ಕೆ೨
From Wikipedia, the free encyclopedia
ಕೆ2 ಭೂಮಿಯ ಮೇಲೆ ಮೌಂಟ್ ಎವರೆಸ್ಟ್ನ ನಂತರ ಎರಡನೇ ಅತಿ ಎತ್ತರದ ಪರ್ವತ. ಇದರ ಮೇಲ್ಮೈ ಶಿಖರ 8,611 metres (28,251 ft) ನಷ್ಟಿದ್ದು, ಕಾರಕೋರಂ ಶ್ರೇಣಿಯ ಭಾಗವಾಗಿದೆ, ಮತ್ತು ಕ್ಸಿನ್ಜಿಯಾಂಗ್, ಚೀನಾದ ಕ್ಸಿನ್ಜಿಯಾಂಗ್ದ ಟಾಕ್ಸ್ಕೊರ್ಗನ್ ಟಜಿಕ್ ಸ್ವಯಾಧಿಕಾರದ ಕೌಂಟಿ ಮತ್ತು ಪಾಕಿಸ್ತಾನದ ಗಿಲ್ಗಿಟ್-ಬಾಲ್ಟಿಸ್ತಾನ್ನಲ್ಲಿರುವ ಗಿಲ್ಗಿಟ್ ಪ್ರದೇಶಗಳ ಸೀಮೆಯಲ್ಲಿದೆ.[2][note][3] ಪಾಕ್ ಆಕ್ರಮಿತ ಕಾಶ್ಮೀರವು ತನ್ನ ಭೂಪ್ರದೇಶವೆಂದು ಭಾರತದ ನಿಲುವಾದ್ದರಿಂದ ಆ ದೃಷ್ಟಿಯಲ್ಲಿ ಕೆ-೨ ಭಾರತದ ಅತ್ಯುನ್ನತ ಶಿಖರವೆನಿಸಲ್ಪಡುವುದು.
K2 | |
---|---|
Highest point | |
ಎತ್ತರ | 8,611 m (28,251 ft) Ranked 2nd (1st in Pakistan) |
ಪ್ರಾಮುಖ್ಯತೆ | 4,017 m (13,179 ft) |
ಪ್ರತ್ಯೇಕತೆ | 1,316 km (818 mi) |
ಪಟ್ಟಿ | 2nd highest 22nd most prominent Country high point Seven Second Summits |
ನಿರ್ದೇಶಾಂಕಗಳು | 35°52′57″N 76°30′48″E[1] |
Geography | |
Lua error in ಮಾಡ್ಯೂಲ್:Location_map at line 525: Unable to find the specified location map definition: "ಮಾಡ್ಯೂಲ್:Location map/data/Tibetan Plateau" does not exist.
| |
Parent range | Karakoram |
Climbing | |
ಮೊದಲ ಆರೋಹಣ | July 31, 1954 Achille Compagnoni Lino Lacedelli |
ಸುಲಭವಾದ ಮಾರ್ಗ | rock/snow/ice climb |
ಕೆ2 ಪರ್ವತದ ಕ್ಲಿಷ್ಟಕರವಾದ ಅರೋಹಣದಿಂದ ಇದನ್ನು ಉಗ್ರ ಪರ್ವತ ವೆಂದು ಕರೆಯುತ್ತಾರೆ ಮತ್ತು ಹತ್ತುವ "ಎಂಟು ಸಾವಿರದವರಲ್ಲಿ" 2ನೇ ಅತಿ ಪ್ರಾಣಾಂತಿಕ ದರ್ಜೆಯಲ್ಲಿದೆ. ಶಿಖರವನ್ನು ಸೇರಿರುವ ಪ್ರತಿ ನಾಲ್ಕು ಜನರಲ್ಲಿ, ಒಬ್ಬನು ಯತ್ನದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.[4] ಪ್ರಾಣಾಂತಿಕ ದರ್ಜೆಯಲ್ಲಿ ಮೊದಲನೇ ಸ್ಥಾನದಲ್ಲಿರುವ ಅನ್ನಪೂರ್ಣದಂತಿಲ್ಲದೆ, ಚಳಿಗಾಲದಲ್ಲಿ ಕೆ2ವನ್ನು ಯಾರೂ ಹತ್ತಿಲ್ಲ. ೧೮೫೬ರಲ್ಲಿ ಗಾಡ್ವಿನ್-ಆಸ್ಟಿನ್ ನ ನೇತೃತ್ವದ ಯುರೋಪ್ ನ ತಂಡವೊಂದು ಈ ಪರ್ವತದ ಮೋಜಣಿ ನಡೆಸಿ ಎತ್ತರವನ್ನು ನಿಖರವಾಗಿ ನಿರ್ಧರಿಸಿತು. ಈ ಪರ್ವತವನ್ನು ಏರಲು ಹಲವು ದಾರಿಗಳಿವೆ. ಆದರೆ ಯಾವುದೇ ದಾರಿಯೂ ಸುಗಮವೆಂದು ಹೇಳಲಾಗದು. ಅತಿ ಹೆಚ್ಚಿನ ಎತ್ತರದ ಕಾರಣ ಆಮ್ಲಜನಕದ ತೀವ್ರ ಕೊರತೆ, ಹಲವು ದಿನಗಳವರೆಗೆ ಬಿಡದಂತೆ ಬೀಸುವ ಹಿಮದ ಬಿರುಗಾಳಿ, ಅತಿ ಕಡಿದಾದ ಪರ್ವತದ ಮೇಲ್ಮೈ - ಈ ಕಾರಣಗಳಿಂದಾಗಿ ಕೆ-೨ ಶಿಖರವು ಪರ್ವತಾರೋಹಿಗಳಿಗೆ ಒಂದು ಕಠಿಣ ಸವಾಲಾಗಿದೆ. ೧೯೫೪ರಲ್ಲಿ ಇಟಲಿಯ ಪರ್ವತಾರೋಹಿ ತಂಡವೊಂದು ಕೆ-೨ ಪರ್ವತವನ್ನು ಮೊಟ್ಟಮೊದಲ ಬಾರಿಗೆ ಏರುವಲ್ಲಿ ಸಫಲವಾಯಿತು.