ಅಥವಾ Shqipëria) ಯುರೋಪ್ ಖಂಡದ ಆಗ್ನೇಯ ಭಾಗದಲ್ಲಿರುವ ದೇಶ. ಉತ್ತರಕ್ಕೆ ಮಾಂಟೆನೆಗ್ರೊ, ಈಶಾನ್ಯಕ್ಕೆ ಕೊಸೊವೊ, ಪೂರ್ವಕ್ಕೆ ಉತ್ತರ ಮ್ಯಾಸೆಡೊನಿಯ ಹಾಗು ದಕ್ಷಿಣಕ್ಕೆ ಗ್ರೀಸ್ ಇವೆ. ಪಶ್ಚಿಮಕ್ಕೆ ಎಡ್ರಿಯಾಟಿಕ್ ಸಮುದ್ರ ಮತ್ತು ನೈರುತ್ಯಕ್ಕೆ ಐಯೊನಿಯನ್ ಸಮುದ್ರಗಳು ಇವೆ. ಅಲ್ಬೇನಿಯ ದೇಶವು ವಿಶ್ವ ಸಂಸ್ಠೆ, ನೆಟೊ, ಯುರೊಪಿಯನ್ ಭದ್ರತೆ ಹಾಗೂ ಸಹಕಾರ ಒಕ್ಕೂಟ, ಯುರೊಪಿಯನ್ ಮಂಡಳಿ, ವಿಶ್ವ ವ್ಯಾಪರ ಒಕ್ಕೂಟ, ಇಸ್ಲಾಮಿಕ್ ಒಕ್ಕೂಟದ ಸದಸ್ಯ ರಾಷ್ಟ್ರವಾಗಿದೆ. ಅಲ್ಲದೆ ಅಲ್ಬೇನಿಯವು ಮೆಡಿಟರೇನಿಯನ್ ಸಂಘವನ್ನು ಹುಟ್ಟುಹಾಕಿದ ರಾಷ್ಟ್ರಗಳಲ್ಲಿ ಒಂದಾಗಿದೆ. ಆಲ್ಬೇನಿಯವು ಜನವರಿ ೨೦೦೩ರಿಂದ ಯುರೊಪಿಯನ್ ಒಕ್ಕೂಟದ ಸಂಭಾವ್ಯ ರಾಷ್ಟ್ರವಾಗಿದ್ದು, ೨೮ ಎಪ್ರಿಲ್ ೨೦೦೯ರಂದು ಸದಸ್ಯತ್ವವನ್ನು ಕೋರಿದೆ. ಅಲ್ಬೇನಿಯ ಸಂಸದೀಯ ಪ್ರಜಾತಂತ್ರ ವ್ಯವಸ್ಥೆಯನ್ನು ಹೊಂದಿದ್ದು, ಪರಿವರ್ತಿತ ಆರ್ಥಿಕ ವ್ಯವಸ್ಥೆಯಾಗಿದೆ. ತಿರಾನ ನಗರವು ಅಲ್ಬೇನಿಯಾದ ರಾಜಧಾನಿ. ಅಂದಾಜು ಜನಸಂಖ್ಯೆ ೬೦೭,೪೬೭. ಈ ನಗರವು ಅಲ್ಬೇನಿಯಾದ ಪ್ರಮುಖ ಆರ್ಥಿಕ ಕೇಂದ್ರವೂ ಹೌದು. ದೇಶದ ಮುಕ್ತ ಮಾರುಕಟ್ಟೆ ಸುಧಾರಣೆಯಿಂದಾಗಿ ಇಂಧನ/ಶಕ್ತಿ ಮತ್ತು ಸಾರಿಗೆ ವ್ಯವಸ್ಥೆಗಳಲ್ಲಿ ವಿದೇಶೀ ಬಂಡವಾಳ ಹರಿದು ಬರುತ್ತಿದೆ.
ಅಲ್ಬೇನಿಯ ಗಣರಾಜ್ಯ Republika e Shqipërisë ರಿಪಬ್ಲಿಕ ಎ ಶ್ಕಿಪೆರಿಸೆ | |
---|---|
Motto: Ti Shqipëri më jep nder më jep emrin shqipëtar | |
Anthem: Rreth flamurit të përbashkuar ("ಬಾವುಟದ ಸುತ್ತ ಒಂದಾಗೋಣ") | |
Capital and largest city | ತಿರಾನ |
Official languages | ಅಲ್ಬೇನಿಯದ ಭಾಷೆ |
Demonym(s) | Albanian |
Government | ಸಂಸದೀಯ ಗಣರಾಜ್ಯ |
• ರಾಷ್ಟ್ರಪತಿ | ಬಾಮಿರ್ ಟೊಪಿ |
• ಪ್ರಧಾನ ಮಂತ್ರಿ | ಸಾಲಿ ಬೆರಿಶ |
ಸ್ವಾತಂತ್ರ್ಯ | |
• ದಿನ | ನವೆಂಬರ್ ೨೮ ೧೯೧೨ |
• Water (%) | 4.7 |
Population | |
• ೨೦೨೪ estimate | 3,600,523 (೧೩೦ನೆಯ) |
GDP (PPP) | ೨೦೦೭ estimate |
• Total | $19.818 ಶತಕೋಟಿ[1] (೧೧೨ನೆಯ) |
• Per capita | $6,259 (೧೦೦ನೆಯ) |
Gini (೨೦೦೨) | 28.2 low |
HDI (2004) | 0.784 high · 73rd |
Currency | ಲೆಕ್ (ALL) |
Time zone | UTC+1 (CET) |
• Summer (DST) | UTC+2 (CEST) |
Calling code | 355 |
Internet TLD | .al |