ಪ್ರಸರಣೆ
From Wikipedia, the free encyclopedia
ಪ್ರಸರಣೆ (ವಿಸರಣೆ) ಎಂದರೆ ಅಣುಗಳ ಯಾದೃಚ್ಛಿಕ ಚಲನೆಯಿಂದಾಗಿ ಅಧಿಕ ಸಾರದ ಪ್ರದೇಶದಿಂದ ಕಡಿಮೆ ಸಾರದ ಪ್ರದೇಶಕ್ಕೆ ನಿವ್ವಳ ಅಣುಪ್ರವಹನ (ಡಿಫ್ಯೂಶನ್).[1][2] ಪೊಟ್ಯಾಸಿಯಮ್ ಪರ್ಮ್ಯಾಂಗನೆಟ್ ಹರಳನ್ನು ನೀರಿನಲ್ಲಿರಿಸಿದಾಗ ಹರಳಿನ ಬಣ್ಣ ನಿಧಾನವಾಗಿ ಮೇಲೇರುವುದು, ಕಡಲಿನೊಳಗಿನ ಉಪ್ಪು ನದೀಪ್ರವಾಹದ ಎದುರಾಗಿ ಹರಡುವುದು, ಸುಗಂಧ ಸೀಸೆಯನ್ನು ತೆರೆದಾಗ ಕೋಣೆ ಪೂರ್ತಿ ಅದರ ಪರಿಮಳ ತುಂಬುವುದು-ಇವು ವಿಸರಣೆಗೆ ಕೆಲವು ಉದಾಹರಣೆಗಳು. ಉಕ್ಕಿನಲ್ಲಿ ಕಾರ್ಬನ್ ವಿಸರಣೆಯಿಂದ ಕಾರ್ಬನ್ ಉಕ್ಕು ಉಂಟಾಗುತ್ತದೆ.