ಪೊಟ್ಯಾಶಿಯಮ್ ಪರ್ಮಾಂಗನೇಟ್
From Wikipedia, the free encyclopedia
ಪೊಟ್ಯಾಶಿಯಮ್ ಪರ್ಮಾಂಗನೇಟ್[1] ಎ೦ಬುದು ಒ೦ದು ಅಜೈವಿಕ ರಾಸಾಯನಿಕ ಸಂಯುಕ್ತ[2] ಮತ್ತು ಔಷಧೀಕರಣ. ಇದನ್ನು ಗಾಯಗಳು ಮತ್ತು ಡರ್ಮಟೈಟಿಸ್ ಅನ್ನು ಸ್ವಚ್ಛ ಗೊಳಿಸಲು ಬಳಸಲಾಗುತ್ತದೆ. ಇದು ಕೆಎಮ್ಎನ್ಒ೪ ಎಂಬ ರಾಸಾಯನಿಕ ಸೂತ್ರವನ್ನು ಹೊಂದಿದೆ. ಮತ್ತು ಇದು ಕೆ+ ಮತ್ತು ಎಮ್ಎನ್ಒ೪− ಗಳನ್ನು ಒಳಗೊಂಡಿರುವ ಉಪ್ಪು. ಇದು ಬಲವಾದ ಆಕ್ಸಿಡೈಸಿಂಗ್ ಏಜೆಂಟ್. ಇದು ನೀರಿನಲ್ಲಿ ಕರಗಿದಾಗ ತೀವ್ರವಾದ ಗುಲಾಬಿ ಅಥವಾ ನೇರಳೆ ದ್ರಾವಣಗಳನ್ನು ನೀಡುತ್ತದೆ. ಇದರ ಆವಿಯಾಗುವಿಕೆಯು ಪ್ರಿಸ್ಮಾಟಿಕ್ ಕೆನ್ನೇರಳೆ-ಕಪ್ಪು ಹೊಳೆಯುವ ಹರಳುಗಳನ್ನು ಕೊಡುತ್ತದೆ.