ಅಲ್ಬರ್ಟ್ ಐನ್ಸ್ಟೈನ್
ಗಣಿತಜ್ಞ / From Wikipedia, the free encyclopedia
ಆಲ್ಬರ್ಟ್ ಐನ್ಸ್ಟೀನ್ (ಜರ್ಮನ್ ಉಚ್ಛಾರಣೆ (ಸಹಾಯ·ಮಾಹಿತಿ)) (ಮಾರ್ಚ್ ೧೪, ೧೮೭೯ - ಏಪ್ರಿಲ್ ೧೮, ೧೯೫೫) ೨೦ನೇ ಶತಮಾನದ ಜರ್ಮನಿ ಮೂಲದ ಭೌತವಿಜ್ಞಾನಿ. ಇವರು ಸಾಪೇಕ್ಷತ ಸಿದ್ಧಾಂತವನ್ನು (ಥಿಯರಿ ಆಫ್ ರಿಲೇಟಿವಿಟಿ) ಜಗತ್ತಿನ ಮುಂದಿಟ್ಟವರು. ಕ್ವಾಂಟಮ್ ಭೌತಶಾಸ್ತ್ರ, ಸ್ಟ್ಯಾಟಿಸ್ಟಿಕಲ್ ಮೆಕ್ಯಾನಿಕ್ಸ್ ಹಾಗೂ ವಿಶ್ವಶಾಸ್ತ್ರ (ಕಾಸ್ಮಾಲಜಿ)ಗಳಲ್ಲಿ ಕೂಡ ಮಹತ್ತರವಾದ ಕಾಣಿಕೆ ನೀಡಿದ್ದಾರೆ. ೧೯೨೧ರಲ್ಲಿ ಇವರಿಗೆ ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ದ್ಯುತಿವಿದ್ಯುತ್ ಪರಿಣಾಮ ಬಣ್ಣಿಸಿದ ಇವರ ವಾದ ಹಾಗೂ ಸೈದ್ಧಾಂತಿಕ ಭೌತಶಾಸ್ತ್ರಕ್ಕೆ ಇವರು ಸಲ್ಲಿಸಿದ ಸೇವೆಗೆ ಈ ಪ್ರಶಸ್ತಿ ನೀಡಲಾಯಿತು.
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
Quick Facts ಅಲ್ಬರ್ಟ್ ಐನ್ಸ್ಟೈನ್, ಜನನ ...
ಅಲ್ಬರ್ಟ್ ಐನ್ಸ್ಟೈನ್ | |
---|---|
ಜನನ | ಮಾರ್ಚ್ ೧೪, ೧೮೭೯ ಉಲ್ಮ್, ವುರ್ಟಮ್ಬರ್ಗ್, ಜರ್ಮನಿ |
ಮರಣ | ಏಪ್ರಿಲ್ ೧೮, ೧೯೫೫ ಪ್ರಿನ್ಸ್ಟನ್, ನ್ಯೂ ಜರ್ಸಿ |
ವಾಸ | ಜರ್ಮನಿ, ಇಟಲಿ, ಸ್ವಿಟ್ಜರ್ಲ್ಯಾಂಡ್, ಯುಎಸ್ಎ |
ರಾಷ್ಟ್ರೀಯತೆ | ಜರ್ಮನಿ (೧೮೭೯-೯೬, ೧೯೧೪-೩೩) ಸ್ವಿಟ್ಜರ್ಲ್ಯಾಂಡ್ (೧೯೦೧-೫೫) ಯುಎಸ್ಎ (೧೯೪೦-೫೫) |
ಕಾರ್ಯಕ್ಷೇತ್ರಗಳು | ಭೌತಶಾಸ್ತ್ರ |
ಸಂಸ್ಥೆಗಳು | Swiss Patent Office (Berne) Univ. of Zürich Charles Univ. Kaiser Wilhelm Inst. Univ. of Leiden ಇನ್ಸ್ಟಿಟ್ಯೂಟ್ ಫಾರ್ ಅಡ್ವಾನ್ಸ್ಡ್ ಸ್ಟಡೀಸ್ |
ಅಭ್ಯಸಿಸಿದ ಸಂಸ್ಥೆ | ETH Zürich |
ಪ್ರಸಿದ್ಧಿಗೆ ಕಾರಣ | ಸಾಮಾನ್ಯ ಸಾಪೇಕ್ಷತ ಸಿದ್ಧಾಂತ, ವಿಶೇಷ ಸಾಪೇಕ್ಷತ ಸಿದ್ಧಾಂತ Brownian motion, ಫೋಟೊ ಎಲೆಕ್ಟ್ರಿಕ್ ಎಫೆಕ್ಟ್ |
ಗಮನಾರ್ಹ ಪ್ರಶಸ್ತಿಗಳು | ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ (೧೯೨೧) ಕೊಪ್ಲೆ ಪದಕ (೧೯೨೫) ಮ್ಯಾಕ್ಸ್ ಪ್ಲಾಂಕ್ ಪದಕ (೧೯೨೯) |
Close