ಇಂಡಿಯಾನಾ
From Wikipedia, the free encyclopedia
ಟೆಂಪ್ಲೇಟು:Fix bunching
Indiana State symbols | |
---|---|
The Flag of Indiana. | |
The Seal of Indiana. | |
Animate insignia | |
Bird(s) | Cardinal |
Flower(s) | Peony |
Tree | Tulip tree |
Inanimate insignia | |
Beverage | Water |
Motto | The Crossroads of America[4] |
Poem | "Indiana" |
Slogan(s) | Restart your Engines |
Soil | Miami |
Song(s) | "On the Banks of the Wabash, Far Away" |
Route marker(s) | |
State Quarter | |
Released in 2002 | |
Lists of United States state insignia |
State of Indiana | |||||||||||
| |||||||||||
ಅಧಿಕೃತ ಭಾಷೆ(ಗಳು) | English | ||||||||||
ಭಾಷೆಗಳು | Northern, Midwestern and Southern English Dialects, ಜರ್ಮನ್, French, ಸ್ಪ್ಯಾನಿಷ್, Ilocano Other Languages | ||||||||||
Demonym | Hoosier[1] | ||||||||||
ರಾಜಧಾನಿ | Indianapolis | ||||||||||
ಅತಿ ದೊಡ್ಡ ನಗರ | Indianapolis | ||||||||||
ಅತಿ ದೊಡ್ಡ ನಗರ ಪ್ರದೇಶ | Indianapolis | ||||||||||
ವಿಸ್ತಾರ | Ranked 38th in the US | ||||||||||
- ಒಟ್ಟು | 36,418 sq mi (94,321 km²) | ||||||||||
- ಅಗಲ | 140 miles (225 km) | ||||||||||
- ಉದ್ದ | 270 miles (435 km) | ||||||||||
- % ನೀರು | 1.5 | ||||||||||
- Latitude | 37° 46′ N to 41° 46′ N | ||||||||||
- Longitude | 84° 47′ W to 88° 6′ W | ||||||||||
ಜನಸಂಖ್ಯೆ | 16thನೆಯ ಅತಿ ಹೆಚ್ಚು | ||||||||||
- ಒಟ್ಟು | 6,423,113 (2009 est.)[2] | ||||||||||
- ಜನಸಂಖ್ಯಾ ಸಾಂದ್ರತೆ | 169.5/sq mi (65.46/km²) 17thನೆಯ ಸ್ಥಾನ | ||||||||||
ಎತ್ತರ | |||||||||||
- ಅತಿ ಎತ್ತರದ ಭಾಗ | Hoosier Hill Franklin Township, Wayne County [3] 1,257 ft (383 m) | ||||||||||
- ಸರಾಸರಿ | 689 ft (210 m) | ||||||||||
- ಅತಿ ಕೆಳಗಿನ ಭಾಗ | Ohio River and mouth of Wabash River Point Township, Posey County [3] 320 ft (98 m) | ||||||||||
ಸಂಸ್ಥಾನವನ್ನು ಸೇರಿದ್ದು | December 11, 1816 (19th) | ||||||||||
Governor | Mitch Daniels (R) | ||||||||||
Lieutenant Governor | Becky Skillman (R) | ||||||||||
U.S. Senators | Richard Lugar (R) Evan Bayh (D) | ||||||||||
Congressional Delegation | 5 Democrats, 4 Republicans (list) | ||||||||||
Time zones | |||||||||||
- 80 counties | Eastern UTC-5/-4 | ||||||||||
- 12 counties in Evansville and Gary Metro Areas For more information, see Time in Indiana | Central: UTC-6/-5 | ||||||||||
Abbreviations | IN US-IN | ||||||||||
Website | www.in.gov | ||||||||||
ಇಂಡಿಯಾನಾ ರಾಜ್ಯ /[unsupported input]ɪndiˈænə/ವು ಅಮೆರಿಕಾ ಸಂಯುಕ್ತ ಸಂಸ್ಥಾನದ ಒಂದು ರಾಜ್ಯವಾಗಿದ್ದು, ಒಕ್ಕೂಟದ ೧೯ನೇ ರಾಜ್ಯವಾಗಿ ಸೇರ್ಪಡೆಯಾಗಿದೆ. ಬೃಹತ್ ಸರೋವರ ಪ್ರದೇಶದಲ್ಲಿ ನೆಲೆಗೊಂಡಿರುವ ಈ ರಾಜ್ಯವು, ಸುಮಾರು ೬.೩ ಮಿಲಿಯನ್ ನಿವಾಸಿಗಳನ್ನು ಹೊಂದಿದೆ, ಜನಸಂಖ್ಯೆಯಲ್ಲಿ ೧೬ನೇ ಸ್ಥಾನದಲ್ಲಿದೆ ಮತ್ತು ಜನಸಾಂದ್ರತೆಯಲ್ಲಿ ೧೭ನೇ ಸ್ಥಾನದಲ್ಲಿದೆ.[5] ಭೂ ವಿಸ್ತೀರ್ಣದಲ್ಲಿ ೩೮ನೇ ಸ್ಥಾನದಲ್ಲಿರುವ ಇಂಡಿಯಾನಾವು, ಅಮೆರಿಕ ಖಂಡದ ಅಪ್ಪಲಾಚಿಯನ್ ಪರ್ವತ ಶ್ರೇಣಿಯ ಪಶ್ಚಿಮ ಭಾಗದಲ್ಲಿರುವ ಅತಿಸಣ್ಣ ರಾಜ್ಯ. ಇದರ ರಾಜಧಾನಿ ಹಾಗೂ ಬೃಹತ್ ನಗರಿಯೇ ಇಂಡಿಯಾನಾಪೊಲಿಸ್, ಮಿಸ್ಸಿಸ್ಸಿಪ್ಪಿ ನದಿಯ ಪೂರ್ವಭಾಗದಲ್ಲಿರುವ ನಗರಗಳಲ್ಲೇ ಇದು ಬೃಹತ್ ನಗರ. ಇಂಡಿಯಾನಾವು ೧ ಲಕ್ಷ ಜನಸಂಖ್ಯೆ ಹೊಂದಿರುವ ಹಲವು ಮೆಟ್ರೊಪಾಲಿಟನ್ ನಗರ ಹಾಗೂ ಹಲವಾರು ಸಣ್ಣ ಕೈಗಾರಿಕಾ ನಗರ ಮತ್ತು ಸಣ್ಣ ಪಟ್ಟಣಗಳನ್ನು ಹೊಂದಿದೆ. ವಿವಿಧ ಕ್ರೀಡಾ ಚಟುವಟಿಕೆ ಮತ್ತು ಸ್ಪರ್ಧೆಗಳಿಗೆ ಇಂಡಿಯಾನಾವು ಮಹತ್ವದ ತಾಣವಾಗಿ ಗುರುತಿಸಿಕೊಂಡಿದೆ. ವಿವಿಧ ಕ್ರೀಡಾ ತಂಡಗಳು ಮತ್ತು ಆಟಗಾರರು ಇಲ್ಲಿ ನೆಲೆಸಿದ್ದಾರೆ. ಅವುಗಳಲ್ಲಿ ಎನ್ಎಫ್ಎಲ್ನ ಇಂಡಿಯಾನಾಪೋಲಿಸ್ ಕೋಲ್ಟ್ಸ್, ಎನ್ಬಿಎಯ ಇಂಡಿಯಾನಾ ಪೇಸರ್ಸ್, ಇಂಡಿಯಾನಾಪೊಲಿಸ್ 500 ಮೋಟಾರ್ ಸ್ಪೋರ್ಟ್ಸ್ ಸ್ಪರ್ಧೆ (ಒಂದೇ ದಿನದಲ್ಲಿ ನಡೆಯುವ ವಿಶ್ವದ ಬೃಹತ್ ಕ್ರೀಡೆ ಇದಾಗಿದೆ) ಸೇರಿದಂತೆ ಇಲ್ಲಿ ನಡೆಯುವ ವಿವಿಧ ಅಥ್ಲೆಟಿಕ್ ಸ್ಪರ್ಧೆಗಳು ಜಗತ್ತಿನ ಗಮನ ಸೆಳೆಯುತ್ತಿವೆ. ಇಂಡಿಯಾನಾದ ನಿವಾಸಿಗಳನ್ನು ಹೂಸಿಯರ್ಸ್ (ಮೂಲನಿವಾಸಿಗಳು) ಎಂದು ಕರೆಯುತ್ತಾರೆ, ಆದರೆ, ಹೂಸಿಯರ್ಸ್ ಪದದ ಮೂಲಾರ್ಥ ಇನ್ನೂ ಸ್ಪಷ್ಟವಾಗಿಲ್ಲ. ಈ ಬಗ್ಗೆ ಹಲವು ವಿವರಣೆಗಳನ್ನು ನೀಡಲಾಗಿದೆ, ಜೇಮ್ಸ್ ವ್ಹಿಟ್ ಕಾಂಬ್ ರಿಲೆ ನೀಡಿರುವ ನವಿರಾದ ವ್ಯಾಖ್ಯಾನದ ಪ್ರಕಾರ, ಇಂಡಿಯಾನಾ ಪ್ರವರ್ತಕರು ಹೀಗೆ ಕೂಗುತ್ತಾರೆ, "Who's there?" in the wilderness or "Whose ear?" after a brawl. (ಈ ವಾಕ್ಯವು ಇಂಡಿಯನ್ನರು ವಾಸಿಸುವ ಭೂಮಿ ಎಂಬುದನ್ನು ಸೂಚಿಸುತ್ತದೆ) ಇಂಡಿಯಾನಾ ರಾಜ್ಯದ ಹೆಸರಿನ ಅರ್ಥ "ಇಂಡಿಯನ್ನರು ನೆಲೆಸಿರುವ ಭೂಪ್ರದೇಶ", ಅಥವಾ ಇನ್ನೂ ಸರಳವಾಗಿ "ಇಂಡಿಯನ್ನರ ಭೂಮಿ" ಎಂಬುದಾಗಿದೆ. ಇಂಡಿಯಾನಾ ಹೆಸರಿನ ಮೂಲವನ್ನು ತಿಳಿಯಬೇಕಾದರೆ, ೧೭೬೮ ರಲ್ಲಿ ನಡೆದಿರುವ ಇತಿಹಾಸದ ಘಟನಾವಳಿಗಳ್ನ್ನು ಒಮ್ಮೆ ಮೆಲುಕು ಹಾಕಬೇಕು. ಇಂಡಿಯಾನಾ ಭೂ ಪ್ರದೇಶವು ೧೮೦೦ ರಲ್ಲಿ ಏಕೀಕರಣಗೊಂಡಾಗ, ಅಮೆರಿಕ ಶಾಸನಸಭೆಯು ಮೊದಲ ಬಾರಿಗೆ ಇಂಡಿಯಾನಾ ಹೆಸರನ್ನು ಸೂಚಿಸಿತು. ಇದಕ್ಕೂ ಮುನ್ನಾ ಇಂಡಿಯಾನಾವು ವಾಯವ್ಯ ಪ್ರಾಂತ್ಯದ ಭಾಗವಾಗಿತ್ತು.[6][7] ಇದಕ್ಕೂ ಮುನ್ನಾ, ಇಂಡಿಯಾನಾದಲ್ಲಿ ಸಾವಿರಾರು ವರ್ಷಗಳ ಕಾಲ ವಿವಿಧ ಸಂಸ್ಕೃತಿಯ ಸ್ಥಳೀಯ ಜನರು ಮತ್ತು ಅಮೆರಿಕ ಇಂಡಿಯನ್ನರು ನೆಲೆಸಿದ್ದರು. ಅಮೆರಿಕದಲ್ಲಿರುವ ಅಪರೂಪದ ಪ್ರಾಚೀನ ತಾಣಗಳಲ್ಲಿ ಏಂಜೆಲ್ ಮೌಂಡ್ಸ್ ಸ್ಟೇಟ್ ಐತಿಹಾಸಿಕ ತಾಣವೂ ಒಂದು. ಇಲ್ಲಿ ಪುರಾತನ ಕಾಲದ ಅಪರೂಪದ ಕಲ್ಲು-ಮಣ್ಣಿನ ಕಲಾಕೃತಿಗಳನ್ನು ಸಂರಕ್ಷಿಸಲಾಗಿದೆ. ಇದು ನೈರುತ್ಯ ಇಂಡಿಯಾನಾದಲ್ಲಿ, ಇವಾನ್ಸ್ ವಿಲ್ಲೆ ಸಮೀಪದ ಬೆಟ್ಟ ಪ್ರದೇಶದಲ್ಲಿ ಕಾಣಸಿಗುತ್ತದೆ.[8]