ಪ್ರೋಟಾನ್
From Wikipedia, the free encyclopedia
ಭೌತಶಾಸ್ತ್ರದಲ್ಲಿ ಪ್ರೋಟಾನ್ ಅಥವಾ ಧನವಿದ್ಯುತ್ಕಣವು (ಗ್ರೀಕ್ ಭಾಷೆಯಲ್ಲಿ πρώτον / ಪ್ರೋಟಾನ್ = ಮೊದಲನೆಯ) ಒಂದು ಮೂಲ ಆವೇಶದಷ್ಟು (೧.೬೦೨ × ೧೦−೧೯ coulomb) ಧನ ವಿದ್ಯುದಾವೇಶವನ್ನು ಹೊಂದಿರುವ ಒಂದು ಉಪಪರಮಾಣು ಕಣ. ಇದರ ವ್ಯಾಸವು ೧.೬ ರಿಂದ ೧.೭×೧೦−೧೫ ಮೀ.ನಷ್ಟು [1] ಇದ್ದು, ದ್ರವ್ಯರಾಶಿಯು ೯೩೮.೨೭೨೩೧(೨೮) MeV/c2 (೧.೬೭೨೬ × ೧೦−೨೭ ಕಿ.ಗ್ರಾಂ.), ೧.೦೦೭ ೨೭೬ ೪೬೬ ೮೮(೧೩) u ಅಥವಾಾ ಎಲೆಕ್ಟ್ರಾನ್ನ ೧೮೩೬ ಪಟ್ಟು ಇರುತ್ತದೆ.
Quick Facts ರಚನೆ:, ವರ್ಗ: ...
ಪ್ರೋಟಾನ್ | |
ಪ್ರೋಟಾನ ಕ್ವಾರ್ಕ್ ರಚನೆ. | |
ರಚನೆ: | ೨ up, 1 down |
---|---|
ವರ್ಗ: | ಫರ್ಮಿಯಾನ್ |
ಗುಂಪು: | ಕ್ವಾರ್ಕ್ |
ಒಡನಾಟ: | ಗುರುತ್ವ, ವಿದ್ಯುತ್ಕಾಂತೀಯ, ದುರ್ಬಲ, ಸಬಲ |
ಪ್ರತಿಕಣ: | ಆಂಟಿಪ್ರೋಟಾನ್ |
ಆವಿಷ್ಕಾರ: | ಅರ್ನೆಸ್ಟ್ ರುದರ್ಫೊರ್ಡ್ (೧೯೧೯) |
ಚಿಹ್ನೆ: | p+ |
ದ್ರವ್ಯರಾಶಿ: | ೧.೬೭೨ ೬೨೧ ೭೧(೨೯) × ೧೦−೨೭ ಕಿ.ಗ್ರಾಂ. ೧.೦೦೭ ೨೭೬ ೪೬೬ ೮೮(೧೩) u |
ವಿದ್ಯುದಾವೇಶ: | ೧.೬೦೨ ೧೭೬ ೫೩(೧೪) × ೧೦−೧೯ C |
ಗಿರಕಿ: | ½ |
Close
ಪ್ರೋಟಾನ್ಗಳು ಗಿರಕಿ-1/2 ಫರ್ಮಿಯಾನ್ಗಳಾಗಿದ್ದು, ಮೂರು ಕ್ವಾರ್ಕ್ಗಳನ್ನು ಹೊಂದಿರುವ ಕಾರಣ[2], ಬೇರಿಯಾನ್ಗಳೆಂದು ಪರಿಗಣಿಸಲ್ಪಡುತ್ತವೆ. ಪ್ರೋಟಾನ್ನ ಒಂದು ಕೆಳ ಕ್ವಾರ್ಕ್ ಮತ್ತು ಎರಡು ಮೇಲು ಕ್ವಾರ್ಕ್ಗಳು ಸಬಲ ಅಂತರಕ್ರಿಯೆಯ ಸಹಾಯದಿಂದ ಮತ್ತು ಗ್ಲುಆನ್ಗಳ ಮಧ್ಯವರ್ತಿಕೆಯಿಂದ ಒಟ್ಟಿಗೆ ಹಿಡಿಯಲ್ಪಟ್ಟಿರುತ್ತವೆ.