ವನೆಸ್ಸಾ ಹಡ್ಜೆನ್ಸ್
From Wikipedia, the free encyclopedia
ವನೆಸ್ಸಾ ಅನೆ ಹದ್ಜೆನ್ಸ್ [2] (ಜನನ ಡಿಸೆಂಬರ್ 14, 1988)[3] ಒಬ್ಬ ಮೆರಿಕನ್ ನಟಿ ಮತ್ತು ಹಾಡುಗಾರ್ತಿ. ಸ್ಥಳೀಯ ನಾಟಕ ಕಂಪನಿಗಳಲ್ಲಿ ಕಾರ್ಯವೆಸಗಿ ಟೆಲಿವಿಷನ್ ನಲ್ಲಿ ಜಾಹಿರಾತುಗಳಲ್ಲಿ ತನ್ನ ಬಾಲ್ಯದಲ್ಲೇ ಕಾಣಿಸಿಕೊಂಡ ಹಡ್ಜೆನ್ಸ್ 2003ರಲ್ಲಿ ಥರ್ಟೀನ್ ಎಂಬ ನಾಟಕಾಧಾರಿತ ಚಲನಚಿತ್ರದಲ್ಲಿದಲ್ಲಿ ನೊಯೆಲ್ ನ ಪಾತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ವಪಣೆ ಮಾಡಿದಳು. ನಂತರ 2004ರಲ್ಲಿ ಥಂಡರ್ ಬರ್ಡ್ಸ್ ಎಂಬ ವೈಜ್ಞಾನಿಕ-ಕಥೆಯಾಧಾರಿತ-ಸಾಹಸಮಯ ಚಿತ್ರದಲ್ಲಿದಲ್ಲಿ ಅಭಿನಯಿಸಿದಳು. ಹದ್ಜೆನ್ಸ್ ಳ ಬಹಳ ಪ್ರಮುಖ ಪಾತ್ರವೆಂದರೆ ಹೈ ಸ್ಕೂಲ್ ಮ್ಯೂಸಿಕಲ್ ಎಂಬ ಸರಣಿರೂಪದಲ್ಲಿ ಬಂದ ಚಿತ್ರದಲ್ಲಿ ಅಭಿನಯಿಸಿದ ಗೇಬ್ರಿಯೆಲಾ ಮಾಂಟೆಜ್ಳ ಪಾತ್ರ.[4] 2009ರ ೧೪ನೇ ಆಗಸ್ಟ್ 2009ರಂದು ಬಿಡುಗಡೆಯಾದ ಬ್ಯಾಂಡ್ ಸ್ಲ್ಯಾಮ್ ಚಿತ್ರದಲ್ಲಿನ ಅಭಿನಯಕ್ಕೆ ವಿಮರ್ಶಾತ್ಮಕ ಪ್ರಶಂಸೆ ಗಳಿಸಿದಳು.[5]
Vanessa Hudgens | |
---|---|
ಹಿನ್ನೆಲೆ ಮಾಹಿತಿ | |
ಜನ್ಮನಾಮ | Vanessa Anne Hudgens |
ಮೂಲಸ್ಥಳ | Salinas, California, United States |
ಸಂಗೀತ ಶೈಲಿ | Pop, dance,[1] soul |
ವೃತ್ತಿ | Actress, singer, dancer |
ವಾದ್ಯಗಳು | Vocals |
ಸಕ್ರಿಯ ವರ್ಷಗಳು | 2002 – present |
Labels | Hollywood Records (2006-2009) |
Associated acts | ಕಾರ್ಬಿನ್ ಬ್ಲ್ಯೂ, ಐಶ್ಲೇ ಟಿಸ್ ಡೇಲ್ |
ಅಧೀಕೃತ ಜಾಲತಾಣ | www.vanessahudgens.com |
ಹಡ್ಜೆನ್ಸ್ ಳ ಮೊದಲ ಆಲ್ಬಮ್ V ೨೬ನೇ ಸೆಪ್ಟೆಂಬರ್ ೨೦೦೬ರಂದು ಬಿಡುಗಡೆಯಾಯಿತು. ಈ ಆಲ್ಬಮ್ ಬಿಲ್ ಬೋರ್ಡ್ ೨೦೦ರ ಪಟ್ಟಿಯಲ್ಲಿ 24ನೆಯ ಸ್ಥಾನದಲ್ಲಿದ್ದು ನಂತರ 'ಸರ್ಟಿಫೈಡ್ ಗೋಲ್ಡ್' ಮಟ್ಟಕ್ಕೆ ಬಂದು ನಿಂತಿತು.[6] ಜುಲೈ ೧, 2998ರಂದು ಹಡ್ಜೆನ್ಸ್ ತನ್ನ ಎರಡನೆಯ ಆಲ್ಬಮ್ ಆದ ಐಡೆಂಟಿಫೈಡ್ ಅನ್ನು ಉನೈಟೆಕ್ ಸ್ಟೇಟ್ಸ್ ನಲ್ಲಿ ಬಿಡುಗಡೆ ಮಾಡಿದಳು.