![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/3/30/Dolina-Pano-3.jpg/640px-Dolina-Pano-3.jpg&w=640&q=50)
ಪುರಾತತ್ತ್ವ ಶಾಸ್ತ್ರ
From Wikipedia, the free encyclopedia
ಪುರಾತತ್ತ್ವ ಶಾಸ್ತ್ರ(Archaeology) ಅಥವಾ archeology (ಗ್ರೀಕ್ನಲ್ಲಿ ἀρχαιολογία, archaiologia – ἀρχαῖος, arkhaīos , "ಪುರಾತನ"; ಮತ್ತು -λογία, -logiā , "-logy")ವು ಹಿಂದಿನ ಕಾಲದ ಮಾನವ ಸಮಾಜಗಳ ಅಭಿವೃದ್ಧಿ ಬಗೆಗಿನ ಅಧ್ಯಯನವಾಗಿದೆ, ಇದನ್ನು ಪ್ರಾಥಮಿಕವಾಗಿ ಕೈಗಳಿಂದ ಮಾಡಿದ ಹಸ್ತಕೃತಿಗಳು, ವಾಸ್ತುಶಿಲ್ಪ, ಜೈವಿಕ ಸಂಗತಿಗಳು ಮತ್ತು ಸಾಂಸ್ಕೃತಿಕ ಭೂದೃಶ್ಯಗಳು ಮೊದಲಾದವುಗಳನ್ನು ಒಳಗೊಂಡಂತೆ ಅವರು ಬಿಟ್ಟುಹೋದ ಪರಿಸರದ ಮಾಹಿತಿಗಳ ಮತ್ತು ಭೌತಿಕ ಸಂಸ್ಕೃತಿಯ ಪುನಸ್ಸಂಪಾದನೆ ಮತ್ತು ವಿಶ್ಲೇಷಣೆಯ ಮೂಲಕ ಮಾಡಲಾಗುತ್ತದೆ. ಪುರಾತತ್ತ್ವ ಶಾಸ್ತ್ರವು ಅಸಂಖ್ಯಾತ ಕಾರ್ಯಸರಣಿಗಳನ್ನು ತೊಡಗಿಸಿಕೊಳ್ಳುವುದರಿಂದ, ಇದನ್ನು ವಿಜ್ಞಾನ ಮತ್ತು ಮಾನವಕುಲ ಎಂಬುದಾಗಿ ಪರಿಗಣಿಸಲಾಗುತ್ತದೆ.[1] ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಇದನ್ನು ಮಾನವಶಾಸ್ತ್ರದ ಉಪವಿಭಾಗವೆಂದು ಭಾವಿಸಲಾಗುತ್ತದೆ.[2] ಆದರೆ ಯುರೋಪ್ನಲ್ಲಿ ಇದನ್ನು ಒಂದು ಪ್ರತ್ಯೇಕ ವಿಭಾಗವೆಂದು ತಿಳಿಯಲಾಗುತ್ತದೆ.
![Thumb image](http://upload.wikimedia.org/wikipedia/commons/thumb/3/30/Dolina-Pano-3.jpg/640px-Dolina-Pano-3.jpg)
ಪುರಾತತ್ತ್ವ ಶಾಸ್ತ್ರವು 2.5 ದಶಲಕ್ಷ ವರ್ಷಗಳ ಹಿಂದೆ ಪೂರ್ವ ಆಫ್ರಿಕಾದಲ್ಲಿ ಮೊದಲ ಕಲ್ಲಿನ ಉಪಕರಣಗಳು ಅಭಿವೃದ್ಧಿಯಾದಂದಿನಿಂದ ಇತ್ತೀಚಿನ ದಶಕಗಳವರೆಗಿನ ಮಾನವ ಇತಿಹಾಸವನ್ನು ಅಧ್ಯಯನ ಮಾಡುತ್ತದೆ.[3] ಇದು ಇತಿಹಾಸಕಾರರಿಗೆ ಅಧ್ಯಯನ ಮಾಡಲು ಯಾವುದೇ ಲಿಖಿತ ದಾಖಲೆಗಳಿಲ್ಲದ ಕಾಲದ ಇತಿಹಾಸ ಪೂರ್ವ ಸಮಾಜಗಳ ಬಗ್ಗೆ ತಿಳಿಯಲು ಅತಿಮುಖ್ಯವಾಗಿದೆ. ಇದು ಪ್ರಾಚೀನ ಶಿಲಾಯುಗದಿಂದ ಹಿಡಿದು ಸಾಕ್ಷರತೆಯ ಆಗಮನದವರೆಗಿನ ಒಟ್ಟು ಮಾನವ ಇತಿಹಾಸದ ಸುಮಾರು 99%ರಷ್ಟನ್ನು ಒಳಗೊಳ್ಳುತ್ತದೆ.[1] ಪುರಾತತ್ತ್ವ ಶಾಸ್ತ್ರವು ಅನೇಕ, ವಿವಿಧ ಗುರಿಗಳನ್ನು ಹೊಂದಿದೆ, ಇವು ಮಾನವ ವಿಕಾಸದ ಅಧ್ಯಯನದಿಂದ ಹಿಡಿದು ಸಾಂಸ್ಕೃತಿಕ ವಿಕಾಸ ಮತ್ತು ಸಂಸ್ಕೃತಿ ಇತಿಹಾಸದ ಅಧ್ಯಯನದವರೆಗೆ ವ್ಯಾಪಿಸಿವೆ.[4]
ಇದು ಸಮೀಕ್ಷೆ, ಉತ್ಖನನ ಮತ್ತು ಅಂತಿಮವಾಗಿ ಪ್ರಾಚೀನ ಕಾಲದ ಬಗ್ಗೆ ಹೆಚ್ಚು ತಿಳಿಯಲು ಸಂಗ್ರಹಿಸಿದ ಮಾಹಿತಿಯ ವಿಶ್ಲೇಷಣೆಯನ್ನು ಒಳಗೊಳ್ಳುತ್ತದೆ. ವಿಸ್ತಾರ ವ್ಯಾಪ್ತಿಯಲ್ಲಿ, ಪುರಾತತ್ತ್ವ ಶಾಸ್ತ್ರವು ವೈವಿಧ್ಯಮಯ-ಶಿಸ್ತುಬದ್ಧ ಸಂಶೋಧನೆಯನ್ನು ಅವಲಂಬಿಸಿರುತ್ತದೆ. ಇದು ಮಾನವಶಾಸ್ತ್ರ, ಚರಿತ್ರೆ, ಕಲಾ ಇತಿಹಾಸ, ಶ್ರೇಷ್ಠ ಗ್ರಂಥಗಳು, ಜನಾಂಗಶಾಸ್ತ್ರ, ಭೂಗೋಳಶಾಸ್ತ್ರ,[5] ಭೂವಿಜ್ಞಾನ,[6][7][8] ಭಾಷಾಶಾಸ್ತ್ರ, ಭೌತಶಾಸ್ತ್ರ, ಮಾಹಿತಿ ವಿಜ್ಞಾನ, ರಾಸಾಯನಿಕ ಶಾಸ್ತ್ರ, ಸಂಖ್ಯಾಶಾಸ್ತ್ರ, ಪ್ರಾಚೀನ-ಪರಿಸರವಿಜ್ಞಾನ, ಪ್ರಾಗ್ಜೀವಶಾಸ್ತ್ರ, ಪ್ರಾಚೀನ-ಪ್ರಾಣಿಶಾಸ್ತ್ರ, ಪ್ರಾಚೀನ-ಜನಾಂಗೀಯ-ಸಸ್ಯಶಾಸ್ತ್ರ(ಪೇಲಿಯೊಎನ್ನೊಬಾಟನಿ) ಮತ್ತು ಪ್ರಾಚೀನ-ಸಸ್ಯಶಾಸ್ತ್ರ ಮೊದಲಾದವನ್ನು ಒಳಗೊಳ್ಳುತ್ತದೆ.
ಪುರಾತತ್ತ್ವ ಶಾಸ್ತ್ರವು ಯುರೋಪ್ನಲ್ಲಿ 19ನೇ ಶತಮಾನದಲ್ಲಿ ಪುರಾತನ-ವಸ್ತು ಶೋಧನೆಯಿಂದ ಅಭಿವೃದ್ಧಿಗೊಂಡಿತು. ಅಲ್ಲಿಂದೀಚೆಗೆ ಅದು ಪ್ರಪಂಚದಾದ್ಯಂತ ಒಂದು ಶಿಸ್ತುಬದ್ಧ ಅಧ್ಯಯನವಾಯಿತು. ಅದರ ಆರಂಭಿಕ ಬೆಳವಣಿಗೆಯಿಂದ ಹಿಡಿದು ಇಂದಿನವರೆಗೆ ಅನೇಕ ವಿಶೇಷ ರೀತಿಯ ಪುರಾತತ್ತ್ವ ಶಾಸ್ತ್ರ ಅಭಿವೃದ್ಧಿಯಾಗಿದೆ; ಉದಾ. ಕಡಲತಡಿಯ ಪುರಾತತ್ತ್ವ ಶಾಸ್ತ್ರ, ಸ್ತ್ರೀಸಮಾನತಾವಾದಿ ಪುರಾತತ್ತ್ವ ಶಾಸ್ತ್ರ ಮತ್ತು ಪುರಾತನ-ಖಗೋಳವಿಜ್ಞಾನ. ಅಲ್ಲದೆ ಪುರಾತತ್ತ್ವ ಶಾಸ್ತ್ರದ ಪರೀಕ್ಷೆಗೆ ಸಹಾಯ ಮಾಡುವಂತಹ ಹಲವಾರು ವಿವಿಧ ವೈಜ್ಞಾನಿಕ ವಿಧಾನಗಳು ಅಭಿವೃದ್ಧಿಯಾಗಿವೆ. ಇಂದು ಪುರಾತತ್ತ್ವಜ್ಞರು ನಕಲಿ-ಪುರಾತತ್ತ್ವ ಶಾಸ್ತ್ರದಿಂದ ಹಿಡಿದು ಪುರಾತನ ಹಸ್ತಕೃತಿಗಳ ಲೂಟಿಮಾಡುವಿಕೆ ಮತ್ತು ಮಾನವ ಅವಶೇಷಗಳ ಉತ್ಖನನಕ್ಕೆ ವಿರೋಧ ವ್ಯಕ್ತಪಡಿಸುವಿಕೆ ಮೊದಲಾದ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.