ಲವಂಗ (clove) ಖಾರದಿಂದ ಕೂಡಿದ ಪರಿಮಳಯುಕ್ತ ಸಾಂಬಾರ ವಸ್ತು. ಅನೇಕ ವಿಧದಲ್ಲಿ ಉಪಯುಕ್ತ. ಮೂಲತ: ಇಂಡೋನೇಷ್ಯಾದ್ದಾಗಿದ್ದು ಅಲ್ಲಿ ಈಗಲೂ ಕಾಡುಮರವಾಗಿ ಕಂಡುಬರುತ್ತದೆ. ಪೋರ್ಚುಗೀಸರು ಇದನ್ನು ಯುರೋಪಿಗೆ ಒಯ್ದರು. ಭಾರತಕ್ಕೆ ಮಾರಿಷಸ್ ಮೂಲದಿಂದ ಬಂದಿದೆ.[1]

Quick Facts ಲವಂಗ, Scientific classification ...
ಲವಂಗ
Thumb
ಲವಂಗ ಚಿತ್ರಿಸಲಾದ ಚಿತ್ರ
Thumb
ಲವಂಗ ದೃಶ್ಯ ಚಿತ್ರ
Scientific classification
ಸಾಮ್ರಾಜ್ಯ:
plantae
Division:
ಹೂ ಬಿಡುವ ಸಸ್ಯ
ವರ್ಗ:
ಮ್ಯಾಗ್ನೋಲಿಯೋಪ್ಸಿಡ
ಗಣ:
Myrtales
ಕುಟುಂಬ:
Myrtaceae
ಕುಲ:
ಸಿಝಿಯಮ್
ಪ್ರಜಾತಿ:
S. aromaticum
Binomial name
ಸಿಝಿಯಮ್ ಅರೋಮಾಟಿಕಮ್
(L.) Merrill & Perry
Close

ಸಸ್ಯಶಾಸ್ತ್ರೀಯ ವರ್ಗೀಕರಣ

ಲವಂಗ ಮಿರ್ಟೀಸೀ ಕುಟುಂಬಕ್ಕೆ ಸೇರಿದ್ದು,ಸಿಝಿಯಮ್ ಅರೋಮಾಟಿಕಮ್ ಎಂದು ಸಸ್ಯಶಾಸ್ತ್ರೀಯ ಹೆಸರು.ಯೂಜಿಯ ಕ್ಯಾರಿಯೊಪಿಲ್ಲೇಟ ಎಂದೂ ಕರೆಯುತ್ತಾರೆ. ಇದು ಮಳೆ ಬೀಳುವ ಪ್ರದೇಶದಲ್ಲಿ ಬೆಳೆಯುತ್ತದೆ.[2]

ಸಸ್ಯದ ಗುಣಲಕ್ಷಣಗಳು

ಉಪಯೋಗಗಳು

ಹಲ್ಲು ನೋವಿಗೆ ಉತ್ತಮ ಔಷಧಿ. ಕೆಮ್ಮಿಗು ತೆಗೆದುಕೊಳ್ಳಬಹುದು.ಸಾಂಬಾರ್ ಪದಾರ್ಥಗಳಲ್ಲಿ ಹೆಚ್ಚಾಗಿ ಬಳಸುವ ಲವಂಗಕ್ಕೆ ಬೇಡಿಕೆ ಹೆಚ್ಚಿರುತ್ತದೆ. ಕಾರಣ ಇದನ್ನು ಆಯುರ್ವೇದ ಔಷಧ, ಟೂಥ್ ಪೌಡರ್, ಪೇಸ್ಟ್ ತಯಾರಿಕೆಯಲ್ಲಿ ಯಥೇಚ್ಛವಾಗಿ ಬಳಸುತ್ತಾರೆ. ಲವಂಗವನ್ನು ಕರ್ನಾಟಕದ ರಾಜ್ಯದ ಮಲೆನಾಡು, ಕರಾವಳಿ ಪ್ರದೇಶದಲ್ಲಿ ಬೆಳೆಯುತ್ತಾರೆ.

ಬೆಳೆಯುವ ವಿಧಾನ

ಲವಂಗ ದೀರ್ಘಕಾಲೀನ ಬೆಳೆ. ಇದನ್ನು ಹೆಚ್ಚಾಗಿ ಅಂತರ ಬೆಳೆಯಾಗಿ ಬೆಳೆಯುತ್ತಾರೆ. ಇತರ ಬೆಳೆಗಳ ಮಧ್ಯೆ ಅಥವಾ ಬದುಗಳಲ್ಲಿ ಸಸಿ ನಾಟಿ ಮಾಡುತ್ತಾರೆ. ವರ್ಷದ ಯಾವುದೇ ತಿಂಗಳಲ್ಲೂ ನಾಟಿ ಮಾಡಬಹುದು. ಸಸಿಗಳನ್ನು 20 ್ಢ 20 ಅಡಿ ಅಂತರದಲ್ಲಿ ನಾಟಿ ಮಾಡಬೇಕು. ಗುಂಡಿ ಆಳ ಒಂದೂವರೆ ಅಡಿ ಇದ್ದರೆ ಸಾಕು. ಗುಂಡಿಗೆ ಅಗತ್ಯಕ್ಕೆ ತಕ್ಕಷ್ಟು ಕೊಟ್ಟಿಗೆ ಗೊಬ್ಬರ ಹಾಕಬೇಕು. ಆಗಾಗ ನೀರು ಹಾಯಿಸುತ್ತಿರಬೇಕು. ಸಸಿ ನಾಟಿ ಮಾಡಿದ 5 ವರ್ಷದ ನಂತರ ಫಸಲು ನೀಡಲಾರಂಭಿಸುತ್ತದೆ. ಸಾಮಾನ್ಯ ಇದಕ್ಕೆ ಎಲೆಚುಕ್ಕೆ ರೋಗ ಹೆಚ್ಚು ಬಾಧಿಸುವುದು. ಇದು ಬಿಟ್ಟರೆ ಬೇರೆ ಯಾವ ರೋಗ ಬಾಧಿಸುವುದು ಕಮ್ಮಿ. ಇದರಲ್ಲಿ ಔಷಧಿಯ ಗುಣವಿರುವುದರಿಂದ ರೋಗನಿರೋಧಕ ಶಕ್ತಿ ಜಾಸ್ತಿ ಇರುತ್ತದೆ. ಹಾಗಾಗಿ ರೋಗಬಾಧೆ ಕಮ್ಮಿ ಎಂಬುದು ಅನುಭವಿ ಕೃಷಿಕರ ಮಾತು. ಚೆನ್ನಾಗಿ ನಿರ್ವಹಣೆ ಮಾಡಿದರೆ ಗಿಡವೊಂದರಿಂದ 1- 10 ಕೆ.ಜಿ.ವರೆಗೆ ಇಳುವರಿ ಪಡೆಯಬಹುದು.

ಮಣ್ಣು

ಸಾಮಾನ್ಯವಾಗಿ ಎಲ್ಲ ನಮೂನೆಯ ಮಣ್ಣಲ್ಲಿ ಬೆಳೆಯುತ್ತದೆ. ಆದರೂ ಮರಳು ಮಿಶ್ರಿತ ಕೆಂಪು ಮಣ್ಣು ಚೆನ್ನಾಗಿ ಬೆಳೆಯುತ್ತದೆ. ಅದೇ ರೀತಿ ಲವಂಗ ಗಿಡ ಜಾಸ್ತಿ ಉಷ್ಣ ತಾಳದು. ಹಾಗಾಗಿ ಇದನ್ನು ಬೆಳೆಯಲು ಮಲೆನಾಡು ಪ್ರದೇಶ ಉತ್ತಮ.

ಉಲ್ಲೇಖಗಳು

Wikiwand in your browser!

Seamless Wikipedia browsing. On steroids.

Every time you click a link to Wikipedia, Wiktionary or Wikiquote in your browser's search results, it will show the modern Wikiwand interface.

Wikiwand extension is a five stars, simple, with minimum permission required to keep your browsing private, safe and transparent.