ಆಂಜಿಯೋಪ್ಲ್ಯಾಸ್ಟಿ
From Wikipedia, the free encyclopedia
ಕಿರೀಟಕಧಮನಿಯ ರೋಗದಿಂದ ಹೃದಯಸ್ನಾಯುವಿಗೆ ಉಂಟಾಗುವ ರಕ್ತಪೂರೈಕೆಗೆ ಭಂಗವಾದುದನ್ನು ಹೋಗಲಾಡಿಸಲು ಹೃದಯಕ್ಕೆ ಹೊಸ ರಕ್ತನಾಳಗಳ ಜೋಡಣೆಯ ಬೈಪಾಸ್ ಸರ್ಜರಿಯ ಬದಲು, ಇಂದು ಬಳಕೆಗೆ ಬಂದಿರುವ ನಾವಿನ್ಯಪೂರ್ಣ ಉಪಕರಣಗಳು ಮತ್ತು ತಾಂತ್ರಿಕ ಮುನ್ನಡೆಯಿಂದ ಹೊಸ ಚಿಕಿತ್ಸಾ ವಿಧಾನಗಳು ರೂಪುಗೊಂಡಿದ್ದು, ಅವು ಹೃದಯದ ರಕ್ತಪೂರೈಕೆಯನ್ನು ಸರಾಗಗೊಳಿಸುವಲ್ಲಿ ಸಮರ್ಥವಾಗಿವೆ.
ನೆಣದ ಅಂಶಗಳು ಪೆಡಸುಗೊಂಡ ಕಿರೀಟಕಧಮನಿಯ ಒಳ ಭಿತ್ತಿಯಲ್ಲಿ ಒಗ್ಗೂಡಿಬಿದ್ದು ರಕ್ತಪ್ರವಾಹದ ದಾರಿಗೆ ಅಡ್ಡಿಯನ್ನುಂಟು ಮಾಡಿ ಹೃದಯಸ್ನಾಯುವಿಗೆ ರಕ್ತ ಪೂರೈಕೆಯನ್ನು ಕಡಿಮೆ ಮಾಡುವುದರ ಫಲ ಹೃದಯ ವೇದನೆ ಮತ್ತು ಹೃದಯಾಘಾತ. ಕಿರೀಟಧಮನಿಯ ರೋಗಕ್ಕೆ ಕಾರಣವಾದ ಕಿರಿದಾದ ಇಲ್ಲವೆ ಮುರುಟಿ ಹೋದ ಧಮನಿಯ ಬದಲು ಬೇರೆ ರಕ್ತನಾಳಗಳನ್ನು ಜೋಡಿಸಿ ರಕ್ತ ಪ್ರವಾಹಕ್ಕೆ ಬದಲಿ ಮಾರ್ಗ ಕಲ್ಪಿಸುವ (ಬೈಪಾಸ್) ಶಸ್ತ್ರಕ್ರಿಯೆ ಬದಲು ರಕ್ತನಾಳಗಳಲ್ಲಿ ಉಂಟಾದ ಅಡ್ಡಿಯನ್ನೂ ಹೋಗಲಾಡಿಸುವ ಹೊಸವಿಧಾನಗಳಲ್ಲಿ ಮುಖ್ಯವಾದುದು ಚರ್ಮದ ಮೂಲಕ ಕಿರೀಟ ಧಮನಿಯ ಒಳಮಾರ್ಗದ ರಿಪೇರಿ (ಪರ್ಕ್ಸುಟೇನಿಯಸ್ ಟ್ರಾಸ್ಲೂಮಿನಲ್ ಕರೊನರಿ ಆಂಜಿಯೋಪ್ಲಾಸ್ಟಿ)[1]
ಸಾಂಕೇತಿಕವಾಗಿ ಆಂಜಿಯೋಪ್ಲ್ಯಾಸ್ಟಿ ಎಂಬುದು ಅಪಧಮನಿಕಾಠಿಣ್ಯದ ಪರಿಣಾಮವಾಗಿ ಉಂಟಾಗುವ ಸಂಕುಚಿತವಾಗುವ ಅಥವಾ ತಡೆಯಾದ ರಕ್ತನಾಳವನ್ನು ಯಾಂತ್ರಿಕವಾಗಿ ಅಗಲಗೊಳಿಸುವ ತಾಂತ್ರಿಕ ವಿಜ್ಞಾನದ ವಿಧಾನವಾಗಿದೆ. ಬಲೂನ್ ಕೆಥೆಟರ್ ಎಂದು ಕರೆಯಲ್ಪಡುವ ಒಂದು ನಿರ್ದೇಶಿತ ಚಾಲಕ ಕಂಬಿ ಅಥವಾ ಒಂದು ಗೈಡ್ ವೈಯರ್ ನ ಮೇಲಿರುವ ಖಾಲಿಯಾಗಿರುವ ಹಾಗು ಚಪ್ಪಟೆಯಾದ ಬಲೂನನ್ನು, ಸಂಕುಚಿತಗೊಂಡ ಜಾಗಗಳಿಗೆ ಹಾಯಿಸಲಾಗುತ್ತದೆ. ನಂತರದಲ್ಲಿ ೭೫ ರಿಂದ ೫೦೦ ಬಾರಿ ಸಾಮಾನ್ಯ ರಕ್ತದೊತ್ತಡಕ್ಕೆ(೬ ರಿಂದ ೨೦ರ ವಾಯುಭಾರ) ಸಮನಾದ ಮತ್ತು ನಿರ್ಧಿಷ್ಟಪಡಿಸಿದ ನೀರಿನ ಒತ್ತಡಗಳನ್ನು ಬಳಸಿಕೊಂಡು ನಿರ್ದಿಷ್ಟ ಗಾತ್ರಕ್ಕೆ ಹಿಗ್ಗಿಸಲಾಗುತ್ತದೆ. ಒಳಸೇರಿದ ಬಲೂನು ಕೊಬ್ಬಿನ ಶೇಖರಣೆಯನ್ನು ಸಣ್ಣಚೂರುಗಳಾಗಿ ಒಡೆದು ಹಾಕುವ ಮೂಲಕ ರಕ್ತನಾಳದ ಹರಿವಿನಲ್ಲಿ ಸುಧಾರಣೆ ತರುತ್ತದೆ.ಇದಾದ ನಂತರದಲ್ಲಿ ಬಲೂನ್ ಸಂಕುಚಿತವಾಗಿ ಗಾಳಿ ಕಳೆದುಕೊಳ್ಳುತ್ತದೆ,ಆಗ ಅದನ್ನು ಹಿಂದಕ್ಕೆ ಎಳೆದುಕೊಳ್ಳಲಾಗುತ್ತದೆ.
ಈ ಪದವು, "ನಾಳ" ಎಂಬ ಅರ್ಥವನ್ನು ನೀಡುವ ಅಗ್ಗೆಯಿಯೋಸ್ αγγειος ಹಾಗು "ರಚನೆಯಾದ" ಅಥವಾ "ಆಕಾರಗೊಂಡ" ಎಂಬ ಅರ್ಥವನ್ನು ನೀಡುವ ಪ್ಲ್ಯಾಸ್ಟೋಸ್ πλαστός ಎಂಬ ಗ್ರೀಕ್ ಪದಗಳ ವೈದ್ಯಕೀಯ ಪರಿಭಾಷಾ aggeîos ಅಂದರೆ "ನಾಳ" plastós ಅಂದರೆ "ರಾಚನಿಕ" ಇಲ್ಲವೆ "ಸಂಪೂರಿತ"ವಾದುದು ಎನ್ನಲಾಗಿದೆ. ಆಂಜಿಯೋಪ್ಲ್ಯಾಸ್ಟಿ ವಿಧಾನವು ಎಲ್ಲ ರೀತಿಯ ನಾಳೀಯ ಮಧ್ಯಸ್ಥಿಕೆಗಳನ್ನು ಒಳಗೊಂಡಿದೆ. ಇದನ್ನು ಸರ್ವೆಸಾಮಾನ್ಯವಾಗಿ ಅತ್ಯಲ್ಪ ಪ್ರಮಾಣದಲ್ಲಿ ಆಕ್ರಮಿಸುವ ಅಥವಾ ಚರ್ಮದ ಮೂಲಕ ತೂರಿಸುವ ವಿಧಾನದಿಂದ ನಡೆಸಲಾಗುತ್ತದೆ.