ಇಲಿಯಾನಾ ಡಿ ಕ್ರೂಸ್
ಭಾರತೀಯ ಚಲನಚಿತ್ರ ನಟಿ / From Wikipedia, the free encyclopedia
ಇಲಿಯಾನಾ ಡಿ ಕ್ರೂಸ್ಇವರು ಭಾರತೀಯ ನಟಿ. ಇವರು ತೆಲುಗು ಹಾಗೂ ಬಾಲಿವುಡ್ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ೧ ನವೆಂಬರ್ ೧೯೮೭ರಲ್ಲಿ ಜನಿಸಿದರು.[1] ಇಲೀನಾ ರವರ ತವರು ಗೋವಾ ರಾಜ್ಯದ ಪಾರ್ರಾ ಎಂಬ ಊರು. ಇವರ ತಂದೆ ರೊನಾಲ್ಡೊ ಡಿ'ಕ್ರುಜ್, ತಾಯಿ ಸಮೀರಾ ಡಿ'ಕ್ರುಜ್. ಇಲೀನಾ ರವರ ಅಡ್ಡಹೆಸರು ಇಲ್ಲು ಇವರಿಗೆ ೨೦೦೬ ರಲ್ಲಿ ದೇವದಾಸು ತೆಲುಗು ಚಲನಚಿತ್ರಕ್ಕೆ ಫಿಲ್ಮ್ಫೇರ್ ಪ್ರಶಸ್ತಿ ದೊರಕಿದೆ.[2] ಪೋಕಿರಿ, ಜಾಲ್ಸ, ಕಿಕ್, ಜುಲಾಯಿ ಚಿತ್ರಗಳಲ್ಲಿ ನಟಿಸುವ ಮೂಲಕ ತೆಲುಗು ಚಿತ್ರರಂಗದಲ್ಲಿ ಪ್ರಮುಖ ನಟಿ ಆದರು. ೨೦೧೨ ರಲ್ಲಿ ಅನುರಾಗ್ ಬಾಸು ನಿರ್ದೇಶಿಸಿದ ಬರ್ಫಿ ಚಿತ್ರದ ಮೂಲಕ ಬಾಲಿವುಡ್ಗೆ ಪಾದಾರ್ಪಿಸಿದರು. ಇವರಿಗೆ ತಮ್ಮ ಚೊಚ್ಚಲ ಚಿತ್ರಕ್ಕೆ ಅತ್ಯುತ್ತಮ ಮಹಿಳಾ ನಟಿ ಫಿಲ್ಮ್ಫೇರ್ ಪ್ರಶಸ್ತಿ ದೊರಕಿದೆ. ನಂತರ ಆಕ್ಷ್ಯನ್ ಹಾಸ್ಯಚಿತ್ರ ಫಟಾ ಪೊಸ್ಟರ್ ನಿಕ್ಳಾ ಹೀರೊ(೨೦೧೩)[3], ಮೇ ತೇರಾ ಹೀರೊ(೨೦೧೪), ರುಸ್ತಮ್(೨೦೧೬)[4] ಮತ್ತು ಬಾದಾಯಿಹೋ (೨೦೧೭) ಚಿತ್ರಗಳಲ್ಲಿ ನಟಿಸಿದ್ದಾರೆ.
This article ವಿಕಿಪೀಡಿಯ ನಿಬಂಧನೆಗಳ ಪ್ರಕಾರ ಈ ಪುಟ ಅನಾಥ ಪುಟವಾಗಿದೆ. ಯಾಕೆಂದರೆ ಈ ಪುಟವನ್ನು ಬೇರೆ ಪುಟದಿಂದ ಸಂಪರ್ಕವಿಲ್ಲ. ದಯವಿಟ್ಟು ವಿಕಿಪೀಡಿಯದಲ್ಲಿರುವ ಬೇರೆ ಪುಟದಿಂದ ಈ ಪುಟವನ್ನು ಸಂಪರ್ಕ ಮಾಡಿ. (ಮಾರ್ಚ್ ೨೦೧೯) |
Quick Facts ಇಲೀನಾ ಡಿ'ಕ್ರುಜ್, ಜನನ ...
ಇಲೀನಾ ಡಿ'ಕ್ರುಜ್ | |
---|---|
ಜನನ | ೧ ನವೆಂಬರ್ ೧೯೮೭ |
ರಾಷ್ಟ್ರೀಯತೆ | ಪೋರ್ಚುಗೀಸ್ |
ವೃತ್ತಿ(ಗಳು) | ನಟಿ, ಮಾಡೆಲ್ |
Years active | ೨೦೦೬- |
ಪೋಷಕs |
|
Close