ವಿಶಾಖಪಟ್ನಂ
From Wikipedia, the free encyclopedia
ವಿಶಾಖಪಟ್ಟಣ ಆಂಧ್ರ ಪ್ರದೇಶ ರಾಜ್ಯದ ಒಂದು ಕರಾವಳಿ ನಗರ ಹಾಗೂ ರೇವು ಪಟ್ಟಣ. ವಿಶಾಖಪಟ್ಟಣ ಜಿಲ್ಲಾಕೇಂದ್ರ. ಭಾರತದ ಪೂರ್ವ ಕರಾವಳಿಯಲ್ಲಿರುವ ಈ ನಗರದ ಪಶ್ಚಿಮಕ್ಕೆ ಪೂರ್ವ ಘಟ್ಟಗಳು ಹಾಗೂ ಪೂರ್ವಕ್ಕೆ ಬಂಗಾಳ ಕೊಲ್ಲಿಯಿದೆ. ವೈಜಾಗ್ ಎಂಬ ಹೆಸರಿನಿಂದನೂ ಕರೆಯಲ್ಪಡುವ ಇದು ಆಂಧ್ರಪ್ರದೇಶದ ದೊಡ್ಡ ನಗರಗಳಲ್ಲಿ ಒಂದಾಗಿದ್ದು ವಾಣಿಜ್ಯ ರಾಜಧಾನಿಯಾಗಿದೆ.[1] ಇದು ಭಾರತೀಯ ಕೋಸ್ಟ್ ಗಾರ್ಡ್ ನ ರಾಜ್ಯ ಪ್ರಧಾನ ಕಾರ್ಯಸ್ಥಾನವಾಗಿದೆ.[2] ೨೦೧೧ರ ಜನಗಣತಿ ಪ್ರಕಾರ ಇದು ೨,೦೩೫,೯೨೨ ಜನಸಂಖ್ಯೆ ಹೊಂದಿದ್ದು ದೇಶದಲ್ಲಿ ೧೪ನೇ ಸ್ಥಾನದಲ್ಲಿದೆ.
ವಿಶಾಖಪಟ್ಟಣಂ | |
ವಿಶಾಖಪಟ್ಟಣದ ಪಕ್ಷಿನೋಟ | |
ರಾಜ್ಯ - ಜಿಲ್ಲೆ |
ಆಂಧ್ರ ಪ್ರದೇಶ - ವಿಶಾಖಪಟ್ಟಣ |
ನಿರ್ದೇಶಾಂಕಗಳು | 17.42° N 83.15° E |
ವಿಸ್ತಾರ | 208.5 km² |
ಸಮಯ ವಲಯ | IST (UTC+5:30) |
ಜನಸಂಖ್ಯೆ (2001) - ಸಾಂದ್ರತೆ |
- 6,884.2/sq mi/ಚದರ ಕಿ.ಮಿ. |
ಮೇಯರ್ |
ಈ ಪಟ್ಟಣದ ಇತಿಹಾಸವು ಕ್ರಿಸ್ತಪೂರ್ವದ ವರೆಗೂ ಇದ್ದು ಕಳಿಂಗ ರಾಜ್ಯದ ಭಾಗವಾಗಿತ್ತು. ನಂತರ ವೆಂಗಿ, ಪಲ್ಲವ, ಪೂರ್ವ ಗಂಗ ಸಾಮ್ರಾಜ್ಯಗಳಿಗೆ ಸೇರಿತ್ತು.[3] ವಾಸ್ತುದಾಖಲೆಗಳ ಪ್ರಕಾರ ಈಗಿನ ಪಟ್ಟಣವು ೧೧ ಮತ್ತು ೧೩ನೇ ಶತಮಾನದ ಕಾಲದಲ್ಲಿ ಚೋಳ ಹಾಗೂ ಗಜಪತಿ ಸಾಮ್ರಾಜ್ಯಗಳ ತಿಕ್ಕಾಟದ ಅವಧಿಯಲ್ಲಿ ಕಟ್ಟಲ್ಪಟ್ಟಿತು.[4][5] ಅನಂತರ ೧೫ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯವು ವಶಪಡಿಸಿಕೊಂಡಿತು. ೧೬ನೇ ಶತಮಾನದಲ್ಲು ಮೊಘಲ್ ಸಾಮ್ರಾಜ್ಯಕ್ಕೆ ಸೇರಿ ಅನಂತರ ಯುರೋಪಿಯನ್ ದೇಶಗಳು ವ್ಯಾಪಾರಾಸಕ್ತಿ ಚಟುವಟಿಕೆಗಳ ನೆಲೆಯಾಯಿತು. ೧೮ನೇ ಶತಮಾನದ ಕೊನೆಯ ವೇಳೆಗೆ ಇದು ಫ್ರೆಂಚರ ಆಳ್ವಿಕೆಗೆ ಒಳಪಟ್ಟಿತು. ೧೮೦೪ರಿಂದ ೧೯೪೭ರ ಭಾರತದ ಸ್ವಾತಂತ್ರ್ಯದವರೆಗೆ ಬ್ರಿಟಿಶರ ಆಳ್ವಿಕೆಗೆ ಒಳಪಟ್ಟಿತ್ತು.
ಈ ನಗರವು ಅತಿಹಳೆಯ ಹಡಗುನೆಲೆ ಹಾಗೂ ಪೂರ್ವಕರಾವಳಿಯ ನೈಸರ್ಗಿಕ ಬಂದರನ್ನು ಹೊಂದಿದೆ.[6] ಭಾರತೀಯ ನೌಕಾಸೇನೆಯ ಪೂರ್ವ ಕಮಾಂಡ್ ನ ಹಾಗೂ ಪೂರ್ವಕರಾವಳಿ ರೈಲ್ವೆ ವಲಯದ ಪ್ರಧಾನ ಕಛೇರಿಗಳು ಇಲ್ಲಿವೆ.