ದಕ್ಷಿಣ ಏಷ್ಯಾ
From Wikipedia, the free encyclopedia
ದಕ್ಷಿಣ ಏಷ್ಯಾವನ್ನು , ದಕ್ಷಿಣಾರ್ಧ ಏಷ್ಯಾ , ಎಂದು ಕೂಡ ಕರೆಯುತ್ತಾರೆ ಇದು ಏಷ್ಯಾ ಖಂಡದದಕ್ಷಿಣ ಪ್ರಾಂತ್ಯಗಳಾದ ಹಿಮಾಲಯದ ದಕ್ಷಿಣದಲ್ಲಿರುವ ದೇಶಗಳು ಹಾಗು ಕೆಲವು ಸ್ವತಂತ್ರ ಪ್ರಭುತ್ವ (ಮುಂದೆ ಓದಿ ) , ಇದರೊಂದಿಗೆ ಅಕ್ಕಪಕ್ಕದ ಪಶ್ಚಿಮ ಹಾಗು ಪೂರ್ವದಲ್ಲಿರುವ ಕೆಲವು ನೆರೆಯ ರಾಷ್ಟ್ರಗಳನ್ನು ಒಳಗೊಂಡಿದೆ. ಈ ಪ್ರದೇಶದ ಸ್ವರೂಪಕ್ಕೆ ಸಂಬಂಧಿಸಿದಂತೆ, ಹಿಮಾಲಯ ಹಾಗು ಹಿಂದುಕುಶ್ ಪರ್ವತದ ದಕ್ಷಿಣಕ್ಕೆ ಸಮುದ್ರದ ಮೇಲ್ಮಟ್ಟದಲ್ಲಿ ಎದ್ದಿರುವ ಭಾರತೀಯ ಉಪಖಂಡದ ರೂಪದಲ್ಲಿ ಚಾಚಿ ಕೊಂಡಿರುವ, ಭಾರತೀಯ ಮೇಲ್ಮೈ ಪ್ರದೇಶ (ಇಂಡಿಯನ್ ಪ್ಲೇಟ್) ಪ್ರಧಾನವಾಗಿದೆ. ದಕ್ಷಿಣ ಏಷ್ಯಾವು (ಪ್ರದಕ್ಷಿಣಕಾರವಾಗಿ, ಪಶ್ಚಿಮದಿಂದ ಪೂರ್ವಕ್ಕೆ) ಪಶ್ಚಿಮ ಏಷ್ಯಾ, ಮಧ್ಯ ಏಷ್ಯಾ, ಪೂರ್ವ ಏಷ್ಯಾ, ದಕ್ಷಿಣ-ಪೂರ್ವ ಏಷ್ಯಾ ಹಾಗು ಹಿಂದು ಮಹಾಸಾಗರದಿಂದ ಆವರಿಸಲ್ಪಟ್ಟಿದೆ. ದಕ್ಷಿಣ ಏಷ್ಯಾದ ಪ್ರಾತಿನಿಧಿಕ ವ್ಯಾಖ್ಯಾನ ವೈಶಿಷ್ಟ್ಯಪೂರ್ಣವಾಗಿ ಬಾಂಗ್ಲಾದೇಶ, ಭೂತಾನ, ಭಾರತ, ಮಾಲ್ಡೀವ್ಸ್, ನೇಪಾಳ, ಪಾಕಿಸ್ತಾನ ಹಾಗು ಶ್ರೀಲಂಕಾ ದೇಶಗಳನ್ನು ಒಳಗೊಂಡಿದೆ. ಕೆಲವೊಂದು ನಿರೂಪಣೆಗಳು ಈ ದೇಶಗಳೊಂದಿಗೆ ಅಫ್ಘಾನಿಸ್ತಾನ , ಬರ್ಮಾ, ಟಿಬೆಟ್ , ಹಾಗು ಹಿಂದು ಮಹಾಸಾಗರದ ಬ್ರಿಟಿಷ್ ಆಡಳಿತದ ಪ್ರದೇಶ ಗಳನ್ನು ಕೂಡ ಒಳಗೊಂಡಿದೆ.[2] ಇದಲ್ಲದೆ UN ಸಬ್ ರೀಜನ್ (ವಿಶ್ವಸಂಸ್ಥೆಯ ಉಪವಿಭಾಗ) ಕೂಡ ದಕ್ಷಿಣ ಏಷ್ಯಾಗೆ ಇರಾನ್ ಅನ್ನು ಸೇರಿಸಿದೆ, ಆದರೆ ಬೇರೆ ಹಲವಾರು ಮೂಲಗಳು ಇರಾನ್ ಪಶ್ಚಿಮ ಏಷ್ಯಾ ಎನುತ್ತವೆ.[3][4][5][5][6][7][8] ಹಲವು ವಿಶ್ವವಿದ್ಯಾಲಯಗಳ ದಕ್ಷಿಣ ಏಷ್ಯಾದ ವಿಷಯಕ್ಕೆ ಸಂಬಂಧ ಪಟ್ಟ ವಿಭಾಗಗಳು ಕೂಡ ಸಾಮಾನ್ಯವಾಗಿ ಇರಾನ್ ದಕ್ಷಿಣ ಏಷ್ಯಾದ ಭಾಗವೆಂಬ ಅಭಿಪ್ರಾಯವನ್ನು ಒಪ್ಪಿಕೊಳ್ಳುವುದಿಲ್ಲ. (ಮುಂದೆ ಓದಿ) ವಿಶ್ವದ ಜನಸಂಖ್ಯೆಯ ಸುಮಾರು ಐದನೇ ಒಂದು ಭಾಗದಷ್ಟು ಜನರು ದಕ್ಷಿಣ ಏಷ್ಯಾದಲ್ಲಿದ್ದಾರೆ, ಹೀಗಾಗಿ ಇದು ವಿಶ್ವದಲ್ಲಿಯೇ ಜನಸಂಖ್ಯೆಯು ಅತ್ಯಂತ ಹೆಚ್ಚಾಗಿರುವ ಹಾಗು ಜನನಿಬಿಡ ಭೌಗೋಳಿಕ ಪ್ರದೇಶವಾಗಿದೆ.[9] ಈ ಪ್ರದೇಶದ ಎರಡು ಅಣ್ವಸ್ತ್ರ-ಹೊಂದಿರುವ ದೇಶಗಳಾದ ಪಾಕಿಸ್ತಾನ ಹಾಗು ಭಾರತ ನಡುವಿನ ಯುದ್ಧವು, ಒಳಗೊಂಡಂತೆ ಈ ಪ್ರದೇಶವು ಹಲವಾರು ಬಾರಿ ಅನೇಕ ಘರ್ಷಣೆ ಹಾಗು ರಾಜಕೀಯ ಅಸ್ಥಿರತೆಯನ್ನು ಕಂಡಿದೆ. ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘವು ಈ ಪ್ರದೇಶದಲ್ಲಿ ಆರ್ಥಿಕ ಸಹಕಾರಕ್ಕೆಂದು ಇರುವ ಸಂಸ್ಥೆ.
ರಾಷ್ಟ್ರಗಳು | 7 ರಿಂದ 10(ಪುಟ ನೋಡಿ ) |
---|---|
ಭೂಪ್ರದೇಶದ ವ್ಯಾಪ್ತಿ | 0, 1, or 2 (ಪುಟ ನೋಡಿ ) |
GDP (ಜಿಡಿಪಿ) (ಸಾಮಾನ್ಯ)
{ಒಟ್ಟು ರಾಷ್ಟ್ರೀಯ ಉತ್ಪನ್ನ (ಸಾಮಾನ್ಯ)} |
$1.56 ಲಕ್ಷಕೋಟಿ |
GDP (ಜಿಡಿಪಿ) ಪರ್ ಕ್ಯಾಪಿಟಾ (ಸಾಮಾನ್ಯ)
{ತಲಾವಾರು ಒಟ್ಟು ರಾಷ್ಟ್ರೀಯ ಆದಾಯ (ಸಾಮಾನ್ಯ)} |
$1,079 |
ಭಾಷೆಗಳು | ಅಸ್ಸಾಮೀಸ್/ಅಸೊಮಿಯ, ಬೆಂಗಾಳಿ, ಬೊಡೊ, ಬರ್ಮಿಸ್, ದಾರಿ[1], ಧಿವೆಹಿ, ಡೋಗ್ರಿ, ಜೋಂಖ, ಇಂಗ್ಲೀಷ್, ಗುಜರಾತಿ, ಹಿಂದಿ, ಕನ್ನಡ, ಕಾಶ್ಮೀರಿ, ಕೊಂಕಣಿ, ಮೈಥಿಲಿ, ಮಲಯಾಲಂ, ಮರಾಠಿ, ಮಣಿಪುರಿ, ನೇಪಾಳಿ, ಒರಿಯಾ, ಪಶ್ತೂ, ಪರ್ಷಿಯನ್, ಪಂಜಾಬಿ, ಸಂಸ್ಕೃತ, ಸಂಥಾಳಿ, ಸಿಂಧಿ, ಸಿಂಹಳ, ಸಿರೈಕಿ, ತಮಿಳು, ತೆಲಗು, ಟಿಬೆಟಿಯನ್, ಉರ್ದು, ಹಾಗು ಇತರೆ |
ಕಾಲವಲಯ (ಟೈಮ್ ಜೋನ್ಸ್) | UTC +8:00 (ಟಿಬೆಟ್) ರಿಂದ UTC +3:30 (ಇರಾನ್) |
ಅತಿ ದೊಡ್ಡ ನಗರಗಳು | ಅಹಮದಾಬಾದ್, ಅಮೃತಸರ, ಬೆಂಗಳೂರು, ಕೊಲ್ಕತಾ, ಚೆನ್ನೈ, ಕೊಚಿನ್, ಕೊಲಂಬೋ, ಢಾಕಾ, ದೆಹಲಿ, ಡಿಯೆಗೊ ಗಾರ್ಸಿಯಾ, ಹೈದರಾಬಾದ್, ಇಸ್ಲಾಮಾಬಾದ್ , ಲಾಹೋರ್, ಕಾಬುಲ್, ಕರಾಚಿ, ಕಟ್ಮಂಡು, ಲ್ಹಾಸ, ಮಾಲೆ, ಮುಂಬೈ, ಪೇಶಾವರ್, ಪುಣೆ, ಸೂರತ್, ತೆಹರಾನ್, ಥಿಂಪು, ಹಾಗು ಯಾಂಗೊನ್ |