ಮಲ್ಲಿಗೆ
From Wikipedia, the free encyclopedia
ಮಲ್ಲಿಗೆಯು ಗತಪ್ರಪಂಚದ ಉಷ್ಣವಲಯ ಮತ್ತು ಸುಖೋಷ್ಣ ಪ್ರದೇಶಗಳಿಗೆ ಸ್ಥಳೀಯವಾದ ಸುಮಾರು ೨೦೦ ಜಾತಿಗಳಿರುವ ಆಲಿವ್ ಕುಟುಂಬವಾದ ಓಲಿಯಾಸೀದಲ್ಲಿನ ಪೊದೆ ಮತ್ತು ಬಳ್ಳಿಗಳ ಒಂದು ಪ್ರಜಾತಿ.[4][5][6]: 193 ಬಹುತೇಕ ಜಾತಿಗಳು ಇತರ ಸಸ್ಯಗಳು ಹಾಗೂ ಗೇಟುಗಳು ಅಥವಾ ಬೇಲಿಗಳಂತಹ ರಚನೆಗಳ ಮೇಲೆ ಬಳ್ಳಿಗಳಾಗಿ ಬೆಳೆಯುತ್ತವೆ.
![Thumb image](http://upload.wikimedia.org/wikipedia/commons/thumb/d/d3/Jasmin_Flower.jpg/640px-Jasmin_Flower.jpg)
ಇವುಗಳ ಪೈಕಿ ಹೆಚ್ಚಿನವು ಸುಗಂಧಪೂರಿತ ಹೂಗಳ ಸಲುವಾಗಿ ಆಯ್ದು ಬೆಳೆಸಿದಂಥವು. ಇವುಗಳ ಗುಣ ಲಕ್ಷಣಗಳಲ್ಲಿ ಹಲವು ವೇಳೆ ಪ್ರಮುಖ ವ್ಯತ್ಯಾಸಗಳೇನೂ ಕಂಡುಬರದಿರುವುದರಿಂದ ಪ್ರಭೇದಗಳ ಸಂಖ್ಯೆ ಇಷ್ಟೇ ಎಂದು ನಿರ್ದಿಷ್ಟವಾಗಿ ಹೇಳುವಂತಿಲ್ಲ. ಅನೇಕವು ಪ್ರತ್ಯೇಕ ಪ್ರಭೇದಗಳಾಗಿರದೆ ಹೂವಿನ ಗಾತ್ರ, ಸುವಾಸನೆ ಇತ್ಯಾದಿ ಗುಣಗಳಲ್ಲಿ ಕಂಡುಬರುವ ಸೂಕ್ಷ್ಮ ವ್ಯತ್ಯಾಸಗಳ ಆಧಾರದ ಮೇಲೆ ಹೆಸರಿಸಲಾಗಿರುವ ಸುಪರಿಚಿತ ಪ್ರಭೇದಗಳ ವಿಭಿನ್ನ ರೂಪಗಳಾಗಿರುವುದುಂಟು.
ಮಲ್ಲಿಗೆಯಲ್ಲಿ ಹಲವು ವಿಧಗಳಿವೆ. ಕಾಡುಮಲ್ಲಿಗೆ, ಸೂಜಿಮಲ್ಲಿಗೆ, ಜಾಜಿಮಲ್ಲಿಗೆ, ದುಂಡುಮಲ್ಲಿಗೆ, ಮೈಸೂರು ಮಲ್ಲಿಗೆ, ಮಂಗಳೂರು ಮಲ್ಲಿಗೆ, ಮುತ್ತುಮಲ್ಲಿಗೆ, ಸಾವಿರ ಮಲ್ಲಿಗೆ , ಏಳು ಪದರಿನ ಮಲ್ಲಿಗೆ