ಜೇಮ್ಸ್ ಬ್ಲಂಟ್
From Wikipedia, the free encyclopedia
ಜೇಮ್ಸ್ ಬ್ಲಂಟ್ (ಜನನ ನಾಮ ಜೇಮ್ಸ್ ಹಿಲಿಯರ್ ಬ್ಲೌಂಟ್ ; ಜನನ ಫೆಬ್ರವರಿ 22, 1974[1])ಎಂಬುದು ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಆಂಗ್ಲ ಹಾಡುಗಾರ-ಗೀತರಚನಕಾರರ ವೇದಿಕಾನಾಮ; ಅವರ ಚೊಚ್ಚಲ ಆಲ್ಬಂ ಆದ ಬ್ಯಾಕ್ ಟು ಬೆಡ್ ಲ್ಯಾಮ್ ಮತ್ತು ಬಿಡುಗಡೆ ಮಾಡಲ್ಪಟ್ಟ "ಯೂ ಆರ್ ಬ್ಯೂಟಿಫುಲ್" ಮತ್ತು "ಗುಡ್ ಬೈ ಮೈ ಲವರ್"ನಂಹ ಸಿಂಗಲ್ಸ್ ಗಳು 2005ರಲ್ಲಿ ಅವರಿಗೆ ಖ್ಯಾತಿಯನ್ನು ತಂದಿತ್ತವು.
ಅವರ ಬತ್ತಳಿಕೆಯಲ್ಲಿ ಅಕೌಸ್ಟಿಕ್-ಲೇಪಿತ ಪಾಪ್, ರಾಕ್ ಮತ್ತು ಜನಪದ ಗೀತೆಗಳಿದ್ದವು. ಕಸ್ಟರ್ಡ್ ರೆಕಾರ್ಡ್ಸ್ ಎಂಬ ಅಮೆರಿಕದ ಲಾಂಛನವಿದ್ದ ಖಾಸಗಿ ಧ್ವನಿಮುದ್ರಣ ಸಂಸ್ಥೆಯಲ್ಲಿ ಧ್ವನಿಪುದ್ರಣ(ರೆಕಾರ್ಡ್) ಮಾಡಿದ ನಂತರ, ಬ್ಲಂಟ್ ಎರಡು BRIT ಪ್ರಶಸ್ತಿಗಳನ್ನು, ಎರಡು ಇವಾರ್ ನೊವೆಲ್ಲೋ ಪ್ರಶಸ್ತಿಗಳನ್ನು ಪಡೆದುದೇ ಅಲ್ಲದೆ 2006ರಲ್ಲಿ ಐದು ಗ್ರ್ಯಾಮಿ ಪ್ರಶಸ್ತಿಗಳಿಗಾಗಿ ನಾಮನಿರ್ದೇಶಿತರಾಗಿದ್ದರು. ಮರುವರ್ಷ ಅವರು ತಮ್ಮ ಎರಡನೆಯ ಆಲ್ಮಂ ಆದ ಆಲ್ ದ ಲಾಸ್ಟ್ ಸೌಲ್ಸ್ (2007)ಅನ್ನು ಬಿಡುಗಡೆ ಮಾಡಿದರು.
James Blunt | |
---|---|
ಹಿನ್ನೆಲೆ ಮಾಹಿತಿ | |
ಜನ್ಮನಾಮ | James Hillier Blount |
ಸಂಗೀತ ಶೈಲಿ | Pop rock, soft rock, adult contemporary |
ವೃತ್ತಿ | Singer-songwriter, musician |
ವಾದ್ಯಗಳು | Vocals, guitar, piano, organ, violin |
ಸಕ್ರಿಯ ವರ್ಷಗಳು | 2004–present |
Labels | Warner Bros. Records, Atlantic, Custard |
ಅಧೀಕೃತ ಜಾಲತಾಣ | www.JamesBlunt.com |
ಬ್ಲಂಟ್ ಬ್ರಿಟಿಷ್ ಸೈನ್ಯದ ಅಶ್ವದಳ ಪಡೆಯ, ಜೀವ ರಕ್ಷಕಗಳಲ್ಲಿ ಅಧಿಕಾರಿಯಾಗಿದ್ದು, ಹಾಗೂ 1999 ರಲ್ಲಿ ಕೊಸೊವೊ ಹೊಡೆದಾಟದ ಅವಧಿಯಲ್ಲಿ ನಾಟೊದ ಕೆಳಗೆ ಸೇವೆಸಲ್ಲಿಸುತ್ತಿದ್ದರು. ಕೊಸೊವೊಕ್ಕೆ ವರ್ಗಾಯಿಸಲ್ಪಟ್ಟಾಗ, ಬ್ಲಂಟ್ ಮೆಡಿಸಿನ್ಸ್ ಸ್ಯಾನ್ಸ್ ಫ್ರಾಂಟಿಯರ್ಸ್; ನ (MSF ಅಥವಾ "ಡಾಕ್ಟರ್ಸ್ ವಿಥ್ ಔಟ್ ಬಾರ್ಡರ್ಸ್") ಕೆಲಸಕ್ಕೆ ಪರಿಚಯಸಲ್ಪಟ್ಟರು. ಅಂದಿನಿಂದೀಚೆಗೆ, ಬ್ಲಂಟ್ ತನ್ನ ಅನೇಕ ಸಂಗೀತ ಗೋಷ್ಠಿಗಳಲ್ಲಿ ಭೇಟಿ ಮಾಡಿ ಸ್ವಾಗತಿಸುವ ಹರಾಜುಗಳನ್ನು ನಡೆಸುತ್ತಾ MSF ಅನ್ನು ಬೆಂಬಲಿಸಿದ್ದಾರೆ.[2]
ಬ್ಲಂಟ್ ನ ಪ್ರಧಾನ ನಿವಾಸವೀಗ ಸ್ಪ್ಯಾನಿಷ್ ದ್ವೀಪದ ಐಬಿಜಾದಲ್ಲಿದೆ.[3]