ಭಾರತದ ಸಂವಿಧಾನ
ಭಾರತ ದೇಶದ ಸಂವಿಧಾನ / From Wikipedia, the free encyclopedia
ಭಾರತದ ಸಂವಿಧಾನವು ಭಾರತದ ಜನರನ್ನು ಆಳುವ ಸರಕಾರದ ಮೂಲ ರಚನೆಯನ್ನು ನಿರ್ದಿಷ್ಟಪಡಿಸುತ್ತದೆ. ಈ ಸಂವಿಧಾನವು ೯ ಡಿಸೆಂಬರ್ ೧೯೪೭ ರಿಂದ ೨೬ ನವೆಂಬರ್ ೧೯೪೯ರ ಮಧ್ಯ ಭಾರತದ ಸಂವಿಧಾನ ರಚನಾ ಸಭೆಯಿಂದ ರಚನೆಗೊಂಡು, ೨೬ ಜನವರಿ ೧೯೫೦ ರಂದು ಜಾರಿಗೆ ಬಂದಿತು. ಆದ್ದರಿಂದ ಭಾರತದಲ್ಲಿ ಪ್ರತಿವರ್ಷ ಜನವರಿ ೨೬ ರಂದು ಗಣರಾಜ್ಯೋತ್ಸವ ಆಚರಿಸಲಾಗುತ್ತದೆ. ಭಾರತದ ಸಂವಿಧಾನ ಇಲ್ಲಿಯವರೆಗಿನ ಮೂಲದ ಪ್ರಕಾರ ೩೬೫( ನಂತರ ೪೬೭) ವಿಧಿಗಳು ೨೨ (ನಂತರ ೨೫)ಭಾಗಗಳಲ್ಲಿಯೂ, ೮(ನಂತರ ೧೨) ಅನುಚ್ಛೇದಗಳನ್ನೂ, ೧೧೮ ತಿದ್ದುಪಡಿಗಳನ್ನೂ ಹೊಂದಿರುವ ಈ ಸಂವಿಧಾನ ಯಾವುದೇ ದೇಶದ ಲಿಖಿತ ಸಂವಿಧಾನಕ್ಕಿಂತ ದೀರ್ಘವಾದುದ್ದು. ಈ ಸಂವಿಧಾನದ ಆಂಗ್ಲ ಭಾಷೆಯ ಆವೃತ್ತಿಯು ೧,೧೭,೩೬೯ ಶಬ್ದಗಳನ್ನು ಹೊಂದಿದೆ.
Quick Facts ಭಾರತದ ಸಂವಿಧಾನ, ನ್ಯಾಯವ್ಯಾಪ್ತಿ ...
ಭಾರತದ ಸಂವಿಧಾನ | |
---|---|
ನ್ಯಾಯವ್ಯಾಪ್ತಿ | ಭಾರತ |
ಅಂಗೀಕರಿಸಿದ ದಿನ | 26 ನವೆಂಬರ್ 1949; 27129 ದಿನ ಗಳ ಹಿಂದೆ (1949-೧೧-26) |
ಜಾರಿಯಾದ ದಿನಾಂಕ | 26 ಜನವರಿ 1950; 27068 ದಿನ ಗಳ ಹಿಂದೆ (1950-೦೧-26) |
ವ್ಯವಸ್ಥೆ | ಸಾಂವಿಧಾನಿಕ ಸಂಸದೀಯ ಸಮಾಜವಾದಿ ಜಾತ್ಯತೀತ ಗಣರಾಜ್ಯ |
ಶಾಖೆಗಳು | ಮೂರು (ಕಾರ್ಯನಿರ್ವಾಹಕ, ಶಾಸಕಾಂಗ ಮತ್ತು ನ್ಯಾಯಾಂಗ) |
ಶಾಸಕಾಂಗ ಸಭೆ | ಎರಡು (ರಾಜ್ಯಸಭೆ ಮತ್ತು ಲೋಕಸಭೆ) |
ಕಾರ್ಯನಿರ್ವಾಹಕ | ಪ್ರಧಾನಮಂತ್ರಿ ಸಂಸತ್ತಿನ ಕೆಳಮನೆಗೆ ಜವಾಬ್ದಾರರಾಗಿರುವ ಕ್ಯಾಬಿನೆಟ್. |
ನ್ಯಾಯಾಂಗ | ಸರ್ವೋಚ್ಚ ನ್ಯಾಯಾಲಯ, ಉಚ್ಚ ನ್ಯಾಯಾಲಯಗಳು ಮತ್ತು ಜಿಲ್ಲಾ ನ್ಯಾಯಾಲಯಗಳು |
ಸಂಯುಕ್ತ ವ್ಯವಸ್ಥೆ | ಏಕೀಕೃತ ಕೇಂದ್ರ ಆಡಳಿತ |
ಚುನಾವಣಾ ಕಾಲೇಜು | ಹೌದು, ಅಧ್ಯಕ್ಷೀಯ ಮತ್ತು ಉಪಾಧ್ಯಕ್ಷ ಚುನಾವಣೆಗಳಿಗೆ |
ಭದ್ರ- ಕಾನೂನು ಷರತ್ತುಗಳು | ೨ |
ತಿದ್ದುಪಡಿಗಳು | ೧೦೪ |
ಕೊನೆಯದಾಗಿ ತಿದ್ದುಪಡಿ | ೨೫ ಜನವರಿ ೨೦೨೦ (೧೦೪ ನೇ) |
ಸ್ಥಳ | ಪಾರ್ಲಿಮೆಂಟ್ ಹೌಸ್, ನವದೆಹಲಿ, ಭಾರತ |
ಲೇಖಕ(ರು) |
ಮತ್ತು ಇತರೆ ಸಂವಿಧಾನ ಸಭೆಯ ಸದಸ್ಯರು |
ಸಹಿ ಮಾಡಿದವರು | ಸಂವಿಧಾನ ಸಭೆಯ ೨೮೪ ಸದಸ್ಯರು |
ಸೂಪರ್ಸೀಡೆಡ್ (ರದ್ದು) | ಭಾರತ ಸರ್ಕಾರ ಕಾಯ್ದೆ ೧೯೩೫ ಭಾರತ ಸ್ವಾತಂತ್ರ್ಯ ಕಾಯ್ದೆ ೧೯೪೭ |
Close