ಕೊಳವಿ ಗೊರವ
From Wikipedia, the free encyclopedia
ಕೊಳವಿ ಗೊರವ ( ಆಂಗ್ಲ ಹೆಸರು: Piping Plover, ವೈಜ್ಞಾನಿಕ ಹೆಸರು: Charadrius melodus), ಮೈನ ಘಾತ್ರದ ಒಂದು ಚಿಕ್ಕ ಹಕ್ಕಿ. ಇದು ಉತ್ತರ ಅಮೇರಿಕ ಖಂಡದ ಸಮುದ್ರ ಹಾಗು ಪಂಚ ಮಹಾ ಸರೋವರಗಳ ತೀರ ಪ್ರದೇಶದಲ್ಲಿನ ಮರಳು ಹಾಗು ಸಣ್ಣ ಕಲ್ಲುಗಳ ನಡುವೆ ಗೂಡು ಮಾಡಿ, ತೀರದಲ್ಲೇ ನಡೆದಾಡುತ್ತ ಕೀಟಗಳು ಮತ್ತು ಚಿಕ್ಕ ಅಕಶೇರುಕಗಳನ್ನು ಸೇವಿಸಿ ಜೀವಿಸುತ್ತದೆ. ಕತ್ತಿನ ಸುತ್ತ ಹಾರದಂತಹ ಕಪ್ಪು ಬಣ್ಣದ ಪಟ್ಟೆ, ಹಣೆಯಮೇಲಿಂದ, ಕಣ್ಣಿನಿಂದ ಕಣ್ಣಿಗೆ ಹರಡಿರುವ ನೀಳವಾದ ಕಪ್ಪು ಕಿರು ಪಟ್ಟೆ, ಹಳದಿ-ಕೇಸರ ಬಣ್ಣದ ನೀಳವಾದ ಕಾಲುಗಳುಳ್ಳ ಈ ಹಕ್ಕಿಯ ಗಂಡುಗಳಲ್ಲಿ ಮಾತ್ರ, ಸಂತಾನ ಪ್ರಕ್ರಿಯಾ ಸಮಯದಲ್ಲಿ ಕೊರಳ ಕಪ್ಪು ಪಟ್ಟೆ ಎದೆಯ ವರೆಗೂ ಹರಡುತ್ತದೆ - ಇದೊಂದೇ ಗಂಡು ಮತ್ತು ಹೆಣ್ಣು ಹಕ್ಕಿಗಳ ಮೇಲ್ಮೈನಲ್ಲಿನ ವ್ಯತ್ಯಾಸ.
ತೀರದಲ್ಲಿ ಅಚಲವಾಗಿ ನಿಂತಾಗ ಈ ಪಕ್ಷಿಗಳು ತೀರದ ಮಣ್ಣು ಮತ್ತು ಕಲ್ಲಿನ ಬಣ್ಣಗಳಲ್ಲೊಂದಾಗಿ ಮಾಯವಾಗುತ್ತವೆ. ಇವುಗಳ ಬಣ್ಣ ತೀರದ ಪರಿಸರಕ್ಕೆ ಎಷ್ಟರಮಟ್ಟಿಗೆ ಹೋಲುತ್ತದೆ ಎಂದರೆ ತೀರದಲ್ಲಿ ಇವುಗಳ ಸ್ಥಾನ ನೋಟಕ್ಕೆ ಸಿಲುಕುವ ಮುನ್ನ ಕರೆಯ ಅಲನೆ ಇಂದ ಗುರುತಿಸಬೇಕಾಗುತ್ತದೆ.
ತುಸು ದೂರ ಓಡಿ, ತುಸುಕಾಲ ನಿಲ್ಲುವ ತೆರದಿ ಈ ಹಕ್ಕಿ ತೀರದಲ್ಲಿನ ಮರಳು/ಕಲ್ಲಿನಲ್ಲಿ ಆಹಾರವನ್ನು ಹುಡುಕುತ್ತಾ ಸಂಚರಿಸುತ್ತದೆ.
ಇವುಗಳು ಹಾರುವುದಕ್ಕಿಂತಲೂ ನಡೆಯುವ ಅಥವ ಓಡುವ ಪ್ರವೃತಿ ಹೊಂದಿವೆ.
ಇವುಗಳ ಒಟ್ಟು ಸಂತತಿ ಕೇವಲ ೬೫೦೦ ರಷ್ಟು. ೨೦೦೩ ರಲ್ಲಿ ನಡೆಸಿದ ಗಣನೆಯ ಪ್ರಕಾರ ಅಮೇರಿಕಾ ಖಂಡದ ಆಟ್ಲಾಂಟಿಕ್ ತೀರದಲ್ಲಿ ೩೩೫೦ ಅಂದರೆ ಒಟ್ಟು ಸಂತತಿಯಲ್ಲಿನ ೫೨% ರಷ್ಟು ಇವೆ .[1].
ಕಡಲ ಹಾಗು ಮಹಾ ಸರೋವರಗ ಮರಳಿನ ಹಾಗು ನುಣುಪು ಕಿರುಗಲ್ಲಿನ ತೀರಗಳು ಇವುಗಳ ಪ್ರಧಾನ ಸಂತಾನ ಅಭಿವೃದ್ಧಿ ಕ್ಷೇತ್ರಗಳು. ನೀರಿನ ಅಂಚಿನಲ್ಲಿನ ಕೀಟಗಳು ಮತ್ತು ಕಡಲ ಅಕಶೇರುಕಗಳೇ ಇದರ ಪ್ರಮುಖ ಆಹಾರ.