ಉಡ
ಈ ಉಡಗಳನ್ನು ಯುದ್ಧಗಳ ಸಮಯದಲ್ಲಿ ಕೋಟೆಯನ್ನು ಹತ್ತಲು ಬಳಸುತ್ತಿದ್ದರು / From Wikipedia, the free encyclopedia
ಇದು ಒಂದು ಬಗೆಯ ಕಾಡು ಪ್ರಾಣಿ. ರೆಪ್ಟೀಲಿಯ ವರ್ಗದ ವೆರಾನಿಡೀ ಕುಟುಂಬಕ್ಕೆ ಸೇರಿದ ಒಂದು ಬಗೆಯ ಪ್ರಾಣಿ (ಮಾನಿಟರ್ ಲಿಸರ್ಡ್) ಭಾರತದಲ್ಲಿ ಸಾಮಾನ್ಯವಾಗಿ ಕಂಡುಬರುವ ಇದರ ಹೆಸರು ವೆರಾನಸ್ ಬೆಂಗಾಲೆನ್ಸಿಸ್ ಇದರ ಶಾಸ್ತ್ರೀಯ ಹೆಸರು[1]. ಭಾರತದಲ್ಲಿ ಎಲ್ಲ ಬಗೆಯ ಕಾಡು ಹಾಗೂ ಮರುಭೂಮಿಯಲ್ಲಿ ಕಂಡುಬರುತ್ತದೆ. ಸು. 1.75 ಮೀ. ಉದ್ದ ಬೆಳೆಯುತ್ತದೆ. ಬಾಲವೇ ಸುಮಾರು ಒಂದು ಮೀ. ಉದ್ದ ಬೆಳೆಯುತ್ತದೆ. ಹಸಿರು ಅಥವಾ ಕಂದು ಬಣ್ಣದ ಈ ಉಡಕ್ಕೆ ಅಲ್ಲಲ್ಲಿ ಕಪ್ಪು ಚುಕ್ಕೆಗಳಿರುತ್ತವೆ. ಸರೀಸೃಪ ಸುಲಭವಾಗಿ ಮರಹತ್ತಬಲ್ಲುದು ಮತ್ತು ಈಜಬಲ್ಲುದು. ಮಾಂಸಾಹಾರಿ ಸರಿಸೃಪ. ತಾನು ಹಿಡಿಯಬಲ್ಲ ಯಾವ ಬಗೆಯ ಪ್ರಾಣಿಯನ್ನಾದರೂ ತಿನ್ನುತ್ತದೆ. ಪಕ್ಷಿಗಳ ಮತ್ತು ಮೊಸಳೆಗಳ ಮೊಟ್ಟೆ, ಏಡಿ, ಸಣ್ಣ ಆಮೆ, ಕೀಟಗಳು ಹಾಗೂ ಪ್ರಾಣಿಗಳ ಅವಶೇಷ ಸಹ ಇದರ ಆಹಾರ ಪಟ್ಟಿಯಲ್ಲಿ ಸೇರಿದೆ. ಸಂತಾನೋತ್ಪತ್ತಿ ಸಮಯ ಏಪ್ರಿಲ್ನಿಂದ ಅಕ್ಟೋಬರ್. ಹೆಣ್ಣು ಗುಳಿ ತೋಡಿ ಮೊಟ್ಟೆ ಇಡುವುದಾದರೂ ಕೆಲವೊಮ್ಮೆ ಗೆದ್ದಲಿನ ಹುತ್ತದಲ್ಲೂ ಮೊಟ್ಟೆ ಇಡುತ್ತದೆ. ಮರಿಯಾಗಲು ಇವು 8 ರಿಂದ 9 ತಿಂಗಳುಗಳ ಕಾಲ ತೆಗೆದುಕೊಳ್ಳುತ್ತದೆ. ಹೆಣ್ಣಿನ ದೇಹಗಾತ್ರವನ್ನು ಅವಲಂಬಿಸಿ 8-30 ಮೊಟ್ಟೆಗಳನ್ನು ಇಡುತ್ತದೆ.