ಭಾರತೀಯ ರಾಜಕಾರಣಿ From Wikipedia, the free encyclopedia
ಪ್ರಮೋದ್ ಪಾಂಡುರಂಗ ಸಾವಂತ್ (ಹುಟ್ಟು- ೨೪ ಏಪ್ರಿಲ್ ೧೯೭೩) ಒಬ್ಬ ಭಾರತೀಯ ರಾಜಕಾರಣಿಯಾದ್ದು, ಗೋವಾದ ೧೩ನೇ ಹಾಗೂ ಹಾಲಿ ಮುಖ್ಯಮಂತ್ರಿಯಾಗಿದ್ದಾರೆ.[1][2] ಸಾವಂತ್ ಗೋವಾ ವಿಧಾನಸಭೆಯಲ್ಲಿ ಸಾಂಖಳಿಂ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. ಇವರು ಭಾರತೀಯ ಜನತಾ ಪಕ್ಷದ ಸದಸ್ಯರಾಗಿದ್ದಾರೆ.[3]
ಪ್ರಮೋದ್ ಸಾವಂತ್ | |
---|---|
೨೦೧೯ರಲ್ಲಿ ಸಾವಂತ್ | |
ಗೋವಾದ ೧೩ನೇ ಮುಖ್ಯಮಂತ್ರಿ | |
ಹಾಲಿ | |
ಅಧಿಕಾರ ಸ್ವೀಕಾರ ೧೯ ಮಾರ್ಚ್ ೨೦೧೯ | |
ರಾಜ್ಯಪಾಲ | ಮೃದುಲಾ ಸಿನ್ಹ ಸತ್ಯಪಾಲ್ ಮಲಿಕ್ ಭಗತ್ ಸಿಂಗ್ ಕೋಶ್ಯಾರಿ |
ಪ್ರತಿನಿಧಿ | ಮನೋಹರ್ ಅಜ್ಗಾಂವ್ಕರ್ (೨೮ ಮಾರ್ಚ್ ೨೦೧೯ರಿಂದ) ಚಂದ್ರಕಾಂತ್ ಕವ್ಳೇಕರ್ (೧೪ ಜುಲೈ ೨೦೧೯ರಿಂದ) |
ಪೂರ್ವಾಧಿಕಾರಿ | ಮನೋಹರ್ ಪರಿಕ್ಕರ್ |
ಗೋವಾ ವಿಧಾನಸಭೆಯ ಸ್ಪೀಕರ್ | |
ಅಧಿಕಾರ ಅವಧಿ ೨೨ ಮಾರ್ಚ್ ೨೦೧೭ – ೧೮ ಮಾರ್ಚ್ ೨೦೧೯ | |
ಪೂರ್ವಾಧಿಕಾರಿ | ಅನಂತ್ ಶೇಠ್ |
ಉತ್ತರಾಧಿಕಾರಿ | ರಾಜೇಶ್ ಪಾಟ್ನೇಕರ್ |
ಗೋವಾ ವಿಧಾನಸಭೆಯ ಶಾಸಕ | |
ಹಾಲಿ | |
ಅಧಿಕಾರ ಸ್ವೀಕಾರ ೨೦೧೨ | |
ಮತಕ್ಷೇತ್ರ | ಸಾಂಖಳಿಂ |
ವೈಯಕ್ತಿಕ ಮಾಹಿತಿ | |
ಜನನ | ಗೋವ, ಭಾರತ | ೨೪ ಏಪ್ರಿಲ್ ೧೯೭೩
ರಾಷ್ಟ್ರೀಯತೆ | ಭಾರತೀಯ |
ರಾಜಕೀಯ ಪಕ್ಷ | ಭಾರತೀಯ ಜನತಾ ಪಕ್ಷ |
ಸಂಗಾತಿ(ಗಳು) | ಸುಲಕ್ಷಣಾ ಸಾವಂತ್ |
ಇವರು ವೃತ್ತಿಯಲ್ಲಿ ಆಯುರ್ವೇದ ವೈದ್ಯರಾಗಿದ್ದಾರೆ.[4] ಮುಖ್ಯಮಂತ್ರಿ ಆಗುವ ಮುಂಚೆ ವಿಧಾನಸಭೆಯ ಸ್ಪೀಕರ್ ಆಗಿದ್ದರು. ಮನೋಹರ್ ಪರಿಕ್ಕರ್ ಅವರ ನಿಧನದ ನಂತರ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದರು.
ಪ್ರಮೋದ್ ಸಾವಂತ್ ಅವರು ೨೪ ಏಪ್ರಿಲ್ ೧೯೭೩ರಲ್ಲಿ ಪಾಂಡುರಂಗ ಮತ್ತು ಪದ್ಮಿನಿ ಸಾವಂತ್ ದಂಪತಿಗೆ ಹುಟ್ಟಿದರು.[5][6] ಗಂಗಾ ಎಜುಕೇಶನ್ ಸೊಸೈಟಿಯ ಕೊಲ್ಲಾಪುರದ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ಆಯುರ್ವೇದ ವೈದ್ಯ ಪದವಿಯನ್ನು ಪಡೆದರು. ಸಮಾಜ ಸೇವೆಯ ಸ್ನಾತಕ್ಕೋತ್ತರ ಪದವಿಯನ್ನು ಪುಣೆಯಲ್ಲಿರುವ ತಿಲಕ್ ಮಹಾರಾಷ್ಟ್ರ ವಿಶ್ವವಿದ್ಯಾಲದಲ್ಲಿ ಪಡೆದರು.[4]
ಸಾವಂತ್ ಅವರು ೨೦೧೨ರ ಗೋವಾ ವಿಧಾನಸಭಾ ಚುನಾವಣೆಯನ್ನು ಸಾಂಖಳಿಂ ಕ್ಷೇತ್ರದಿಂದ ಕಣಕ್ಕಿಳಿಯುವ ಮೂಲಕ ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಪ್ರತಾಪ್ ಗೌನ್ಸ್ ಅವರನ್ನು ೧೪,೨೫೫ (೬೬.೦೨%) ಮತಗಳಿಂದ ಸೋಲಿಸುವ ಮೂಲಕ ಗೆದ್ದರು. ಕೆಲಕಾಲ ಗೋವಾ ಬಿಜೆಪಿಯ ವಕ್ತಾರರಾಗಿ ಕಾರ್ಯನಿರ್ವಹಿಸಿದರು.[7] ೨೦೧೭ರ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಧರ್ಮೇಶ್ ಸಗ್ಲಾನಿ ಅವರನ್ನು ೧೦,೦೫೮ (೪೩.೦೪%) ಮತಗಳಿಂದ ಸೋಲಿಸುವ ಮೂಲಕ ಅದೇ ಕ್ಷೇತ್ರದಿಂದ ಮರು ಆಯ್ಕೆಯಾದರು. ೨೨ ಮಾರ್ಚ್ ೨೦೧೭ರಲ್ಲಿ ಗೋವಾ ವಿಧಾನಸಭೆಯ ಸ್ಪೀಕರ್ ಆಗಿ ಆಯ್ಕೆಯಾದರು.[8]
ಮನೋಹರ್ ಪರಿಕ್ಕರ್ ಅವರ ನಿಧನದ ಮೆರೆಗೆ ಮುಖ್ಯಮಂತ್ರಿಯಾಗಿ ಇನ್ನೊಬ್ಬರನ್ನು ಆಯ್ಕೆಮಾಡಬೇಕಿತ್ತು. ವಿಧಾನಸಭೆಯು ಸಾವಂತ್ ಅವರನ್ನು ಆಯ್ಕೆ ಮಾಡಿದ ನಂತರ, ಗೋವಾದ ೧೩ನೇ ಮುಖ್ಯಮಂತ್ರಿಯಾಗಿ ೧೯ ಮಾರ್ಚ್ ೨೦೧೯ರಲ್ಲಿ ಪ್ರಮಾಣವಚನ ಸ್ವೀಕರಿಸಿದರು.[9].
ಸಾವಂತ್ ಮರಾಠ ಜಾತಿಯವರಾಗಿದ್ದಾರೆ.[9] ಸಾವಂತ್ ಅವರ ಹೆಂಡತಿ ಸುಲಕ್ಷಣಾ[10] ಅವರು ಬಿಚೋಲಿಂನ ಶ್ರೀ ಶಾಂತಾದುರ್ಗ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಸಾಯನಶಾಸ್ತ್ರದ ಶಿಕ್ಷಕಿ ಆಗಿದ್ದಾರೆ.[11] ಇವರು ಕೂಡ ಬಿಜೆಪಿ ನಾಯಕಿಯಾಗಿದ್ದು, ಗೋವಾ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆಯಾಗಿದ್ದಾರೆ.[12][13][14]
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.