ಮೆಡಿಟರೇನಿಯನ್ ಸಮುದ್ರ
ಸಮುದ್ರ / From Wikipedia, the free encyclopedia
ಮೆಡಿಟರೇನಿಯನ್ ಸಮುದ್ರ -ಯುರೋಪ್ ಮತ್ತು ಆಫ್ರಿಕ ಖಂಡಗಳ ನಡುವೆ ಇರುವ ಭೂಮಧ್ಯ ಸಮುದ್ರ. ಇದು ಅಟ್ಲಾಂಟಿಕ್ ಮಹಾಸಾಗರಕ್ಕೆ ಸಂಪರ್ಕ ಹೊಂದಿದ್ದು, ಮೆಡಿಟರೇನಿಯನ್ ಪ್ರದೇಶದಿಂದ ಆವೃತವಾಗಿದೆ. ಇದು ಬಹುಮಟ್ಟಿಗೆ ಭೂಭಾಗದಿಂದ ಆವೃತ ಗೊಂಡಿದೆ: ಉತ್ತರದಲ್ಲಿ ಅನಟೋಲಿಯ ಮತ್ತು ಯುರೋಪ್, ದಕ್ಷಿಣದಲ್ಲಿ ಆಫ್ರಿಕ ಮತ್ತು ಪೂರ್ವದಲ್ಲಿ ಲೇವಾಂತ್ ಪ್ರದೇಶಗಳಿವೆ. ತಾಂತ್ರಿಕವಾಗಿ ಈ ಸಮುದ್ರವು ಅಟ್ಲಾಂಟಿಕ್ ಮಹಾಸಾಗರದ ಒಂದು ಭಾಗವಾಗಿದ್ದರೂ ಸಹ ಇದನ್ನು ಒಂದು ಪ್ರತ್ಯೇಕ ಜಲಸಮೂಹವಾಗಿ ಗುರುತಿಸಲಾಗುತ್ತದೆ. ಮೆಡಿಟರೇನಿಯನ್ ಎಂಬ ಪದವು ಲ್ಯಾಟಿನ್ ಭಾಷೆಯ ಮೆಡಿಟೆರೇನಿಯಸ್ ಎಂಬ ಪದದಿಂದ ಬಂದಿದೆ. ಮೆಡಿಟೆರೇನಿಯಸ್ ಎಂದರೆ "ಭೂಮಿಯ ಮಧ್ಯದಲ್ಲಿ" ಎಂದು ಅರ್ಥ..[1].
ಅಟ್ಲಾಂಟಿಕ್ ಸಾಗರದ ಒಂದು ಭಾಗ ಚಾಚಿಕೊಂಡಿರುವಂತೆ ಕಾಣುತ್ತದೆ. ಈ ಸಮುದ್ರ ಯುರೋಪಿಯನ್ ನಾಗರಿಕತೆಯ ತೊಟ್ಟಿಲು ಎನಿಸಿದ್ದು ಪಾಶ್ಚಾತ್ಯ ಸಂಸ್ಕøತಿ ಮತ್ತು ನಾಗರಿಕತೆಗಳ ಹುಟ್ಟು ಹಾಗೂ ಬೆಳೆವಣಿಗೆಗೆ ಕಾರಣವಾಗಿದೆ ಎನ್ನಬಹುದು. ಇಲ್ಲಿಯ ಕ್ರಾಂತಿಕಾರಕ ಸಂಸ್ಕøತಿ ಸಮುದ್ರದಾಚೆಯ ಭೂಪ್ರದೇಶಗಳಲ್ಲಿ ಹರಡಲು ಈ ಜಲಭಾಗ ಕಾರಣವಾಯಿತು. ಮೆಡಿಟರೇನಿಯನ್ ಇತಿಹಾಸದಲ್ಲಿ ಈ ಸಮುದ್ರ ತನ್ನ ತೀರದಿಂದ ತೀರಕ್ಕೆ ಹೊಸ ವಿಚಾರಗಳನ್ನು ಸಂಸ್ಕøತಿಯನ್ನು ಪ್ರಚಾರಮಾಡುವುದರಲ್ಲಿ ಪ್ರಮುಖ ಪಾತ್ರವಹಿಸಿದೆ.