![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/9/9d/James_Buchanan-01.jpg/640px-James_Buchanan-01.jpg&w=640&q=50)
ಜೇಮ್ಸ್ ಬುಕಾನನ್
From Wikipedia, the free encyclopedia
ಜೇಮ್ಸ್ ಬುಕಾನನ್ , ಜೂ. (ಏಪ್ರಿಲ್ 23, 1791 –ಜೂನ್ 1, 1868) 1857-1861ವರೆಗೂ ಹದಿನೈದನೇ ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷರಾಗಿದ್ದರು. ಅಲ್ಲದೇ ಹದಿನೆಂಟನೆ ಶತಮಾನದಲ್ಲಿ ಜನಿಸಿದ ಕೊನೆಯ ಅಧ್ಯಕ್ಷರು. ಇವರು ಇಲ್ಲಿಯವರೆಗೂ ಪೆನ್ಸಿಲ್ವೇನಿಯಾ ರಾಜ್ಯದಿಂದ ಅಧ್ಯಕ್ಷಗಿರಿಗೆ ಆಯ್ಕೆಯಾದ ಏಕೈಕ ಅಭ್ಯರ್ಥಿ ಹಾಗು ಜೀವನಪೂರ್ತಿ ಅವಿವಾಹಿತರಾಗಿ ಉಳಿದ ಏಕೈಕ ಅಧ್ಯಕ್ಷರೂ ಹೌದು.
ತಮ್ಮ ಅಧ್ಯಕ್ಷಗಿರಿಗೆ ಮುಂಚೆ ಒಬ್ಬ ಜನಪ್ರಿಯ ಹಾಗು ಅನುಭವಿ ರಾಜಕಾರಣಿಯಾಗಿದ್ದ ಬುಕಾನನ್ ಹೌಸ್ ಆಫ್ ರಿಪ್ರಸೆಂಟೆಟಿವ್ಸ್ ನಲ್ಲಿ ಪೆನ್ಸಿಲ್ವೇನಿಯಾ ಪ್ರತಿನಿಧಿಸಿದ್ದರು. ನಂತರ ಸೆನೆಟ್ ನಲ್ಲಿ ಪ್ರತಿನಿಧಿಸುವುದರ ಜೊತೆಗೆ ಜೇಮ್ಸ್ K. ಪೋಲ್ಕ್ ರ ಅಧ್ಯಕ್ಷಗಿರಿಯಲ್ಲಿ ವಿದೇಶಾಂಗ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ಸುಪ್ರೀಂ ಕೋರ್ಟ್ ನಲ್ಲಿ ನೇಮಕದ ಆಹ್ವಾನವನ್ನು ತಿರಸ್ಕರಿಸಿದ ನಂತರ, ಫ್ರಾಂಕ್ಲಿನ್ ಪಿಯರ್ಸ್ ರ ಅಧ್ಯಕ್ಷಗಿರಿಯಲ್ಲಿ ಯುನೈಟೆಡ್ ಕಿಂಗ್ಡಮ್ಗೆ ಮಂತ್ರಿ(ರಾಯಭಾರಿ)ಯಾಗಿ ಕಾರ್ಯ ನಿರ್ವಹಿಸಿದರು. ಮಂತ್ರಿಯಾಗಿ ಅವರು ಪ್ರಚೋದನಾಕಾರಿ ಓಸ್ಟೆನ್ಡ್ ಮ್ಯಾನಿಫೆಸ್ಟೋ ಕರಡುಪ್ರತಿಯನ್ನು ರೂಪಿಸಲು ಸಹಾಯಮಾಡಿದರು. ಇದರಂತೆ ಸ್ಪೇನ್ ಕ್ಯೂಬಾವನ್ನು ಮಾರಾಟ ಮಾಡಲು ನಿರಾಕರಿಸಿದರೆ U.S. ಅದರ ಮೇಲೆ ಯುದ್ಧ ಘೋಷಿಸುತ್ತದೆ ಎಂಬುದನ್ನು ಅದು ಸೂಚಿಸುತ್ತದೆ. ಓಸ್ಟೆನ್ಡ್ ಮ್ಯಾನಿಫೆಸ್ಟೋ ಕಾರ್ಯರೂಪಕ್ಕೆ ಬರಲಿಲ್ಲ. ಪಿಯರ್ಸ್ ಆಡಳಿತಕ್ಕೆ ಇದು ಬಹಳವಾದ ನಷ್ಟವನ್ನುಂಟುಮಾಡಿತು.
ಇಸವಿ 1844, 1848, ಹಾಗು 1852ರಲ್ಲಿ ಡೆಮೋಕ್ರ್ಯಾಟಿಕ್ ಅಧ್ಯಕ್ಷೀಯ ನಾಮನಿರ್ದೇಶನಕ್ಕೆ ನಡೆಸಿದ ವಿಫಲ ಯತ್ನದ ಹೊರತಾಗಿಯೂ, ಬುಕಾನನ್ ರನ್ನು 1856ರ ಚುನಾವಣೆಯಲ್ಲಿ, ಎರಡೂ ಪಕ್ಷಗಳ ನಡುವೆ ಉದ್ಭವಿಸಿದ ಗುಲಾಮಗಿರಿಯ ವಿವಾದಕ್ಕೆ ರಾಜಿಯಾಗಿ ಅಧ್ಯಕ್ಷ ಪದವಿಗೆ ನಾಮ ನಿರ್ದೇಶನ ಮಾಡಲಾಯಿತು; ಇದು ಅವರು ತಮ್ಮ ಕೆಲಸದ ಮೇಲೆ ಹೊರಹೋಗಿದ್ದಾಗ ನಡೆದಂತಹ ಘಟನೆ. ಅವರ ತರುವಾಯದ ಆಯ್ಕೆಯು ಬಹುತೇಕ ಪ್ರತಿಪಕ್ಷದ ವಿಭಜಿತ ಸ್ಥಿತಿಯಿಂದ ಉಂಟಾಯಿತು. ಅಧ್ಯಕ್ಷರಾಗಿ ಅವರು "ಡೋಫೇಸ್" ನ್ನು ಹೊಂದಿದ್ದರು, ಒಬ್ಬ ಉತ್ತರ ಭಾಗದ ವಾಸಿಯಾಗಿದ್ದರೂ, ದಕ್ಷಿಣ ಭಾಗದ ಜನರೆಡೆಗೆ ಸಹಾನುಭೂತಿಯನ್ನು ಹೊಂದಿದ್ದರು. ಅವರು ಡೆಮೋಕ್ರ್ಯಾಟಿಕ್ ಪಕ್ಷದ ನಿಯಂತ್ರಣಕ್ಕೆ ಸ್ಟೀಫನ್ A. ಡೊಗ್ಲಾಸ್ ಜೊತೆಗೆ ಹೋರಾಡಿದರು. ಉತ್ತರ ಹಾಗು ದಕ್ಷಿಣ ಭಾಗದ ನಡುವೆ ಶಾಂತಿಯನ್ನು ಕಾಪಾಡುವ ಬುಕಾನನ್ ರ ಪ್ರಯತ್ನವು ಎರಡೂ ಭಾಗದವರನ್ನು ದೂರ ಮಾಡುವುದರ ಜೊತೆಗೆ ಅಮೆರಿಕನ್ ಅಂತರ್ಯುದ್ಧಕ್ಕೆ ಪೀಠಿಕೆಯಾಗಿ ದಕ್ಷಿಣದ ರಾಜ್ಯಗಳು ತಮ್ಮ ಪ್ರತ್ಯೇಕತೆಯನ್ನು ಘೋಷಿಸಿಕೊಂಡವು. ಬುಕಾನನ್ರ ಅಭಿಪ್ರಾಯದಲ್ಲಿ ಪ್ರತ್ಯೇಕತೆಯು ಕಾನೂನುಬಾಹಿರವಾಗಿತ್ತು, ಆದರೆ ಅದನ್ನು ನಿಲ್ಲಿಸಲು ಯುದ್ಧಕ್ಕೆ ಹೋಗುವುದೂ ಕೂಡ ಕಾನೂನುಬಾಹಿರವಾಗಿತ್ತು; ಆದ್ದರಿಂದ, ಅವರು ನಿಷ್ಕ್ರಿಯವಾಗಿ ಉಳಿದರು. ಅವರ ಅಧಿಕಾರಾವಧಿಯ ನಂತರ, ಅವರ ಬಗೆಗಿನ ಜನಪ್ರಿಯ ಅಭಿಪ್ರಾಯಗಳು ಅವರಿಗೆ ವಿರುದ್ಧವಾದವು ಇದಲ್ಲದೆ ಡೆಮೋಕ್ರ್ಯಾಟಿಕ್ ಪಕ್ಷವು ಇಬ್ಬಾಗವಾಯಿತು. ಬುಕಾನನ್, ಒಂದೊಮ್ಮೆ ತಮ್ಮ ಅಧ್ಯಕ್ಷಗಿರಿಯು ಜಾರ್ಜ್ ವಾಶಿಂಗ್ಟನ್ ರ ಅಧ್ಯಕ್ಷಗಿರಿಯಷ್ಟೇ ಜನಪ್ರಿಯತೆ ಗಳಿಸಿ ಇತಿಹಾಸ ಸೃಷ್ಟಿಸಬಹುದೆಂದು ಆಶಿಸಿದ್ದರು.[1] ಆದಾಗ್ಯೂ, ಅಂತರ್ಯುದ್ಧಕ್ಕೆ ಮುಂಚೆ ಅವರು ಬಿಕ್ಕಟ್ಟನ್ನು ನಿರ್ವಹಿಸಿದ ರೀತಿಗೆ, ಇತಿಹಾಸಜ್ಞರು ಅವರನ್ನು ಅತ್ಯಂತ ಕೆಟ್ಟ ಅಧ್ಯಕ್ಷರಲ್ಲಿ ಒಬ್ಬರೆಂಬ ಶ್ರೇಣಿ ನೀಡಿದರು.